ಎಂಗ್ಟನ ಪುಂಗಿ - ಪೂರ್ಣಚಂದ್ರ ತೇಜಸ್ವಿ | ಬಿ ಪಿ ಅರುಣ್

Sdílet
Vložit
  • čas přidán 16. 04. 2020
  • ಇದು ತೇಜಸ್ವಿಯವರ ಪರಿಸರದ ಕತೆ ಪುಸ್ತಕದಲ್ಲಿ ಬರುವ ಒಂದು ಕತೆ. ಬದುಕಿನ ವೈರುಧ್ಯಗಳನ್ನು ವೈಪರೀತ್ಯಗಳನ್ನು ಮತ್ತು ಅದರಿಂದುಂಟಾಗುವ ವಿಚಿತ್ರ ಸನ್ನಿವೇಶಗಳಿಗೆ ಮನುಷ್ಯ ಸ್ಪಂದಿಸುವ ರೀತಿಯನ್ನು ತೇಜಸ್ವಿ ಗ್ರಹಿಸುವ ರೀತಿ ಅನನ್ಯ. ಹಾಸ್ಯ ಮತ್ತು ವಿಡಂಬನೆಯ ಮೂಲಕ ಬದುಕಿನ ದುರಂತಗಳನ್ನು ಮತ್ತು ಸತ್ಯಗಳನ್ನು ಒಂದು ಹೊಸ ದೃಷ್ಟಿಕೋನದಿಂದ ನಮಗೆ ಮುಖಾಮುಖಿಯಾಗಿಸಿ, ಅವರವರ ಭಾವಕ್ಕೆ ಎಂಬಂತೆ ನಮ್ಮನ್ನು ಒಂದು ಹೊಸ ಚಿಂತನೆಯೊಂದಿಗೆ ಬಿಟ್ಟುಬಿಡುತ್ತಾರೆ. ತೀರಾ ಸಾಧಾರಣ ಮತ್ತು ಸಾಮಾನ್ಯ ಎಂದು ನಾವು ಪರಿಗಣಿಸಿ ಉಪೇಕ್ಷಿಸುವ ಸಂಗತಿಗಳನ್ನು ಒಂದು ಹೊಸ ಆಯಾಮದಿಂದ ತೋರಿಸಿ, ಎಷ್ಟೊಂದು ಬೆರಗುಗಳಿಂದ ತುಂಬಿದ ಈ ಬದುಕನ್ನು ಒಂದು ಸಣ್ಣ ಕೌತುಕದ ದೃಷ್ಟಿಯೂ ಸಹ ಇಲ್ಲದೆ, ಬಳಸಿ ಬಿಸಾಡುವ ರೀತಿಯಲ್ಲಿ ಬದುಕುತ್ತಿರುವ ನಮ್ಮ ಇಂದಿನ ಶುಷ್ಕ ಜೀವನ ಕ್ರಮವನ್ನು ಪ್ರಶ್ನಿಸುವಂತೆ ಮಾಡುತ್ತಾರೆ. ಅತ್ಯಂತ ಸಂಕುಚಿತವಾದ ಮನುಷ್ಯ ಕೇಂದ್ರಿತ ಬದುಕನ್ನೇ ಶ್ರೇಷ್ಠ ಎಂದು ತಿಳಿದಿರುವ ಇಂದಿನ ಸಮಾಜಕ್ಕೆ, ನಿಜವಾದ ಅಸ್ತಿತ್ವದ, ಮನುಷ್ಯನಷ್ಟೇ ಅಲ್ಲದೆ ಪರಿಸರದಲ್ಲಿರುವ ಎಲ್ಲಾ ಜೀವ ಜಂತುಗಳನ್ನೂ ಒಳಗೊಂಡ ಒಂದು ಸಮಷ್ಟಿ ಪ್ರಜ್ಞೆ ಬೆಳೆಸಿಕೊಳ್ಳುವುದನ್ನು ಪರಿಸರದ ಕತೆ ಕಲಿಸುತ್ತದೆ.
    ಓದಿದವರು - ಬಿ ಪಿ ಅರುಣ್
    Published by: Pustaka Prakashana
    #kannada #shortstories #tejaswi #parisaradakathe #ಕನ್ನಡ #ಪರಿಸರದಕಥೆ #ತೇಜಸ್ವಿ #long
  • Zábava

Komentáře •