Innashtu Bekenna by Shree Harsha | ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ | HarshaDhwani | Gajanana Sharma

Sdílet
Vložit
  • čas přidán 24. 03. 2020
  • Wonderful depiction of Lord Sri Rama and his character
    Lyrics by Dr. Gajanana Sharma
    Music by Sri Saaket Sharma
    Video conceptualisation
    Music Arrangement
    Home Recording
    Editing & Mastering
    Singing by
    M R Shree Harsha.
    Official Website:: www.harshadhwani.com/
    Facebook Page :: / shreeharshaofficial
    Instagram :: / harshadhwani_shreeharsha
    Twitter :: / harshadhwani
    SoundCloud :: / shree-harsha-singer
    This happens to be anthem song of Sri Ramachandrapura Mutt, Hosanagara as per details shared by Sri Gajanana Sharma.
    We humbly dedicate this song at holy feet of deity Sri Ramachandra Swamy of Sri Ramachandrapura mutt, Hosanagara, Karnataka.
    Lyrics in Kannada :
    ರಾಮಾ..ರಾಮಾ ರಾಮಾ...ರಾಮಾ..
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ ||
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ||
    ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|
    ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
    ಕಷ್ಟಗಳ ಕೊಡಬೇಡ ಎನಲಾರೆ ರಾಮ|
    ಕಷ್ಟ ಸಹಿಸುವ ಸಹನೆ ಕೊಡು ಎನಗೆ ರಾಮ|
    ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
    ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ ||
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ ||
    ರಾಮಾ..ರಾಮಾ ರಾಮಾ...ರಾಮಾ..
    ಒಳಿತಿನೆಡೆ ಮುನ್ನಡೆವ ಮನವ ಕೊಡು ರಾಮ|
    ಸೆಳೆತಕ್ಕೆ ಸಿಗದಂತ ಸ್ಥಿರತೆ ಕೊಡು ರಾಮ|
    ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
    ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|
    ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
    ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
    ಕಣ್ಣು ಕಳೆದರು ನಿನ್ನ ಕನಸ ಕೊಡು ರಾಮ|
    ನನ್ನ ಹರಣಕೆ ನಿನ್ನ ಚರಣ ಕೊಡು ರಾಮ ||
    ರಾಮಾ..ರಾಮಾ ರಾಮಾ...ರಾಮಾ..
    ಕೌಸಲ್ಯೆಯಾಗುವೆನು ಮಡಿಲಲಿರು ರಾಮ|
    ವೈದೇಹಿಯಾಗುವೆನು ಒಡನಾಡು ರಾಮ|
    ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|
    ಸಹವಾಸ ಕೊಡು ನಾನು ಸೌಮಿತ್ರಿ ರಾಮ|
    ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
    ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
    ಶಬರಿಯಾಗುವೆ ನಿನ್ನ ಭಾವ ಕೊಡು ರಾಮ ||
    ರಾಮಾ..ರಾಮಾ ರಾಮಾ...ರಾಮಾ..
    ಮಡಿಲಲ್ಲಿ ಮರಣ ಕೊಡು ನಾ ಜಟಾಯುವು ರಾಮ|
    ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
    ನಾ ವಿಭೀಷಣ ಶರಣುಭಾವ ಕೊಡು ರಾಮ|
    ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
    ಕಣ್ಣೀರ ಕರೆಯುವೆನು ನನ್ನತನ ಕಳೆ ರಾಮ|
    ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ ||
    ರಾಮಾ..ರಾಮಾ ರಾಮಾ...ರಾಮಾ..
    ಋತ ನೀನೆ ಋತು ನೀನೆ ಶ್ರುತಿ ನೀನೆ ರಾಮ|
    ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
    ಆರಂಭ ಅಸ್ತಿತ್ವ ಅಂತ್ಯ ನೀ ರಾಮ|
    ಪೂರ್ಣ ನೀ ಪ್ರಕಟ ನೀ ಆನಂದ ರಾಮ|
    ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ರಘುರಾಮ ರಘುರಾಮ ರಘುರಾಮ ರಾಮ|
    ನಗು ರಾಮ ನಗ ರಾಮ ಜಗ ರಾಮ ರಾಮ ||
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ ||
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ||
    ರಾಮಾ..ರಾಮಾ ರಾಮಾ...ರಾಮಾ..
    ~~~~
  • Hudba

Komentáře • 2,2K

  • @kantharajhassan6874
    @kantharajhassan6874 Před 4 měsíci +22

    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ರಾಮ ರಾಮ ರಾಮ ರಾಮ
    ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|
    ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
    ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
    ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
    ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
    ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಒಳಿತಿನೆಡೆ ಮುನ್ನೆಡೆವ ಮನವಕೊಡು‌ ರಾಮ|
    ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
    ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
    ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|
    ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
    ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
    ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
    ನನ್ನ ಹರಣಕೆ ನಿನ್ನ ಚರಣ ಕೊಂಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಕೌಸಲ್ಯೆಯಾಗುವೆನು ಮಡಿಲಲಿರು ರಾಮ|
    ವೈದೇಹಿಯಾಗುವೆನು ಒಡನಾಡು ರಾಮ|
    ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|
    ಸಹವಾಸ ಕೊಡು ನನಗೆ ಸೌಮಿತ್ರಿ ರಾಮ|
    ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
    ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
    ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ|
    ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
    ನಾ ವಿಭೀಷಣ ಶರಣುಭಾವ ಕೊಡು ರಾಮ|
    ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
    ಕಣ್ಣೀರು ಕರೆಯುವೆನು ನನ್ನತನ ಕಳೆ ರಾಮ|
    ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
    ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
    ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
    ಪೂರ್ಣ ನೀ ಪ್ರಕಟ ನೀ ಆನಂದ ರಾಮ|
    ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ರಘುರಾಮ ರಘುರಾಮ ರಘುರಾಮ ರಘುರಾಮ|
    ನಗುರಾಮ ನಗರಾಮ ಜಗರಾಮ ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

    • @sudhast2931
      @sudhast2931 Před 4 měsíci +1

      ತುಂಬಾ ಧನ್ಯವಾದಗಳು🙏🌹

    • @ananthanarayan8490
      @ananthanarayan8490 Před měsícem +1

      ಸಾಹಿತ್ಯ ಅಮೋಘ 🎉❤

  • @HbpreetHbpreet
    @HbpreetHbpreet Před 4 měsíci +22

    ❤ಸಾಹಿತ್ಯಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು🙏🙏 ಗಾಯನಕ್ಕೆ ದೀರ್ಘ ದಂಡ ಪ್ರಣಾಮಗಳು 🚩🚩🚩🚩🚩

  • @vasanthanagaraj4890
    @vasanthanagaraj4890 Před 10 měsíci +27

    ಹರ್ಷ‌..ಅವರ ಕಂಚಿನ ಕಂಠದ ರಾಮ ರಾಮ ಶಬ್ದ ರೋಮಾಂಚನ ಮೂಡಿತು... ಕೇಳುತ್ತಾ ಕಣ್ಣಿಂದ ನೀರು ಬಂದಿತ್ತು.🙏🌹

  • @manjularamesh1892
    @manjularamesh1892 Před 4 měsíci +20

    ನಾನೂ ಸಹಾ ದಿನಾ ರಾತ್ರಿ ಮಲಗುವ ಮುನ್ನ ಈ ಹಾಡು ಕೇಳಿ ಭಕ್ತಿ ತುಂಬಿಕೊಂಡು, ಆನಂದವಾಗಿ ಮಲಗುತ್ತೇನೆ.

  • @rashmi.n3781
    @rashmi.n3781 Před rokem +15

    ಅತಿಯಾದ ದುಃಖ ಇದ್ದಾಗ ಈ ಹಾಡು ನನ್ನ ಮನಸಿಗೆ ಮುದ ನೀಡುತ್ತದೆ. ಏನೋ ಒಂಥರಾ ಸಮಾಧಾನ ಖುಷಿ ನೆಮ್ಮದಿ ಸಂತೋಷ ತರುತ್ತದೆ. ಹರ್ಷರವರಿಗೆ ತುಂಬಾ ಧನ್ಯವಾದಗಳು. ನಿಮ್ಮ ಧ್ವನಿಯಲ್ಲಿ ಯಾವುದೋ ದೈವ ರೂಪದ ಶಕ್ತಿ ಅಡಗಿದೆ ಅನಿಸುತ್ತದೆ. ಹೀಗೆ ಮತ್ತಷ್ಟು ಮುದ ನೀಡುವ ಹಾಡುಗಳನ್ನು ಹಾಡಿ, ನಮಸ್ಕಾರ

  • @gowrip593
    @gowrip593 Před 4 měsíci +43

    ಅದ್ಭುತ ಕಂಠ ಸಿರಿ ನಿಮ್ಮದು ನಿಮ್ಮ ಸಂಗೀತ ಪಯಣ ತುಂಬ ಚೆನ್ನಾಗಿ ಸಾಗಲಿ 🎉🎉ಧನ್ಯವಾದಗಳು🙏🚩🚩

  • @krishnanr2645
    @krishnanr2645 Před 6 měsíci +23

    ಒಬ್ಬ ವ್ಯಕ್ತಿ ತನ್ನ ಕೆಟ್ಟ ಗುಣಗಳಿಂದ ಹೋರ ಬರ ಬೇಕಾದರೆ ಈ ಹಾಡು ನ್ನೂ ಕೇಳಿದರೆ ಸಾಕು ಜನ್ಮ ಸಾರ್ಥಕವಾಗಿತು.🎉

  • @srinivasyogbharti8578
    @srinivasyogbharti8578 Před 4 měsíci +15

    ದಿನದಲ್ಲಿ ಒಮ್ಮೆ ಈ ಹಾಡು ಕೇಳಿ ಜೀವನ ಪವಿತ್ರ ವಾಗುವುದು

  • @ajjiyakavitegalu5605
    @ajjiyakavitegalu5605 Před 4 měsíci +38

    ನಿಮ್ಮ ಹಾಡಿನಲ್ಲೇ ಇದೆ ಪರಿಪೂರ್ಣ ಆನಂದ.. ಹರ್ಷ ದ್ವನಿ 🙋‍♂️🙋‍♂️🙋‍♂️🕉️🕉️🕉️✡️

  • @mangalajayant6449
    @mangalajayant6449 Před 4 měsíci +15

    ನನ್ನೊಳಿಹ ರಾವಣಗೆ ಸಾವ ಕೊಡೋ ರಾಮ

  • @somasundarkadur1779
    @somasundarkadur1779 Před 5 měsíci +13

    ಎಂತಾ ಮಧುರ ಧ್ವನಿ. ಮೈಸೂರಿನ ಈ ಕೋಗಿಲೆ ನಮ್ಮ ಹೆಮ್ಮೆ.

  • @hariniiyengar9458
    @hariniiyengar9458 Před 2 lety +16

    ಆಹಾ ಎಂತಾ ಸುಮಧುರವಾದ ಧ್ವನಿ... ರಾಮನೇ ಎದುರು ಬಂದರೂ ಆಶ್ಚರ್ಯವಿಲ್ಲ 👌👏👏👏🙏

  • @erammapujar3637
    @erammapujar3637 Před rokem +21

    ಎಷ್ಟು ಬಾರಿ ಕೇಳಿ ದರೂ ಸಾಕೆನ್ನದ ಹಾಗೆ ಇದೆ ಹಾಡು,, 🙏🙏🙏🙏🙏

  • @rajeshwarirukmini7919
    @rajeshwarirukmini7919 Před měsícem

    ಗಜಾನನ ಶರ್ಮರವರಿಗೆ ಕೋಟಿ ಪ್ರಣಾಮಗಳು❤ ಹರ್ಷರವರಿಗೆ ಅನಂತ ಧನ್ಯವಾದಗಳು

  • @nandinig.n1791
    @nandinig.n1791 Před 4 měsíci +17

    ಎಷ್ಟು,ಅರ್ಥಪೂರ್ಣವಾದ ಸಾಹಿತ್ಯ..ಜೊತೆಗೆ ನಿಮ್ಮ ಅದ್ಭುತವಾದ ಗಾಯನ..ಮನಸ್ಸಿಗೆ ಎನೋ ಒಂದು ರೀತಿಯ ತೃಪ್ತಿ ಈ ಹಾಡನ್ನ ಕೇಳ್ತಿದ್ರೆ...💐💐🙏🙏

  • @sowmyanmsowmya7323
    @sowmyanmsowmya7323 Před rokem +11

    ನಿಮ್ಮ ಕಂಠ ಸಿರಿಗೆ ನನ್ನ ಕೋಟಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @rukminibhashyam3943
    @rukminibhashyam3943 Před 3 měsíci +5

    ಶ್ರೀ ಹರ್ಷ ರವರ ಗಾಯನ ಅದ್ಭುತ
    ಅರ್ಥಪೂರ್ಣವಾದ ಸಾಹಿತ್ಯ ಹಾಡನ್ನು ರಚಿಸಿದವರಿಗೆ ಸಾಷ್ಟಾಂಗ ಪ್ರಣಾಮಗಳು

  • @ask6733
    @ask6733 Před 2 lety +14

    ಯೇೂಗಮಾರ್ಗಗಳಲ್ಲಿ ಭಕ್ತಮಾರ್ಗವೂ ಒಂದು , ಸೂಪರ್ ಸಾಂಗ್ ಜೈ ಶ್ರೀರಾಮ್

  • @shanmukhamys2282
    @shanmukhamys2282 Před 10 měsíci +14

    ಗೊಂದಲಗಳೆಲ್ಲ ಕಾಣೆಯಾದವು, ಅದ್ಭುತ ಗಾಯನ ಅನಂತಾನಂತ ವಂದನೆಗಳು, ಶ್ರೀಹರ್ಷ ಅವರಿಗೆ ಹರುಷದ ನಮಸ್ಕಾರಗಳು.

  • @ranjanajoshi8096
    @ranjanajoshi8096 Před rokem +17

    ಶ್ರೀ ರಾಮ ಜಯ ರಾಮ ಜಯ ಜಯ ರಾಮ
    ಶ್ರೀ ರಾಮ ಜಯ ರಾಮ ಜಯ ಜಯ ರಾಮ
    ಶ್ರೀ ರಾಮ ಜಯ ರಾಮ ಜಯ ಜಯ ರಾಮ

  • @roopaaradhya514
    @roopaaradhya514 Před rokem +34

    ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತು. ಹೃದಯ ಸ್ಪರ್ಶಿ ಹಾಡು. ರಾಮಾಯಣದ ಬಹುತೇಕ ಪಾತ್ರಗಳನ್ನು ಮತ್ತು ಅವರ ರಾಮನ ಜೊತೆಗಿನ ಭಾವಗಳು ಸುಂದರವಾಗಿ ಮೂಡಿವೆ. ಹರ್ಷ ಅವರ ಧ್ವನಿ ಕೂಡ ಅದಕ್ಕೆ ಇನ್ನಷ್ಟು ಮೆರಗು ಕೊಟ್ಟಿದೆ. 🙏🙏🙏

    • @kusumaks2633
      @kusumaks2633 Před rokem +1

      harsha
      ಅವರ
      ಸರ್ವೆ
      ಪ್ರತಿ
      ಒಂದು
      Hadigu
      ಎಷ್ಟೋ.meragu.koduthae.ಎಂಡಿ.ಹೇಳಲು
      asadya

    • @kusumaks2633
      @kusumaks2633 Před rokem +1

      harshadhwani7avarzukha
      bavavae
      ಹೃದಯ
      sapthistufe
      oh.ಅವರ .

    • @kusumaks2633
      @kusumaks2633 Před rokem +1

      ಧ್ವನಿಯನ್ನು.avaruseara.horahommuthodagalae
      adeshtoo.hrudya.sprhisitae
      harshadhwaniyannuadara
      ಅವರು.ಅವರ ಸಿಹಿ dukk6ananda
      ಸಂತೋಷ
      hadi.ಮುಗಿಯುವ
      ವಿರಹ da
      ನೋವು
      ಆಡನ್ನು.ಅನುಭವಿಸಿ davarigae
      ಗೊತ್ತು
      ahrudya3da
      ನೋವು enu ಅಂತ.ಆ.novinallu
      harshadhwaniya
      ಸಿಹಿ yada ಸವಿಯಾದ.ನೋವು. ಸಹ.hrudya ಸ್ಪರ್ಶ 6situae

    • @kusumaks2633
      @kusumaks2633 Před rokem +1

      you.listen.to.his.manaswani
      shambo
      ಶಿವಮೊಗ್ಗ.shambo
      ಶಿವಮೊಗ್ಗ.ತಂಡದ.stotra
      there.re.ನabanduant.

    • @kusumaks2633
      @kusumaks2633 Před rokem +1

      ಆ.ದೇವರು
      ಅವರ
      fans.ಗಲ್ಲ
      ಐದು
      avarigae kottu.kapadali

  • @timmannabhatbhat517
    @timmannabhatbhat517 Před 4 měsíci +20

    ಅದ್ಭುತವಾದ ಹಾಡು, ಭಕ್ತಿಫಾರವ್ವಷವಾಯಿತೇನ್ನಮನಸ್ಸು

  • @venugopalt.a.5799
    @venugopalt.a.5799 Před 4 měsíci +9

    ಅಧ್ಬುತ ಶಾರೀರ ಪರಮಾನಂದವಾಯಿತು ದೇವರು ನಿನಗೆ ಒಳ್ಳೆಯದು ಮಾಡಲಿ🎉

  • @AnuRadha-vt4ro
    @AnuRadha-vt4ro Před 2 lety +21

    ತುಂಬಾ ಚೆನ್ನಾಗಿದೆ. ಈ ಹಾಡುನ್ನು ಕೇಳಿದಾಗಲೆಲ್ಲ ಕಣ್ಣೀರು ಬರುತ್ತದೆ. ಆಮೇಲೆ ಮನಸ್ಸು ಶಾಂತವಾಗುತ್ತದೆ

  • @bobbupatgar6706
    @bobbupatgar6706 Před 4 měsíci +6

    ಈ ಹಾಡು ಕೇಳಿದರೆ,ಶ್ರೀರಾಮನೆ ಹೃದಯದೋಳಗೆ ನಲಿಯುತ್ತಿರುವಂತೆ ಬಾಷವಾಗುತ್ತದೆ.ಜೈ,ಜೈ, ಶ್ರೀರಾಮ್.

  • @sushumasuresh4562
    @sushumasuresh4562 Před rokem +60

    ನನ್ನಾಯಸ್ಸಿನ ಉಳಿದ ದಿನಗಳನ್ನ ಕೊಡಬಹುದಾದರೆ...ಅದು ನಿಮ್ಮ ಧ್ವನಿಗೆ, ಅದರೊಳಗಣ ಭಾವಕ್ಕೆ....🙏🙏🙏🙏

    • @kusumaks2633
      @kusumaks2633 Před rokem +4

      NMMA.PUNYA.SIR.ZSDEVARU.NEMMA.DHWZNI
      Keluvaodzloo.nzmmamna.kzradae.kollivallla.iruva.obanae.mHznannu.u.s.z.gae.kaluhesi
      ನಮ್ಮ.maneyavaru.nanu.badikiddanar.andarae.adakae.jarshs
      Dhwaniyae.katana.anta.adbitha.shakthi.a.devaru.avaru.patta.shramakkaedzya.palisiddanae
      ಆದರೆ.harsjadhwani.namma.kemppae.gowdara
      Dhwani

    • @venugopalhnhonnavalli837
      @venugopalhnhonnavalli837 Před rokem +2

      @@kusumaks2633 .....

    • @venugopalhnhonnavalli837
      @venugopalhnhonnavalli837 Před rokem +2

      Hi how are you@@kusumaks2633

    • @Sridevi-ki4mn
      @Sridevi-ki4mn Před rokem +1

      Super

    • @rekhamurlidhar7137
      @rekhamurlidhar7137 Před 8 měsíci +1

      @sushma Suresh4562....wah😊

  • @harishhari2300
    @harishhari2300 Před rokem +14

    ನನ್ನ ಮರಣಕ್ಕೆ ನೀನ್ನ ಚರಣ ಕೊಡು ರಾಮ 🙏🙏🙏🌹🌹🌹

  • @user-qu1dy6rq4v
    @user-qu1dy6rq4v Před 4 měsíci +9

    ಶ್ರೀ ರಾಮರ ವರ್ಣನಾತೀತ ವ್ಯಕ್ತಿತ್ವದ ಹೃದಯ ಸ್ಪರ್ಶಿ ಮೆಲುಕು.

  • @savithribl7247
    @savithribl7247 Před 4 měsíci +5

    ದಿನಾಲೂ.ರಾತ್ರಿ ಮಲಗುವ.ಮುನ್ನ ಈಹಾಡು ಕೇಳಿ. ದೈಯ.ತಂದುಕೂಂಡಿದೆನೆ.ಜೈಶ್ರೀರಾಮ

  • @ShashiMulge-ii9jx
    @ShashiMulge-ii9jx Před měsícem

    ಎಂಥಹ ಹಾಡು ಎಂತಹ ಧ್ವನಿ ಬೇರೆ ಭಾಷೆಯಲ್ಲಿ ಸಿಗಲ್ಲ. ಅಷ್ಟು ಸುಂದರವಾದ ಅದ್ಭುತವಾದ ಹಾಡು ❤❤

  • @umabhat3103
    @umabhat3103 Před 4 měsíci +3

    ನಾನು ನಿಮ್ಮ ಅಭಿಮಾನಿ, ಇಷ್ಟೊಂದು ಭಾವುಕವಾಗಿ ಮತ್ತು ಸುಂದರವಾಗಿ ಇದನ್ನು ಬೇರೆ ಯಾರೂ ಹಾಡಲು ಸಾಧ್ಯವಿಲ್ಲವೆಂದೇ ನನ್ನ ಅನಿಸಿಕೆ. ನಿಮಗೆ ಒಳ್ಳೆಯದಾಗಲಿ, ನಿಮ್ಮಹರ್ಷಧ್ವನಿಯ ಪಯಣ ನಿರಂತರವಾಗಿ ಸಾಗುತ್ತಿರಲಿ.ಈ ಹಾಡು ಕೇಳಿದಮೇಲೆ ನನಗೊಂದು ಆಸೆ, ನಾನು ರಾಮನ ಕೆಲವು ಹಾಡುಗಳನ್ನು ಬರೆದಿದ್ದೇನೆ. ಅವುಗಳೆಲ್ಲ ಈ ಹಾಡಿನ ಮುಂದೆ ಸೂರ್ಯನ ಮುಂದೆ ಹಣತೆಗಳಿಗೂ ಸಮನಲ್ಲ. ಆದರೂ ನೀವು ಒಂದಾದರೂ ನನ್ನ ಹಾಡನ್ನು ಹಾಡಿದರೆ ಈ ನಂದುತ್ತಿರುವ ದೀಪಕ್ಕೆ ಸ್ವಲ್ಪ ಎಣ್ಣೆ ಹಾಕಿದಂತಾಗುತ್ತಿತ್ತೇನೋ.

  • @pavitrap60
    @pavitrap60 Před 2 lety +45

    ಭಕ್ತಿ ಉಕ್ಕುವ ಗಾಯನ.. ಹೀಗೇ ನಿಮ್ಮ ಸಂಗೀತ ಪಯಣ ಸಾಗಲಿ.. ನಮ್ಮ ಕಿವಿಗಳು ನಿಮ್ಮ ಗಾಯನದಿಂದ ಸಂಭ್ರಮಿಸಲಿ..

  • @umashankari7405
    @umashankari7405 Před 4 měsíci +7

    ಬಹಳ ಇಷ್ಟ ಪಟ್ಟ, ಹೃದಯ ಮುಟ್ಟಿದ ಸಾಹಿತ್ಯ ಇದು.. ಈಗ ಕಂಠವೂ ಆಪ್ತವಾಯಿತು.. 👏👏👌👌🙏

  • @imdevilinmylife1870
    @imdevilinmylife1870 Před 2 lety +2

    ನಿಮ್ಮ ಕಂಠ ಸಿರಿಯಲ್ಲಿ ಈ ಗೀತೆ ಕೇಳೋದೇ ಒಂದು ಸೋಜಿಗ ನಾನಂತು ಈ ಗಿತೆಯನ್ನ ಅದೆಷ್ಟು ಬಾರಿ ಕೇಳಿದೀನಿ ಅಂತ ತಿಳಿದು........ ಇನ್ನಷ್ಟು ಬೆಕೆನ್ನ ಹೃದಯಕ್ಕೆ ನಿನ್ನಷ್ಟು ನೆಮ್ಮದಿ ಎಲ್ಲಿ ಈಹುದು ರಾಮ.... ರಾಮ..... ರಾಮ...... ರಾಮ......ರಾಮ......

  • @geethahr6981
    @geethahr6981 Před měsícem +1

    ಮೈ ಮರೆಸುವ ಹೃದಯ ತುಂಬಿ ಕಂಣ್ತುಂಬಿ ಬರುತ್ತೆ

  • @manjunathkk9425
    @manjunathkk9425 Před 2 lety +34

    ಅದ್ಭುತವಾದಂತಹ ಗೀತೆ ಶ್ರೀ ರಾಮನ ಬಗ್ಗೆ ಭಾವನೆಗಳನ್ನ ಮನದಲ್ಲಿ ತುಂಬಿಸುವಂತಹ ಸಾಲುಗಳು ಅದ್ಭುತವಾಗಿವೆ...
    ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್

    • @pushpaashok7729
      @pushpaashok7729 Před rokem

      Jai shriram ಪದ ಗಳಲ್ಲಿ ಹಾಡಾಗಿ bramnda ಹಡಗಿದೆ. Tha nku ಚೆನ್ನಾಗಿ ಹಾ ಡಿ ದ್ದೀ ರ

    • @nageshmahabalashetty7761
      @nageshmahabalashetty7761 Před rokem

      ದಿನ ಬೆಳಿಗ್ಗೆ ಒಂದು ಸಾರಿ ಕೇಳಿದ್ರೆ
      ದಿನವಿಡೀ ನವೋಲ್ಲಾಸ.

  • @sudhasubbaiahkrishnaveni377

    ಸ ರಿ ಗ ಮ ಪ ಶೋಗೆ ಬಂದಾಗಿನಿಂದ ನಾನು ನಿಮ್ಮ ಅಭಿಮಾನಿ ಆಗಿದ್ದೇನೆ. ಒಂದು ಶೋ ಕೂಡ ಮಿಸ್ ಮಾಡದೆ ನಿಮ್ಮ ಪ್ರೋಗ್ರಾಂ ನೋಡುತ್ತೇನೆ. ಸರಸ್ವತಿಯ ಪೂರ್ಣ ಆಶೀರ್ವಾದ ನಿನ್ನ ಮೇಲಿರಲಿ. ಈ ಹಾಡು ಕೇಳುತ್ತಾ ನಾನೇ ಕಳೆದು ಹೋಗಿ ಬಿಟ್ಟೆ
    ಇನ್ನಷ್ಟು ಹಾಡುಗಳು ನಿನ್ನ ಕಂಠ ದಿಂದ ಬರಲಿ.

  • @padmalathajn9619
    @padmalathajn9619 Před 3 měsíci +2

    ಅರ್ಥ ಗರ್ಭಿತ ಹಾಡು ಜೀವನದ ಗುರಿ ಇ ಹಾಡು.ಭಗವಂತ ನೀಡಿರುವ ನಿಮ್ಮ ಕಂಠ ಸಿರಿ ಕೇಳುವರಿಗೆ ನೆಮ್ಮದಿ ತೃಪ್ತಿ ನೀಡಿದೆ 👍👍🙏🏿🙏🏿🙏🏿🙏🏿🙏🏿

  • @kavithasridhar1563
    @kavithasridhar1563 Před 4 měsíci +6

    ಅದ್ಬುತ ಕಂಠ ಸಿರಿ, ದಿನ ಕೆಳ ಬೇಕೇನೇನುಸುವು. ಹಾಡು
    ವಂದನೆಗಳು ಹರ್ಷ 😊

  • @seshagiriprabhakararao3313
    @seshagiriprabhakararao3313 Před 3 lety +74

    ಬಹಳ ಅದ್ಬುತವಾಗಿ ಸಂಯೋಜನೆ ಮಾಡಿ ಪ್ರಸ್ತುತ ಪಡಿಸಿರುವ ಈ ಹಾಡು ಬಹಳ ಸೊಗಸಾಗಿ,ಸರಳವಾಗಿ, ಸುಲಲಿತವಾಗಿ ಮೂಡಿ ಬಂದಿದೆ ದೈವಾನುಗ್ರಹ. ಪ್ರಸ್ತುತ ಪಡಿಸಿದ ಸಕಲರಿಗೂ ಅಭಿನಂದನೆಗಳು. ತಮ್ಮೆಲ್ಲರಿಗೂ ಆ ಪರಮಾತ್ಮ ಆಯುರಾರೋಗ್ಯ ಐಶ್ವರ್ಯಾದಿಗಳನ್ನು ಕೊಟ್ಟು ಹರಸಲಿ.
    ಪ್ರಭಾಕರ್

  • @geetabkkalaburgiputanigalu6577

    ಲೌಕಿಕದಿಂದ ಅಲೌಕಿಕದ ಕಡೆಗೆ ಕರೆದೊಯ್ಯುವ ಅದ್ಭುತ ಹಾಡು

  • @nagrajnagraj8134
    @nagrajnagraj8134 Před 4 měsíci +5

    ಸಾಹಿತ್ಯ ರಚನೆಗೆ ಅವರ ಪಾದಗಳಿಗೆ ಸಾಸ್ಟಂಗ ನಮಸ್ಕಾರ ಅದ್ಭುತವಾದ ಸಾಹಿತ್ಯ ರಚನೆ ತುಂಬು ಹೃದಯದ ಧನ್ಯವಾದಗಳು

  • @anusuyabai3317
    @anusuyabai3317 Před 2 lety +7

    e bhakti hadu prati dina maluguva muna ondu sari keledera manasege tumba shanti seguthade prati nitya keluteni

  • @raghuacharya5274
    @raghuacharya5274 Před 2 lety +9

    ನಿಮ್ಮ ಕಂಠದಲ್ಲಿ ಕೇಳಿದ ರಾಮನಾಮ ಇನ್ನಷ್ಟು ಕೇಳಬೆಕಿನುಸತೇ. 🙏🙏

  • @ksirdeshmukh
    @ksirdeshmukh Před 4 měsíci +3

    ಬೆಳಗ್ಗೆ ಒಂದು ಸಲ ಕೇಳಿದರೆ, ರಾತ್ರಿ ಮಲಗುವ ತನಕ ಕಿವಿಯಲ್ಲಿ ತಲೆಯಲ್ಲಿ ನಿಲ್ಲುವದು ನಿಮ್ಮ ಈ ಹಾಡು ಹಷ೯(बेटा)

  • @shylaharsha908
    @shylaharsha908 Před 2 lety +8

    ಅಬ್ಬ ಕಣ್ತುಂಬಿ ಬಂತು.... ರಚನೆ ಅಂತೂ ಅದ್ಭುತ ... ಜೊತೆಗೆ ಆ ಹಾಡಿಗೆ ಭಕ್ತಿ ಪ್ರೀತಿ ಮಮತೆ ಎಲ್ಲಾ ತುಂಬಿ ಹಾಡಿದ್ದೀರ..... ತುಂಬಾ ಚೆನ್ನಾಗಿದೆ ..... ಕರ್ನಾಟಕದ ಹೆಮ್ಮೆ ನೀವು ಸರಿಗಮ ಪನಲ್ಲಿ ನೀವು ಹಾಡುವ ಹಾಡು ತುಂಬಾ ಇಷ್ಟ... god bless you Harsha .....

  • @Akshaykumar090
    @Akshaykumar090 Před 2 lety +19

    ಎಷ್ಟು ಅದ್ಭುತವಾಗಿ ಹಾಡಿರುವಿರಿ ಹರ್ಷ , ಮತ್ತೆಮತ್ತೆ ಕೇಳುತ್ತಲೇ ಇರುವೆವು.
    ಇನ್ನು ಹೆಚ್ಚು ಮನ ಮುಟ್ಟುವ ಭಕ್ತಿ ಮತ್ತು ಭಾವಗೀತೆಗಳ 🅤🅟🅛🅞🅐🅓 ಮಾಡಿ ..
    ಧನ್ಯವಾದಗಳು

  • @ss-wc8fo
    @ss-wc8fo Před 2 lety +18

    ತುಂಬಾ ಸೊಗಸಾಗಿ ಮೂಡಿಬಂದಿದೆ ನಿಮ್ಮ ಹಾಡು ಕೇಳುತ್ತಿದ್ದರೆ ಇನ್ನು ಕೇಳಬೇಕು ಎನ್ನುವ ನಿಮ್ಮ ಧ್ವನಿ ಜೈಶ್ರೀರಾಮ್ 👌👌🙏🙏

  • @nammabharathahinduthvabhar2310

    ಕಲಿಯು ನದಿಯಲ್ಲಿ ಪ್ರಾಣ ಬಿಟ್ಟಂತಹ ಈ ದೇಹ ಮತ್ತೆ ಹುಟ್ಟಿ ಹಾಡನ್ನು ಕೇಳುವಂತಾಗಿದೆ ಈ ಜನ್ಮದಲ್ಲಿ ಇದೆ ಸಾಕು ಮತ್ತೆ ರಾಮನ ಅಯೋಧ್ಯೆಯನ್ನು ನೋಡಬೇಕು ಎಂದು ಕಾತುರದಿಂದ ಕಾಯುತ್ತಿದ್ದೆ ರಾಮ ರಾಮ ರಾಮ ಶ್ರೀ ರಾಮ ಜಯ ರಾಮ ಮತ್ತೆ ಯಾವಾಗ ದರುಶನ ಕೊಡುತ್ತೀಯಾ ತಂದೆ.
    🙏 ಜೈ ಶ್ರೀ ರಾಮ್ 🙏

  • @jagathshankar2395
    @jagathshankar2395 Před 10 dny

    ಈ ಹಾಡು ಚೆನ್ನಾಗಿದೆ. ಹಾಡು ಚೆನ್ನಾಗಿ ಬರೆದಿದ್ದಾರೆ. ಹರ್ಷ ನೀವು ಚೆನ್ನಾಗಿ ಹಾಡಿದ್ದೀರಾ
    . ನಾನು ದಿನಲೂ ಎರಡು ಸಾರಿ ಈ ಹಾಡು ಕೇಳುತ್ತೇನೆ. ಎಷ್ಟು ಕೇಳಿದರೂ ಹಾಡು ಕೇಳಬೇಕು ಅನಿಸುತ್ತೆ. ಇಬ್ಬರಿಗೂ ನಮಸ್ಕಾರ.

  • @radhag3149
    @radhag3149 Před 2 lety +8

    ಅದ್ಭುತ ಗಾಯಕ ನೀವು ನಿಮ್ಮ ಅಭಿಮಾನಿ ನಾನು

  • @pushparaviravindra8901
    @pushparaviravindra8901 Před 4 měsíci +4

    ಮನಸ್ಸಿಗೆ ತುಂಬಾ ನೆಮ್ಮದಿ ಕೊಡುವ ಹಾಡು

  • @shalinishalu1796
    @shalinishalu1796 Před rokem +12

    ನನ್ ಮಗ ಈ ಹಾಡು ಕೇಳಿದ್ರೆ ಅಷ್ಟೇ ಮಲಗೋದು ತುಂಬಾ ಚೆನ್ನಾಗಿ ಹಾಡಿದ್ದೀರ ಸರ್ ❤️

  • @ambikahegde3918
    @ambikahegde3918 Před 2 lety +29

    ನನ್ನ "ಹರಣಕೆ" ನಿನ್ನ ಚರಣ ಕೊಡೊ ರಾಮ, ಮರಣಕೆ ಅಲ್ಲ..
    ನಾನು, ನನ್ನದು ಎಂಬ ಅಹಂ ಭಾವದ ಹರಣಕೆ ಅನ್ನೋ ಅರ್ಥ...
    ಹರೇ ರಾಮ🙏🏼

    • @akshayanni4239
      @akshayanni4239 Před 2 lety +2

      🙏🚩🚩🚩🚩

    • @srsrinath
      @srsrinath Před 2 lety +6

      Seems to be correct. Please see below:
      ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
      ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
      ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
      ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
      ರಾಮ ರಾಮ ರಾಮ ರಾಮ
      ನೀನಿಷ್ಟದಂತೆನ್ನ ಇಟ್ಟಿರುವೆ ರಾಮ
      ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ
      ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ
      ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ
      ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ
      ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ
      ರಘುರಾಮ ರಘುರಾಮ ರಘುರಾಮ ರಾಮ
      ರಘುರಾಮ ರಘುರಾಮ ರಘುರಾಮ ರಾಮ
      ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
      ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
      ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
      ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
      ರಾಮ ರಾಮ ರಾಮ ರಾಮ
      ಒಳಿತಿನೆಡೆ ಮುನ್ನೆಡೆವ ಮನವ ಕೊಡು ರಾಮ
      ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ
      ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ
      ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ
      ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ
      ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ
      ಕಣ್ಣು ಕಳೆದರು ನಿನ್ನ ಕನಸ ಕೊಡು ರಾಮ
      ನನ್ನ ಹರಣಕೆ ನಿನ್ನ ಚರಣ ಕೊಡು ರಾಮ
      ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
      ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
      ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
      ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
      ರಾಮ ರಾಮ ರಾಮ ರಾಮ
      ಕೌಸಲ್ಯೆಯಾಗುವೆನು ಮಡಿಲಿಲಿರು ರಾಮ
      ವೈದೇಹಿಯಾಗುವೆನು ಒಡನಾಡು ರಾಮ
      ಪಾದುಕೆಯ ತಲೆಯಲಿಇಡು ಭರತನಾಗುವೆ ರಾಮ
      ಸಹವಾಸ ಕೊಡು ನಾನು ಸೌಮಿತ್ರಿ ರಾಮ
      ಸುಗ್ರೀವನಾಗುವೆನು ಸ್ನೇಹ ಕೊಡು ರಾಮ
      ಹನುಮನಾಗುವೆ ನಿನ್ನ ಸೇವೆ ಕೊಡು ರಾಮ
      ಹನುಮನಾಗುವೆ ನಿನ್ನ ಸೇವೆ ಕೊಡು ರಾಮ
      ಶಬರಿಯಾಗುವೆ ನಿನ್ನ ಭಾವ ಕೊಡು ರಾಮ
      ರಘುರಾಮ ರಘುರಾಮ ರಘುರಾಮ ರಾಮ
      ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
      ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
      ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
      ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
      ರಾಮ ರಾಮ ರಾಮ ರಾಮ
      ಋತ ನೀನೆ ಋತು ನೀನೆ ಶೃತಿ ನೀನೆ ರಾಮ
      ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ
      ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ
      ಪೂರ್ಣ ನೀ ಪ್ರಕಟ ನೀ ಆನಂದ ರಾಮ
      ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ
      ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ
      ಗುರಿ ನೀನೆ ಗುರು ನೀನೆ ಅರಿವು ನೀ ರಾಮ
      ಗುರಿ ನೀನೆ ಗುರು ನೀನೆ ಅರಿವು ನೀ ರಾಮ
      ರಘುರಾಮ ರಘುರಾಮ ರಘುರಾಮ ರಾಮ
      ನಗುರಾಮ ನಗರಾಮ ಜಗರಾಮ ರಾಮ
      ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
      ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
      ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
      ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
      ರಾಮ ರಾಮ ರಾಮ ರಾಮ

    • @vasanthamanju1964
      @vasanthamanju1964 Před 2 lety +2

      @@srsrinath thank you sir

    • @sharadammakm8694
      @sharadammakm8694 Před 2 lety +1

      🙏🙏🙏🙏🙏

    • @ashapoojary9991
      @ashapoojary9991 Před 2 lety +1

      Super sir

  • @malathimaiya925
    @malathimaiya925 Před 3 lety +5

    ನನಗೆ ಈ ಹಾಡು ತುಂಬಾ ಇಷ್ಟ ..... ಎಷ್ಟೋ ಮಂದಿ ಹಾಡಿದ್ದನ್ನು ಕೇಳಿದ್ದೇನೆ .... ನೀವು ಹಾಡಿದ್ದು ಎಲ್ಲಾದಕ್ಕೂ ಕಿರೀಟ ಪ್ರಾಯವಾಗಿದೆ...

  • @indarakumarbhadravathi548
    @indarakumarbhadravathi548 Před 3 lety +33

    ಪ್ರತಿ ಶಬ್ದ ಮನಸ್ಸು ಮುದಗೊಳಿಸಿತು,,,, ಹರ್ಷ ರವರ ಕಂಠಕ್ಕೆ ಅನೇಕ ಅನೇಕ ಧನ್ಯವಾದಗಳು

  • @ramaprakash668
    @ramaprakash668 Před měsícem +1

    ಎಂಥ ದಿವ್ಯ ಗಾಯನ, ಅದ್ಭುತವಾದ ರಚನೆಗೆ ಅಷ್ಟೇ ಸುಂದರವಾದ ರಾಗ ಸಂಯೋಜನೆ.
    🙏🙏🙏

  • @prabhakarakudumallige1706
    @prabhakarakudumallige1706 Před 3 měsíci +1

    ಉತ್ತಮ ಸಾಹಿತ್ಯ ಹಾಗೂ ಉತ್ತಮ ಧ್ವನಿ ಇದಕ್ಕೆ ನನ್ನ ಪ್ರಣಾಮಗಳು. ಇಂತಹ ಹಾಡು ಕೀರ್ತನೆಗಳು ನಿಮ್ಮಿಂದ ಮೂಡಿ ಬರಲಿ.❤

  • @AS-yl3rm
    @AS-yl3rm Před 3 lety +5

    ರಾಮ ನಾಮದ ಮಹಿಮೆಯನ್ನು ತಿಳಿಸಿದ ನಿಮಗೆ ಅನಂತಾನಂತ ಧನ್ಯವಾದಗಳು....

    • @HarshaDhwaniShreeHarsha
      @HarshaDhwaniShreeHarsha  Před 3 lety +1

      Dhanyavadagalu

    • @CosmicHealing06
      @CosmicHealing06 Před 3 lety

      @@HarshaDhwaniShreeHarsha sir I couldn't stop my tears,ಎಂತಹ ಅದ್ಭುತ ಗಾಯನ ಮತ್ತು ರಚನೆ🙏🙏
      I am listening to Kumar vishwas ಅವರ raamkatha.then I came across this beautiful rendition 🙏 thank you sir 🙏🙏

  • @bvishwanath2886
    @bvishwanath2886 Před 3 lety +28

    ತುಂಬಾ ಹೃದಯ ಸ್ಪರ್ಶಿ ಹಾಡು, ನೀವಿನ್ನೂ ಎತ್ತರಕ್ಕೆ ಬೆಳೆಯಿರಿ.

  • @rajanisbabu1842
    @rajanisbabu1842 Před 2 lety +8

    ಬಹಳ ಬಹಳ ಸೊಗಸಾಗಿ ಹಾಡಿದ್ದೀರ
    ಕೇಳಿ ಮನಸ್ಸು ಹೃದಯ ತುಂಬಿ ಬಂತು ಶ್ರೀರಾಮನು ನಿಮಗೂ ನಿಮ್ಮ ಕುಟುಂಬದವರಿಗೂ ಒಳ್ಳೆಯದು ಮಾಡಲಿ🙏🙏💐

  • @terracegardenrecipe
    @terracegardenrecipe Před 2 lety +143

    ದಿನಾಲೂ ರಾತ್ರಿ ಮಲಗುವ ಮುನ್ನ ಈಹಾಡು ಕೇಳಿ ದೈರ್ಯ ತಂದುಕೂಂಡಿದ್ದೆನೆ👏

  • @chaitrashet963
    @chaitrashet963 Před 2 lety +35

    I got goosebumps when you sung the line-
    ನನ್ನೊಳಿಹ ರಾವಣಗೆ ಸಾವ ಕೊಡೊ ರಾಮ!
    Your singing has it's own divinity ❤️😇🙏🤗

  • @srinidhijois4456
    @srinidhijois4456 Před 4 lety +43

    ಧನ್ಯವಾದಗಳು ಹರ್ಷ ಅದ್ಭುತ ಹಾಡುಗಾರಿಕೆ.
    ದೈವತ್ವದಲ್ಲಿ ಮನ ತೇಲಿತು.

    • @HarshaDhwaniShreeHarsha
      @HarshaDhwaniShreeHarsha  Před 3 lety +5

      Dhanyavadagalu

    • @jayannakunchur7755
      @jayannakunchur7755 Před 2 lety +1

      @@HarshaDhwaniShreeHarsha
      ನೀವು ‌ಹಾಡಿದ ಈ ಹಾಡಿನಲ್ಲಿ ಅಡಗಿರುವ ಅರ್ಥಗರ್ಭಿತವಾದ ನುಡಿಮುತ್ತುಗಳನ್ನು ಮನದಟ್ಟುವಂತ ನಿಮ್ಮ ಧ್ವನಿಗೆ ಕೇಳಿ ಆ ದೈವದ ದರ್ಶನದ ಅನುಭವಿಸುವ ನಾವೇ ಧನ್ಯ ಧನ್ಯ ಧನ್ಯ ಧನ್ಯ ಧನ್ಯ
      ನಮಗೆ ನೀವು ಉಣಬಡಿಸಿದ ಈ ಸಂಗೀತಕ್ಕೆ ಕೋಟಿ ಕೋಟಿ ನಮನಗಳು
      🙏🙏🙏🙏🙏🙏🙏🙏🙏🙏🙏

    • @veenabsannakki710
      @veenabsannakki710 Před 2 lety

      👌👌voice 🌹🌹

  • @ksrajeshwarirajeshwari9099
    @ksrajeshwarirajeshwari9099 Před 2 měsíci

    Jai Sri Ram Rama is the real hero of India and also the universe 🙏🙏🙏🌹🌹🌹

  • @pspace...1084
    @pspace...1084 Před 6 měsíci +8

    I am from Maharashtra.I can't understand the language but I can feel the feelings of singer and his devotion to LORD RAMA. Excellent voice 👍.

    • @manatg3521
      @manatg3521 Před 6 měsíci +1

      Harsha sir nimma voice ge fan aagiddini sir Exellent

    • @manatg3521
      @manatg3521 Před 6 měsíci +1

      Harsha sir nimma voice ge fan aagiddini sir Exellent

    • @FirstLast-vr5gh
      @FirstLast-vr5gh Před 4 měsíci +1

      The lyrics is in the description. If you want you can get it translated with the help of an app

  • @sarojasrinivas9090
    @sarojasrinivas9090 Před 4 měsíci +9

    ❤🎉Ramaa Ramaa Ramaa❤No words further.Thank you ❤🎉

  • @krupamanjunath3434
    @krupamanjunath3434 Před 3 lety +77

    ಸೊಗಸಾದ,ಅದ್ಭುತವಾದ ಗೀತೆಗೆ ರಾಮಾರ್ಪಿತವಾದ ಗಾಯನ....
    ರಾಮಾಂತರ್ಗತ 'ಹರ್ಷಧ್ವನಿ'ಗೆ ನಮ್ಮ ನಮನ..
    👏👏👏👏👏👌👌👌👌👌😊👍🙏

  • @vinayakaa3296
    @vinayakaa3296 Před rokem +2

    ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ

  • @nayanahegde5836
    @nayanahegde5836 Před 4 měsíci

    Carmel ground alli ನಿಮ್ಮ performance tumba ಚೆನ್ನಾಗಿತ್ತು.. ಸ್ಟೇಜ್ performances alli ಬರೀ ಲಿಪ್ಸಿಂಗ್ ಮಾಡ್ತಾರೆ ..ನಿಮ್ಮ ಟೀಮ್ ಎಲ್ಲಾ songs LIVE onspot aagi ಹಾಡಿದ್ರಿ...music saha On spot..yestu kushi aytu pure performance ನೋಡೋಕೆ... ನೀವು ಬ್ಲಾಕ್ and red costume haaki stage meley ಬೆಂಕಿ powerful performance ಕೊಟಿದ್ದಿರ..tejaswi surya awara requested song saha ಹಾಡಿದ್ದರಿ ...
    I Was expecting this song on stage...you would have touched the top devotion with this song..
    Your voice is very powerful... believe in your strength ಶ್ರೀಹರ್ಷ...lord is in your voice...Feeling it and bringing it ON to the audience... wishing you bright future

  • @vasanthamanju1964
    @vasanthamanju1964 Před 2 lety +4

    ಹರ್ಷ' ಅಂತರಂಗದ ಭಾವವೆಲ್ಲಾ ಒಮ್ಮೆಲೆ ರಾಮ ಧ್ಯಾನದಲ್ಲಿ ಪರವಶಗೊಂಡಿತು'. ವಂದನೆಗಳು.

  • @savitharamesh3966
    @savitharamesh3966 Před 3 lety +16

    ಸೂಪರ್..ಭಕ್ತಿ ತುಂಬಿದ.. ಗಾಯನ....ದೇವರು ಒಳ್ಳೆಯದು ಮಾಡಲಿ....

  • @kusumaks2633
    @kusumaks2633 Před rokem

    ಆ.ದೇವರು.ನೇಮನ್ನು.ಚೆನ್ನಾಗಿ.ettirali.aabagavanthanna.ಸನ್ನಿಧಿಯಲ್ಲಿ.nammaagae.ನೀಡಿದರು.ಸೇರುತ್ತೇನೆ.ವೆಂಬ.ಆದ.n

  • @geethashivakumar8524
    @geethashivakumar8524 Před 3 měsíci

    ನಾನು ನಿಮ್ಮ ಹಾಡನ್ನು ಕೇಳುತ ನಾನು ನನಾಗಿರದೆ ನಿಮ್ಮ ಮತ್ತು ರಾಮನಲ್ಲಿ ಕಳೆದು ಹೋದೆ.

  • @MuralikrishnaBR
    @MuralikrishnaBR Před 4 lety +28

    The best version of ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ out there < 3

  • @tejukrishna-mt8yd
    @tejukrishna-mt8yd Před 3 lety +217

    ಈ ಹಾಡು ಕೇಳುತ್ತಿದ್ದರೆ ಮಾನವನಿಗೂ ದೇವರಿಗೂ ಏನೋ ಒಂದು ಅದ್ಬುತವಾದ ಸಂಬಂಧ ಇದೆ ಅನಿಸುತ್ತಿದೆ ಹಾಗೂ ನಮ್ಮ ಆತ್ಮ ಪರಮಾತ್ಮ ನೊಂದಿಗೆ ನೇರ ಸಂಬಂಧವಿದೆ ಅನಿಸುತ್ತದೆ 🙏🙏🙏🙏 ಜೈ ಶ್ರೀ ರಾಮ್

  • @sarojag7218
    @sarojag7218 Před 4 měsíci +6

    Ramaa ,🙏Ramaa🙏🤲Ramaa🤲🙏🌹🌹🤲🙏

  • @geetharv8659
    @geetharv8659 Před 4 měsíci

    ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ.ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್

  • @manushankar6436
    @manushankar6436 Před rokem +3

    ಶ್ರೀ ರಾಮನ ನಾಮಸ್ಮರಣೆಯಿಂದ ಮನಸ್ಸಿಗೆ ಆರಾಮವಾಯಿತು. ಅದ್ಭುತವಾದ ಗಾಯನ

  • @suchethagirish8303
    @suchethagirish8303 Před 4 měsíci +7

    ಭಕ್ತಿ ಭಾವ ತುಂಬಿದ ಹಾಡು 🎉🎉

  • @dornalswarnamba7991
    @dornalswarnamba7991 Před měsícem

    ಸಾಹಿತ್ಯವೂ ಸುಂದರ ಹಾಡಿರುವುದುಬಹು ಮದುರ

  • @kusumaks2633
    @kusumaks2633 Před rokem

    hagidae.ನಮ್ಮ.mysorenna. ನಮ್ಮ ಹೆಮ್ಮೆಯ kppaegowdara dhwani

  • @satyavanicreation8408
    @satyavanicreation8408 Před 2 lety +3

    ಅದೆಷ್ಟು ಸರಿ ಈ ಹಾಡನ್ನು ನಿಮ್ಮ ಧ್ವನಿಯಿಂದ ಕೇಳಿರುವೇನೊ ನಾ ಅರಿಯೆ
    ಮಂತ್ರಮುಗ್ದವಾಗಿಸುವ ನಿಮ್ಮ ಗಾಯನ ಮಧುರಾತಿ ಮಧುರ ಸರ್.

  • @mohantiptur6671
    @mohantiptur6671 Před 2 lety +3

    🙏 ಈ ಸುಮಧುರವಾದ ಗೀತೆಯನ್ನು ಕೇಳ್ತಾ ಕೇಳ್ತಾ ಬೇರೆ ಲೋಕ್ಕೆಕೆ ಕರೆದುಕೊಂಡು ಹೊಗ್ಬೀರ್ಟೀ 👌

  • @chandravathikini3044
    @chandravathikini3044 Před 2 měsíci +1

    Jai Shri Ram Ram Ram

  • @cmstudies.3790
    @cmstudies.3790 Před rokem +1

    Atma Chaitanya nimma hadu 🌅

  • @deepikayash1985
    @deepikayash1985 Před 3 lety +11

    Sri Ramana Darshana madisida nimma dwanige aa Ramana shree rakshe irali jai sri Rama

    • @anjanashok2653
      @anjanashok2653 Před 2 lety

      ಕಣ್ಣು. ಹೃದಯ ತುಂಬಿ ಬಂತು ಹರ್ಷ sir 🙏🙏

  • @neelaveni4811
    @neelaveni4811 Před 4 měsíci +7

    ತುಂಬಾ ಚೆನ್ನಾಗಿದೆ

  • @vaishnavirao5711
    @vaishnavirao5711 Před 3 měsíci

    My grandson Ishaanrao listens to this song every night to sleep.

  • @rahulsuryavanshi8635
    @rahulsuryavanshi8635 Před rokem

    Jai shree Ram Chandra from land of ram ayodhya uttar pradesh 🚩💪💪🚩💪💪🚩🚩💪💪🚩🚩

  • @satishtorgal7050
    @satishtorgal7050 Před 3 lety +12

    ಅದು - ನನ್ನ ಹರಣಕ್ಕೆ ನಿನ್ನ ಚರಣ ಕೊಡೊ ರಾಮ, ನೀವು ನನ್ನ ಮರಣಕ್ಕೆ ನಿನ್ನ ಚರಣ ಕೊಡೊ ಅಂತ ಹಾಡಿದ್ದೀರ.

    • @HarshaDhwaniShreeHarsha
      @HarshaDhwaniShreeHarsha  Před 3 lety +6

      ನಮಸ್ತೆ ..ಈ ಹಾಡಿನ reference audio ಸಿಕ್ಕಾಗ ಅದರಲ್ಲಿ ಮರಣ ಎಂದಿತ್ತು.....ಹಾಗೆಯೇ ಹಾಡಿದೆ....ನಂತರ ಅದರ ಮೂಲ ರಚನೆಕಾರರಾದ ಶ್ತೀ ಗಜಾನನ ಶರ್ಮ‌ ಅವರೊಡನೆ ಮಾತಾಡಿದೆ.....ಅವರು ..ತೊಂದರೆ ಇಲ್ಲ...ಭಾವದಲ್ಲಿ ಲೋಪವೇನು ಇಲ್ಲ....ಹಾಗೆ ಇರಲಿ ಬಿಡಿ ಅಂದರು.....

    • @avinashpoojar7886
      @avinashpoojar7886 Před 3 lety +1

      ಹರಣ ಅಂದ್ರು ಮರಣ ಅಂದ್ರು ಒಂದೇ ಅರ್ಥ ಅದರಲ್ಲಿ ಏನು ಲೋಪವಿಲ್ಲ

  • @saraswathis4701
    @saraswathis4701 Před 3 lety +21

    Very melodious singing. I am a very sick person but feel very happy listening to your singing. God bless you my son.

  • @socialscience9069
    @socialscience9069 Před 3 měsíci

    ನನ್ನ ಮರಣಕೆ ನಿನ್ನ ಚರಣ ಕೊಡು ರಾಮಾ 🙏🌹🌹

  • @kvrhari
    @kvrhari Před 2 lety +11

    ನನಗರಿಯದೇ ಕಣ್ತುಂಬಿತು. ಅತ್ಯಾಪ್ತ ವಾಗಿ ಹಾಡಿದ್ದೀರಿ. ಇನ್ನಷ್ಟು ದೇವರ ನಾಮಗಳು ಧ್ವನಿಸಲಿ 🙏

  • @hegdechinmayi
    @hegdechinmayi Před rokem +3

    ಗುರು ನೀನೇ.. ಗುರಿ ನೀನೇ... ಅರಿವು ನೀನೇ ರಾಮ...ಅದೆಂದೆಂದೂ ಕೇಳದ ಅದ್ಭುತ ಹಾಡು...
    ನಾನು ನಿಮ್ಮ ಅಭಿಮಾನಿ..
    ನಿಮಗೆ ನನ್ನ ನಮನಗಳು ಹರ್ಷ ಸರ್🙏🙏

  • @meerarao326
    @meerarao326 Před rokem +2

    ಅರ್ಥಗರ್ಭಿತ ಹಾಡು. ಧೈರ್ಯವನ್ನು ತುಂಬುವ ಶಕ್ತಿ ಈ ಹಾಡಿಗಿದೆ. ನಮ್ಮ ಮನೆಯವರಿಗೆಲ್ಲಾ ಈ ಹಾಡು ಅಂದರೆ ತುಂಬಾ ಇಷ್ಟ.

  • @malleshmallesh6226
    @malleshmallesh6226 Před 22 dny

    Jai shree Ram nanige thumbaa eshtavaadha haadu Jai shree Ram Jai shree Ram

  • @manjula1054
    @manjula1054 Před rokem +9

    ನಿಮ್ಮ Voice ನಮ್ಮ ಮನೇಲಿ ಎಲ್ಲರಿಗೂ ತುಂಬಾ ಇಷ್ಟಾ ಹರ್ಷ Bro ❤️❤️

  • @varunichandrashekar6355
    @varunichandrashekar6355 Před 4 lety +6

    ಚೆಂದದ ಭಕ್ತಿಯ ಚಿಮ್ಮಿ ಸುವ ಸಾಹಿತ್ಯ, ಅಷ್ಟೇ ಚೆಂದದ‌ ಹಾಡು

  • @sanjuhudali7356
    @sanjuhudali7356 Před 2 lety +1

    ಹಾಡು ಕೇಳಿದ ಮೇಲೆ ನಿಜವಾಗಲು ನನ್ನೊಳಗಿರುವ ರಾವಣ ಸತ್ತ ಅನುಭವ ಆಯಿತು ...... ಜೈ ಶ್ರೀ ರಾಮ 🙏🙏🙏🙏🙏🚩🚩🚩🚩🚩

    • @sukanyabs8717
      @sukanyabs8717 Před 2 lety

      Nimma ee haadu nanna hrudayalli nelesiruva Sree Ramachandra Swamiannu yebbisitu
      Thumba vandanegalu
      Anugrahithalaade