ಬೆಟ್ಟದ ಜೀವ 13

Sdílet
Vložit
  • čas přidán 29. 08. 2024
  • “ಕಡಲತೀರದ ಭಾರ್ಗವ’ರೆಂದು ಪ್ರಖ್ಯಾತರಾದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧0-೧0-೧೯0೨ರಲ್ಲಿ ಜನಿಸಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದರು.
    ೧೯೫೮ರಲ್ಲಿ ಇವರ ಯಕ್ಷಗಾನ ಬಯಲಾಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸ್ವೀಡನ್ ಪ್ರಶಸ್ತಿ ಬಂದಿತು. ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ಕರ್ನಾಟಕ ವಿಶ್ವವಿದ್ಯಾನಿಲಯ ೧೯೬೩ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿದರೆ, ೧೯೬೮ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಬಿರುದಿತ್ತು ಗೌರವಿಸಿತು. ೧೯೫೧ರಲ್ಲಿ ಮೈಸೂರಿನಲ್ಲಿ ನಡೆದ ೩೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಪರಿಷತ್ತು ಸನ್ಮಾನಿಸಿತು. ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತು.
    ಅವರ ಪ್ರಸಿದ್ಧ ಕೃತಿ “ಬೆಟ್ಟದ ಜೀವ” ಕಾದಂಬರಿಯನ್ನು ನಿಮ್ಮ ಮುಂದೆ ಇರಿಸಿದ್ದೇನೆ. ಇದರಲ್ಲಿ ಏನಾದರೂ ತಪ್ಪುಗಳಿದ್ದಲ್ಲಿ ಅದು ನನ್ನದೇ ಹೊರತು ಕೃತಿಕಾರರದಲ್ಲ. ಅವರಿಗೆ ನನ್ನ ಶತಕೋಟಿ ನಮನಗಳು.
    ನಮಸ್ಕಾರ

Komentáře • 11

  • @leelavathi.b.nnagaraj9346
    @leelavathi.b.nnagaraj9346 Před 8 měsíci

    ಬೆಟ್ಟದ ಜೀವದ ಮುಂದಿನ ಭಾಗಗಳನ್ನು ನಿಮ್ಮ ಧ್ವನಿಯಲ್ಲಿ ಕೇಳಲು ನಮಗೆ ಲಭ್ಯವಿದೆಯೇ...ಸರ್

  • @samskrutiirkalgada9904
    @samskrutiirkalgada9904 Před 5 měsíci

    ಕಾದಂಬರಿ ಅರ್ಧ ಆಗಿದೆ.... ಚೆನ್ನಾಗಿ ಓದಿದ್ದೀರಿ ಸರ್... ಆದರೆ ಅರ್ಧಕ್ಕೆ ನಿಲ್ಲಿಸಿದ್ದೆ ಬೇಸರದ ವಿಷಯ

  • @Math030
    @Math030 Před rokem

    Sir next video

  • @sumitdurgoji5205
    @sumitdurgoji5205 Před 2 lety

    Next part please

  • @umadevin5401
    @umadevin5401 Před rokem

    ,👍

  • @shivangoudamudigoudar9928

    ಧನ್ಯವಾದಗಳು ಸರ್, ನೀವು ಓದುವ ರೀತಿ ಕಾದಂಬರಿಯ ಪಾತ್ರಗಳು ನಮ್ಮೇದುರಿಗೇ ನಿಂತು ಮಾತನಾಡಿದ ಹಾಗಿದೆ...ಸುಂದರ ಅನುಭವ...

  • @tindipotatirugupota6829

    Sir waiting for next video