Sri Vidyamanya Teerthara SamsmaraNe - Part 2 ft. Sri Bannanje Govindacharya

Sdílet
Vložit
  • čas přidán 22. 08. 2024
  • Sri Bannanje Govindacharyaru speaks about Sri Vidyamanya Teertharu
    ಎರಡು ಬಾರಿ ಪರ್ಯಾಯ ಮಾಡಿದವರು ಶ್ರೀ ವಿದ್ಯಾಮಾನ್ಯತೀರ್ಥರು . ಇನ್ನೇನು ಪರ್ಯಾಯ ಮುಗಿಯುತ್ತಾ ಬಂದಿದೆ. ಅವರು ಈ ಪೀಠಕ್ಕೆ ಬಂದದ್ದು ಅಪೂರ್ವ ಘಟನೆ. ಮೂಲತಃ ಅವರು ಭಂಡಾರಕೇರಿ ಮಠದ ಯತಿಗಳಾಗಿ ಸನ್ಯಾಸ ತೆಗೆದುಕೊಂಡವರು. ಭಂಡಾರಕೇರಿ ಮಠದ ಯತಿಗಳಾಗಿದ್ದಾಗಲೇ ಅವರಿಗೆ ದೈವ ಬೇಕಾದಂತಹ ವ್ಯವಸ್ಥೆ ಮಾಡಿತ್ತು. ಅವರು ಆಶ್ರಮ ತೆಗೆದುಕೊಂಡಿದ್ದು ಅದಮಾರು ಮಠದ ಶ್ರೀ ವಿಬುಧಪ್ರಿಯತೀರ್ಥರಿಂದ. ಅದಮಾರು ಫಲಿಮಾರು ದ್ವಂದ್ವ ಮಠಗಳು. ಆಗಿನ ಕಾಲಕ್ಕೆ ಮಾಧ್ವ ಸಮಾಜಕ್ಕೆ ಇಬ್ಬರು ವಿಭೂತಿ ಪುರುಷರು ಒಂದೇ ಕಾಲದಲ್ಲಿದ್ದರು. ವಿಬುಧಪ್ರಿಯತೀರ್ಥರು ಇಲ್ಲಿ ಹ್ಯಾಗೋ ಹಾಗೆ ಸತ್ಯಧ್ಯಾನತೀರ್ಥರು ಅಲ್ಲಿ . ಇಬ್ಬರೂ ಅಸಾಧಾರಣ ಪುರುಷರು. ವಿಬುಧಪ್ರಿಯರಿಂದ ಆಶ್ರಮ ಪಡೆದರು ಸತ್ಯಧ್ಯಾನ ತೀರ್ಥರಿಂದ ವಿದ್ಯೆ ಪಡೆದರು. ಹಾಗಾಗಿ ಆ ಶಕ್ತಿ ಇವರಲ್ಲಿ ಬಂತು . ಆದ್ದರಿಂದ ಕೃಷ್ಣ ಇವರಿಂದ ಪೂಜೆ ಮಾಡಿಸಿಕೊಳ್ಳುವುದು ಅಂತ ತೀರ್ಮಾನ ಮಾಡಿಸಿಕೊಳ್ಳುವ ಹಿನ್ನಲೆ ಸೂಚನೆ ಕಾಣ ಬರುತ್ತದೆ. ಆಮೇಲೆ ಪೀಠಕ್ಕೆ ಬಂದು ಎರಡು ಪರ್ಯಾಯ ಮಾಡಿದರು. ಈ ಎರಡು ಪರ್ಯಾಯಗಳಲ್ಲಿ ಅಭೂತಪೂರ್ವವಾದ ಸಾಧನೆ ಮಾಡಿದರು. ಉಳಿದ ಯಾವ ಮಠದವರು ಮಾಡದೇ ಇದ್ದಂತಹ ;ಒಂದು ಅರ್ಪಣೆ ಕೃಷ್ಣನಿಗೆ. ಮೊದಲ ಪರ್ಯಾಯದಲ್ಲಿ ಕೃಷ್ಣನಿಗೆ ಚಿನ್ನದ ತೊಟ್ಟಿಲು. ಈಗ ಚಿನ್ನದ ರಥ. ಸುಮಾರು ಒಂದುಕೋಟಿ ರೂಪಾಯಿ ಸ್ವತ್ತು. ಕೋಟಿ ರೂಪಾಯಿ ಮೌಲ್ಯದ ಪ್ರಶ್ನೆಯಲ್ಲ! ಕೋಟಿ ಕೋಟಿ ರೂಪಾಯಿ ವ್ಯವಹಾರ ಮಾಡುವುದೇ ಸಾಧ್ಯವಿಲ್ಲ ಆವಾಗ . ಆದ್ದರಿಂದ ಈ 7೦೦ ವರ್ಷಗಳಲ್ಲಿ ಎಂದು ನಡೆಯದಂತಹ ಅಪೂರ್ವ ಸೇವೆ ಇವರಿಂದ ಸಂದಿದೆ. ಪ್ರಾಯಹ ಈ ಸೇವೆಯನ್ನು ಸ್ವೀಕರಿಸುವುದಕ್ಕೋಸ್ಕರವೇ ಇವರನ್ನು ಶ್ರೀಕೃಷ್ಣ ತಂದು ಕೂಡಿಸಿರಬೇಕು ಅಂತ ಕಾಣುತ್ತೆ. ಇನ್ನೊಂದು ವಿಶೇಷ ಏನು ಅಂದ್ರೆ ಇವರಲ್ಲಿ ಅವರು ಯಾವಾಗಲೂ ಹೇಳೊವ್ರು ;ನನ್ನ ತಪಸ್ಸು ನನ್ನ ಪೂಜೆ ನನ್ನ ಪ್ರವಚನ. ನನಗೆ ಇನ್ಯಾವುದರಲ್ಲೂ concentration ಬರೋಲ್ಲ. 'ಸ್ವಾಧ್ಯಾಯ ಪ್ರವಚನೇ.........' ಸ್ವಾಧ್ಯಾಯ ಪ್ರವಚನವೇ ನನ್ನ ತಪಸ್ಸು. ಪ್ರಾಯ: ಇನ್ಯಾವ ಪರ್ಯಾಯದಲ್ಲೂ ನಡೆಯದಿದ್ದ ಶಾಸ್ತ್ರ ಪ್ರವಚನ ಇವರ ಪರ್ಯಾಯ ಕಾಲದಲ್ಲಿ ನಡೆಯಿತು. ಅವರ ಪರ್ಯಾಯ ಕಾಲದಲ್ಲಿ ಅನೇಕ ಅದ್ಭುತಗಳನ್ನು ಅನುಭವಿಸಿದ್ದೇವೆ. ದೈವ ಬುದ್ಧಿಪೂರ್ವಕವಾಗಿಯೇ ಆಶ್ರಮ ಕೊಡುವಾಗಲೇ ಯೋಜನೆ ಮಾಡಿ ತನ್ನ ಬಳಿ ಕರೆಸಿಕೊಳ್ಳುವ ತೀರ್ಮಾನ ಮಾಡಿದೆ. ಆಶ್ರಮ ಜ್ಯೇಷ್ಠರು, ವಯಸ್ಸಿನಲ್ಲಿ ಹಿರಿಯರು, ವಿದ್ಯೆಯಲ್ಲಿ , ಜ್ಞಾನದಲ್ಲಿ ಶ್ರೇಷ್ಠರು . ಎಲ್ಲರಿಗೂ ಹಿರಿಯರಾಗಿ ಕೃಷ್ಣ ಪೂಜೆ ಮಾಡಿದ್ದಾರೆ. ಅವರ ಇನ್ನೊಂದು ದೊಡ್ಡ ಕೊಡುಗೆ ಶ್ರೀ ಪೇಜಾವರ ಶ್ರೀಗಳನ್ನು ಸಮಾಜಕ್ಕೆ ಕೊಟ್ಟಿದ್ದು. ಸಮಗ್ರವಾಗಿ ಪಾಠ ಹೇಳಿ ಪೇಜಾವರ ಶ್ರೀಗಳನ್ನು ತಯಾರಿ ಮಾಡಿದ್ದು. ಪೇಜಾವರ ಶ್ರೀಗಳ ನಂತರ ಎರಡನೇ batch ನಲ್ಲಿ ವಿದ್ಯಾರ್ಥಿಯಾಗಿದ್ದವ ನಾನು. ಪಾಠದ ಸೊಬಗನ್ನು ಆಸ್ವಾದಿಸುವ ಅವಕಾಶ ನನಗೆ ಲಭಿಸಿತ್ತು. ಅಸದೃಶವಾದ ಪಾಠ ಕ್ರಮ ಇವರಲ್ಲಿ ಪ್ರತ್ಯಕ್ಷ ಅನುಭವಿಸಿದವ ನಾನು. ಒಬ್ಬ ವಿದ್ಯಾರ್ಥಿ ಬುದ್ಧಿವಂತನಾದರೆ ಅವರು ಆ ವಿದ್ಯಾರ್ಥಿಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡು ಅವರು ಕಣ್ಣು ಅರಳಿಸಿ ನೋಡುವುದು . ಅವರ ಕಣ್ಣಿನಲ್ಲಿದ್ದ ಕಲೆ ಇದನ್ನು ಯಾರಲ್ಲೂ ನೋಡಲು ಸಾಧ್ಯವಿಲ್ಲ. ಅದ್ಭುತವಾದ ಕಣ್ಣಿನ ಶಕ್ತಿ. ನಾನು ಅದನ್ನು ಯಾವಾಗಲೂ ಅವರಿಂದ ನಿರೀಕ್ಷಿಸುತ್ತಿದ್ದೆ. ನನ್ನನ್ನು ನೋಡಿದಾಗ ಧನ್ಯತೆಯ ಭಾವ ಬರುತ್ತಿತ್ತು. ಲಕ್ಷ ರೂ ಕೊಟ್ಟರೂ ಸಿಗದ ಆನಂದ. ಅವರದು ಅದ್ಭುತ ಕಣ್ಣಿನ ಶಕ್ತಿ. ಹೀಗೆ ಅವರ ಕಾಲದಲ್ಲಿ ಅನೇಕ ಅದ್ಭುತಗಳನ್ನು ನೋಡಿದ್ದೇವೆ.

Komentáře • 6

  • @venkateshmurthys9759
    @venkateshmurthys9759 Před 3 měsíci +1

    ಶ್ರೀ ವಿದ್ಯಾಮಾನ್ಯ ಗುರುಭ್ಯೋನಮಃ 🙏🙏
    ಧನ್ಯವಾದಗಳು

  • @shree_purushottama.
    @shree_purushottama. Před 3 měsíci

    🙏🙏🙏😍 ಆಚಾರ್ಯರ ಮಾತೇ ಮಂಗಳ

  • @ramakrishnar950
    @ramakrishnar950 Před 3 měsíci

    🙏🙏🙏

  • @vkk393
    @vkk393 Před 3 měsíci

    Thanks for this rare video🙏😊🙏🙏😊

  • @surishetty39
    @surishetty39 Před 3 měsíci

    Nice ma