ಗೋಕಾಕ್‌ ಚಳುವಳಿ - ಡಾ. ರಾಜ್ ಕುಮಾರ್‌ - ಕನ್ನಡಕ್ಕಾಗಿ ಕಣ್ಣೀರಿಟ್ಟ ನೈಜ ದೃಶ್ಯ

Sdílet
Vložit
  • čas přidán 31. 10. 2023
  • ʻಮೆಚ್ಚುಗೆʼ ಹಾಗೂ ʻಅಭಿಪ್ರಾಯʼ ಸೂಚಿಸಲು ಮತ್ತು ಸಬ್ ಸ್ಕ್ರೈಬ್‌ ಮಾಡಲು ವಿನಂತಿ.
    Japan - Divine Bond with Hindu Devatas. Video link
    • Japan - Divine Bond w...
    ಕನ್ನಡ ಭಾಷೆಯ ಹಿರಿಮೆಗಾಗಿ ನಡೆದ ಗೋಕಾಕ್‌ ಚಳುವಳಿ
    ಡಾ. ರಾಜ್ ಕುಮಾರ್‌ ವಹಿಸಿದ ನೇತೃತ್ವ - ಕನ್ನಡ ಜಾಗೃತಿ - ಸಾಕ್ಷ್ಯಚಿತ್ರ
    ---------------------------------------------------------
    ಪ್ರತಿವರ್ಷ ನವೆಂಬರ್‌ ೧ ರಂದು ಕರ್ನಾಟಕ ಸರಕಾರ ಅಧಿಕೃತವಾಗಿ ಆಚರಿಸುವ ಕನ್ನಡ ರಾಜ್ಯೋತ್ಸವದಲ್ಲಿ ಅನೇಕ ಸಂಘ ಸಂಸ್ಥೆಗಳು - ಜನ ಸಾಮಾನ್ಯರು ಸಂಭ್ರಮದಿಂದ ಪಾಲ್ಗೊಳ್ತಾರೆ. ಹೊರನಾಡುಗಳಲ್ಲಿ ನೆಲೆಸಿರುವ ಕನ್ನಡಿಗರೂ ಹಲವಾರು ದೇಶಗಳಲ್ಲಿ ಆಚರಿಸುವ ಈ ಹೆಮ್ಮೆಯ ಸಂಭ್ರಮಾಚರಣೆಯ ಹಿಂದಿರುವ ದೀರ್ಘ ಇತಿಹಾಸದತ್ತ ಒಂದು ನೋಟ.
    ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಹಾಡುತ್ತಿದ್ದ ಕನ್ನಡಿಗರು ಉದಯವಾಯಿತು ಕನ್ನಡ ನಾಡು ಎಂದು ಸಂಭ್ರಮಪಟ್ಟರು. ನಾಡಗೀತೆ ಎಂದು ಪ್ರಸಿದ್ಧವಾಗಿದ್ದ ಈ ಗೀತೆಯನ್ನು ರಚಿಸಿದವರು, ಕವಿ, ನಾಟಕಕಾರ, ಸ್ವಾಂತಂತ್ರ್ಯ ಹೋರಾಟಗಾರ ಹುಯಿಲಗೋಳ ನಾರಾಯಣರಾಯರು.
    ಈ ಸಂಭ್ರಮದೊಂದಿಗೆ, ಬಹುಕಾಲದಿಂದ ನೆಲ - ಜಲ - ಭಾಷಾ ಸಮಸ್ಯೆಗಳು ಇರುವಂತೆಯೇ ಅದಕ್ಕಾಗಿ ಹೋರಾಟ ಮಾಡಿರುವುದೂ ಕಾಣುತ್ತದೆ. ಹಲವೊಮ್ಮೆ ಕಾವೇರುವ ಕಾವೇರಿ ನೀರಿನ ಸಮಸ್ಯೆ, ಆಗಿಂದಾಗ್ಗೆ ಮುನ್ನಲೆಗೆ ಬರುವ ಬೆಳಗಾಂ ತಮ್ಮದೆನ್ನುವ ಪಕ್ಕದ ರಾಜ್ಯದ ತಗಾದೆಗಳೊಂದಿಗೆ ಕನ್ನಡ ಭಾಷೆಯ ಹಿರಿಮೆಗೆ ಕುತ್ತು ಬಂದಾಗ ಚಳುವಳಿಗಳು ನಡೆದಿವೆ. ಅದರಲ್ಲಿಯೂ ೧೯೮೨ ರಲ್ಲಿ ನಡೆದ ಜನಾಂದೋಲನ ವಿಶಿಷ್ಟವಾದದ್ದು.
    ಅದರಲ್ಲಿಯೂ ಕನ್ನಡದ ಕಣ್ಮಣಿ ಡಾ.ರಾಜ್‌ ಕುಮಾರ್‌ ನಾಯಕತ್ವ ವಹಿಸಿಕೊಂಡ ಮೇಲೆ ಕನ್ನಡ ಭಾಷೆಯ ಹಿರಿಮೆಗಾಗಿ ನಡೆದ ಅತ್ಯಂತ ದೊಡ್ಡ ಆಂದೋಲನ, ಇಡೀ ರಾಜ್ಯವನ್ನು ವ್ಯಾಪಿಸಿತು.
    ಆದರೆ, ಇದನ್ನು ದೃಶ್ಯ ಮಾಧ್ಯಮದಲ್ಲಿ ದಾಖಲಿಸುವುದು ಆ ಸಮಯದಲ್ಲಿ ನಡೆಯುತ್ತಿರಲಿಲ್ಲ. ಆಗ, ನಾನು ಹಾಗೂ ನನ್ನ ಪತಿ ಬಿ.ಎಸ್. ಮನೋಹರ್‌ ನಮ್ಮ ಬಳಿ ಇದ್ದ ಸೂಪರ್‌ ೮ ಎಂ.ಎಂ. ಕ್ಯಾಮರಾದಲ್ಲಿ ಸ್ವಂತ ಖರ್ಚಿನಲ್ಲಿ, ಪ್ರಮುಖ‌ ದೃಶ್ಯಗಳ ಚಿತ್ರೀಕರಣ ಮಾಡಿದ್ದು, ನಂತರ ಅದನ್ನು ವಿಡಿಯೋ ಆಗಿ ಪರಿವರ್ತಿಸಿದ್ದೇವೆ.
    ವೀಡಿಯೋ ವೀಕ್ಷಿಸಿದ ಸಹೃದಯರೆಲ್ಲರಿಗೂ ಧನ್ಯವಾದಗಳು
    ʻಮೆಚ್ಚುಗೆʼ ಹಾಗೂ ʻಅಭಿಪ್ರಾಯʼ ಸೂಚಿಸಲು ಮತ್ತು ಸಬ್ ಸ್ಕ್ರೈಬ್‌ ಮಾಡಲು ವಿನಂತಿ
    ಡಾ.ಜಯಂತಿ ಮನೋಹರ್ ಬಿ.ಎಸ್.ಮನೋಹರ್ ವೇದಾರ್ಥ ಚಿಂತಕರು, ಲೇಖಕರು ಸಾಕ್ಷ್ಯಚಿತ್ರ ನಿರ್ದೇಶಕರು/ನಿರ್ಮಾಪಕರು ಭಾರತೀಯ ಸಾಂಸ್ಕೃತಿಕ ಪತ್ರಕರ್ತರು ಪರಂಪರೆಯ ಸಂಶೋಧಕರು

Komentáře • 36

  • @mallikarjunkmirajkar13569
    @mallikarjunkmirajkar13569 Před 7 měsíci +38

    🙏🏻ಭಾರತ ರತ್ನ dr ರಾಜಕುಮಾರ 👌👏👏👏👍

  • @mallikarjunkmirajkar13569
    @mallikarjunkmirajkar13569 Před 7 měsíci +29

    Dr ರಾಜಕುಮಾರ ತ್ಯಾಗಮಯಿ. ಸರ್ವ ಕಾಲಕ್ಕೂ ಶ್ರೇಷ್ಠ ನಟರು
    ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 🙏🏻

  • @siddudalavayi3066
    @siddudalavayi3066 Před 6 měsíci +30

    ಅಮ್ಮ ದಯವಿಟ್ಟು ಗೋಕಾಕ್ ಚಳುವಳಿಯ ಆ ಎಲ್ಲಾ ದೃಶ್ಯಗಳನ್ನು ಕಂತುಗಳಲ್ಲಿ ಬಿಡುಗಡೆ ಮಾಡಿದರೆ ಕನ್ನಡಿಗರ ಕಣ್ಣಿಗೆ ಹಬ್ಬವಾಗುತ್ತದೆ...❤❤

    • @mohann2289
      @mohann2289 Před 5 měsíci +2

      ಹೌದು ನಾನು ಎಷ್ಟೋ ಹುಡುಕಿದೆ ಆದರೆ ಎಲ್ಲೂ ಸಿಕ್ಕಿಲ್ಲ ದಯವಿಟ್ಟು ಈ ಚಾನೆಲ್ ನಲ್ಲಿ ಆ ವಿಡಿಯೋಗಳು ಹಾಕಿದರೆ ಸಂತೋಷ

  • @johnnydepp2441
    @johnnydepp2441 Před 5 měsíci +10

    ಅಣ್ಣಾವ್ರು ಕನ್ನಡ ನಾಡಿನ ಹೆಮ್ಮೆಯ ಪುತ್ರ.❤❤

  • @RanganathGJ-Mysuru
    @RanganathGJ-Mysuru Před 6 měsíci +9

    ಬೆಂಗಳೂರಿನಲ್ಲಿ ನಡೆದ ಈ ಸಭೆಯಲ್ಲಿ ಭಾಗವಹಿಸಿದು ನನ್ನ ಅದೃಷ್ಟ 🎉🎉

  • @manjunathjayasheel018
    @manjunathjayasheel018 Před 5 měsíci +8

    ಅಣ್ಣಾವ್ರಿಗೆ ಭಾರತ ರತ್ನ ಪುರಸ್ಕಾರ ಸಿಗದಿರುವುದು ನಿಜಕ್ಕೂ ಬೇಸರದ ಸಂಗತಿ.

    • @dcmhsotaeh
      @dcmhsotaeh Před 5 měsíci +1

      Dehali Avarige naavu beda vaadavaru

  • @_Justice77
    @_Justice77 Před 6 měsíci +16

    ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು ಮತ್ತು ನಮಸ್ಕಾರಗಳು 💐👏👏👏👏👏👏

  • @smeti7673
    @smeti7673 Před 6 měsíci +15

    ನಿಮ್ಮ ಈ ಕೆಲಸಕ್ಕೆ ತುಂಬಾಧನ್ಯವಾದಗಳು.. 🙏🙏
    ಆದಷ್ಟು ಅಣ್ಣಾವರ ಬಗೆಗಿನ ತಿಳಿಯಲಾಗದ ವಿಚಾರಗಳನ್ನು ಹಳೆಯ ವಿಡಿಯೋಗಳನ್ನ upload ಮಾಡಿ... 🙏🙏

  • @rcbroyalteamloyalfans6171
    @rcbroyalteamloyalfans6171 Před 5 měsíci +3

    Dr Rajkumar ❤❤❤devaru

  • @srikanthkini5177
    @srikanthkini5177 Před 6 měsíci +7

    ಅಪರೂಪದ ಚಿತ್ರಗಳ ಸಂಗ್ರಹ ಮತ್ತು ದಾಖಲೆ ಯು ಹೌದು. ನಿಮ್ಮಗೆ ಕನ್ನಡ ಭಾಷೆ ಮತ್ತು ಕನ್ನಡ ಕಣ್ಮಣೀ ಮೇಲೆ ನಿಮ್ಮಿಬ್ಬರ ಅಭಿಮಾನಕ್ಕೆ ಅಭಿನಂದನೆಗಳು.

  • @SudarshanKannadiga
    @SudarshanKannadiga Před 6 měsíci +8

    Dr. Rajkumar 🙏🏻

  • @kumaraswamy8181
    @kumaraswamy8181 Před 6 měsíci +5

    Dr.Raj is great. We have to remember always as a true kannadigas every body should worship Raj. Young generation should know about great contribution of Annavru.

  • @adinarayanamurthy8092
    @adinarayanamurthy8092 Před 6 měsíci +8

    Sri Rajkumar is a yoga pursha he sacrifice all to kannada

  • @manjunathamanju2160
    @manjunathamanju2160 Před 6 měsíci +5

    ತುಂಬು 💞ಹೃದಯದ ಧನ್ಯವಾದಗಳು ಜಯಂತಿ 💐 ಮೇಡಂ 🙏🏻🙏🏻🙏🏻

  • @yathishg607
    @yathishg607 Před 5 měsíci +1

    ನಿಮಗೆ ಅನಂತ ಧನ್ಯವಾದಗಳು

  • @ajastha1876
    @ajastha1876 Před 25 dny

    ಎಂದೆಂದೂ ಡಾ. ರಾಜ್ ❤️🙏🌹.

  • @bjayashree6423
    @bjayashree6423 Před 6 měsíci +4

    Beyond words

  • @nagarajaraojadav
    @nagarajaraojadav Před 6 měsíci +2

    Anna 🙏🏽🙏🏽

  • @maritammappahaveri6091
    @maritammappahaveri6091 Před 6 měsíci +4

    Rajkumar

  • @rameshr3875
    @rameshr3875 Před 4 měsíci

    Nimage koti koti namaskara

  • @manjumanjunath5312
    @manjumanjunath5312 Před 4 měsíci

    ಧನ್ಯವಾದ ❤

  • @krishnaba7562
    @krishnaba7562 Před 6 měsíci +2

    Super..sir

  • @RoadStory707
    @RoadStory707 Před 6 měsíci +7

    ದೊಡ್ಡವರು

  • @praveenab8675
    @praveenab8675 Před 5 měsíci +2

    𝙅𝙖𝙞 𝘼𝙣𝙣𝙖𝙫𝙧𝙪🙏 🙇‍♂️❤💥🔥💞💝⚡

  • @dattuukattula586
    @dattuukattula586 Před 6 měsíci +2

    🙏🙏🙏🙏

  • @user-el7qm7pb3h
    @user-el7qm7pb3h Před 5 měsíci

    🙏🙏🙏🙏🙏
    ❤️❤️❤️❤️❤️

  • @JayanthiManoharDrScholar
    @JayanthiManoharDrScholar  Před 5 měsíci

    Japan - Divine Bond with Hindu Devatas. Video link
    czcams.com/video/vqdssG_HBY8/video.html

  • @rameshr3875
    @rameshr3875 Před 4 měsíci

    Kannada da Ekika bahu dodda sakthi

  • @vaibhavsaarathi3397
    @vaibhavsaarathi3397 Před měsícem

    ಡಾ || ರಾಜ್ ಕುಮಾರ್ ಗೆ ಜೈ