Video není dostupné.
Omlouváme se.

ಯಕ್ಷಮಂದಾರ-61|ರಾಜು ದೇವಾಡಿಗ ಕುದ್ರುಕೋಡು|Raju poojary Kudrukodu...yakshagana Goligaradi mela

Sdílet
Vložit
  • čas přidán 12. 10. 2021
  • ಯಕ್ಷಮಂದಾರ..ಸಂಚಿಕೆ 61
    ಇದು ಯಕ್ಷಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ
    ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಪ್ರಸಿದ್ಧ ಮೂರನೇಯ ವೇಷಧಾರಿ ಕುದ್ರುಕೋಡು ರಾಜು ದೇವಾಡಿಗರು...
    ಇವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಕುದ್ರುಕೋಡು ಎಂಬ ಹಳ್ಳಿಯಲ್ಲಿ ಶ್ರೀ ಚಿಕ್ಕಯ್ಯ ದೇವಾಡಿಗ ಮತ್ತು ಶ್ರೀಮತಿ ಸೂರಮ್ಮ ದಂಪತಿಗಳ ಪ್ರಥಮ ಪುತ್ರರಾಗಿ 1980ರಲ್ಲಿ ಜನಿಸಿದರು
    ಏಳನೆಯ ತರಗತಿಯವರೆಗೆ ಶಿಕ್ಷಣವನ್ನು ಪಡೆದ ಇವರು ನಂತರ ತನ್ನ ಹನ್ನೊಂದನೇಯ ವಯಸ್ಸಿನಲ್ಲಿಯೇ ಯಕ್ಷಗಾನ ಕ್ಷೇತ್ರದತ್ತ ಆಕರ್ಷಿತರಾಗಿ,ಅಲ್ಲಿಯೇ ತನ್ನ ವೃತ್ತಿ ಬದುಕನ್ನು ಕಂಡುಕೊಂಡರು...ಖ್ಯಾತ ಸ್ತ್ರೀವೇಷದಾರಿಯವರಾದ ಉಳ್ಳೂರು ಶಂಕರ ದೇವಾಡಿಗರಲ್ಲಿ ಯಕ್ಷಗಾನದ ಶಿಕ್ಷಣವನ್ನು ಪಡೆದ ಇವರು ತನ್ನ ಸುಂದರವಾದ ಆಳಾಂಗ, ಆಕರ್ಷಕವಾದ ವೇಷಗಾರಿಕೆ, ಸ್ಪಷ್ಟ ಮತ್ತು ಸುಲಲಿತವಾದ ಮಾತುಗಾರಿಕೆ ಮತ್ತು ಪಾದರಸ ಸದೃಶ್ಯ ನಾಟ್ಯಾಭಿನಯದಿಂದ ಯೋಗ್ಯ ಪುಂಡು ವೇಷಧಾರಿಯಾಗಿ ಜನಮಾನಸದಲ್ಲಿ ಸ್ಥಾನ ಗಳಿಸಿಕೊಂಡರು...
    ಪ್ರಥಮ ಬಾರಿಗೆ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿ, ಹತ್ತು ವರ್ಷ ಅಲ್ಲಿಯೇ ಸೇವೆಸಲ್ಲಿಸಿದ ಅವರು,ನಂತರ ಕೋಟ ಅಮೃತೇಶ್ವರಿ ಮೇಳದಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ..ಒಂಭತ್ತು ವರ್ಷಗಳಿಂದ ಗೋಳಿಗರಡಿ ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದು,ಪ್ರಸ್ತುತ ಅಲ್ಲಿಯೇ ಕಲಾಸೇವೆ ಮುಂದುವರಿಸುತ್ತಿದ್ದಾರೆ...ಯಕ್ಷರಂಗದಲ್ಲಿ ನಿರಂತರವಾಗಿ ಇಪ್ಪತ್ತಾಲ್ಕು ವರ್ಷಗಳ ಸಾರ್ಥಕ ಯಕ್ಷ ಸೇವೆಯನ್ನು ಪೂರೈಸಿ,ಇಪ್ಪತ್ತೈದನೆಯ ವರ್ಷದ ಸೇವೆಗೆ ಸನ್ನದರಾಗಿರುವ ಇವರು, ಹೆಚ್ಚಿನ ಪ್ರಚಾರಕ್ಕೆ ಹಾತೊರೆಯದೆ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕಲಾಸೇವೆ ಗೈಯುತಿರುವ ಸರಳ,ಸಜ್ಜನ ಕಲಾವಿದರು...
    ಅಭಿಮನ್ಯು,ವೃಷಸೇನ,ಬರ್ಬರಿಕ, ಕುಶ,ಲವ,ಬಬ್ರುವಾಹನ,ರುದ್ರಕೋಪ ಮೊದಲಾದ ಪುಂಡುವೇಷಗಳಲ್ಲಿ ಸಂಚಲನ ಮೂಡಿಸುವ ಇವರು,ಗೋಳಿಗರಡಿ ಕ್ಷೇತ್ರ ಮಹಾತ್ಮೆಯ ಪಂಜುರ್ಲಿ,ವಿಷ್ಣು,ಕೃಷ್ಣ,ಈಶ್ವರ,ಪ್ರಹ್ಲಾದ, ಜೋಗಿದಾಸ,ಚಂದುಗಿಡಿ,ಕೋಟಿ ಚೆನ್ನಯ್ಯ,ಪ್ರೇತ ಮೊದಲಾದ ಪಾತ್ರಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವ ಇವರ ಕಲಾ ಪ್ರೌಢಿಮೆ ಮತ್ತು ಯಕ್ಷಸೇವೆಯನ್ನು ಗುರುತಿಸಿ, ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ..
    ದಿನಾಂಕ:21.04.2005ರಲ್ಲಿ ಶ್ರೀಮತಿ ಹೇಮಾರವರ ಕೈ ಹಿಡಿದು,ಸಾಂಸಾರಿಕ ಬದುಕಿಗೆ ಕಾಲಿರಿಸಿದ ಇವರು,ರಮ್ಯಾ ಮತ್ತು ರಜನಿ ಎಂಬ ಎರಡು ಮುದ್ದು ಹೆಣ್ಮಕ್ಕಳನ್ನು ಪಡೆದಿದ್ದು,ಸುಖ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ...
    ಸರಳ ಮತ್ತು ಸಜ್ಜನರಾದ ಇವರಿಗೆ,ಶ್ರೀ ಪಂಜುರ್ಲಿ ದೇವರು ಆಯುರಾರೋಗ್ಯ, ಸಕಲ ಯೋಗ ಬಾಗ್ಯಾಧಿಗಳನ್ನು ಅನುಗ್ರಹಿಸಲಿ ಎನ್ನುವುದು ನಮ್ಮ ಯಕ್ಷ ಮಂದಾರದ ಶುಭ ಹಾರೈಕೆ...
    ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ..
    ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ..
    ಸಹಕಾರ:ಯಕ್ಷಪ್ರೇಮಿ ಜಯರಾಮ ಶೆಟ್ಟಿ ಮೇಲ್ ಹೊಸೂರು

Komentáře •