#ಯಕ್ಷಮಂದಾರ

Sdílet
Vložit
  • čas přidán 9. 10. 2020
  • #ಯಕ್ಷಮಂದಾರ,#ಉಪ್ಪಿನಕುದ್ರು ಆನಂದ ರಾವ್,#Uppinakudru Ananda Rao
    🌀ಯಕ್ಷ💥ಮಂದಾರ🌀
    ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ..
    ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಸುಪ್ರಸಿದ್ದ ಹಿರಿಯ ಸ್ತ್ರೀ ಪಾತ್ರಧಾರಿ, ಸೌಕೂರು ಮೇಳದ ಕಲಾವಿದ ಉಪ್ಪಿನಕುದ್ರು ಆನಂದ ರಾವ್..
    ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪಿನಕುದ್ರು ಗ್ರಾಮದ ಶ್ರೀ ಲಕ್ಷ್ಮಣ ಶೇರುಗಾರ್ ಮತ್ತು ಪ್ರೇಮಾ ಬಾಯಿ ಇವರ ಪುತ್ರನಾಗಿ ದಿನಾಂಕ:26.06.1971ರಲ್ಲಿ ಜನಿಸಿದರು
    ಇವರು ಉಪ್ಪಿನಕುದ್ರು ಮತ್ತು ತಲ್ಲೂರಿನಲ್ಲಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ ನಂತರ, ಉಪ್ಪಿನಕುದ್ರು ಬಾಸ್ಕರ ಕಾಮತ್ ಮತ್ತು ಹೆಮ್ಮಾಡಿ ಪ್ರಭಾಕರ ಆಚಾರ್ಯರಲ್ಲಿ ಯಕ್ಷಗಾನದ ಶಿಕ್ಷಣವನ್ನು ಪಡೆದು ತನ್ನ ಇಪ್ಪತ್ತನೇಯ ವಯಸ್ಸಿನಲ್ಲಿ ಶ್ರೀ ಕ್ಷೇತ್ರ ಹಾಲಾಡಿ ಮೇಳದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದರು..ನಂತರ ಯಕ್ಷಭೀಷ್ಮ ದಿ.ಎಂ.ಎಂ.ಹೆಗ್ಡೆಯವರ ಯಜಮಾನಿಕೆಯ ಮಾರಣಕಟ್ಟೆ ಮೇಳವನ್ನು ಸೇರಿದ ಅವರು, ಅಲ್ಲಿ ಸುದೀರ್ಘ ಹದಿನೆಂಟು ವರ್ಷಗಳ ಕಾಲ ಸೇವೆಸಲ್ಲಿಸಿದರು.. ಮಾರಣಕಟ್ಟೆ ಮೇಳದಲ್ಲಿ ಸೇವೆಸಲ್ಲಿಸುತ್ತ ಆಗಿನ ಹಿರಿಯ ಸ್ತ್ರೀಪಾತ್ರದಾರಿಗಳಾಗಿದ್ದ ಮಾರ್ಗೋಳಿ ಗೋವಿಂದ ಶೇರುಗಾರ್, ಎಂ.ಎ ನಾಯ್ಕ,ಕೊಳ್ಯೂರು ರಾಮಚಂದ್ರ ರಾವ್,ಎಂ.ಕೆ.ರಮೇಶ ಆಚಾರ್ಯ,ಅರಾಟೆ ಮಂಜುನಾಥರ ಪ್ರೇರಣೆ ಮತ್ತು ಮಾರ್ಗದರ್ಶನದಿಂದ ಬಡಗುತಿಟ್ಟಿನ ಸುಪ್ರಸಿದ್ದ ಪ್ರಧಾನ ಸ್ತ್ರೀವೇಷಧಾರಿಗಳಾಗಿ ರೂಪುಗೊಂಡರು.ನಂತರ ಪೆರ್ಡೂರು,ನೀಲಾವರ ಮತ್ತು ಪುನಃ ಮಾರಣಕಟ್ಟೆ ಮೇಳದಲ್ಲಿ ಸೇವೆಸಲ್ಲಿಸಿದ ಇವರು, ಪ್ರಸ್ತುತ ಸೌಕೂರು ಮೇಳದಲ್ಲಿ ಪ್ರಧಾನ ಸ್ತ್ರೀಪಾತ್ರದಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ವೀರ ಶೃಂಗಾರ ಮತ್ತು ಬಾವನಾತ್ಮಕ ಪಾತ್ರಗಳನ್ನು ಬಹು ಸುಂದರವಾಗಿ ಅಭಿನಯಿಸುವ ಇವರು, ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯ ಮೂಕಾಂಬಿಕೆ ಮತ್ತು ಶ್ರೀದೇವಿ ಮಹಾತ್ಮೆಯ ದೇವಿಯ ಪಾತ್ರದಲ್ಲಿ ತನ್ನ ಪ್ರಬುದ್ಧ ಅಭಿನಯದಿಂದ ಜನಮನ್ನಣೆಗೆ ಪಾತ್ರರಾಗಿದ್ದಾರೆ..
    ಸುಂದರವಾದ ಆಳಾಂಗ, ಶ್ರುತಿಬದ್ದವಾದ ಸ್ಪಷ್ಟ ಮಾತುಗಾರಿಕೆಯ ಶೈಲಿಯಿಂದ ಗರತಿ ಪಾತ್ರಗಳಿಗೆ ಗರಿಷ್ಠಮಟ್ಟದ ನ್ಯಾಯವನ್ನು ನೀಡಿರುವ ಇವರು,ಚಂದ್ರಮತಿ,ರುಚಿಮತಿ,ಸೀತೆ, ದಮಯಂತಿ,ಮಂಡೋದರಿ,ಸೈರೆಂದ್ರಿ, ಚಿತ್ರಾಂಗದೆ ಮೊದಲಾದ ಪಾತ್ರಗಳನ್ನು ತನ್ನ ಪ್ರಬುದ್ಧತೆಯ ಬಾವಾಭಿನಯದಿಂದ ಉನ್ನತ ಮಟ್ಟಕ್ಕೇರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.. ವೇಷಗಾರಿಕೆ, ಮಾತುಗಾರಿಕೆ ಮತ್ತು ರಂಗನಡೆಯಲ್ಲಿ ಹಿರಿಯ ಸ್ತ್ರೀಪಾತ್ರದಾರಿ ಎಂ.ಎ ನಾಯ್ಕರ ಪಡಿಯಚ್ಛನ್ನು ಇವರಲ್ಲಿ ಗುರುತಿಸಬಹುದಾಗಿದೆ.. ದಿ.ಎಂ.ಎಂ ಹೆಗ್ಡೆಯವರ ಶಿಸ್ತಿನ ಗರಡಿಯಲ್ಲಿ ಪಳಗಿರುವ ಇವರು,ಆಧುನಿಕತೆಯತ್ತ ಮುಖ ಮಾಡದೆ,ಸಾಂಪ್ರದಾಯಿಕ ಶೈಲಿಯಲ್ಲಿಯೇ ಸಾಗಿ,ನಡುತಿಟ್ಟಿನ ಸ್ತ್ರೀವೇಷಗಳಿಗೆ ವಿಶಿಷ್ಟ ಮೆರುಗನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ..
    ದಿಟ್ಟ ನಿಲುವಿನ ಅಂಬೆ,ಜ್ವಾಲೆ ಮತ್ತು ಕೈಕೇಯಿ ಮೊದಲಾದ ಪಾತ್ರಗಳನ್ನು ಅರ್ಥಪೂರ್ಣವಾಗಿ ಅಭಿನಯಿಸುವ ಇವರು, ಹಿಂದಿನ ಕಾಲದಲ್ಲಿ ಮಾರಣಕಟ್ಟೆ ಮೇಳದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಸ್ಪರ್ಧಾತ್ಮಕ ಜೋಡಾಟಗಳಲ್ಲಿ ಕಸೆವೇಷಗಳಾದ ಮೀನಾಕ್ಷಿ, ಮದನಾಕ್ಷಿ,ಪದ್ಮಗಂದಿನಿ, ತಾರಾವಳಿ, ಶಶಿಪ್ರಭೆ,ಸುಭದ್ರೆ,ದ್ರೌಪತಿ ಮೊದಲಾದ ವೀರಾವೇಶದ ಪಾತ್ರಗಳಲ್ಲಿ ಅಬ್ಬರಿಸುತ್ತ,ಎದುರಿನ ಪಾತ್ರಧಾರಿಗೆ ಸಮರ್ಥ ಪೈಪೋಟಿಯನ್ನು ನೀಡುತ್ತಿದ್ದರು..
    ಕರಾವಳಿ ಮಲೆನಾಡು ಉತ್ತರಕರ್ನಾಟಕ ಬೆಂಗಳೂರು, ಮುಂಬೈ ಹೈದರಾಬಾದ್ ಮೊದಲಾದ ಕಡೆ ಪ್ರದರ್ಶನವನ್ನು ನೀಡಿ, ಅಪಾರ ಅಭಿಮಾನಿಗಳ ಪ್ರೀತಿ ಮತ್ತು ಮನ್ನಣೆಗೆ ಪಾತ್ರರಾಗಿರುವ ಇವರಿಗೆ ದಿ.ಎಂ.ಎಂ.ಹೆಗಡೆ ಸಂಸ್ಮರಣ ಪ್ರಶಸ್ತಿ,ಮೇಲ್ ಹೊಸೂರು ಸಾದಮ್ಮ ಶೆಡ್ತಿ ಕುಟುಂಬದವರಿಂದ ಸನ್ಮಾನ ಸೇರಿದಂತೆ ಅನೇಕ ಗೌರವಗಳು ಸಂದಿವೆ..
    ಪ್ರಸಕ್ತ ಕಾಲಮಾನದಲ್ಲಿ ಯಕ್ಷರಂಗದಲ್ಲಿ ಬಹು ಪ್ರಸಿದ್ಧ ಸಂಪ್ರದಾಯಬದ್ದ ಸ್ತ್ರೀಪಾತ್ರದಾರಿಯಾಗಿ ಖ್ಯಾತನಾಮರಾದ ಇವರು, ನೆಲ್ಲೂರು ಮರಿಯಪ್ಪ ಆಚಾರ್ಯ, ಕಕ್ಕುಂಜೆ ಅನಂತ ಕುಲಾಲ,ಐರ್ಬೈಲು ಆನಂದ ಶೆಟ್ಟಿ,ತೀರ್ಥಹಳ್ಳಿ ಗೋಪಾಲ ಆಚಾರ್ಯ, ಉಮೇಶ ಸುವರ್ಣ, ಸುಧಾಕರ ಕೊಠಾರಿ, ಕೋಡಿ ವಿಶ್ವನಾಥ ಗಾಣಿಗ,ಆಲೂರು ಸುರೇಂದ್ರ, ಬ್ರಹ್ಮೆರಿ ಶೀನ,ಯಳಬೇರು ಶೇಖರ ಶೆಟ್ಟಿ, ಕೊಳಲಿ ಕೃಷ್ಣ ಶೆಟ್ಟಿ ಮೊದಲಾದ ಹಿರಿಯ ಕಲಾವಿದರೊಂದಿಗೆ ತಿರುಗಾಟವನ್ನು ನಡೆಸಿದ್ದಾರೆ.
    ದಿನಾಂಕ:15.04.1988 ರಲ್ಲಿ ಶ್ರೀಮತಿ ಜ್ಯೋತಿಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಇವರು,ಪುತ್ರ ಆಸ್ತಿಕ್ ಮತ್ತು ಪುತ್ರಿ ಆಶ್ರಿತ್..ರೊಂದಿಗೆ ಪ್ರಸ್ತುತ ಉಪ್ಪಿನಕುದ್ರುವಿನಲ್ಲಿ ವಾಸವಾಗಿದ್ದಾರೆ... ಇವರಿಗೆ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯೂ ಸುಖ ನೆಮ್ಮದಿ,ಆರೋಗ್ಯ,ಐಶ್ವರ್ಯವನ್ನು ನೀಡಿ ಅನುಗ್ರಹಿಸಲಿ,ಕಲಾರಂಗದಲ್ಲಿ ಇವರ ಕೀರ್ತಿ ಬೆಳಗಲಿ ಎನ್ನುವುದು ಯಕ್ಷಮಂದಾರದ ಶುಭ ಹಾರೈಕೆ..
    ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ..
    ನಿರೂಪಣೆ: ಶ್ರೀಮತಿ ಅಮೃತಾ ಶೆಟ್ಟಿ
    ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ..
    ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ..
    ಧನ್ಯವಾದಗಳು🙏🙏🙏
    This is an exhibition of the achievements and life of yakshaartists.
    Our yakshaganas today are the famous elder female character of Badaguthitt, the artist uppinakudru ananda rao of Saukur mela.
    He was born on 26.06.1971 as the son of Sri Lakshmana Shergar and Prema Bai of Uppanakudru village in Kundapur taluk of Udupi district.
    After completing his primary education at Uppanakudru and Thallur, he took yakshagana education from Baskar Kamath and Hemmadi Prabhakar Acharya and entered the stage at the age of twenty at sri kshetra haladi mela. Later, he joined the Maranakate Mela, owned by Yakshasbhishma D.M.Hegde, where he served for a long period of eighteen years. He was the leading female character of marankate mela and was the leading female character of The Maranakate, m.a. Naik, Koluyur Ramachandra Rao, M.K.Ramesh Acharya, Araate Manjunatha. Later, he served in The Maranakate Mela, Perdur, Neelavara and the other women in the Saukur Mela. He plays the heroic and bold characters and is well known for her mature performance in the role of Mahatma Mukambike and Sridevi in the role of Mahatma.
    ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.
    ವಾಹಿನಿಯ ಹೋಮ್ ಪೇಜ್ ಗಾಗಿ: czcams.com/channels/srL.html
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / 27334
  • Zábava

Komentáře • 2

  • @subhashh.a5940
    @subhashh.a5940 Před 3 lety +1

    😍😍ಮುಖವೆಲ್ಲಾ ಬಣ್ಣ ಬಳೆದು
    ಭಾರವಾದ ವೇಷ ತೊಟ್ಟ
    ಬಾಯ್ತುಂಬ ಪುರಾತನ ಕಥೆಯ ನಾಡಿ
    ಭೂಮಿ ಅದಿರುವ ನಟನ ವಾಡಿ
    ಮುಖ ಭವನದಲ್ಲೇ ಕಥೆಯನ್ನು ಹೇಳುವ ಯಕ್ಷಗಾನ😍♥️

  • @vishwanthvishu5309
    @vishwanthvishu5309 Před 3 lety +1

    Yakshaganam vishwaganam....yaksha mukambike🙏