Video není dostupné.
Omlouváme se.

#ಯಕ್ಷಮಂದಾರ

Sdílet
Vložit
  • čas přidán 19. 02. 2021
  • #ಯಕ್ಷಮಂದಾರ #ಹಾಲಾಡಿ #ರಾಘವೇಂದ್ರ #ಮಯ್ಯರ | #Raghavenra #Mayya #Halady |
    🌀ಯಕ್ಷ💥ಮಂದಾರ🌀 ಸಂಚಿಕೆ 56
    ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ..
    ಇಂದಿನ ನಮ್ಮ ಯಕ್ಷಸಾಧಕರು ಯಕ್ಷ ಸ್ವರಸಿರಿ, ಸ್ನೇಹ ಸಂಜೀವಿನಿ,ರಸರಾಗ ಚಕ್ರವರ್ತಿ ಜಿ. ರಾಘವೇಂದ್ರ ಮಯ್ಯ ಹಾಲಾಡಿಯವರು...
    ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗೋರಾಜೆ ಶ್ರೀನಾಗಪ್ಪ ಮಯ್ಯ ಮತ್ತು ಸರಸ್ವತಿ ಅಮ್ಮನವರ ಪ್ರಥಮ ಪುತ್ರರಾಗಿ ದಿನಾಂಕ:15-10-1968ರಲ್ಲಿ ಜನಿಸಿದರು..
    ಬಾಲ್ಯದಲ್ಲಿಯೇ ದಿ.ಕಾಳಿಂಗ ನಾವಡರ ಪದ್ಯಗಳತ್ತ ಆಕರ್ಷಿತರಾದ ಇವರು,ಕಿರಿಮಂಜೇಶ್ವರದ ತನ್ನ ಅಜ್ಜಿಯ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತಿರುವ ಕಾಲದಲ್ಲಿ ತನ್ನ ಅಜ್ಜಿಯೊಂದಿಗೆ ಯಕ್ಷಗಾನ ಪ್ರದರ್ಶನ ನೋಡಲು ಹೋಗುತ್ತಿದ್ದರು. ಹದಿನೈದನೆಯ ವಯಸ್ಸಿನಲ್ಲಿ ಒಂಬತ್ತನೇಯ ತರಗತಿಯ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ, ಯಕ್ಷಗಾನ ಕ್ಷೇತ್ರದತ್ತ ಅಭಿರುಚಿ ಬೆಳೆಸಿಕೊಂಡ ಇವರು ದಿ.ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರರ ಶಿಷ್ಯರಾಗಿ ಸೇರಿಕೊಂಡು, ಯಕ್ಷಗಾನದ ಬಾಗವತಿಕೆಯ ಜ್ಞಾನವನ್ನು ಪಡೆದುಕೊಂಡರು..ನಂತರ ಉಪ್ಪೂರರು ಗುರುಗಳಾಗಿದ್ದ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ರಂಗಕ್ಕೆ ಬೇಕಾದ ರಾಗ,ತಾಳ ಮತ್ತು ವಿವಿಧ ತಿಟ್ಟುಮಟ್ಟುಗಳ ಜ್ಞಾನವನ್ನು ಕರಗತ ಮಾಡಿಕೊಂಡರು. ನಂತರ ಗುರುಗಳಾದ ಉಪ್ಪೂರರು ಬಾಗವತರಾಗಿದ್ದ ಅಮೃತೇಶ್ವರಿ ಮೇಳದಲ್ಲಿ ಸಂಗೀತಗಾರರಾಗಿ ಯಕ್ಷ ಬದುಕನ್ನು ಪ್ರಾರಂಬಿಸಿ ಅಲ್ಲಿ ಎರಡು ವರ್ಷ ಸೇವೆಸಲ್ಲಿಸಿದ ಇವರು ನಂತರ ಸೌಕೂರು, ಹಾಲಾಡಿ, ಪೆರ್ಡೂರು ,ಮಂಗಳಾದೇವಿ ಮತ್ತು ಸಾಲಿಗ್ರಾಮ ಮೇಳದಲ್ಲಿ ಸೇರಿದಂತೆ ಸುದೀರ್ಘವಾಗಿ ಮೂವತ್ತೆಂಟು ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ..
    ದಿವಂಗತ ಶ್ರೀ ಜಿ.ಆರ್ ಕಾಳಿಂಗ ನಾವಡರ ನಿಧನದ ನಂತರ ಯುವ ಯಕ್ಷಗಾನ ಪ್ರೇಮಿಗಳನ್ನು ರಂಗದತ್ತ ಆಕರ್ಷಿಸಿದ ಕೀರ್ತಿ ಮಯ್ಯರಿಗೆ ಸಲ್ಲುತ್ತದೆ.. ದಿ.ಕಾಳಿಂಗ ನಾವಡರೊಂದಿಗೆ ಯಕ್ಷಗಾನ ತಿರುಗಾಟವನ್ನು ನಡೆಸಿದ ಇವರು,ನಾವಡರಿಂದ ಅನೇಕ ರಂಗ ಕೌಶಲ್ಯಗಳನ್ನು ತಿಳಿದುಕೊಂಡರು.. ಈಗಲೂ ಕೂಡ ದಿ.ಕಾಳಿಂಗ ನಾವಡರ ಮೇಲೆ ಅಪಾರವಾದ ಅಭಿಮಾನವನ್ನು ಇರಿಸಿಕೊಂಡಿರುವ ಮಯ್ಯರು ಕಾಳಿಂಗ ನಾವಡರ ಶೈಲಿಯನ್ನೇ ಅನುಸರಿಸಿದರೂ ಕೂಡ ತನ್ನದೇ ಆದ ಶೈಲಿಯನ್ನು ಪ್ರವರ್ತಿಸಿ ಅನೇಕ ಯುವ ಬಾಗವತರು ತನ್ನನ್ನು ಅನುಸರಿಸುವಂತೆ ಮಾಡಿದರು.. ದಿವಂಗತ ಜಿ.ಆರ್ ಕಾಳಿಂಗ ನಾವಡರಂತೆ ರಂಗಮಂಚದಲ್ಲಿ ಗಂಭೀರವಾಗಿ ಕುಳಿತುಕೊಳ್ಳುವ ಇವರು,ತಾಳ ಹಿಡಿಯುವ ಶೈಲಿ ಮತ್ತು ತಾಳ ಹೊಡೆಯುವ ಶೈಲಿ ನಾವಡರನ್ನು ನೆನಪಿಸುತ್ತದೆ.. ಹಾಸ್ಯ ಕಲಾವಿದರನ್ನು ಕೂಡ ಗಂಬೀರತೆಯ ತಿಳಿ ಹಾಸ್ಯದ ಮೂಲಕವೇ ಮಾತಿಗೆಳೆಯುವ ಮಯ್ಯರು ಯಕ್ಷರಂಗದ ಚೌಕಟ್ಟನ್ನು ಮೀರಿ ವ್ಯವಹರಿಸುವವರಲ್ಲ. ಚೌಕಿ ಮನೆಯಲ್ಲಿ ಅತ್ಯಂತ ಆಪ್ತರಾಗಿ ಸಹ ಕಲಾವಿದರೊಂದಿಗೆ ವ್ಯವಹರಿಸುವ ಇವರು ರಂಗದಲ್ಲಿ ಮಾತ್ರ ಶಿಸ್ತು ಮತ್ತು ಸಮಯಪ್ರಜ್ಞೆಯನ್ನು ಹೊಂದಿದ್ದು, ಗಂಬೀರವಾಗಿಯೇ ಕಲಾವಿದರಿಗೆ ಸೂಚನೆ ನೀಡಿ ಪ್ರಸಂಗವನ್ನು ಯಶಸ್ವಿಗೊಳಿಸಬಲ್ಲ ಸಾಧಕ ಬಾಗವತರು..
    ಅತ್ಯಂತ ಸರಳ ಸ್ವಭಾವದ ಮಯ್ಯರು ಸದಾ ಸ್ನೇಹಶೀಲ ಸ್ವಭಾವದವರು.. ಸುದೀರ್ಘ ಯಕ್ಷಜೀವನದಲ್ಲಿ ಇವರು ಸಂಪಾದಿಸಿದ ಆಸ್ತಿ ಅಂದರೆ ಅದು ಕಲಾಭಿಮಾನಿಗಳ ಪ್ರೀತಿ ಮಾತ್ರವೇ ಎಂದು ನಿಸಂಶಯವಾಗಿ ಹೇಳಬಹುದು.. ಪ್ರಸಿದ್ಧ ಕಲಾವಿದರೆಂಬ ಅಹಂ ಗೆ ಒಳಗಾಗದ ಇವರು, ಅನೇಕ ಕಲಾವಿದರನ್ನು ಯಕ್ಷರಂಗದಲ್ಲಿ ಬೆಳೆಸುತ್ತ, ಅನೇಕ ಕಲಾವಿದರಿಗೆ ತನ್ನಿಂದಾದ ಸಹಾಯಹಸ್ತವನ್ನು ಚಾಚುತ್ತಾ ಬಂದಿದ್ದಾರೆ.. ತಮ್ಮ ಬಾಗವತಿಕೆಯ ಕಾಲದಲ್ಲಿ ಕಿರಿಯ ಕಲಾವಿದರಿಗೆ ಹೆಚ್ಚಿನ ಅವಕಾಶವನ್ನು ನೀಡಿ,ಅವರನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ..
    ದಿವಂಗತ ಕಾಳಿಂಗ ನಾವಡರ ನಂತರ ಸಾಲಿಗ್ರಾಮ ಮೇಳಕ್ಕೆ ಹೆಸರು ತಂದುಕೊಟ್ಟವರಲ್ಲಿ ಮಯ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ.. ಕೇವಲ ಬಾಗವತನಾಗಿ ಮಾತ್ರವಲ್ಲದೆ, ಸಮರ್ಥ ರಂಗ ನಿರ್ದೇಶಕ ಮತ್ತು ಚತುರ ಯಕ್ಷ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದಾರೆ.. ಕನ್ನಡ ಯಕ್ಷಗಾನದ ಕ್ಯಾಸೆಟ್ ಲೋಕದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದ ಇವರು, ಕುಂದಾಪುರ ಕನ್ನಡದ ಅನೇಕ ಹಾಸ್ಯಪ್ರಸಂಗಗಳ ಧ್ವನಿಸುರುಳಿಗಳಲ್ಲಿ ಹಾಡಿ, ತನ್ನ ಗಾನ ಮಾಧುರ್ಯವನ್ನು ಹರಿಸಿ ಯುವ ಕಲಾರಸಿಕರ ಪಾಲಿನ ಸ್ಟಾರ್ ಬಾಗವತರಾಗಿ ಗುರುತಿಸಿಕೊಂಡಿದ್ದಾರೆ.
    ಇವರ ಸಾಧನೆ ಮತ್ತು ಕಲಾತಪಸ್ಸಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳು ಹಲವಾರು.. ಕೋಟ ಬ್ರಾಹ್ಮಣರ ಸಂಘಟನೆಯಾದ, ಕೋಟ ಮಹಾಜಗತ್ತು ಸಾಲಿಗ್ರಾಮ ಇವರಿಂದ ಬೆಂಗಳೂರಿನಲ್ಲಿ ಪ್ರತಿಷ್ಠಿತ ನರಸಿಂಹ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಯನ್ನು ಮತ್ತು ಪಾವಂಜೆ ಸುಬ್ರಮಣ್ಯ ದೇವಸ್ಥಾನದಲ್ಲಿ,ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ, ಮಂಗಳೂರು ಕೃಷ್ಣ ಯಕ್ಷ ಸಭಾದಲ್ಲಿ, ಕುಂದಾಪುರದಲ್ಲಿ ಅಮರ ಪರ್ವ ಅಮೃತಾ ವರ್ಷದ ಪ್ರಯುಕ್ತ ಸನ್ಮಾನ ಸೇರಿದಂತೆ ಅಸಂಖ್ಯಾತ ಗೌರವಗಳನ್ನು ಮುಡಿಗೇರಿಸಿಕೊಂಡಿದ್ದು, ಕಲಾವಲಯದಲ್ಲಿ ಅಜಾತಶತ್ರುವಾಗಿ ಮೆರೆದ ಇವರು,ಲಕ್ಷಾಂತರ ಕಲಾಭಿಮಾನಿಗಳ ಪಾಲಿಗೆ ಅಚ್ಚುಮೆಚ್ಚಿನ ಬಾಗವತರು..
    ಪ್ರಸ್ತುತ ವೃತ್ತಿ ಮೇಳಗಳ ತಿರುಗಾಟಕ್ಕೆ ವಿರಾಮ ಹೇಳಿ ಅಲ್ಲಲ್ಲಿ ಅಭಿಮಾನಿಗಳ ಒತ್ತಾಯದಿಂದ ಅತಿಥಿ ಬಾಗವತರಾಗಿ ಗುರುತಿಸಿಕೊಂಡಿರುವ ಇವರು, ಕೋಡಿ ವಿಶ್ವನಾಥ ಗಾಣಿಗ ಮತ್ತು ಇವರ ಸಂಚಾಲಕತ್ವದಲ್ಲಿ ಹುಟ್ಟುಹಾಕಿದ ಹಾಲಾಡಿ ಶ್ರೀಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಮೂಲಕ ದೇಶದಾದ್ಯಂತ ಪ್ರದರ್ಶವನ್ನು ನೀಡುತ್ತಿದ್ದಾರೆ..
    ಬಾಳ ಸಂಗಾತಿಯಾದ ಶ್ರೀಮತಿ ಪಲ್ಲವಿ ಮಯ್ಯರೊಂದಿಗೆ ಸಂತೃಪ್ತ ಜೀವನವನ್ನು ನಡೆಸುತ್ತಿರುವ ಇವರು, ಧಿಷಣ ಮತ್ತು ಧನ್ವಿ ಎಂಬ ಮುದ್ದು ಮಕ್ಕಳನ್ನು ಪಡೆದಿರುವ ಇವರು ಹಾಲಾಡಿ ಸಮೀಪದ ಗೋರಾಜೆಯಲ್ಲಿ ವಾಸವಾಗಿದ್ದಾರೆ.
    Raghavendra Mayya Haladi was born on 15-10-1968 as the first son of Goraje Srinagappa Maiya and Saraswathi Amman of Kundapura taluk of Udupi district.
    As a child, he was attracted to the verses of The Kalinga Nawada. At the age of fifteen, he said goodbye to the ninth grade and became a disciple of the Yakshagana field. He later served as a musician for two years at the Amrutheshwari Mela, where the guru Narayanappa Uppur was a bhagavata.
    After the demise of the late Shri GR Kalinga Nawada, young Mayaksharya is credited with attracting young Yakshagana lovers to the stage.
    Kota Brahmin Organization, Kota Mahajagatu Saligrama has won many awards including the prestigious Narasimha Award in Bangalore, District Kannada Rajyotsava Award and Pavanje Subramanya Temple, Kollur Mookambika Temple, Krishna Mukambika Temple, Krishna Mukambama Temple He has won numerous honors, including Prakrthamana, which has become a favorite amongst millions of artists.
    She is living a happy life with her companion, Mrs. Pallavi Mayya, and has adopted children, Dhishan and Dhanvi, who currently reside in Goraj near Halladi.
    Lyrics: Haladi santhosh Shetty ..
    Narrative: Mrs. Amrita Shetty ..

Komentáře • 3