Video není dostupné.
Omlouváme se.

#ಯಕ್ಷಮಂದಾರ

Sdílet
Vložit
  • čas přidán 12. 08. 2024
  • #ಯಕ್ಷಮಂದಾರ,#ಮಾನ್ಯ ಶ್ರೀಧರ ಕುಲಾಲ,#Manya #Shreedhara #Kulal
    🌀ಯಕ್ಷ💥ಮಂದಾರ🌀ಸಂಚಿಕೆ 57
    ಇದು ಯಕ್ಷಕಲಾವಿದರ ಸಾಧನೆ ಬಿಮತ್ತು ಜೀವನಗಾಥೆಯ ಅನಾವರಣ
    ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಸುಪ್ರಸಿದ್ದ ಪುಂಡುವೇಷಧಾರಿ,ಮಂದಾರ್ತಿ ಮೇಳದ ಕಲಾವಿದರಾದ ಮಾನ್ಯ ಶ್ರೀಧರ ಕುಲಾಲರು..
    ಶ್ರೀಯುತರು ದಿನಾಂಕ:01.06.1975ರಲ್ಲಿ ಉಡುಪಿ ಜಿಲ್ಲೆಯ ಬಿಲ್ಲಾಡಿ ಸಮೀಪದ ಮಾನ್ಯದಲ್ಲಿ ಶ್ರೀ ಮಂಜುನಾಥ ಕುಲಾಲ ಮತ್ತು ಚೀರು ದಂಪತಿಗಳ ಪುತ್ರರಾಗಿ ಜನಿಸಿದರು..
    ಮಾನ್ಯ ಬಾರಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇಯ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಪಡೆದ ಇವರು,ಯಕ್ಷಗಾನ ಕ್ಷೇತ್ರದತ್ತ ಆಕರ್ಷಿತರಾಗಿ,ತಂತ್ರಾಡಿ ಮಕ್ಕಳ ಮೇಳದ ಗುರುಗಳಾದ ಹಿರಿಯಣ್ಣ ಶೆಟ್ಟಿಗಾರರಲ್ಲಿ ಯಕ್ಷಗಾನದ ಜ್ಞಾನವನ್ನು ಪಡೆದು ಯಕ್ಷಬದುಕಿಗೆ ಹೆಜ್ಜೆಯಿಟ್ಟರು.. ಪೆರ್ಡೂರು ಸಾಲಿಗ್ರಾಮ ಮಾರಣಕಟ್ಟೆ ಹಾಲಾಡಿ,ಕಮಲಶಿಲೆ ಮೇಳದಲ್ಲಿ ಸೇವೆಸಲ್ಲಿಸಿದ ಇವರು, ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದಾರೆ.. ಸುಮಾರು ಮೂರು ದಶಕಗಳಿಂದ ಯಕ್ಷರಂಗದಲ್ಲಿ ಸೇವೆಸಲ್ಲಿಸುತ್ತ ಬಂದಿರುವ ಇವರು, ಯಾವುದೇ ಪ್ರಚಾರ ಮತ್ತು ಪ್ರಸಿದ್ದಿಯ ಬೆನ್ನುಬಿದ್ದವರಲ್ಲ..
    ತೀರ್ಥಹಳ್ಳಿ ಗೋಪಾಲ ಆಚಾರ್ಯ, ಕಮಲಶಿಲೆ ಆನಂದ ದೇವಾಡಿಗ,ಕುಕ್ಕುಡ್ತಿ ಮೂರ್ತಿ ಆಚಾರ್,ಉಪ್ಪುಂದ ನಾಗೇಂದ್ರ,ಬುಕ್ಕಿಗುಡ್ಡೆ ಮಹಾಬಲ ನಾಯ್ಕರ ವೇಷಗಳಿಂದ ಪ್ರಭಾವಿತರಾದ ಇವರು ಅಭಿಮನ್ಯು,ವೃಷಸೇನ,ಲವ, ಕುಶ,ಚಂಡ, ಮುಂಡ, ಶುಭಾಂಗ, ಕೃಷ್ಣ,ಬ್ರಹ್ಮ,ವಿಷ್ಣು,ಈಶ್ವರ ಮೊದಲಾದ ಪುರುಷ ಮತ್ತು ಪುಂಡು ವೇಷಗಳನ್ನು ಸಮರ್ಥವಾಗಿ ನಿಭಾಯಿಸುವ ಇವರು,ಜೋಡಾಟಗಳಲ್ಲಿ ತನ್ನ ಚುರುಕು ನಡೆಯ ಮೂಲಕ ರಂಗದಲ್ಲಿ ಮಿಂಚಿನ ಸಂಚಲನವನ್ನು ಸೃಷ್ಟಿಸಿ,ಎದುರು ಪಾತ್ರಧಾರಿಗೆ ಪ್ರಬಲ ಪೈಪೋಟಿಯನ್ನು ನೀಡಬಲ್ಲ ಪ್ರತಿಭಾವಂತರು.
    ಇವರು ಯಕ್ಷರಂಗದಲ್ಲಿ ಸಲ್ಲಿಸಿದ ಸುದೀರ್ಘವಾದ ಸೇವೆಯನ್ನು ಪರಿಗಣಿಸಿ ಶ್ರೀಸ್ಕಂದ ಕ್ರಿಯೇಷನ್ಸ್ ಅಂಪಾರು ಅವರಿಂದ ಸನ್ಮಾನ,ಕುಂದಾಪುರ ತಾಲೂಕು ಕುಲಾಲ ಸಮಾಜೋದ್ದಾರಕ ಸಂಘದಿಂದ ಸನ್ಮಾನ ಸೇರಿದಂತೆ ಸಣ್ಣಪುಟ್ಟ ಸನ್ಮಾನಗಳು ಸಂದಿವೆ..ಎಲೆಮೆರೆಯ ಕಾಯಿಯಂತೆ ಯಕ್ಷಮಾತೆಯ ಸೇವೆಯನ್ನು ಸಲ್ಲಿಸುತ್ತಿರುವ ಹಿರಿಯ ಕಲಾವಿದರಾದ ಇವರನ್ನು, ಸರ್ಕಾರ ಮತ್ತು ಸಂಘಸಂಸ್ಥೆಗಳು ಗುರುತಿಸಿ, ಗೌರವಿಸಬೇಕಾದದ್ದು ಅತ್ಯಗತ್ಯವಾಗಿದೆ..
    ಅತ್ಯಂತ ಸರಳ ,ಸಜ್ಜನ ಪ್ರಾಮಾಣಿಕ ವ್ಯಕ್ತಿತ್ವದ ಶ್ರೀಧರ ಕುಲಾಲರು ಪತ್ನಿ ಜ್ಯೋತಿಯವರೊಂದಿಗೆ ಪ್ರಸ್ತುತ ಹೆನ್ನಾಬೈಲು ಮಾವಿನಮನೆಯಲ್ಲಿ ವಾಸವಾಗಿದ್ದಾರೆ..
    ಇವರಿಗೆ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ತಾಯಿಯೂ ಅಷ್ಟ ಸಂಪದವನ್ನು ಅನುಗ್ರಹಿಸಿ,ಹೆಚ್ಚಿನ ಕಾಲ ಯಕ್ಷಸೇವೆಗೈಯುವ ಸುಯೋಗವನ್ನು ನೀಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.
    ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ..
    ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ
    Yakshamandara series 62
    This is the unveiling of the fairies and the life story
    Our victors today are the well-known manya Shreedhara kulal Pundu Veshadhari of Badagutittu and the famous yakshagana artist of Mandarathi Mela.
    the son of Sri Manjunatha Kulal and cheeru. was born on 01.06.1975 manya near Billadi in Udupi district.
    He was educated till the fourth grade at the Vidyalaya Senior Primary School. He was attracted to the Yakshagana field. He is not behind any publicity and celebrity.
    Influenced by Tirthahalli Gopala Acharya, Kamalashile Anand Devadiga, Kukkuddi Murthy Achar, Uppunda Nagendra, Bukkikkudde Mahabala Naik,.. Abhimanyu, Vrisasena, Lava, Kusha, Chanda, Munda, Shubhanga, Krishna, brahma,iswara With his brilliance in podcasts, he is a talent who creates lightning in the arena and offers a strong rivalry to the opposite protagonist.
    Considering his long service in the field, he has been honored by Sriskanda Creations Amparu, the Kundapur Taluk Kulala Social Workers Association for his contributions to the field of excellence.
    Sridhar Kulal a very simple, honest person with his wife Jyothi, currently lives in the mavinamane house near hennabailu,siddapura
    It is our good wishes that the mother of Mardarthi Sridurgaparameshwari also blesses her with so much wealth and to give her the privilege of serving for a long time.
    Lyrics: Halady Santhosh Shetty ..
    Narrative: Mrs. Amritha Shetty

Komentáře •