Video není dostupné.
Omlouváme se.

#ಯಕ್ಷಮಂದಾರ

Sdílet
Vložit
  • čas přidán 6. 03. 2021
  • #ಯಕ್ಷಮಂದಾರ, # Comedian
    🌀ಯಕ್ಷ💥ಮಂದಾರ🌀
    ಇದು ಯಕ್ಷಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ...
    ಇಂದಿನ ನಮ್ಮ ಯಕ್ಷಸಾಧಕರು.. ಬಡಗುತಿಟ್ಟಿನ ಉದಯೋನ್ಮುಖ ಹಾಸ್ಯಗಾರ.. ಮಾರಣಕಟ್ಟೆ ಮೇಳದ ಯುವ ಕಲಾವಿದ ಶ್ರೀನಿವಾಸ ಶೆಟ್ಟಿ ಶಂಕರನಾರಾಯಣ..
    ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣದ ಹೆಬ್ಬಾಡಿ ಎಂಬಲ್ಲಿ ಶ್ರೀರಾಮಣ್ಣ ಶೆಟ್ಟಿ ಮತ್ತು ಶ್ರೀಮತಿ ಸಾದಮ್ಮ ಶೆಡ್ತಿಯವರ ಐದು ಜನ ಮಕ್ಕಳಲ್ಲಿ ಕೊನೆಯ ಪುತ್ರರಾಗಿ ದಿನಾಂಕ:08.03.1994ರಲ್ಲಿ ಜನಿಸಿದರು..
    ತನ್ನ ಆರನೆಯ ತರಗತಿಯವರೆಗಿನ ಶಿಕ್ಷಣವನ್ನು ಶಂಕರನಾರಾಯಣದ ಕುಳ್ಳು0ಜೆ ಶಾಲೆಯಲ್ಲಿ ಪೂರೈಸಿದ ಇವರು,ಯಕ್ಷಗಾನದ ಮೇಲಿನ ಆಸಕ್ತಿಯಿಂದ ಮಂದಾರ್ತಿ ಯಕ್ಷಗಾನ ಕೇಂದ್ರದಲ್ಲಿ ಬಾಗವತರಾಗಿದ್ದ ಕೆ.ಪಿ.ಹೆಗಡೆ,ರವಿ ಕುಮಾರ್ ಸೂರಾಲು,ಮದ್ದಲೆವಾದಕರಾದ ಸುನಿಲ್ ಭಂಡಾರಿ ಮತ್ತು ಚಂಡೆವಾದಕರಾದ ಬಸವ ಮುಂಡಾಡಿಯವರಲ್ಲಿ ತಾಳ ಲಯವನ್ನು ಕಲಿತು ಹಾರಾಡಿ ರಮೇಶ ಗಾಣಿಗರಲ್ಲಿ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿ,ಶ್ರೀಕ್ಷೇತ್ರ ಮಾರಣಕಟ್ಟೆ ಮೇಳದಲ್ಲಿ ಬಾಲಗೋಪಾಲ ವೇಷಧಾರಿಯಾಗಿ ರಂಗಪ್ರವೇಶ ಮಾಡಿದ ಇವರು ಸತತವಾಗಿ ಹದಿಮೂರು ವರ್ಷಗಳಿಂದ ಮಾರಣಕಟ್ಟೆ ಮೇಳದಲ್ಲಿಯೇ ಸೇವೆಸಲ್ಲಿಸುತ್ತಿದ್ದಾರೆ....
    ದೇವೇಂದ್ರ,ವಿದ್ಯುನ್ಮಾಲಿ, ಚಂಡ, ಮುಂಡ,ಶಬರಾಸುರ,ಲೋಹಿತನೇತ್ರ,ಶಿತಿಕೇತ,ಕ್ಷೇತ್ರಮಹಾತ್ಮೆಯ ವಿಷ್ಣು,ಕಾನ್ಕಿಕಳ್ಳ ರುದ್ರ,ಮಹಿಷಾಸುರ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತ ಬಂದ ಇವರು ಅನಿವಾರ್ಯ ಪರಿಸ್ಥಿತಿಯಲ್ಲಿ ಹಾಸ್ಯಪಾತ್ರವನ್ನು ನಿರ್ವಹಿಸುತ್ತಿದ್ದರು. ಇವರಲ್ಲಿರುವ ಹಾಸ್ಯಪ್ರಜ್ಞೆಯನ್ನು ಗುರುತಿಸಿದ ಹಿರಿಯ ಹಾಸ್ಯಗಾರರಾದ ಯಳಬೇರು ಶೇಖರ ಶೆಟ್ಟಿಯವರು ಇವರಿಗೆ ಹಾಸ್ಯಪಾತ್ರವನ್ನು ಮಾಡಲು ಸೂಚಿಸಿ ,ಸಂಪೂರ್ಣವಾದ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.. ಕಳೆದ ಎರಡು ವರ್ಷಗಳಿಂದ ಶೇಖರ ಶೆಟ್ಟಿಯವರ ಸಹ ಹಾಸ್ಯಗಾರರಾಗಿ ಗುರುತಿಸಿಕೊಂಡಿರುವ ಇವರು ಹಾಸ್ಯಭೂಮಿಕೆಯಲ್ಲಿ ಉತ್ತಮವಾದ ನಿರ್ವಹಣೆಯನ್ನು ನೀಡುತ್ತಿದ್ದಾರೆ.. ಕ್ಷೇತ್ರಮಹಾತ್ಮೆಯ ಮಂಜ,ಮಂಜಿ, ದೇವದೂತ,ಲವಕುಶದ ಮಾಣಿ,ಮಾಲಿನಿದೂತ,ಘಟೋದ್ಗಜ ದೂತ ಮೊದಲಾದ ಪಾತ್ರಗಳಲ್ಲಿ ಉತ್ತಮವಾದ ನಿರ್ವಹಣೆಯನ್ನು ನೀಡುತ್ತಿದ್ದು ಭವಿಷ್ಯದ ಭರವಸೆಯ ಹಾಸ್ಯಗಾರನಾಗಿ ಬೆಳೆಯುತ್ತಿದ್ದಾರೆ..
    ಕರಾವಳಿ ಬಾಗದಲ್ಲಷ್ಟೇ ಅಲ್ಲದೆ ಬೆಂಗಳೂರು ಮುಂಬೈಯಲ್ಲಿಯೂ ಕೂಡ ಪ್ರದರ್ಶನವನ್ನು ನೀಡಿರುವ ಇವರು, ಐರಬೈಲು ಆನಂದ ಶೆಟ್ಟಿ,ಕೋಣ್ಕಿ ನಾಗೇಶ ಗಾಣಿಗ,ವಾಟರು ರವಿ ಶೆಟ್ಟಿ,ದಿ.ನೀಲಾವರ ಮಹಾಬಲ ಶೆಟ್ಟಿ,ನಾಗೂರು ಶ್ರೀನಿವಾಸ ದೇವಾಡಿಗ, ಉಮೇಶ ಸುವರ್ಣ,ಸುಧಾಕರ ಕೊಠಾರಿ,ಪ್ರಶಾಂತ ಹೆಗ್ದೆ, ಕೆಂಜಿ ನಾಗು ಗೌಡ,ಉದಯ ಕೋಟ,ಜನ್ಸಾಲೆ ರಾಘವೇಂದ್ರ ಆಚಾರ್ಯ,ಮಡಾಮಕ್ಕಿ ಪ್ರಭಾಕರ ಶೆಟ್ಟಿ,ಗೋಳಿಕೆರೆ ಚಂದ್ರ ಗೌಡರಂತಹ ಹಿರಿಯ ಕಲಾವಿದರೊಂದಿಗೆ ತಿರುಗಾಟವನ್ನು ನಡೆಸಿದ್ದು,,ತನ್ನ ಬೆಳವಣಿಗೆಗೆ ಮೇಳದ ಪ್ರಬಂದಕರು ಮತ್ತು ಎಲ್ಲ ಸಹ ಕಲಾವಿದರು ಸಂಪೂರ್ಣ ಸಹಕಾರವನ್ನು ನೀಡುತ್ತಿರುವುದನ್ನು ಮುಕ್ತ ಮನಸ್ಸಿನಿಂದ ಸ್ಮರಿಸಿಕೊಳ್ಳುತ್ತಿದ್ದಾರೆ..
    Our victors of today .. emerging comedian of badass .. .. Srinivasa Shetty Sankaranarayana, a young artist of the Maranakatte Mela. He was born on 08.03.1994 to the last of the five children of Sriramanna Shetty and Mrs. Sadamma Sheddi at Hebkadi in Shankaranarayana of Kundapura taluk of Udupi district.
    He completed his sixth grade schooling at the Kullunje school in Sankara Narayana, with KP Hegde in the Mandarthi Yakshagana center with an interest in Yakshagana. He has been serving at the fair for thirteen consecutive years.
    He played the roles of Devendra, Vidyunmali, Chanda, Munda, Shabarasura, Lohitra Nethra, Shitaketa, Vishnu, Kankikalla Rudra, Mahishasura in the inevitable situation. Senior comedian Yalebaru Shekhara Shetty, who recognized his sense of humor, has been giving him full guidance. Growing into a promising comedian of the future ..
    He has performed in not only the coastal belt, but also in Bangalore, Mumbai. has traveled with senior artists such as Madamakki Prabhakar Shetty and Golikare Chandra Gowda, Irabailu Anand shetty vatar ravi shetty, sudhakara kotary,raghavendra Acharya jansale,hennabail sanjeeva shetty,prashanth hegde,kiran hemmady,konki nagesh ganiga,kenji Nagu gouda,Uday kota,Nagoor shrinivasa Devadiga who openly recall that the co-workers and all the co-workers were fully cooperative.
    lyrics:Haladi Santhosh Shetty.
    Narrative:Smt.Amrutha shetty

Komentáře • 2