Video není dostupné.
Omlouváme se.

#ಯಕ್ಷಮಂದಾರ

Sdílet
Vložit
  • čas přidán 12. 03. 2021
  • 🌀ಯಕ್ಷ💥ಮಂದಾರ
    ಇದು ಯಕ್ಷಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ..
    ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಸುಪ್ರಸಿದ್ದ ಪುಂಡುವೇಷಧಾರಿ.. ಕಮಲಶಿಲೆ ಮೇಳದ ಕಲಾವಿದರಾದ ಹೆನ್ನಾಬೈಲು ವಿಶ್ವನಾಥ ಪೂಜಾರಿಯವರು..
    ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆನ್ನಾಬೈಲು ಕೆರೆಮುಲ್ಲಿ ಎಂಬಲ್ಲಿ ಶ್ರೀಬಾಬು ಪೂಜಾರಿ ಮತ್ತು ಶ್ರೀಮತಿ ಸುಶೀಲಾ ದಂಪತಿಗಳ ದ್ವಿತೀಯ ಪುತ್ರರಾಗಿ ದಿನಾಂಕ:07.11.1990ರಲ್ಲಿ ಜನಿಸಿದರು.
    ಹೆನ್ನಾಬೈಲು ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಇವರು,ಹಿರಿಯ ಕಲಾವಿದರಾದ ಮಾನ್ಯ ಶ್ರೀಧರ ಕುಲಾಲರಲ್ಲಿ ಹೆಜ್ಜೆಗಾರಿಕೆಯನ್ನು ಅಭ್ಯಾಸ ಮಾಡಿ ಪ್ರಥಮ ಬಾರಿಗೆ ಕಮಲಶಿಲ4 ಮೇಳದಲ್ಲಿ ಯಕ್ಷರಂಗಕ್ಕೆ ಪಾದಾರ್ಪಣೆಗೈದರು. ಅಲ್ಲಿ ಬಾಲಗೋಪಾಲ ವೇಷಧಾರಿಯಾಗಿ ಎರಡು ವರ್ಷ ಸೇವೆಸಲ್ಲಿಸಿದ ಇವರು, ನಂತರ ಸಾಲಿಗ್ರಾಮ ಮೇಳವನ್ನು ಸೇರಿಕೊಂಡು ನಾಲ್ಕು ವರ್ಷಗಳ ಕಾಲ ಸೇವೆಸಲ್ಲಿಸಿದರು.. ಆರ್ಗೋಡು ಮೋಹನದಾಸ ಶೆಣೈ, ಬಳ್ಕೂರು ಕೃಷ್ಣಯಾಜಿ, ಶಶಿಕಾಂತ ಶೆಟ್ಟಿ ಕಾರ್ಕಳ, ಮಂಕಿ ಈಶ್ವರ ನಾಯ್ಕ, ಹಳ್ಳಾಡಿ ಜಯರಾಮ ಶೆಟ್ಟಿ, ಜನಾರ್ದನ ಗುಡಿಗಾರ ಬಂಗಾಡಿ, ಗಣಪತಿ ಭಟ್ ಕಣ್ಣಿಮನೆ, ಉದಯ್ ರಾವ್ ತಾರೆಕೋಡ್ಲು, ಹೆನ್ನಾಬೈಲು ಸಂಜೀವ ಶೆಟ್ಟಿ, ವಿಶ್ವನಾಥ ಶೆಟ್ಟಿ ಸಿದ್ಧಕಟ್ಟೆಯವರಂತಹ ಹಿರಿಯ ಕಲಾವಿದರ ಸಹಕಾರ ಮತ್ತು ಸಾಂಗತ್ಯದಲ್ಲಿ ಸೇವೆಸಲ್ಲಿಸುತ್ತ, ಅವರ ನೃತ್ಯ,ರಂಗನಡೆ,ವೇಷಗಾರಿಕೆಯನ್ನು ನೋಡಿ,ಕಠಿಣ ಪರಿಶ್ರಮದಿಂದ ಅಳವಡಿಸಿಕೊಳ್ಳುತ್ತ, ನಿರಂತರ ಅಧ್ಯಯನದ ಮೂಲಕ ಯಕ್ಷರಂಗದಲ್ಲಿ ಪರಿಪೂರ್ಣತೆಯನ್ನು ಸಾದಿಸುತ್ತ ಬಂದ ಇವರು, ನಂತರ ಆಜ್ರಿ ಶನೀಶ್ವರ ಮೇಳವನ್ನು ಸೇರಿಕೊಂಡು ಮೂರು ವರ್ಷಗಳ ಕಾಲ ಪುಂಡುವೇಷಧಾರಿಯಾಗಿ ಸೇವೆಸಲ್ಲಿಸಿದರು.. ಪ್ರಸ್ತುತ ಏಳು ವರ್ಷಗಳಿಂದ ಶ್ರೀಕ್ಷೇತ್ರ ಕಮಲಶಿಲೆ ಮೇಳದಲ್ಲಿ ಪ್ರಧಾನ ಪುಂಡು ವೇಷಧಾರಿಯಾಗಿ ಸೇವೆಸಲ್ಲಿಸುತ್ತಿರುವ ಇವರು, ಕಮಲಶಿಲೆ ಮೇಳದಲ್ಲಿ ಧರ್ಮದರ್ಶಿಗಳಾದ ಸಚ್ಚಿದಾನಂದ ಚಾತ್ರರು ಮತ್ತು ಸಂಚಾಲಕರಾದ ನಾರಾಯಣ ಶೆಟ್ಟಿಯವರು ನೀಡಿದ ಸಹಕಾರವನ್ನು ಮುಕ್ತ ಮನಸ್ಸಿನಿಂದ ಸ್ಮರಿಸುತ್ತಿದ್ದಾರೆ..
    ರಂಗಪ್ರವೇಶದಲ್ಲಿಯೇ ಮಿಂಚು ಹರಿಸಬಲ್ಲ ಇವರು,ಅತ್ಯಾಕರ್ಷಕವಾದ ನಾಟ್ಯಶೈಲಿ ಮತ್ತು ಪ್ರಬುದ್ದತೆಯ ರಂಗನಡೆಯ ಮೂಲಕ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಬಲ್ಲ ಯುವ ಪ್ರತಿಭಾನ್ವಿತ ಕಲಾವಿದರು...ಪಾತ್ರ ದೊಡ್ಡದೇ ಇರಲಿ ಅಥವಾ ಚಿಕ್ಕದೆ ಇರಲಿ, ಯಕ್ಷಗಾನದ ಚೌಕಟ್ಟನ್ನು ಮೀರದೆ,ಪಾತ್ರದ ಔಚಿತ್ಯವನ್ನು ಕೆಡಿಸದೆ ಆಕರ್ಷಕವಾದ ನೃತ್ಯ, ಶ್ರುತಿಬದ್ದ ಮಾತುಗಾರಿಕೆ ಮತ್ತುಸುಂದರವಾದ ವೇಷಗಾರಿಕೆಯ ಸೊಗಸಿನಿಂದಲೇ ತನಗೊದಗಿದ ಪಾತ್ರಕ್ಕೆ ಸಮರ್ಪಕವಾದ ನ್ಯಾಯವನ್ನು ದೊರಕಿಸಿಕೊಡಬಲ್ಲರು..
    ವೃಷಸೇನ, ಬರ್ಬರಿಕ,ಪ್ರಹ್ಲಾದ,ಪುಷ್ಕಳ, ಸುಧನ್ವ,ಕೃಷ್ಣ,ವಿಷ್ಣು, ದೇವವೃತ, ಸುದರ್ಶನ,ಈಶ್ವರ,ಲವ,ಕುಶ, ವಿದ್ಯುನ್ಮಾಲಿ,ಬಬ್ರುವಾಹನ,ಚಂಡ, ಮುಂಡ,ಧರ್ಮಾಂಗದ,ಸುಂದರ ರಾವಣ ಮೊದಲಾದ ವೇಷಗಳನ್ನು ಬಹು ಸುಂದರವಾಗಿ ಅಭಿನಯಿಸುವ ಇವರು, ಅಭಿಮನ್ಯು ಪಾತ್ರದ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದಾರೆ.. ವೀರಾವೇಶದಿಂದ ರಂಗಸ್ಥಳವನ್ನು ಪ್ರವೇಶಿಸುವ ರೀತಿ, ತಾಯಿ ಸುಭದ್ರೆಯೊಂದಿಗಿನ ಸಂಭಾಷಣೆ ಮತ್ತು ಚಕ್ರವ್ಯೂಹವನ್ನು ಭೇದಿಸುವ ಪರಿಯನ್ನು ಬಹು ಸುಂದರವಾಗಿ ಪ್ರಸ್ತುತಪಡಿಸಿ,ಅಪಾರ ಪ್ರೇಕ್ಷಕರ ಮನಗೆದ್ದ ಅಭಿಜಾತ ಕಲಾವಿದರಿವರು...
    ಸುಮಾರು ಹದಿನೇಳು ವರ್ಷಗಳಿಂದ ಯಕ್ಷರಂಗದಲ್ಲಿ ದುಡಿಯುತ್ತಿರುವ ಇವರು, ಕರ್ನಾಟಕದಲ್ಲಷ್ಟೇ ಅಲ್ಲದೆ ಬೆಂಗಳೂರು, ಮುಂಬೈ,ದೆಹಲಿಯಲ್ಲಿಯೂ ಪ್ರದರ್ಶನವನ್ನು ನೀಡಿ,ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿರುವ ಇವರಿಗೆ ಹಲವು ಗೌರವಗಳು ಸಂದಿವೆ..
    ಯಕ್ಷರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ಶ್ರೀ ವಿನಾಯಕ ಯಕ್ಷರಂಗ ಕೆರೆಕಾಡು ಮೂಲ್ಕಿ ಇವರಿಂದ ಶ್ರೀವಿನಾಯಕ ಯಕ್ಷ ಕಲಾರತ್ನ ಪ್ರಶಸ್ತಿ 2018... ಬಂಟ್ಸ್ ಮಕ್ಕಳ ವಾಟ್ಸಪ್ ಬಳಗದವರಿಂದ ಸನ್ಮಾನ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆನ್ನಾಬೈಲು ಇವರಿಂದ ಸನ್ಮಾನ,ಕನ್ನಡ ಸಾಹಿತ್ಯ ಬಳಗ ನಾಗರಕೊಡಿಗೆ ಇವರಿಂದ ಸನ್ಮಾನ,ಬೆಳ್ವೆ ಯಕ್ಷಾಭಿಮಾನಿಗಳಿಂದ ಸನ್ಮಾನ ಸೇರಿದಂತೆ ಹಲವು ಕಡೆ ಸನ್ಮಾನ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾರೆ..
    2019ರಲ್ಲಿ ಶ್ರೀಮತಿ ವಿಮಲರೊಂದಿಗೆ ಸಾಂಸಾರಿಕ ಬದುಕಿಗೆ ಕಾಲಿರಿಸಿದ ಇವರು,ಪ್ರಸ್ತುತ ತಂದೆ ,ತಾಯಿ,ಪತ್ನಿ ಮತ್ತು ಅಣ್ಣ ಮಂಜುನಾಥ ,ತಂಗಿ ಆಶಾಲತಾ,ಬಾವ ಆನಂದ ಮತ್ತು ಮುದ್ದಿನ ಸೊಸೆ ಆದ್ಯಾಳೊಂದಿಗೆ ಹೆನ್ನಾಬೈಲು ಕೆರೆಮಲ್ಲಿ ಎಂಬಲ್ಲಿ ಸುಖ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ..
    ಹಿರಿಯ ಕಲಾವಿದರ ಮೇಲೆ ಅಪಾರವಾದ ಅಭಿಮಾನವನ್ನು ಇರಿಸಿಕೊಂಡಿರುವ ಇವರು, ತನಗಿಂತ ಕಿರಿಯ ಕಲಾವಿದರನ್ನು ಪ್ರೋತ್ಸಾಹಿಸುವ ಗುಣಗ್ರಾಹಿಯಾಗಿದ್ದು, ಶಿಸ್ತು ಮತ್ತು ಸಂಯಮವನ್ನು ಜೀವನದಲ್ಲಿ ರೂಢಿಸಿಕೊಂಡಿದ್ದು,ಕಲಾವಿದರು ಮತ್ತು ಕಲಾಭಿಮಾನಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.. ಬಡಗುತಿಟ್ಟಿನ ಯಕ್ಷರಂಗಕ್ಕೆ ಭರವಸೆಯ ಕಲಾವಿದರಾಗಿರುವ ಇವರಿಗೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ತಾಯಿಯೂ ಆಯುರಾರೋಗ್ಯ,ಸುಖ ಸಂಪತ್ತನ್ನು ನೀಡಿ ಕಾಪಾಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ..
    ಸಾಹಿತ್ಯ- ಹಾಲಾಡಿ ಸಂತೋಷ ಶೆಟ್ಟಿ..
    ನಿರೂಪಣೆ-ಶ್ರೀಮತಿ ಅಮೃತಾ ಶೆಟ್ಟಿ..
    🌀Yaksha💥Mandara🌀
    It is the unveiling of the fairytale performer and life story.
    Our victors of today are the well-known Punduveshdari of Badagutittu yakshagana ..
    Shri Babu was born as the second son of Shri Babu Poojary and Mrs. Susheela at Hennaabailu Keremulli in Kundapur taluk of Udupi district on 07.11.1990.
    Having completed his primary education at the Henna Bailu School, he made his debut in the Kamalashile Fair at the Kamalashila Mela. He served for two years as a child trader and later joined the Saligrama Mela. He served for four years. He has worked in collaboration with senior artists like Sanjeeva Shetty, Vishwanath Shetty Siddakatte, his dancing, acting, gaudiness, hard work and perseverance in the field of continuous study. He is serving as the principal bodyguard of the Kamalashile Mela.
    Young talented performers who can sparkle in the stage, inspire the audience with a stunning dance style and maturity.
    Abhinaya is the character of Abhimanyu, who plays the roles of Vrushasena, Barbarika, Prahlada, Pushkala, Sudhanva, Krishna, Vishnu, Devavrata, Sudarshana, Ishwara, Lava, Kusha, vidyunmali, Babruvahana, Chanda, Munda, Dharmangada, Sundara Ravana etc. How to enter the theater with a sense of humor, conversations with mother Subhadra, and the performers who penetrate the labyrinth, beautifully presented, ...
    He has been working in the field for over seventeen years and has been honored with a huge fan following not only in Karnataka but also in Bangalore, Mumbai and Delhi.

Komentáře • 10