ಹೆಪ್ಪುಗಟ್ಟಿದ ಭುಜ | ಫ್ರೋಝನ್ ಶೋಲ್ಡರ್ | Frozen Shoulder

Sdílet
Vložit
  • čas přidán 2. 08. 2024
  • ಫ್ರೋಝನ್ ಶೋಲ್ಡರ್ ಲಕ್ಷಣಗಳು:
    ದೀರ್ಘಕಾಲದಿಂದ ಇರುವ ಭುಜಗಳ ನೋವು ಕ್ರಮೇಣ ಚಲನೆಗೆ ಅಡ್ಡಿಯುಂಟು ಮಾಡುವಷ್ಟು ತೊಂದರೆ ತಂದೊಡ್ಡುತ್ತದೆ. ಇದೊಂದೇ ಅಲ್ಲ, ಭುಜಕ್ಕೆ ಸಂಬಂಧಿಸಿದ ಡಯಾಬಿಟಿಸ್ ಹಾಗು ಥೈರಾಯಿಡ್ ಸಮಸ್ಯೆಗಳು ಚಲನಾರಹಿತ ಸ್ಥಿತಿ ಹಾಗೂ ನೋವನ್ನು ಉಂಟುಮಾಡುತ್ತವೆ. ಇದರಿಂದ ಕಿರಿಕಿರಿಯಾಗುತ್ತದೆ. ಏನೋ ಚಲಿಸಿದಂತಾಗುತ್ತದೆ. ತ್ವರಿತ ಚಲನೆಗೆ ಅಡ್ಡಿಯುಂಟಾಗುತ್ತದೆ. ಇವೆಲ್ಲವೂ ಫ್ರೋಝನ್ ಶೋಲ್ಡರ್ಸ್ ಸಮಸ್ಯೆಯ ಆರಂಭಿಕ ಲಕ್ಷಣಗಳು. ಹೀಗೆಯೇ ಮುಂದುವರಿದರೆ ಜೋಮು ಹಿಡಿದಂತಾಗುತ್ತದೆ. ಚಲನೆ ಮಾಡಿದರೆ ನೋವು ಹೆಚ್ಚಾಗುತ್ತದೆ.
    ಮೊದಮೊದಲು ನೋವು ಕಾಣಿಸಿಕೊಂಡಾಗ ವಿವಿಧ ನೋವುನಿವಾರಕ ಮುಲಾಮುಗಳನ್ನು ಹಚ್ಚಿಕೊಂಡು ಉಪಶಮನ ಮಾಡಿಕೊಳ್ಳಬಹುದು. ಆದರೆ ಈ ಸಮಸ್ಯೆಯನ್ನು ಸಂಪೂರ್ಣ ಪರಿಹಾರ ಮಾಡಿಕೊಳ್ಳಬೇಕು ಎಂದು ಯಾರಿಗೂ ಅನಿಸುವುದಿಲ್ಲ. ದೇಹದ ಬೇರೆ ಭಾಗದ ನೋವಿಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಭುಜಗಳ ನೋವಿಗೆ ಕೊಡುವುದಿಲ್ಲ. ಹೀಗಾಗಿ, ಸಾಮಾನ್ಯವಾಗಿ ಭುಜಗಳ ಸಮಸ್ಯೆ ದೀರ್ಘಕಾಲ ಕಾಡುತ್ತದೆ.
    ಭುಜಗಳಲ್ಲಿರುವ ಗ್ಲೆನೋಹ್ಯುಮರಲ್‍ ಎನ್ನುವ ಸಂಧಿಯಲ್ಲಿ (ಜಾಯಿಂಟ್) ಸಹಜ ಚಲನೆಗೆ ಧಕ್ಕೆಯಾದಾಗ ಕ್ರಮೇಣ ಭುಜಗಳು ಜೋಮು ಹಿಡಿಯುತ್ತವೆ. ಭುಜಗಳಲ್ಲಿರುವ ಈ ಜಾಯಿಂಟ್‍ ದೇಹದ ಎಲ್ಲ ಜಾಯಿಂಟ್ ಗಳಿಗಿಂತ ಹೆಚ್ಚು ಚಲನಶೀಲವಾದದ್ದು. ಆದರೆ ಜೋಮು ಹಿಡಿದ ಸ್ಥಿತಿಯಲ್ಲಿ ಈ ಸಂಧಿ ಚಲನೆಯನ್ನು ಕಳೆದುಕೊಳ್ಳುತ್ತದೆ ಅಥವಾ ಚಲನೆಗೆ ಅಡ್ಡಿಯಾಗುತ್ತದೆ.
    ಭುಜಗಳಲ್ಲಿ ನೋವು ಕಂಡು ಅದನ್ನು ಅಲಕ್ಷ್ಯ ಮಾಡಿ ತಿಂಗಳಾದರೂ ವಾಸಿಯಾಗದೆ ಆಗಾಗ ಕಾಣಿಸಿಕೊಳ್ಳುತ್ತಿದ್ದರೆ ಹೆಚ್ಚು ತಡಮಾಡಬಾರದು. ವೈದ್ಯರನ್ನು ಕಾಣಬೇಕು. ಎಕ್ಸ್‍ ರೇ ಮಾಡಿಸಿದರೆ ಈ ಸಮಸ್ಯೆಯ ತೀವ್ರತೆ ಹಾಗೂ ಕಾರಣ ತಿಳಿದುಬರುತ್ತದೆ. ಯಾವುದಾದರೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೆ ಹಾಗೂ ದೀರ್ಘಕಾಲ ಕುಳಿತುಕೊಂಡು ಕೆಲಸ ಮಾಡುವ ಜೀವನಶೈಲಿಯಿಂದ ಈ ಸಮಸ್ಯೆ ಉಲ್ಬಣವಾಗಬಹುದು. ದೇಹಕ್ಕೆ ಹಿತವಲ್ಲದ ಭಂಗಿಯಲ್ಲಿ ಕುಳಿತುಕೊಂಡು ಬಹಳ ಹೊತ್ತು ಕೆಲಸ ಮಾಡುವವರಲ್ಲಿ ಮತ್ತು ಬೆನ್ನು ಬಾಗಿಸಿ ಕುಳಿತುಕೊಳ್ಳುವವರಲ್ಲೂ ಹೆಚ್ಚಾಗಿ ಕಂಡುಬರುತ್ತದೆ.
    ಕೆಲವೊಮ್ಮೆ ಭುಜಗಳಲ್ಲಿ ಬಿರುಸುತನ ಹೆಚ್ಚಲು ಬೇರೆ ಸಮಸ್ಯೆಯೂ ಕಾರಣವಾಗಬಲ್ಲದು. ಗಾಯ, ಗಡ್ಡೆ, ಆರ್ಥರೈಟಿಸ್‍ ಕೂಡ ಭುಜಗಳಲ್ಲಿ ಬಿರುಸುತನ ಹೆಚ್ಚಿಸಬಹುದು. ಫ್ರೋಝನ್ ಶೋಲ್ಡರ್ ನೋವು ನಿವಾರಣೆಗೆ ಸಲಹೆಗಳು ನಮ್ಮ ದೇಹವೂ ಒಂದು ಯಂತ್ರ. ಇದು ಸುಸ್ಥಿತಿಯಲ್ಲಿರಬೇಕಾದರೆ ಭುಜದ ಮತ್ತಿತರ ಅಂಗಾಂಗಗಳ ಕೀಲುಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಇವು ಸರಿಯಾಗಿರಲು ಸೂಕ್ತ ವ್ಯಾಯಾಮ ಮತ್ತು ಚಟುವಟಿಕೆಗಳು ಅತ್ಯಗತ್ಯ.ಇಲ್ಲವಾದಲ್ಲಿ ಸಮಸ್ಯೆ ಉಂಟಾಗುವುದು ಸಹಜ. ಆದ್ದರಿಂದ ಭುಜದ ನೋವಿನ ಆರಂಭದಲ್ಲಿಯೇ ಸಮಸ್ಯೆಯ ಕುರಿತು ಗಮನ ನೀಡಿದರೆ ಪರಿಹರಿಸಿಕೊಳ್ಳುವುದು ಸುಲಭ. ಭುಜಗಳ ನೋವಿಗೆ ಕುತ್ತಿಗೆ ಹಾಗೂ ಭುಜಗಳ ವ್ಯಾಯಾಮ ಅತ್ಯಂತ ಸೂಕ್ತ. ಕುತ್ತಿಗೆಯನ್ನು ಹಿಂದೆ, ಮುಂದೆ, ಅಕ್ಕ-ಪಕ್ಕ ಬಾಗಿಸುವ ವ್ಯಾಯಾಮ ಮಾಡಬೇಕು. ಹಾಗೆಯೇ ಕೈಗಳೆರಡನ್ನೂ ಮೇಲೆತ್ತುವುದು, ಹಿಂದಕ್ಕೆ ಮುಂದಕ್ಕೆ ಬಿಗಿಯಾಗಿ ಹಿಡಿದುಕೊಳ್ಳುವುದು, ಕಿಟಕಿ ಸರಳುಗಳನ್ನು ಬಿಗಿಯಾಗಿ ಹಿಡಿದುಕೊಂಡು ಹಿಂದೆ-ಮುಂದೆ ಭುಜಗಳನ್ನು ಚಲಿಸುವ ವ್ಯಾಯಾಮಗಳ ಮೂಲಕ ನೋವಿಗೆ ಪರಿಣಾಮ ಕಂಡುಕೊಳ್ಳಬಹುದು. ಫಿಸಿಯೋ ಥೆರಪಿಸ್ಟ್‍ ಗಳ ನೆರವು ಪಡೆದುಕೊಂಡು ದಿನವೂ ವಿವಿಧ ಚಟುವಟಿಕೆಗಳನ್ನು ತಪ್ಪದೇ ಮಾಡಬೇಕು.
    ಹೆಚ್ಚಿನ ಮಾಹಿತಿಗಾಗಿ moneshvista01@gmail.com ಗೆ ಇಮೇಲ್ ಮಾಡಬಹುದು.

Komentáře • 9