3 ವಿಶೇಷ ತಳಿಗಳ ಸೀತಾಫಲ ಬೆಳೆ, ಏಳು ದಿನ ಕೆಡುವುದು ಈ ಹಣ್ಣು! | Vijay Karnataka

Sdílet
Vložit
  • čas přidán 11. 09. 2023
  • ಚಿತ್ರದುರ್ಗ: ಇಲ್ಲೊಂದು ರೈತ ಕುಟುಂಬ ಐಐಎಚ್‌ಆರ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ವಿಶೇಷ 'ಸೀತಾಫಲ' ತಳಿ ಬೆಳೆದು ವಾಣಿಜ್ಯ ಬೆಳೆಯನ್ನಾಗಿ ಬೆಳೆಯುವ ಮೂಲಕ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
    ಚಿತ್ರದುರ್ಗ ತಾಲೂಕಿನ ಹಳವುದರ ಗ್ರಾಮದ ಟಿ.ನಿಂಗಾನಾಯ್ಕ ಹಾಗೂ ಮಂಜುಳಾಬಾಯಿ ದಂಪತಿ ನೈಸರ್ಗಿಕ ವಿಧಾನದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ, ತೋಟಗಾರಿಕೆಯಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ. ತಮ್ಮ 3.50 ಎಕರೆಯಲ್ಲಿ 3 ವಿಶೇಷ ತಳಿಗಳ ಸುಮಾರು 750 ಸೀತಾಫಲ ಗಿಡಗಳನ್ನು ನಾಟಿ ಮಾಡಿದ್ದು ಉತ್ತಮ ಇಳುವರಿ ಪಡೆದುಕೊಂಡಿದ್ದಾರೆ.
    ಬೆಟ್ಟ ಗುಡ್ಡಗಳಲ್ಲಿ ಯಾವುದೇ ನಿರ್ವಹಣೆ ಇಲ್ಲದೆ ಸಹಜವಾಗಿ ಬೆಳೆಯುವ ಬೆಳೆ ಎಂದರೆ ಸೀತಾಫಲ. ಈ ಜಿಲ್ಲೆಯ ಹವಾಗುಣಕ್ಕೆ ಹೊಂದಿಕೊಂಡಿರುವ ಸೀತಾಫಲ ಮೊಳಕಾಲ್ಮೂರು ಭಾಗದಲ್ಲಿ ಹೆಚ್ಚಾಗಿ ಲಭಿಸುತ್ತದೆ. ಐಐಎಚ್‌ಆರ್ ವಿಜ್ಞಾನಿಗಳು ಅಭಿವದ್ಧಿಪಡಿಸಿರುವ ವಿಶೇಷ ತಳಿಯ ಅರ್ಕ ಸಹನದಲ್ಲಿ ಕಡಿಮೆ ಹಾಗೂ ಚಿಕ್ಕ ಬೀಜಗಳಿದ್ದು, ತಿರುಳು ಜಾಸ್ತಿಯಿರುವ ಮತ್ತು ಗಾತ್ರದಲ್ಲಿ ದೊಡ್ಡದಿರುವ ಕಾರಣ ಹೆಚ್ಚು ಬೇಡಿಕೆಯಿದೆ.
    #sugarapplecrops #chitradurga #farmers
    Our Website : Vijaykarnataka.com
    Facebook: / vijaykarnataka
    Twitter: / vijaykarnataka
    Our Video Website: kannada.timesxp.com/

Komentáře • 1