History of Uchangidurga (ಉಚ್ಚಂಗಿದುರ್ಗದ ಗತ ಇತಿಹಾಸ)

Sdílet
Vložit
  • čas přidán 10. 08. 2021
  • "ಕರ್ನಾಟಕದ ಗ್ವಾಲಿಯರ್ ಕೋಟೆ" ಎಂದು ಖ್ಯಾತ ವಾಗಿರುವ ಐತಿಹಾಸಿಕ ಕೋಟೆ ಉಚ್ಚಂಗಿದುರ್ಗ....ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ
    ಕೋಟೆಯ ಕುರಿತು ಒಂದು ಪುಟ್ಟ ಮಾಹಿತಿ.
    ಯುಗ ಯುಗಾಂತರದ ಸಂಬಂಧದೊಂದಿಗೆ
    ರಾಜಧಾನಿ ಇಂದ ಹಿಡಿದು ಪ್ರಮುಖ ಪಾಳೆಪಟ್ಟಿವರೆಗಿನ ಬದಲಾದ ಉಚ್ಚಂಗಿದುರ್ಗ ಇತಿಹಾಸದ ಕುರಿತು.
    ಬನವಾಸಿಯನ್ನು ಆಳಿದ ಕದಂಬರು ಉಚ್ಚಂಗಿದುರ್ಗದವನ್ನು( ಉಚ್ಚಶೃಂಗಿ) ಒಂದು ಶಾಖೆಯ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆಯನ್ನು ಮಾಡಿದ್ದಾರೆ.
    ಗಂಗರು‌ ಮತ್ತು ರಾಷ್ಟಕೂಟರ ಆಳ್ವಿಕೆ ‌ಮಾಡಿದ್ದಾರೆ .
    ಪಲ್ಲವರು ಉಚ್ಚಂಗಿಯಲ್ಲಿ ಆಳ್ವಿಕೆ ನೆಡಸಿ ಕೋಟೆಯನ್ನು ನಿರ್ಮಿಸಿ ಆಂಜನೇಯನನ್ನು ಪ್ರತಿಷ್ಠಾನ ಮಾಡಿದ್ದಾರೆ
    ನೊಳಂಬ ಪಲ್ಲವರು ಉಚ್ಚಂಗಿಯನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ನೆಡೆಸಿದ್ದಾರೆ.
    ಇವರ ಕಾಲದಲ್ಲಿ ಉಚ್ಚಂಗಿ ನೊಳಂಬವಾಡಿ 32000 ಕ್ಕೆ ಮುಖ್ಯ ಪಟ್ಟಣ ವಾಗಿತ್ತು.
    ಉಚ್ಚಂಗಿ ಪಾಂಡ್ಯರು ಉಚ್ಚಂಗಿದುರ್ಗವನ್ನು (ಉಚ್ಚಂಗಿ)ರಾಜಧಾನಿ ಮಾಡಿಕೊಂಡು ರಾಜ್ಯಭಾರವನ್ನು ಪ್ರಾರಂಭಿಸಿದರು.
    ಹೊಯ್ಸಳರ ದೊರೆ 'ವೀರ ಬಲ್ಲಾಳನು ' ಅಬೇದ್ಯವಾದ ಉಚ್ಚಂಗಿದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ,ಅಪಾರ ಸೈನ್ಯದೊಂದಿಗೆ ಬಂದು ಪಾಂಡ್ಯರ ದೊರೆ 'ಕಾಮದೇವನನ್ನು' ಸೋಲಿಸಿ ದ ನಂತರ "ಶನಿವಾರ ಸಿದ್ದಿ" ಮತ್ತು "ಗಿರಿದುರ್ಗಮಲ್ಲ" ಎಂಬ ಬಿರುದನ್ನು ಪಡೆದನು.
    ವಿಜಯನಗರದ ಅರಸರ ಕಾಲದಲ್ಲಿ ಪ್ರಮುಖ ಪಾಳೇಪಟ್ಟಾಗಿ ಮಾರ್ಪಟ್ಟು ಅಳ್ವಿಕೆಗೆ ಒಳಪಟ್ಟಿತ್ತು.
    ದಕ್ಷಿಣ ಭಾರತದ 120 ಪಾಳೇಪಟ್ಟುಗಳಲ್ಲಿ ಉಚ್ಚಂಗಿದುರ್ಗ ಕೂಡ ‌ಒಂದು.
    ನಂತರ ಸುಮಾರು ವರ್ಷಗಳ ಕಾಲ ಪಾಳೆಯಗಾರರು (ನಾಯಕರ)ಆಳ್ವಿಕೆಯನ್ನು ನೆಡೆಸುತ್ತಾರೆ ಒಂದು ಮಾಹಿತಿಯ ಪ್ರಕಾರ ಚಿತ್ರದುರ್ಗದ ಮದಕರಿ ನಾಯಕರ ಮೂಲ ಪುರುಷ ಚಿತ್ರನಾಯಕ ಮೊದಲು ಉಚ್ಚಂಗಿದುರ್ಗ ದಿಂದ ಉಚ್ಚಂಗೆಮ್ಮ ದೇವಿಯ ಅಣತೆಯಂತೆ ಇಲ್ಲಿಂದಲೇ ರಾಜ್ಯಳ್ವಿಕೆ ಆರಂಭಿಸಿದ್ದ ಎಂದು ತಿಳಿದುಬರುತ್ತದೆ.
    ಇನ್ನು ಕರ್ನಾಟಕದ ಪ್ರಮುಖ 77 ನಾಯಕರ ಪಾಳೆಪಟ್ಟುಗಲ್ಲಿ ಉಚ್ಚಂಗಿದುರ್ಗ ಕೂಡ ಒಂದು.
    ಇವರಲ್ಲಿ ದಾದಯ್ಯ ನಾಯಕನು ಚಿತ್ರದುರ್ಗದ ತಿಮ್ಮಣ್ಣ ನಾಯಕನ ಮಗಳಾದ ಹೊನ್ನವ್ವ ನಾಗತಿಯನ್ನು ಮದುವೆಯಾಗುವ ಮೂಲಕ ಉಚ್ಚಂಗಿದುರ್ಗವನ್ನು ಬಳುವಳಿಯಾಗಿ ಪಡೆಯುತ್ತಾನೆ .ಮತ್ತು ಇವನು ವಿಜಯನಗರದ ಅರಸರಿಂದ "ಭಾಷೆಗೆ ತಪ್ಪುವ ನಾಯಕರ ಗಂಡ " ಮತ್ತು "ಮೊರೆ ಹೊಕ್ಕವರ ಕಾಯ್ವಮಾರಂತರ ಗೆಲುವ" ಎಂಬ ಬಿರುದನ್ನು ಪಡೆದಿದ್ದ ಇವನ ನತಂರ ಅನೇಕ ಪಾಳೆಯಗಾರರು ಆಳ್ವಿಕೆ ಮಾಡುತ್ತಾರೆ .
    ನಂತರ ಬಂದ ಮುಮ್ಮಡಿ ಬಸಪ್ಪನಾಯಕನು 1749 ರಲ್ಲಿ ಉಚ್ಚಂಗೆಮ್ಮ ದೇವಿಗೆ ಒಂದು ಗಂಟೆಯನ್ನು ಮಾಡಿಸಿ ಕೊಡುತ್ತಾನೆ .
    ನಂತರ ಹರಪನಹಳ್ಳಿಯ ಸೋಮಶೇಖರ ನಾಯಕನು ಆಳ್ವಿಕೆ ಮಾಡುತ್ತಾನೆ .ಹಿರೇ ಮದಕರಿನಾಯಕನು ಸೋಮಶೇಖರ ನಾಯಕನನ್ನು ಸೋಲಿಸಿ ಉಚ್ಚಂಗಿದುರ್ಗವನ್ನು ವಶಪಡಿಸಿಕೊಂಡು ಇದೆ ಸಮಯದಲ್ಲಿ ಉಚ್ಚಂಗಿದುರ್ಗ ಉತ್ಸವಾಂಭ( ಉಚ್ಚಂಗೆಮ್ಮ)ಮೂರ್ತಿಯನ್ನು ತೆಗೆದುಕೊಂಡು ಹೊದನು ನಂತರ 1748 ರಲ್ಲಿ ಹಿರೇ ಮದಕರಿ ನಾಯಕ ಮತ್ತು ಸೋಮಶೇಖರ ನಾಯಕ ಮಾಯಕೊಂಡದ ಬಳಿ ಕಾದಾಡಿದರು .ಇದರಲ್ಲಿ ಮದಕರಿಯು ಮಡಿದನು.ಸೋಮಶೇಖರ ನಾಯಕನು ಒಬ್ಬ ಧೀರ ಯೋಧನಾಗಿದ್ದನು ,ಇವನು ಚಿತ್ರದುರ್ಗ ಬಿಟ್ಟರೆ ಮತ್ತೆಲ್ಲ ಅರಸರೊಂದಿಗೆ ಸ್ನೇಹ ಹೊಂದಿದ್ದ .
    ಉಚ್ಚಂಗಿದುರ್ಗ ಕ್ರಿ.ಶ 1566 ರಲ್ಲಿ ದಾದಯ್ಯನಾಯಕ ನಿಂದ ಮೊದಲುಗೊಂಡು ಹರಪನಹಳ್ಳಿಯ ಪಾಳೆಯಗಾರರು ಬಾಗಳಿ ನಂತರ ಉಚ್ಚಂಗಿದುರ್ಗ ಮತ್ತು ಹರಪನಹಳ್ಳಿನ್ನು ಕೇಂದ್ರ ಮಾಡಿಕೊಂಡು ಕ್ರಿ.ಶ 1799 ರ ವರೆಗೆ ಮತ್ತು ಹೈದರ್ ಮತ್ತು ಟಿಪ್ಪುಸುಲ್ತಾನರ ತೆಕ್ಕೆಗೆ ಒಳಪಟ್ಟ ನಂತರ ಕ್ರಿ.ಶ 1800 ರಿಂದ 1947 ರ ವರೆಗೆ ಬ್ರಿಟಿಷರ ಆಳ್ವಿಕೆ ಒಳಪಟ್ಟಿದೆ.
    ಈ ರೀತಿ ಉಚ್ಚಂಗಿದುರ್ಗ ಕೋಟೆಯು ಹಲವು ರಾಜ ಮಹಾರಾಜ ಏಳು ಬೀಳಿಗೆ ಕಾರಣವಾಗಿದೆ ಇಷ್ಟೇಲ್ಲ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದರು ಈ ಕೋಟೆಗೆ ದೊರಕಬೇಕಾಗಿದ್ದ ಸ್ಥಾನ ಮಾನ ಇನ್ನು ದೊರೆಯದೆ ಇರುವುದು ದುರದೃಷ್ಟಕರ.....
    ಪ್ರಹ್ಲಾದ್ ಕೆ ಉಚ್ಚಂಗಿದುರ್ಗ.......
    ಹೆಚ್ಚಿನ ಮಾಹಿತಿಗೆ ನಮ್ಮ ಪೇಸ್ಬುಕ್ ಪೇಜ್ ಅದಾ "ನೆಲದ ನಕ್ಷತ್ರ ಉಚ್ಚಂಗಿದುರ್ಗ" ವನ್ನು ಲೈಕ್ ಮಾಡಿ
    / ನೆಲದ-ನಕ್ಷತ್ರ-ಉಚ್ಚಂಗಿದು...

Komentáře • 42

  • @umeshmudurga9148
    @umeshmudurga9148 Před měsícem +1

    You are uplifting the dignity of our village and also our dynosty tamma. Keep it up 👍

  • @manjumanjunat7687
    @manjumanjunat7687 Před 2 lety +14

    ⚔️⚔️. ನಮ್ಮ ಹರಪನಹಳ್ಳಿಯ ರಾಜ ಸೋಮಶೇಖರ ನಾಯಕ ನಮ್ಮ ಎಮ್ಮೆ. ⚔️⚔️

    • @yparettin7168
      @yparettin7168 Před rokem

      ಮುಂಜು ಅವರೇ ಹೇಮ್ಮೆ ಅಂತ ಬರೆಯಿರಿ ಆದ್ರೆ ನೀವು ಬರದಿರೋದು ತಪ್ಪು ಇದೆ ನೋಡೀ

  • @srikanthsri9489
    @srikanthsri9489 Před 2 lety +8

    ನಾಯಕ..👌👌💪💪🌹🌹🌹🌹

  • @RajuPatil-ez5pg
    @RajuPatil-ez5pg Před 6 měsíci +1

    Ballera Hanumappa nayak hitihas heli

  • @kishkindeyakathegalu..
    @kishkindeyakathegalu.. Před 2 lety +2

    Super voice

  • @sindhupn7556
    @sindhupn7556 Před 2 lety +2

    Osm... 👌🙏❤

  • @shreyasraghvankamat6960
    @shreyasraghvankamat6960 Před 2 lety +3

    Nice voice superrr 😍👌

  • @rameshhraam3880
    @rameshhraam3880 Před 2 lety +1

    ಇತಿ ಹೀಗೆ
    ಹಾಸ ಇತ್ತು
    God bless you

  • @Dharmaveerp5463
    @Dharmaveerp5463 Před 2 lety +1

    ಧನ್ಯವಾದಗಳು

  • @shivakumarajyothi2835
    @shivakumarajyothi2835 Před rokem +1

    Video jotege history heliddakke dhanyavadagalu sir nimage innu hechinadaagi video Madi sir

  • @DineshDinesh-dp1ob
    @DineshDinesh-dp1ob Před 2 lety +2

    Super ❤️❤️

  • @shivushiva9312
    @shivushiva9312 Před rokem +1

    Super sir

  • @haridasadasa4300
    @haridasadasa4300 Před 2 lety +1

    ಸೂಪರ್...

  • @trriusgamers9621
    @trriusgamers9621 Před 2 lety +3

    Super bro

  • @hamsakiccha...1965
    @hamsakiccha...1965 Před 2 lety +2

    Superrrr 🔥🔥🔥

  • @shashidharabommanni7336
    @shashidharabommanni7336 Před 2 lety +3

    Super script and also back ground voice are awesome..😘

  • @palegardeepakmysuru4524
    @palegardeepakmysuru4524 Před 2 lety +1

    Very good. Keep it up...

  • @ajeetkasar2210
    @ajeetkasar2210 Před 2 lety +1

    Super.

  • @manjuklr7681
    @manjuklr7681 Před 2 lety +1

    Super

  • @LakshmiLakshmi-ej5dv
    @LakshmiLakshmi-ej5dv Před 2 lety +1

    Amma

  • @sridevim4298
    @sridevim4298 Před 2 lety +3

    Information was superb ,script and background voice is also 👌

    • @gireshgire5653
      @gireshgire5653 Před 2 lety

      ಊದೂ ಊದೂ ತಾಯಿ ಶ್ರೀ ಉತ್ಸವಾಂಭ
      ಇದೇ ರೀತಿಯ ವಿಡಿಯೋ ಮಾಡಿ 🙏🙏🙏🙏🙏🙏🙏

  • @ganeshpatilnr5621
    @ganeshpatilnr5621 Před 2 lety +1

    Good....prahlad

  • @hmr247
    @hmr247 Před 2 lety +2

    Super shreyas 👏

  • @GaneshGanesh-if2gf
    @GaneshGanesh-if2gf Před 2 lety +1

    👍👍👌👌

  • @mallikarjun6833
    @mallikarjun6833 Před 2 lety +1

    Super bro🤟🤟

  • @anjuanju2971
    @anjuanju2971 Před 2 lety +1

    ಸರ್ ವಿಡಿಯೋ ಮಾಡಿ ಹೆಚ್ಚು ವಿಷಯ ಹೇಳಿದ್ದಕ್ಕೆ ಧನ್ಯವಾದ ಇಗೆ ಹಲವು ಇತಿಹಾಸ ಮರೆಯಾಗುತ್ತಿವೆ ನೀವು ಹೆಚ್ಚು ವಿಡಿಯೋ ಮಾಡಿ ಸರ್ ನಿಮಗೆ ಧನ್ಯಾದಗಳು

    • @NeladaNakshatraUchangidurga
      @NeladaNakshatraUchangidurga  Před 2 lety

      ಖಂಡಿತವಾಗಿ ಮುಂದಿನ ಸಂಚಿಕೆಗಳಲ್ಲಿ‌ ಇನ್ನೂ ಹೆಚ್ಚಿನ ವಿವರಣೆ ನೀಡುತ್ತೆವೆ.ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.....

  • @ashokkiccha4519
    @ashokkiccha4519 Před 2 lety +2

    Script & background voice ulti 😍

  • @vinayak449
    @vinayak449 Před 2 lety +1

    Although it is Raising you tube channel it's been the best content . Good luck to you brother

  • @gururenukapmguru5225
    @gururenukapmguru5225 Před 2 lety +1

    👌👌👌

  • @manjumanjunat7687
    @manjumanjunat7687 Před 2 lety +8

    ⚔️ ಹಲೋ ಅಣ್ಣ ನಮ್ಮ ಹರಪನಹಳ್ಳಿಯ ರಾಜ್ಯ ಸೋಮಶೇಖರ ನಾಯಕ. ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸಾರ್ ಪ್ಲೀಸ್ ಅಣ್ಣ.. ನಮ್ಮ ಹರಪನಹಳ್ಳಿ ನಮ್ಮ ಹೆಮ್ಮೆ..🚩.. ಜೈ ರಾಜ ಸೋಮಶೇಖರ ನಾಯಕ ⚔️⚔️

    • @NeladaNakshatraUchangidurga
      @NeladaNakshatraUchangidurga  Před 2 lety +1

      ಹರಪನಹಳ್ಳಿ ಮತ್ತು ಉಚ್ಚಂಗಿದುರ್ಗದ ಪಾಳೇಗಾರರು ಇಬ್ಬರು ಒಂದೇ. ಮುಂದಿನ ವಿಡಿಯೋ ದಲ್ಲಿ ಖಂಡಿತ ಮಾಹಿತಿ ನೀಡುತ್ತಿವಿ ನಿಮ್ಮ ಬೆಂಬಲವಿರಲಿ

  • @nhm2407
    @nhm2407 Před 2 lety +1

    😍😍👌👌

  • @sunilssunils7193
    @sunilssunils7193 Před 2 lety +1

    Over music