Ratha Sampthami | Early Morning Silver Rathosava | Kundapura Shri Venkataramana Temple

Sdílet
Vložit
  • čas přidán 5. 09. 2024
  • Ratha Saptami
    Pete Shri Venkataramana Temple Kundapura
    Early Morning Silver Rathotsava .
    On Ratha Saptami Day Early Morning Programmes Started At 5 AM Ended At 9 AM
    ರಥಸಪ್ತಮಿ ಪೌರಾಣಿಕ ಹಿನ್ನೆಲೆ ಕಥೆಗಳು:-
    33 ಕೋಟಿ ದೇವತೆಗಳಲ್ಲಿ ಸೂರ್ಯ ಮತ್ತು ಚಂದ್ರ ಪ್ರತ್ಯಕ್ಷ ಕಾಣುವ ದೇವರು. ಜಗತ್ತಿಗೆ ಬೆಳಕು ಕೊಡುವ ಸೂರ್ಯನ ಮಹಿಮೆ ಅಪಾರ. ಕೃಷ್ಣ ಹೇಳಿದಂತೆ ‘ಸೂರ್ಯನಿಗಿಂತ ಬೇರೆ ದೇವರಿಲ್ಲ’. ಸಕಲ ಜೀವರಾಶಿಗಳಿಗೂ ನವ ಚೈತನ್ಯ ತುಂಬುವ ಪ್ರತ್ಯಕ್ಷ ದೇವರು ಸೂರ್ಯನಾರಾಯಣ. ಸೂರ್ಯ ದೇವರು ಜನಿಸಿದ ದಿನವೇ ‘ರಥಸಪ್ತಮಿ’ ಮಾಘ ಮಾಸದ, ಶುಕ್ಲ ಪಕ್ಷದ, ಸಪ್ತಮಿ ದಿನ, ಕಶ್ಯಪ ಮತ್ತು ಅದಿತಿ ದೇವಿಯರ ಮಗನಾಗಿ ಸೂರ್ಯನು ಜನಿಸುತ್ತಾನೆ. ಜನಿಸುತ್ತಿದ್ದಂತೆ ಏಳು ಕುದುರೆಗಳ ರಥವೇರಿ, ಏಳು ಲೋಕಗಳ ಪರ್ಯಟನೆ ಹೊರಡುತ್ತಾನೆ. ಸೂರ್ಯ
    ಕಿರಣಗಳ ತೇಜಸ್ಸು ಸಕಾರಾತ್ಮಕವಾಗಿದ್ದು ಶಕ್ತಿಯುತ ಸಂಕೇತವಾಗಿದೆ. ಪ್ರತೀ ಜೀವಿ ಗಳ ಅಸ್ತಿತ್ವವೇ ಸೂರ್ಯ. ಗ್ರಹಗಳಿಗೆಲ್ಲ ಸೂರ್ಯ ರಾಜ. ಯಾರದೇ ಜಾತಕದಲ್ಲಿ ಸೂರ್ಯ ಪ್ರಬಲನಾಗಿದ್ದರೆ ಆ ವ್ಯಕ್ತಿಯು ದೈಹಿಕ, ಮಾನಸಿಕ,ಬೌದ್ಧಿಕವಾಗಿ ಪ್ರಗತಿ ಹೊಂದುತ್ತಾನೆ. ಆರೋಗ್ಯ ಐಶ್ವರ್ಯ ಅಭಿವೃದ್ಧಿಯಾಗುತ್ತದೆ.
    ಸೂರ್ಯದೇವನು ಉದಯದಲ್ಲಿ ಬ್ರಹ್ಮ, ಮಧ್ಯಾಹ್ನ ಮಹೇಶ್ವರ, ಸಾಯಂಕಾಲ ವಿಷ್ಣು ರೂಪದಲ್ಲಿ ದರ್ಶನ ಕೊಡುತ್ತಾನೆ. ಸೂರ್ಯಾರಾಧನೆ ಮಾಡಿದರೆ ತ್ರಿಮೂರ್ತಿಗಳ ಅನುಗ್ರಹ ಸಿಗುತ್ತದೆ. ಗ್ರಹಗಳು ಇವನ ಆಜ್ಞೆಯಂತೆ ನಡೆಯುತ್ತದೆ ಆರೋಗ್ಯ ಐಶ್ವರ್ಯಾಭಿವೃದ್ಧಿಗೆ ಸೂರ್ಯನ ಅನುಗ್ರಹ ಬೇಕು. ತ್ರೇತಾಯುಗದ ರಾಮ-ರಾವಣರ ಯುದ್ಧದಲ್ಲಿ, ಅಷ್ಟೊಂದು ಬಲಿಷ್ಠ ರಾಕ್ಷಸರ ಜೊತೆ ಯುದ್ಧ ಮಾಡಿ ಶ್ರೀರಾಮ ದಣಿದಿದ್ದ. ಇನ್ನು ರಾವಣನ ಜೊತೆ ಹೇಗೆ ಹೋರಾಡುವುದು ಎಂದು ಚಿಂತಿಸಿದಾಗ ‘ಅಗಸ್ತ್ಯ ಮಹರ್ಷಿಗಳು’ ಪ್ರತ್ಯಕ್ಷರಾಗಿ ರಾಮನಿಗೆ ಆದಿತ್ಯ ಹೃದಯ ಸ್ತೋತ್ರವನ್ನು ಉಪದೇಶ ಮಾಡಿ, ಸೂರ್ಯನನ್ನು ಆರಾಧಿಸಿ ಮತ್ತೆ ಶಕ್ತಿಯನ್ನು ಪಡೆಯುವಂತೆ ಸೂಚಿಸಿದರು. ಅಗಸ್ತ್ಯರ ಮಾತಿನಂತೆ ರಾಮನು ಸೂರ್ಯನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿ ಅರ್ಘ್ಯವನ್ನು ಕೊಟ್ಟಾಗ ರಾಮನ ದೇಹದಲ್ಲಿ ನವ ಚೈತನ್ಯ ತುಂಬಿತು. ರಾವಣನ ಮೇಲೆ ಯುದ್ಧ ಮಾಡಿ ವಿಜಯಶಾಲಿ ಆದನು.
    ಪಾಂಡವರು ವನವಾಸದಲ್ಲಿದ್ದಾಗ ಶ್ರೀ ಕೃಷ್ಣನ ಸಲಹೆಯಂತೆ ಧರ್ಮರಾಜ ಸೂರ್ಯೋಪಾಸನೆಯನ್ನು ಮಾಡಿ ‘ಅಕ್ಷಯಪಾತ್ರೆ’ ಪಡೆದನು.ಇದರಿಂದ 12 ವರ್ಷಗಳ ಕಾಲ ಪಾಂಡವರಿಗೆ ಆಹಾರದ ಕೊರತೆಯಾಗಲಿಲ್ಲ. ಹಾಗೆಯೇ,
    ಪಾಂಡವರನ್ನು ನಿತ್ಯವೂ ನೋಡಲು ಬರುವ ಸಾವಿರಾರು ಋಷಿಮುನಿಗಳು, ಬ್ರಾಹ್ಮಣರು, ಅತಿಥಿ ಅಭ್ಯಾಗತರಿಗೆ ‘ಇಚ್ಛಾ ಭೋಜನ’ ಬಡಿಸುತ್ತಿದ್ದರು.
    ಕೃಷ್ಣನ ಮಗ ಸಾಂಬನಿಗೆ ದೂರ್ವಾಸರ ಶಾಪದಿಂದಾಗಿ ಕುಷ್ಟರೋಗ ಬಂದಿತು.
    ಸಾಂಭನಿಗೆ ಸೂರ್ಯಾರಾಧನೆ ಮಾಡುವಂತೆ ಶ್ರೀ ಕೃಷ್ಣ ಹೇಳಿದನು. ‘ರಥಸಪ್ತಮಿ’ ದಿನದಂದು ಸಾಂಭನು ಸೂರ್ಯನನ್ನು ಆರಾಧಿಸಿ ಸೂರ್ಯನ ಅನುಗ್ರಹದಿಂದ ರೋಗದಿಂದ ಬಿಡುಗಡೆಯಾದನು. ಅಂದಿನಿಂದ ‘ರಥಸಪ್ತಮಿ’ಯನ್ನು ‘ಆರೋಗ್ಯ ಸಪ್ತಮಿ’ ಎಂದು ಕರೆಯುತ್ತಾರೆ. ಮಯೂರನೆಂಬ ಕವಿ ‘ಸೂರ್ಯ ಶತಕ’ ಗ್ರಂಥ ವನ್ನು ಬರೆದು ಕಳೆದುಕೊಂಡ ಕಣ್ಣನ್ನು ಪಡೆದನು. ರಾಜನಾದ ಸತ್ರಾಜಿತನು ಸೂರ್ಯಾರಾಧನೆ ಮಾಡಿ ‘ಶ್ಯಮಂತಕ ಮಣಿ’ಯನ್ನು ಪಡೆದು, ಮಣಗಟ್ಟಲೆ ಬಂಗಾರ ಪಡೆಯುತ್ತಿದ್ದನು.
    ‘ಸಪ್ತಾಶ್ವ ರಥಾರೂಡಂ, ಪ್ರಚಂಡಂ ಕಶ್ಯಪಾತ್ಮಜಂ
    ಶ್ವೇತ ಪದ್ಮಧರಂ ದೇವಂ, ತಂ ಸೂರ್ಯಂ ಪ್ರಣಮಾಮ್ಯಂ!!
    ಓಂ ಮಿತ್ರಾಯ ನಮಃ! ಓಂ ರವಯೇ ನಮ:!
    ಓಂ ಸೂರ್ಯಾಯ ನಮಃ! ಓಂ ಭಾನವೇ ನಮಃ!
    ಓಂ ಖಗಾಯ ನಮಃ ! ಓಂ ಪೋಷ್ಣೇ ನಮಃ!
    ಓಂ ಹಿರಣ್ಯ ಗರ್ಭಾಯ ನಮಃ! ಓಂ ಮರೀಚಯ ನಮಃ!
    ಓಂ ಆದಿತ್ಯಾಯ ನಮಃ! ಓಂ ಸವಿತ್ರೇ ನಮಃ!
    ಓಂ ಅರ್ಕಾಯ ನಮಃ! ಓಂ ಭಾಸ್ಕರ್ಯ ನಮಃ!
    ಓಂ ಸವಿತೃ ಸೂರ್ಯ ನಾರಾಯಣಾಯ ನಮಃ !!
    ಪೌರಾಣಿಕ ಹಿನ್ನೆಲೆ ಪ್ರಕಾರ ದಕ್ಷ ಪ್ರಜಾಪತಿ ಯಜ್ಞ ಮಾಡಿ, ಅಳಿಯನಾದ ಪರಮೇಶ್ವರನನ್ನು ಯಜ್ಞಕ್ಕೆ ಆಹ್ವಾನಿಸಲಿಲ್ಲ, ಆದರೆ ಶಿವನ ಪತ್ನಿ ದಾಕ್ಷಾಯಿಣಿ,
    ಶಿವನು ಬೇಡ ಎಂದರು ಕೇಳದೆ ತನ್ನ ತಂದೆ ಮನೆ ಎಂದು ‘ಯಜ್ಞಕ್ಕೆ’ ಬಂದಳು. ಆದರೆ ತಂದೆಯಾದ ದಕ್ಷ ಮಗಳಿಗೆ ಅವಮಾನ ಮಾಡುವುದಲ್ಲದೆ, ಸಭಿಕರೆದುರಿಗೆ ಶಿವನನ್ನು ಅಪಹಾಸ್ಯ ಮಾಡಿದನು. ತನ್ನ ಪತಿಗೆ ಅವಮಾನ ಆಗುವುದನ್ನು ಸಹಿಸ ಲಾರದೆ ಸತಿ ಅಗ್ನಿಗೆ ಆಹುತಿ ಆದಳು. ಕೋಪಗೊಂಡ ಶಿವನು ದಕ್ಷಿನ ಯಜ್ಞವನ್ನು ನಾಶ ಮಾಡಲು ‘ವೀರಭದ್ರ’ನನ್ನು ಕಳಿಸಿದನು. ಉಗ್ರ ರೂಪದ ವೀರಭದ್ರನು ದಕ್ಷನ ಯಜ್ಞವನ್ನು ನಾಶ ಮಾಡಿದ್ದಲ್ಲದೆ, ಯಜ್ಞ ಕಾರ್ಯಕ್ಕೆ ಬಂದಿದ್ದ ದೇವಾನು ದೇವತೆಗಳಿಗೆಲ್ಲ ಶಿಕ್ಷೆ ಕೊಡುತ್ತಾ ಬಂದನು. ಸೂರ್ಯನಿಗೂ ಹೊಡೆತ ಬಿದ್ದು ಅವನ 32 ಹಲ್ಲು ಉದುರಿ ಬಿತ್ತು. ಸೂರ್ಯನು ಬಹಳ ನೊಂದು ಶಿವನನ್ನು ಪ್ರಾರ್ಥಿಸಿ ಶರಣಾದನು. ಪ್ರಸನ್ನಗೊಂಡ ಶಿವನು, ಸೂರ್ಯನ ಜನ್ಮದಿನದಂದು ಆಚರಿಸುವ ‘ರಥಸಪ್ತಮಿ’ ಹಬ್ಬದಲ್ಲಿ ನಿನ್ನನ್ನು ಪೂಜಿಸಿ, (ಗೋಧಿ ಸೂರ್ಯನಿಗೆ ಪ್ರಿಯ) ಪಾಯಸ ಮಾಡಿ ನಿನಗೆ ಅರ್ಪಿಸಿ ನೀನು ಅದನ್ನು ಸೇವಿಸಿದಾಗ ನಿನ್ನ ಹಲ್ಲುಗಳು ಬರುತ್ತವೆ. ಹೀಗೆ ಬಂದ ಹಲ್ಲುಗಳು ಒಂದು ವರ್ಷ ಇರುತ್ತದೆ. ರಥಸಪ್ತಮಿ ಹಿಂದಿನ ದಿನ ಮತ್ತೆ ಬೀಳುತ್ತದೆ. ಉದುರಿ ಬಿದ್ದ ಹಲ್ಲು ರಥಸಪ್ತಮಿ ಪಾಯಸ ತಿಂದಾಗ ಬರುತ್ತದೆ. ಎಂದು ವರ ಕೊಟ್ಟನು. ಆ ಪ್ರಕಾರ ಸೂರ್ಯಗೆದುರಾಗಿ ಹಾಲು ಉಕ್ಕಿಸಿ ಅದರಿಂದ ಪಾಯಸ ಮಾಡುತ್ತಾರೆ.
    ಈ ದಿನ ಸೂರ್ಯದೇವನ ರಥ ಏರುತ್ತಾನೆ ಚಳಿ ಕಮ್ಮಿಯಾಗಿ ಬಿಸಿಲು ಜಾಸ್ತಿಯಾಗುತ್ತದೆ. ಸೂರ್ಯನನ್ನು ಆರಾಧಿಸುವ ಪರ್ವ ದಿನದಂದು ಅಚಲ ಸಪ್ತಮಿ ಎಂದು ಕರೆಯುತ್ತಾರೆ. ಯೋಗದಲ್ಲಿ ಈ ದಿನ 108 ಅಥವಾ 48 ಹೀಗೆ ಸೂರ್ಯ ನಮಸ್ಕಾರಗಳನ್ನು ಮಾಡುತ್ತಾರೆ. ಸೂರ್ಯನಿಗೆ ಇಬ್ಬರು ಪತ್ನಿಯರು ಸಂಧ್ಯಾ ಮತ್ತು ಚಾಯ ಮಕ್ಕಳು ಮನು, ಯಮ, ಯಮುನಾ, ಶ್ರೀರಾಮಚಂದ್ರ ಸೂರ್ಯವಂಶದವನು. (ಇಕ್ಷ್ವಾಕು) ಕರ್ಣ, ಶನಿ ಯಮ, ಸುಗ್ರೀವ, ಇವರು ಸೂರ್ಯ ಪುತ್ರರು.
    ।। ರಥ ಸಪ್ತಮಿ ಸ್ತೋತ್ರಂ ||
    ಸ್ನಾನಕಾಲ ಶ್ಲೋಕಃ
    ಯದಾ ಜನ್ಮ ಕೃತಂ ಪಾಪಂ
    ಮಯಾ ಜನ್ಮಸು ಜನ್ಮಸು
    ತನ್ನೇ ರೋಗಂ ಚ ಶೋಕಂ ಚ
    ಮಾಕರೀ ಹಂತು ಸಪ್ತಮೀ ॥೧॥
    ಏತಜ್ಜನ್ಮ ಕೃತಂ ಪಾಪಂ
    ಯಚ್ಚ ಜನ್ಮಾಂತರಾರ್ಜಿತಂ ।
    ಮನೋ ವಾಕ್ಕಾಯಜಂ ಯಚ್ಚ
    ಜ್ಞಾತಾಜ್ಞಾತೇ ಚ ಯೇ ಪುನಃ ||೨||
    ಇತಿ ಸಪ್ತವಿಧಂ ಪಾಪಂ
    ಸ್ನಾನಾ ಸಪ್ತ ಸಪ್ತಕೇ |
    ಸಪ್ತವ್ಯಾಧಿ ಸಮಾಯುಕ್ತಂ
    ಹರ ಮಾಕರಿ ಸಪ್ತಮೀ ॥೩॥
    ಸಪ್ತ ಸಪ್ತ ಮಹಾಸಪ್ತ
    ಸಪ್ತದ್ವೀಪ ವಸುಂಧರಾ |
    ಶ್ವೇತಾರ್ಕ ಪರ್ಣಮಾದಾಯ
    ಸಪ್ತಮೀ ರಥ ಸಪ್ತಮೀ ||೪||
    ಅರ್ಥ್ಯ ಶ್ಲೋಕಂ |
    ಸಪ್ತ ಸಪ್ತಿ ವಹಪ್ರೀತ
    ಸಪ್ತಲೋಕ ಪ್ರದೀಪನ |
    ಸಪ್ತಮೀ ಸಹಿತೋ ದೇವ
    ಗೃಹಾಣಾರ್ಥ್ಯಂ ದಿವಾಕರ ॥೫॥
    Facebook page
    / sanjeevamusicyt
    Instagram
    / sanjeevamusic
  • Hudba

Komentáře • 9

  • @rameshkamath6440
    @rameshkamath6440 Před 2 měsíci

    Veera Venkatesha...🙏

  • @jnanadevamallya4830
    @jnanadevamallya4830 Před 6 měsíci

    🙏🙏

  • @kaigalmane
    @kaigalmane Před 6 měsíci

    ಶುಭ ಹಾರೈಕೆಗಳು🙏

  • @vedicspace
    @vedicspace Před 6 měsíci

    excellent coverage

  • @venpai9011
    @venpai9011 Před 6 měsíci

    Very nice video. Very well presented. Grateful to you!
    Brought back sweet memories of my childhood days in the temple 60 -70 years ago!
    I wonder when was the silver lalki was converted into a Ratha and when did this early morning utsav celebration started.
    Would love to know more about Sanjeeva Music!