ವಕ್ರೀಭವನ -ಲಲಿತಾ ಸಿದ್ಧಬಸವಯ್ಯ

Sdílet
Vložit
  • čas přidán 7. 09. 2024
  • ರೂಪಕಗಳ ಮೂಲಕವೇ ಹಲವು ಸಂಗತಿಗಳನ್ನು ತಮ್ಮ ಕವನಗಳಲ್ಲಿ ಹೇಳುವ ಲಲಿತಾ ಸಿದ್ಧಬಸವಯ್ಯ ಅವರು ಕನ್ನಡದ ಪ್ರಮುಖ ಕವಿ. ಹೆಣ್ಣಿನ ಅಸ್ಮಿತೆಯ ಹುಡುಕಾಟದ ಈ ಕವನ ಹೆಣ್ಣಿನ ಬದುಕಿನ ವಿವಿಧ ಹಂತಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದೆ. ಹದಿಹರೆಯದ ದೇಹ ಸಂಭ್ರಮದಿಂದ ಪ್ರಾರಂಭವಾಗುವ ಈ ಕವನ ಅವಳ ವ್ಯಕ್ತಿತ್ವದ ಹುಡುಕಾಟದೊಂದಿಗೆ ಮುಕ್ತಾಯಗೊಳ್ಳುತ್ತದೆ. ತನ್ನಂತೆಯೇ ಭಿನ್ನ ಬದುಕಿನ ಹಾದಿಯನ್ನು ತುಳಿದ ಅಕ್ಕನ ಬಳಿ ಇಂದಿನ ಹೆಣ್ಣಿನ "ಅಕ್ಕ ಕೇಳವ್ವಾ ನಾನೆಷ್ಟೊಂದು ಕನ್ನಡಿ ಕಂಡೆ" ಎಂಬ ನಿವೇದನೆ ಅರ್ಥಪೂರ್ಣವಾಗಿದೆ. ತನ್ನ ಬದುಕಿನ ಹಂತಗಳನ್ನು ಕಟ್ಟಿಕೊಡುತ್ತಲೇ ತಾನು ಬದುಕುತ್ತಿರುವ ಸಮಾಜದ ಮೌಲ್ಯ ವ್ಯವಸ್ಥೆಯ ವಿಮರ್ಶೆಯೂ ಇಲ್ಲಿದೆ.

Komentáře • 2

  • @siddukolala6082
    @siddukolala6082 Před 3 lety

    ನಮಸ್ಕಾರ ಮೇಡಮ್.
    ನಿಮ್ಮ ವಕ್ರೀಭವನದ ಕವನದ‌ ವಿಶ್ಲೇಷಣೆ ಬಹಳ ಉತ್ತಮವಾಗಿದೆ. ಕವನದ ಓದು ಕೂಡಾ ಬಹಳ ಸೊಗಸಾಗಿತ್ತು. ವಿಷಯದ ವಿಸ್ತರಣೆಯು, ಸ್ಪಷ್ಟ ದನಿ‌‌ ಮತ್ತು ಉಚ್ಛಾರಣೆಯಲ್ಲಿರುವುದರಿಂದ ಹಾಗೂ ಹಂತ ಹಂತವಾಗಿ ವಿಷದಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಸುಲಭ ಗ್ರಾಹ್ಯವಾಗಿದೆ.
    ಅನೇಕ ಧನ್ಯವಾದಗಳು.

    • @vanajaprabhakar5325
      @vanajaprabhakar5325  Před 3 lety +1

      ನಮಸ್ಕಾರ ಸರ್, ತಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು. ಸಾಹಿತ್ಯವನ್ನು ಆಸಕ್ತರಿಗೆ ತಲುಪಿಸುವಲ್ಲಿ ನನ್ನದೊಂದು ಸಣ್ಣ ಪ್ರಯತ್ನ.