MARAVANDI NEMA । ಕಂಬಳದ ಕೋಣ ಮತ್ತು ಮಾಣಿ ಕಲ್ಲಾಗಿ ಮಾರ್ಪಟ್ಟ ಚಾರಿತ್ರಿಕ ಘಟನೆ | Part 3

Sdílet
Vložit
  • čas přidán 12. 09. 2024
  • ಶ್ರೀ ಮಾರವಾಂಡಿ ದೈವದ ನೇಮ, ಮಾರ ಗುತ್ತು- ವೇಣೂರು, ಬೆಳ್ತಂಗಡಿ ತಾಲೂಕು.
    ವೇಣೂರ ಅರಮನೆಯಲ್ಲಿ ಅಣ್ಣ ಪಾಂಡ್ಯಪ್ಪ ಅಜಿಲರು, ತಮ್ಮ ತಿಮ್ಮಣ್ಣರು ಇದ್ದಂತಹ ಸಮಯದಲ್ಲಿ ಬೆಳ್ಳಿಯ ಬಟ್ಟಲು ಮತ್ತು ಇನ್ನಿತರ ವಸ್ತುಗಳು ಕಳವಾಗಿ ಹೋಗುತ್ತದೆ. ಆವಾಗ ಅರಸರು ಯಾರು ಇದನ್ನು ಹುಡುಕಿಕೊಡಬಹುದು ಎಂದು ಕೇಳುವಾಗ, ಮಾರ ಗುತ್ತಿನ ಮಾರಾಳ್ವರ ದೈವ ಮಾರವಂಡಿಯು ಬಹಳ ಪ್ರಭಾವಶಾಲಿ ದೈವ. ಅವರಲ್ಲಿ ಅರಿಕೆ‌ ಮಾಡಿಕೊಂಡರೆ ಕಳವಾದ ವಸ್ತು ಸಿಗಬಹುದು ಎಂದು‌ ಹೇಳುತ್ತಾರೆ. ಮಾರಗುತ್ತಿಗೆ ಒಂದು ಓಲೆ ಕಳುಹಿಸಿಕೊಡುತ್ತಾರೆ. ಅದನ್ನು ಓದಿದ ಮಾರಾಳ್ವರು ಇದು ತನಗೆ ಬಂದ ಓಲೆಯಲ್ಲ, ಮಾರವಂಡಿಗೆ‌ ಬಂದ ಓಲೆ ಎಂದು ಹೇಳಿ ಅದನ್ನು ದೈವದ ಮಂಚಮದಲ್ಲಿ ಇಡುತ್ತಾರೆ. ನಡು ರಾತ್ರಿ ಎದ್ದ ದೈವ ಕಳವಾದ ವಸ್ತುಗಳನ್ನು ಮತ್ತೆ ಅರಮನೆಗೆ ಬಂದು ಸೇರುವಂತೆ ಮಾಡುತ್ತಾನೆ. ಇದನ್ನು ಕಂಡು ಸಂತಸಗೊಂಡ ಅರಸರು ಮಾರಾಳ್ವರಿಗೆ ಮತ್ತೊಂದು ಓಲೆ ಬರೆದು ತಕ್ಷಣ ಅರಮನೆಗೆ‌ ಬರಬೇಕಾಗಿ‌ ಕೇಳುತ್ತಾರೆ. ಅರಮನೆಗೆ ಹೋದ ಮಾರಾಳ್ವರನ್ನು ಸ್ವಾಗತಿಸಿ ಉಪಚರಿಸಿ, ನಿಮ್ಮ ದೈವ ನಮ್ಮ ವಸ್ತುಗಳನ್ನು ಹುಡುಕಿಕೊಟ್ಟ ಸಲುವಾಗಿ ಒಂಭತ್ತು ಮುಡಿ‌ ಬಾಕಿಮಾರು ಗದ್ದೆಯನ್ನು ನಿಮ್ಮ ದೈವಕ್ಕೆ ಬಿಟ್ಟುಕೊಡುತ್ತೇನೆ ಎಂದು ಹೇಳುತ್ತಾರೆ. ಹನ್ನೆರಡು ಮಾಗಣೆಯಲ್ಲಿ ಎತ್ತು ಮತ್ತು ಮಾಣಿಗಳನ್ನು ಬರ ಹೇಳಿ‌ ಆ ಗದ್ದೆಯಲ್ಲಿ ಕಂಬಳಕೋರಿ‌ ಮಾಡಿಸು ಎಂದು ಹೇಳುತ್ತಾರೆ. ಸಂತಸ ಗೊಂಡ ಆಳ್ವರು ಕಂಬಳಕೋರಿಗೆ ಮಾಗಣೆಯಲ್ಲಿ ಹೇಳಿಕೆ ನೀಡಲು ಅರುವ ಬರಯದ ಕುಂಞ ಎಂಬ ಮಾಣಿಯನ್ನು ಕರೆದು ಹೇಳುತ್ತಾರೆ. ಈತ ಹನ್ನೆರಡು ಮಾಗಣೆಗೆಗಳನ್ನು ಸುತ್ತಿ ಎಲ್ಲರಿಗೂ ಹೇಳಿಕೆ ನೀಡುತ್ತಾ ಬರುತ್ತಾನೆ. ನಂತರ ಪಡ್ಯೋಡಿ ಬರ್ಕೆಯಲ್ಲಿ ವಾಸವಿದ್ದ ಮಾರಾಳ್ವರ ಅಣ್ಣನಾದ ಉಮನಾಳ್ವರಲ್ಲಿ ಬಂದು ಕಂಬಳ‌ಕೋರಿಗೆ ಎತ್ತು ಮತ್ತು‌ ಮಾಣಿಯನ್ನು‌ ಕಳುಹಿಸಿಕೊಡಲು ಹೇಳುತ್ತಾನೆ. ಆಗ ಮೊದಲೇ ತಮ್ಮನ‌ ಮೇಲೆ ಕುಪಿತರಾಗಿದ್ದ ಉಮನಾಳ್ವರು‌ ಮತ್ತಷ್ಟು ಕೋಪಗೊಂಡು, ಇಷ್ಟು ವರ್ಷದಲ್ಲಿ ಕರೆಯದ ಮಾರಾಳ್ವ ಈಗ ಕಂಬಳಕೋರಿಗೆ ಕೆರೆಯುತ್ತಿದ್ದಾನ? ಎಂದು ಕೇಳುತ್ತಾರೆ. ನಾನು ಕಂಬಳಕೋರಿಗೆ ಬರುವುದಿಲ್ಲ, ಎತ್ತು ಮಾಣಿಯನ್ನೂ ಕರೆಸುವುದಿಲ್ಲ, ನೀನು ಈಗಲೇ ಇಲ್ಲಿಂದ ಹೋಗು ಎಂದು ಹೇಳುತ್ತಾರೆ. ಅಲ್ಲಿಂದ ಹೊರಟ‌ ಮಾಣಿ ಮಾರಗುತ್ತಿಗೆ ಬಂದು ನಡೆದ ವಿಷಯವನ್ನು ಮಾರಾಳ್ವರಿಗೆ ಹೇಳುತ್ತಾರೆ. ಆಗ ಆಳ್ವರು ನಮಗೇನು ಕಮ್ಮಿಯಿಲ್ಲ, ಬೇಕಾದರೆ ಮಾರವಂಡಿ ಕರೆಸುವನು ಎಂದು ಹೇಳುತ್ತಾರೆ. ನಡು ರಾತ್ರಿಗೆ ಎಂದ ದೈವ‌ ನೇರ ಪಡ್ಯೋಡಿ ಬರ್ಕೆಗೆ ಹೋಗಿ ಪಡಿಪ್ಪಿರೆಗೆ ಒದ್ದು ಮೂರು ಬಾರಿ ಉಮನಾಳ್ವ ಎಂದು ಕರೆಯುತ್ತಾನೆ. ಇದು ದೈವವೇ ಕರೆದಿರುವುದು ಎಂದು ಅರಿತ ಉಮನಾಳ್ವರು. ಕಂಬುಲದ ಕೋರಿಗೆ ಎರಡು ಎತ್ತು ಒಂದು‌ ಮಾಣಿ ಕೊಟ್ಟೆನೆಂದು ಆಗಬಾರದು, ಕೊಡಲಿಲ್ಲವೆಂದೂ ಆಗಬಾರದು ಎಂದು ಸಂಚು ಮಾಡಿ, ಒಂದು ಎತ್ತು‌ ಮತ್ತು ಒಂದು‌ ಹೋರಿಯನ್ನು ಜೊತೆ ಮಾಡಿ‌ ಕಳುಹಿಸಿಕೊಟ್ಟು ಮಹಾಪರಾಧ ಮಾಡುತ್ತಾರೆ. ಎತ್ತು ಮತ್ತು ಹೋರಿಯನ್ನು ಜೊತೆ ಮಾಡಿ ದೈವದ ಕಂಬಲಕ್ಕೆ ಇಳಿಸುವುದು ನಿಷಿದ್ಧ ಮತ್ತು ದೈವಕ್ಕೆ ಅಪಚಾರ‌ ಮಾಡಿದಂತೆ. ಇದನ್ನು ಅರಿತ‌ ಮಾಣಿಯೂ ತಾನು ಈ ಜೊತೆ ಹೋರಿ ಮತ್ತು ಎತ್ತುವನ್ನು ಕಂಬಲಗದ್ದೆಯಲ್ಲಿ ಓಡಿಸಲಾರೆ ಎಂದು ಉಮನಾಳ್ವರಲ್ಲಿ ಹೇಳುವಾಗ ಅವನನ್ನು ಒಕ್ಕಲೆಬ್ಬಿಸುವ‌ ಮಾತನ್ನಾಡಿ ಭಯ‌ ಹುಟ್ಟಿಸಿ‌ ನಂತರ ಅವನ್ನು ಒಪ್ಪುವಂತೆ ಮಾಡಿ ಕಳುಹಿಸುತ್ತಾನೆ. ಹೀಗೆ ಹೋದ ಮಾಣಿ ಕಂಬಳ ನಡೆಯುವ ಗದ್ದೆಗೆ ಎತ್ತು‌ ಮತ್ತು ಹೋರಿಯನ್ನು ಇಳಿಸುವ ಪಚ್ಚೇರು ಮಾರಡ್ಡ ಎಂಬ ಜಾಗದಲ್ಲಿ ಗದ್ದೆಗೆ ಇಳಿವಷ್ಟರಲ್ಲಿ ಎತ್ತು, ಹೋರಿ, ಮಾಣಿ ಮತ್ತು ಬೆತ್ತ ಎಲ್ಲವೂ ಮಾರವಂಡಿಯ ಕೋಪದ‌ ಪ್ರಭಾವದಿಂದ ಕಲ್ಲಾಗಿ ಹೋಗುತ್ತಾರೆ. ಇದನ್ನು ತಿಳಿದ ಉಮನಾಳ್ವರು ಸಿಟ್ಟಿನಿಂದ ಕಲ್ಲಾದ ಎತ್ತು ಹೋರಿಯನ್ನು ಉಳಿಯಿಂದ ಎಬ್ಬಿಸಲು ನಿರ್ಧರಿಸಿ, ಕೊಲ್ಲು‌ ಕೊಲ್ಲಂದಾಯ ಆಚಾರಿಯ ಕೊಟ್ಯಕ್ಕೆ ಹೋಗಿ ಉಳಿಮಾಡಿಸಿಕೊಂಡು ಬಂದು ಕಲ್ಲಾದ ಹೋರಿಯನ್ನು‌ ಕೆತ್ತಲು ಹೋಗುತ್ತಾರೆ. ಆ ಸಮಯದಲ್ಲಿ ಮಾರವಾಂಡಿ ದೈವ ಅವರಿಗೆ ಮಾರಣಾಂತಿಕ ಹೊಟ್ಟೆನೋವು ಹಾಕಿ ಅವರನ್ನು ಕೊಲ್ಲುತ್ತಾನೆ. ನಂತರ ಉಳಿಮಾಡಿಕೊಟ್ಟ ಕೊಲ್ಲಂದಾಯ‌ ಆಚಾರಿಯನ್ನು‌ ಕೊಲ್ಲುತ್ತಾನೆ. ತನಗೆ‌ ಇಷ್ಟಲ್ಲಾ ಅಪಚಾರ ಮಾಡಿ ನನ್ನೊಂದಿಗೆ ಸೆಣೆಸಾಡಲು ನೋಡಿದ ಉಮನಾಳ್ವರ ವಂಶವನ್ನೇ ನಾಶಮಾಡುತ್ತೇನೆ ಎಂದು ಶಪತ ಮಾಡಿದ ದೈವ, ಅಲ್ಲೆಂಜಿಲ,‌ಕೊಯಂದೂರು, ಜಂತೋಡಿ ಗುತ್ತು ಗಳಲ್ಲಿ ಇದ್ದ ಬಂಟ ಸಮುದಾಯದ ಎಲ್ಲರನ್ನೂ‌ ನಾಶಮಾಡಿದ. ತನ್ನ ಮಾರಗುತ್ತಿನ ಮಾರಾಳ್ವರ ಸಮೇತ, ನಂತರದ ಎಲ್ಲಾ ತಲೆಮಾರುಗಳನ್ನು ನಾಶಮಾಡುತ್ತಾ ಬಂದ. ವೇಣೂರ ಪರಿಸರದಲ್ಲಿ ನೂರೊಂದು ಒಕ್ಕಲು, ಉಪ್ಪೆರ್ಲ ಕೇರಿಯಲ್ಲಿ ಸಾವಿರದೊಂದು ಒಕ್ಕಲುಗಳನ್ನು ನಾಶಮಾಡಿದ. ಇನ್ನು ಮುಂದೆ‌ ತನ್ನ ಮೂರು ಗ್ರಾಮದಲ್ಲಿ ಬಂಟ‌ ಸಮುದಾಯದವರಿಗೆ ಉಳಿವಿಲ್ಲದಂತೆ ಆಗಲಿ ಎಂದು ಶಾಪ ಹಾಕಿದ. ಉಮನಾಳ್ವರಿಗೆ ಎತ್ತು‌ ಮತ್ತು ಹೋರಿಯನ್ನು ಮುಸ್ಲಿಂ ಸಮುದಾಯದವರು ಜೊತೆ ಮಾಡಿ ಕೊಟ್ಟ ಕಾರಣ ಅವರಿಗೂ ಹಾಗೂ ಇದೆಲ್ಲಾ ಮೂಡ ನಂಬಿಕೆ ಎಂದು ಉಮನಾಳ್ವರಿಗೆ ಹೇಳಿ ಅವರ ಅಪಚಾರದ ಕೆಲಸಕ್ಕೆ ಪರೋಕ್ಷವಾಗಿ ಕಾರಣರಾದ ಕ್ರಿಸ್ಚಿಯನ್ ಸಮುದಾಯದವರಿಗೂ ಈ ಮೂರ ಗ್ರಾಮದಲ್ಲಿ ಉಳಿವಿಲ್ಲ‌ ಎಂದು ದೈವ ಶಪತ ಮಾಡಿದ. ಅದರಂತೆ‌‌ ಆ ಶಾಪ ಇಂದಿನವರೆಗೂ ‌ನಡೆದುಕೊಂಡು ಬರುತ್ತಿದೆ.
    00:55 ಮಾರ ಗುತ್ತಿನಲ್ಲಿ ಜೈನ ವಂಶಸ್ಥರು ನೆಲೆ ನಿಂತ ಐತಿಹ್ಯ
    02:27 ಮಾರವಾಂಡಿ ದೈವದ ಗಗ್ಗರ ಸೇವೆ
    10:42 ಕಂಬಳದ ಕೋಣ ಸಮೇತ ಮಾಣಿ ಕಲ್ಲಾಗಿ ಮಾರ್ಪಟ್ಟ ಚಾರಿತ್ರಿಕ ಘಟನೆ
    18:15 ದೈವದ ಕೋಪಕ್ಕೆ ತುತ್ತಾದ ಮೂರು ಸಮುದಾಯಗಳು
    21:39 ದೈವದ ಸಿರಿ ನಲಿಕೆ
    Maravandi Nema at Maara Gutthu, Venur - Belthangady Taluk
    PART-1 Link- • History of Maravandi D...
    ಎರಡೂರ ಸತ್ಯ ಮಾರವಾಂಡಿ ಚರಿತ್ರೆ ಭಾಗ- 1
    * ಮೈಸೂರಿನ ಚಾಮುಂಡಿ ಮಾರ ಗ್ರಾಮದಲ್ಲಿ ಮಾರವಾಂಡಿ ದೈವವಾಗಿ ನೆಲೆಯಾದ ಐತಿಹ್ಯ
    * ಶ್ರೀ ಮಾರವಾಂಡಿ ದೈವ ಮಾರ ಗುತ್ತಿಗೆ ಬಂದ ಹಿನ್ನೆಲೆ
    * ದೈವಗಳ ಭಂಡಾರ ಇಳಿಸುವುದು
    * ಮಾರವಾಂಡಿ ದೈವದ ಉಗ್ರ ಆವೇಶ
    * ಅಜಿಲ ಅರಸರ ಪರಂಪರೆ
    PART-2 Link- • Maisandaya Nema | ಮಾರವ...
    ಎರಡೂರ ಸತ್ಯ ಮಾರವಾಂಡಿ ಚರಿತ್ರೆ ಭಾಗ- 2
    * ಮಾರವಾಂಡಿ ಹಾಗೂ ಕೋಟಿ-ಚೆನ್ನಯರ ನಡುವೆ ಜರುಗಿದ ಯುದ್ಧ
    * ಮಹಾಕಾಳಿ ದೈವ ಉಬಾರಿನಲ್ಲಿ ನೆಲೆ ನಿಂತ ಐತಿಹ್ಯ
    * ಮಾರ ಗುತ್ತಿನ ಮೈಸಂದಾಯ ನೇಮ
    Video & Editing:
    Nagaraj Bhat Bantwal
    Sanketh Poojary B.C. Road
    Jithesh Pai Mujooru
    #bhootakola #maravandi #daivakola #nema #kolam
    Please Like this video & subscribe Channel..
    Thank You!
    Join my channel to get access to perks:
    / @nagarajbhat

Komentáře • 124