ಕಾಳಿದಾಸ ಹೆಲ್ತ್ ಅಂಡ್ ಎಜುಕೇಶನ್ ಟ್ರಸ್ಟ್ ರಿ | ಪ್ರೇರಣಾ ಸಮಾರಂಭ. ಡಾ. ವಿಜಯಲಕ್ಷ್ಮಿ ಪರಮೇಶ್ | ಕುರುಬಾಸ್.ಕೋ.ಇನ್

Sdílet
Vložit
  • čas přidán 26. 02. 2021
  • ಪತ್ರಿಕಾ ಹೇಳಿಕೆ -ಪ್ರಕಟಣೆಯ ಕೃಪೆಗಾಗಿ ಮನವಿ.
    1. “ಕನಕ ವೈದ್ಯ ವಿಭೂಷಣ”, ಕನಕ ರತ್ನ, ಕನಕ ವೈದ್ಯ ಶ್ರೀ, ಅಹಲ್ಯಾ ವೈದ್ಯ ರತ್ನ ಹಾಗೂ ಕನಕ ವೈದ್ಯ ಗುರು ಪ್ರಶಸ್ತಿ ಪ್ರದಾನ ಸಮಾರಂಭ
    2. ಸರ್ಕಾರಿ ಮೆರಿಟ್ ಕೋಟಾದಲ್ಲಿ ಎಂಬಿಬಿಎಸ್ ಸೀಟು ಪಡೆದ 105 ವಿದ್ಯಾರ್ಥಿಗಳಿಗೆ ಸನ್ಮಾನ
    ಬೆಂಗಳೂರು: ಕಾಳಿದಾಸ ಹೆಲ್ತ್ ಅಂಡ್ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ 2020-21 ಶೈಕ್ಷಣಿಕ ಸಾಲಿನಲ್ಲಿ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಎಂಬಿಬಿಎಸ್ ಸೀಟು ಪಡೆದು ಸರ್ಕಾರಿ ಮೆರಿಟ್ ಕೋಟಾದಲ್ಲಿ ಪಡೆದ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರೇರಣಾ ಸಮಾರಂಭ ಹಾಗು ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಮಾಜದ ಹಿರಿಯ ವೈದ್ಯರುಗಳಿಗೆ “ಕನಕ ವೈದ್ಯ ವಿಭೂಷಣ”, ಕನಕ ರತ್ನ, ಕನಕ ವೈದ್ಯ ಶ್ರೀ, ಅಹಲ್ಯಾ ವೈದ್ಯ ರತ್ನ ಹಾಗೂ ಕನಕ ವೈದ್ಯ ಗುರು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
    ಈ ಸಮಾರಂಭ ಫೆಬ್ರವರಿ 28 ರಂದು ಭಾನುವಾರ ದಂದು ಬೆಂಗಳೂರಿನ ಶ್ರೀ ಸಾಯಿ ಕಲಾ ಮಂದಿರ, ಕೋದಂಡ ರಾಮ ದೇವಸ್ಥಾನ ಸಂಕೀರ್ಣ, ಹೆಚ್.ಬಿ.ಆರ್. ಲೇಔಟ್, 1ನೇ ಹಂತ, 1ನೇ ಬ್ಲಾಕ್, ಕಾಚರಕನಹಳ್ಳಿ ದಕ್ಷಿಣ ಅಯೋಧ್ಯ ಇಲ್ಲಿ ನಡೆಯಲಿದೆ.
    ಪ್ರಶಸ್ತಿ ಪುರಸ್ಕøತರಿಗೆ ಮತ್ತು 105 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
    ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಹೆಸರು ವಿವರಗಳು:
     ಹಿರಿಯ ವೈದ್ಯರಾದ ಡಾ. ಪರಮೇಶ್ ಶ್ವಾಸಕೋಶ ತಜ್ಞ ಅವರಿಗೆ - “ಕನಕ ವೈದ್ಯ ವಿಭೂಷಣ ಪ್ರಶಸ್ತಿ”ಗೆ ನೀಡಿ ಸನ್ಮಾನಿಸಲಾಗುವುದು.
     ಮಹಾರಾಷ್ಟ್ರದ ಧನಗಲ್ ಸಮಾಜದ ಡಾ. ಸಂದ್ಯಾ ಸತೀಶ್ ಕಡ್ಸೆ ಮಕ್ಕಳ ತಜ್ಞರು ಅವರು- ತಾಯಿ ಹಾಲಿನ ಬ್ಯಾಂಕ್ ಸ್ಥಾಪಿಸಿದ ಅವರಿಗೆ “ಅಹಿಲ್ಯಾ ವೈದ್ಯ ರತ್ನ” ಪ್ರಶಸ್ತಿಯನ್ನು ನೀಡಲಾಗಿದೆ.
     ಡಾ. ವೀರಣ್ಣ ಎನ್. ಪೂರ್ವ ಐಎಂಎ ಅಧ್ಯಕ್ಷರಿಗೆ -ಕನಕ ವೈದ್ಯರತ್ನ ಪ್ರಶಸ್ತಿ ನೀಡಲಾಗಿದೆ.
     ಡಾ. ಎಸ್ ಸುರಾಮೆ ಗೋವಾ ಅವರಿಗೆ -ಕನಕ ವೈದ್ಯಶ್ರೀ ನೀಡಲಾಗಿದೆ.
     ಡಾ. ಲೀಲಾ, ಶ್ರೀನಗರ ನರ್ಸಿಂಗ್ ಹೋಂ- ಕನಕ ವೈದ್ಯಶ್ರೀ
     ಡಾ. ದೇವಕಿ ರಂಗಸ್ವಾಮಿ, ಪ್ರೊ. ಮತ್ತು ಹೆಚ್‍ಒಡಿ, ಮೆಡಿಕಲ್ ಕಾಲೇಜು (ಬಯೋಕೆಮಿಸ್ಟ್ರಿ) ಚಾಮರಾಜನಗರ
     ಡಾ. ಸೀಮಾ, ಪ್ರೊ. ಮತ್ತು ಹೆಚ್‍ಒಡಿ, ಇಎಸ್‍ಐ, ಮೆಡಿಕಲ್ ಕಾಲೇಜು, (ಅನಾಟಮಿ) ಬೆಂಗಳೂರು
     ಪ್ರೊ. ಕೆ. ಮಲ್ಲೇಶಪ್ಪ ಇಎಸ್‍ಐ, ಮೆಡಿಕಲ್ ಕಾಲೇಜು, (ಫಿಜಿಯಾಲಜಿ) ಬೆಂಗಳೂರು
    ಸರ್ಕಾರಿ ಮೆರಿಟ್ ಎಂಬಿಬಿಎಸ್ ಸೀಟು ಪಡೆದ 105 ವಿದ್ಯಾರ್ಥಿಗಳಿಗೆ (ಸ್ಟೇತೋಸ್ಕೋಫ್ ಹಾಗೂ ಮಡಿಕಲ್ ಬುಕ್, ಪದಕ ನೀಡಿ ಸನ್ಮಾನ ಮಾಡಲಾಗುವುದು. ಈ 105 ವಿದ್ಯಾರ್ಥಿಗಳಲ್ಲಿ ಆಯ್ಕೆಯಾದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪುಸ್ತಕಗಳನ್ನು ನೀಡಲಾಗುವುದು.
    ಈ ಸಮಾರಂಭವನ್ನು ಕನಕ ಗುರುಪೀಠದ ಸ್ವಾಮೀಜಿ ಶ್ರೀ ಶ್ರೀ ಶ್ರೀ ಈಶ್ವರಾನಂದ ಸ್ವಾಮೀಜಿ ಹಾಗೂ ಶ್ರೀ ಶ್ರೀ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಅವರ ದಿವ್ಯ ಸನ್ನಿಧಿಯಲ್ಲಿ ನಡೆಸಲಾಗುವುದು.
    ಭಾಗವಹಿಸುವ ಮುಖ್ಯ ಅತಿಥಿಗಳು:
    ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವರಾದ ಎಂ.ಟಿ.ಬಿ ನಾಗರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
    ಮುಖ್ಯ ಅತಿಥಿಗಳು:
    ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್.
    ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವರಾದ ಶಂಕರ್,
    ಶಾಸಕರಾದ ಯತೀದ್ರ ಸಿದ್ದರಾಮಯ್ಯ
    ಮಾಜಿ ಸಚಿವರಾದ ಹೆಚ್.ಎಂ. ರೇವಣ್ಣ
    ಮಾಜಿ ಸಚಿವರಾದ ಆರ್. ಕೃಷ್ಣಪ್ಪ
    ಶಾಸಕರಾದ ಬೈರತಿ ಸುರೇಶ್
    ಮಾಜಿ ಕುರುಬ ಸಂಘದ ಅಧ್ಯಕ್ಷರಾದ ಲಿಂಗಪ್ಪ, `
    ಆಚಾರ್ಯ ಡಾ. ನಾಗರಾಜು ಸುವರ್ಣ ಮುಖಿ ಧಾಮ,
    ಡಾ. ಭೀಮಾ ಶಂಕರ್ ಐಪಿಎಸ್ ಅಧಿಕಾರಿ
    ಕಾಳಿದಾಸ ಹೆಲ್ತ್ ಅಂಡ್ ಎಜ್ಯುಕೇಷನ್ ಟ್ರಸ್ಟ್ ಸಂಸ್ಥಾಪಕರಾದ ಡಾ. ವಿಜಯಲಕ್ಷ್ಮಿ ಪರಮೇಶ್ ಮತ್ತು ಬೆಂಗಳೂರು ಡಯಾಬಿಟಿಕ್ ಸೆಂಟರ್‍ನ ಮಧುಮೇಹ ತಜ್ಞರಾದ ಡಾ. ಪರಮೇಶ್ ಅವರು ಭಾಗವಹಿಸುವರು.
    ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವರಾದ ಈಶ್ವರಪ್ಪ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪುಸ್ತಕಗಳನ್ನು ವಿತರಣೆ ಮಾಡಲು ಆರ್ಥಿಕ ನೆರವು ನೀಡಿದ್ದಾರೆ.

Komentáře • 30

  • @ravidilip1987
    @ravidilip1987 Před 3 lety +4

    ತುಂಬ ಅಪರೂಪದ ಮತ್ತು ಒಳ್ಳೆಯ ಕೆಲಸ ಮೇಡಂ, ನೀವು ಮಾಡುವ ಪ್ರತಿ ಕೆಲಸದಲ್ಲೂ ದೇವರು ನಿಮ್ಮ ಜೊತೆ ಇದ್ದು ಕೈ ಹಿಡಿದು ನೆಡಸಲಿ :-)

  • @PraveenKumar-ss4io
    @PraveenKumar-ss4io Před 3 lety +4

    Jaii kurubas jaii kanaka jai s boss

  • @sharanagoudahiregoudra4369
    @sharanagoudahiregoudra4369 Před 11 měsíci

    Doctors your big help of kurubar samaj God give us to health and wealth for you medium very congratulations 🎉🎉🎉

  • @anandncc6687
    @anandncc6687 Před 8 měsíci

    ಮೇಡಂ ಕೇವಲ ವಕೀಲರಿಗೆ etc ಇದ್ದರೆ ಅವರಿಗೂ ಕೊಡುವ ವ್ಯವಸ್ಥೆ ಮಾಡಿ. ನಿಮ್ಮ ನಮ್ಮ ಸಮುದಾಯದಿಂದ ಮತ್ತು ವೈಯಕ್ತಿಕವಾಗಿ ತುಂಬು ಹೃದಯದ ಧನ್ಯವಾದಗಳು

  • @gaddigadderiabhotiaworld
    @gaddigadderiabhotiaworld Před 3 lety +1

    Shepherd unity zindabad

  • @somegowdasomegowda7985
    @somegowdasomegowda7985 Před 3 lety +2

    ನಾವು ಯೂನಿಟಿ ಆಗಲೇ ಬೇಕು, ಇವಾಗಲ್ಲದೆ ಇನ್ಯಾವಾಗ 😎 ಏಳಿ ಎದ್ದೇಳಿ ಕುರುಬ ಗೌಡರೇ....☝👊💪

  • @sharanabasavadj8129
    @sharanabasavadj8129 Před 3 lety +1

    ತುಂಬಾ ಒಳ್ಳೆಯ ಕಾರ್ಯಕ್ರಮ ಮಾಡ್ತಾ ಇದೀರಾ ಮೇಡಂ..👏👏👏 ಈ ಪ್ರೋತ್ಸಾಹ ಕಾರ್ಯಕ್ರಮದಿಂದ ಎಷ್ಟೋ ಬಡಮಕ್ಕಳಿಗೆ ಸಹಾಯವಾಗುತ್ತೆ ಮತ್ತು ಸಲಹೆ ಸಿಕ್ಕ ಹಾಗೆ ಆಗುತ್ತೆ
    ತುಂಬಾ ಧನ್ಯಾದಗಳು ....
    ನಾವು ನಿಮ್ಮ ಜೊತೆ ಇರುತ್ತವೆ..

  • @beerappashintra7565
    @beerappashintra7565 Před 3 lety +5

    We want to free coaching KAS and PSI level

  • @gouthamh1
    @gouthamh1 Před 3 lety +1

    Good job education is important at the same time we kurubas should think on unemployment issues. We can help example many civil contractors can guide some interested youths.
    Electric repairs basic kitchen appliances more than education experience is important etc etc people who have experience should think about helping each other.

  • @babvbr5664
    @babvbr5664 Před 3 lety +2

    Good job I support you

  • @nataraja.netsurfkannada8550

    Good job mam

  • @dharanidhaya945
    @dharanidhaya945 Před 3 lety +3

    Very very good job madam 🙏🙏🙏

  • @chandrashekarparasanayakar4681
    @chandrashekarparasanayakar4681 Před 4 měsíci +1

    😮😮😮

  • @g.b.dharmeshg.b.dharmesh3513

    Super

  • @MalingarayaSir
    @MalingarayaSir Před 3 lety +2

    Good work madam jii

  • @smbadad1348
    @smbadad1348 Před 3 lety

    👌👌🙏🙏

  • @jagaeeshmahadevu882
    @jagaeeshmahadevu882 Před 3 lety

    🙏🙏🙏👍👍👍

  • @akashnimbur9729
    @akashnimbur9729 Před 11 měsíci

    👏👏

  • @h.v.n.family.5499
    @h.v.n.family.5499 Před 3 lety

    💐💐💐💐

  • @bharamappasingadi3888
    @bharamappasingadi3888 Před 2 lety

    🙏

  • @shivakumarma1403
    @shivakumarma1403 Před 3 lety +2

    Very nice

  • @PraveenKumar-ss4io
    @PraveenKumar-ss4io Před 3 lety +2

    🙏🙏🙏

  • @chandrashekarparasanayakar4681

    😮😮

  • @jagadishbhangi1258
    @jagadishbhangi1258 Před 3 lety

    Good thoughts madam 🙏🙏

  • @lokeshm626
    @lokeshm626 Před 3 lety

    🙏🙏🙏🙏🙏🙏💐💐💐💐💐

  • @beerappashintra7565
    @beerappashintra7565 Před 3 lety +1

    Kuraba compitate odata eror gati enu madam.y only medical students

  • @prashanthkumar7791
    @prashanthkumar7791 Před 3 lety

    Please mention timings

  • @somshekarwwwsomshekar1046

    nimma Jotege naavu iddeve nimma samuste no beku

  • @beereshtr5036
    @beereshtr5036 Před 3 lety

    Super