ಪಂಪಭಾರತದ ಕರ್ಣ

Sdílet
Vložit
  • čas přidán 29. 08. 2024
  • ಕನ್ನಡದ ಆದಿ ಕವಿ ಪಂಪ. ಮಹಾಭಾರತದ ಕಥೆಗೆ ಸಮಕಾಲೀನ ಜೀವನ ದೃಷ್ಟಿ ಕೊಟ್ಟು. ತನ್ನ ಕಾಲದ ಇತಿಹಾಸದ ಹಿನ್ನೆಲೆಯಲ್ಲಿ ಮಹಾಭಾರತ ವನ್ನು ಬಣ್ಣಿಸಿದ. ತನ್ನ ಆಶ್ರಯದಾತ ಮಿತ್ರನನ್ನು (ಅರಿಕೇಸರಿಯನ್ನು) ಅನನ್ಯವಾಗಿ ಹೊಗಳಿ ಕಾವ್ಯ ರಚನೆಯ ಒಂದು ಹೊಸ ಸಂಪ್ರದಾಯದ ನಿರ್ಮಾಣ ಮಾಡಿದ. ಮುಂದೆ ಇದು ರನ್ನನಿಗೂ ಆದರ್ಶವಾಯಿತು.
    ಪಂಪಭಾರತದಲ್ಲಿ ಕರ್ಣನೆ ಪಂಪನ ಅರಿಕೇಸರಿ. ಸಂಪ್ರದಾಯ ಅಡ್ಡಬಾರದೇ ಇದ್ದರೆ ಕರ್ಣನಿಗೇ ತನ್ನರಸನನ್ನು ‘ತಗುಳ್ಚಿ’ ಕಾವ್ಯ ಬರೆಯುತ್ತಿದ್ದನೇನೋ. ಕುರುಕ್ಷೇತ್ರ ಯುದ್ಧವನ್ನು ಪಕ್ಷದ ನಾಯಕನಂತಿರುವ ಕಿರೀಟಿಗೆ ಅರಿಕೇಸರಿಯನ್ನು ಹೋಲಿಸುವುದು ಅನಿವಾರ್ಯವಾಗಿತ್ತು. ಆದರೆ ಸಂದರ್ಭ ಸಿಕ್ಕಾಗಲೆಲ್ಲ ಹುಚ್ಚೆದ್ದು ಕರ್ಣನನ್ನು ಹೊಗಳಿದ. ‘ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನ್ ಒಂದೆ ಚಿತ್ತದಿ ನೆನೆವೊಡೆ ಕರ್ಣನಂ ನೆನೆಯ…’ ಎಂಬ ಬಹು ಪ್ರಸಿದ್ಧ ವೃತ್ತದಲ್ಲಿ ಕರ್ಣನ ಒಂದೊಂದೇ ಗುಣಗಳನ್ನು ಹೇಳಿ ‘ಕರ್ಣನೊಳ್ ಅರ್ದೊರೆ’ ಎನ್ನುತ್ತ ಅವನನ್ನು ಹೋಲಿಕೆಯ ಪರಿಧಿಯಿಂದ ಹೊರಗೆ ತರುತ್ತಾನೆ.
    ಮಾಹಿತಿಕೃಪೆ : chilume.com/?p=...
    ಲೇಖಕರು : ಡಾ || ವಿಶ್ವನಾಥ ಕಾರ್ನಾಡ
    ಲೇಖನ : ‘ಪಂಪಭಾರತ’ದ ರಾಜನೀತಿ

Komentáře • 2