#audiobook

Sdílet
Vložit
  • čas přidán 27. 07. 2024
  • "ಗಂಗಾಮಾಯಿ" ಊರ ಕೆರೆಯ ಹೆಸರು. ಕೆರೆ ಎಂಬ ಪ್ರತಿಮೆಯೇ ಜಡಾ ವಸ್ತೆಗಳನ್ನು ಧ್ವನಿಸುವಂಥದ್ದು. ಇದು ಹರಿಯಬೇಕಾದ ನೀರು ಕೆರೆಯಾಗಿ ಸ್ಥಗಿತಗೊಂಡ ಸ್ಥಿತಿಯನ್ನು ಸಂಕೇತಿಸುತ್ತದೆ. ಪಾಪಗಳನ್ನು ತೊಳೆಯುವ ಗಂಗೆ ಹರಿಯಲಾಗದೆ ಮಡುಗಟ್ಟಿದ ಪಾಪಗಳ ಆಗರವಾದ ಸ್ಥಿತಿಯನ್ನು ಈ ಕವಿತೆ ಕಟ್ಟಿಕೊಡುತ್ತದೆ. ಗಂಗೆಯ ಒಡಲಿನಲ್ಲಿ ನಡೆಯುವ ದೈನಂದಿನ ಕ್ರಿಯೆಗಳು, ಅನ್ಯಾಯಗಳು, ಪಾಪಕರ ಘಟನೆಗಳಿಂದ, ಕೃತ್ಯಗಳಿಂದ ಗಂಗೆಯೂ ಮಲಿನಗೊಂಡ ಸ್ಥಿತಿಯನ್ನು ಪ್ರಕಟಿಸುತ್ತಾ ಸ್ಥಳೀಯ ಸಂಸ್ಕೃತಿಯ ಮಲಿನಾವಸ್ಥೆ ಗಳನ್ನು ಎದುರಾಗಿಸುವುದು ಗಂಗಾಮಾಯಿ ಕವಿತೆಯ ಅನನ್ಯತೆಯಾಗಿದೆ. ಎಲ್ಲ ಬಗೆಯ ಕೊಳೆ,ಪಾಪಗಳನ್ನು ತೊಳೆದು ಶುಭ್ರಗೊಳಿಸಬೇಕಾದ ಗಂಗೆ ಅಶುಚಿಯಾಗಿ, ಅಶುಭ್ರಳಾಗಿ ಕೊಳೆತು ಹೀನಾವಸ್ಥೆಗೆ ಒಳಗಾದುದರ ಬಗೆಗೆ ಇಲ್ಲಿ ಒಮ್ಮೆಗೆ ವಿಷಾದ ಮತ್ತು ವ್ಯಂಗ್ಯ ಪ್ರಕಟವಾಗುತ್ತದೆ. ಮಡುಗಟ್ಟಿದ ಪರಂಪರೆಯ ಮೌಲ್ಯಗಳನ್ನು ಹಿಡಿದಿಡಲು ಕಂಬಾರರ ಸಂವೇದನೆ ಸೃಷ್ಟಿಸುವ ರೂಪಕ ಪ್ರತಿಮೆಗಳು ಓದುಗನನ್ನು ದಂಗುಬಡಿಸುತ್ತವೆ.
    Time Stamps :-
    0:00 - Intro
    0:11 - Gangamaayi
    4:00 - 1st paragraph
    5:10 - 2nd paragraph
    6:20 - 3rd paragraph
    7:29 - 4th paragraph
    8:18 - 5th paragraph
    9:08 - Elucidation
    17:17 - Thank You for Watching

Komentáře • 23