Someshwara shataka | ಸೋಮೇಶ್ವರ ಶತಕ

Sdílet
Vložit
  • čas přidán 10. 10. 2020
  • ಸೋಮೇಶ್ವರ ಶತಕ
    ಪಾಲ್ಕುರಿಕೆ ಸೋಮನಾಥ
    ಪದ್ಯಭಾಗ : " ಕೆಳೆಯೇ ಸರ್ವರೊಳುತ್ತಮಂ "
    ಮುಕುರಂ ಕೈಯೊಳಿರಲ್ಕೆ ನೀರ ನೆರಳೇಕೈ ಕಾಮಧೇನಿರ್ದುಮೂ | ಟಕೆ ಗೊಡ್ಡಾಕಳನಾಳ್ವರೇ ಗುಣಯುತ‌ರ್ ಪಾಲುಂಡು ಮೇಲುಂಬರೇ || ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ | ಸಖರಿಂದುನ್ನತ ವಸ್ತುವೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ॥೧॥
    ಕವಿಯೇ ಸರ್ವರೊಳುತ್ತಮಂ ಕನಕವೇ ಲೋಹಂಗಳೊಳ್ ಶ್ರೇಷ್ಠ ಜಾ|ಹ್ನವಿಯೇ ತೀರ್ಥದೊಳುನ್ನತಂ ಗರತಿಯೇ ಸ್ತ್ರೀಜಾತಿಯೊಳವೆಗ್ಗಳಂ || ರವಿ ಮುಖ್ಯಂ ಗ್ರಹವರ್ಗದೊಳ್ ರಸಗಳೊಳ್ ಶೃಂಗಾರವೇ ಬಲ್ಮೆಕೇಳ್| ಶಿವನೇ ದೇವರೊಳುತ್ತಮಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ|| ೨॥
    ರವಿಯಾಕಾಶಕ್ಕೆ ಭೂಷಣಂ ರಜನಿಗಾ ಚಂದ್ರಂ ಮಹಾಭೂಷಣಂ | ಕುವರಂ ವಂಶಕ್ಕೆ ಭೂಷಣಂ ಸರಸಿಗಂಭೋ ಜಾತಗಳ್ ಭೂಷಣಂ || ಹವಿ ಯಜ್ಞಾಳಿಗೆ ಭೂಷಣಂ ಸತಿಗೆ ಪಾತಿವ್ರತ್ಯವೇ ಭೂಷಣಂ | ಕವಿಯಾಸ್ಥಾನಕ್ಕೆ ಭೂಷಣಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ॥೩॥
    ಹರನಿಂದುರ್ವಿಂಗೆ ದೈವವೇ ಕಿರಣಕಿಂದುಂಬಿಟ್ಟು ಸೊಂಪುಂಟೆಪೆ | ತ್ತರಿಗಿಂತುಂಟೆ ಹಿತರ್ಕಳುಂ ಮಡದಿಯಿಂ ಬೇರಾಪ್ತರಿನ್ನಿರ್ಪರೇ || ಸರಿಯೇ ವಿದ್ಯಕ್ಕೆ ಬಂಧು ಮಾರನಿದಿರೊಳ್ ಬಿಲ್ಲಾಳೆ ಮೂಲೋಕದೊಳ್ ಗುರುವಿಂದುನ್ನತ ಸೇವ್ಯನೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ |।೪।|
    ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ ಮಾಡದಂ । ನಿಜ ಮಂತ್ರೀಶ್ವರ ತಂದೆತಾಯಿ ಸಲಹಲ್ ಬಲ್ಲಾತನೇ ಧಾರ್ಮಿಕಂ || ಭಜಕಂ ದೈವದ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ | ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ॥೫॥
    ಧರಣೀಶಂ ಧುರ ಧೀರನಾಗೆ ಧನಮುಳ್ಳಂ ತ್ಯಾಗಿಯಾಗಲ್ ಕವಿ | ಶ್ವರ ಸಂಗೀತದಿ ಜಾಣನಾಗೆ ಸುಕಲಾಪ್ರೌಢಂಗಿರಲ್ ಪ್ರೌಢವೆಣ್ || ಬರೆವಂ ಧಾರ್ಮಿಕನಾಗೆ ಮಂತ್ರಿ ಚತುರೋಪಾಯಂಗಳಂ ಬಲ್ಲೊಡಂ | ದೊರೆವೋಲ್ ಚಿನ್ನಕೆ ಸೌರಭಂ ಹರಹರಾ ಶ್ರೀಚೆನ್ನ ಸೋಮೇಶ್ವರಾ||೬||
    ಸವಿವಣ್ಣಲ್ಲಿ ಮಾವು ಸರ್ವರಸದೊಳ್ ಶೃಂಗಾರ ಸಂಭಾರದೊಳ್ | ಲವಣಂ ಕೇಳಲು ಬಾಲಭಾಷೆ ಸಿರಿಯಲ್ಲಾರೋಗ್ಯ ದೈವಂಗಳೊಳ್ || ಶಿವಬಿಲ್ಲಾಳ್ಗಳೊಳಂಗಜಂ ಜನಿಸುವಾ ಜನ್ಮಂಗಳೋಳ್ ಮಾನುಷಂ | ಕವಿತಾವಿದ್ಯೆ ಸುವಿದ್ಯೆಯೊಳ್ ಹರಹರಾ ಶ್ರೀಚೆನ್ನ ಸೋಮೇಶ್ವರಾ||೭||
    ಮಳೆಯೇ ಸರ್ವಜನಾಶ್ರಯಂ ಶಿವನೇ ದೇವರ್ಕಳ್ಗೆ ತಾನಾಶ್ರಯಂ | ಬೆಳೆಯೇ ಸರ್ವರ ಜೀವನಂ ಬಡವನೇ ಸರ್ವರ್ಗೆಸಾಧಾರಣಂ || ಬಳೆಯೇ ಸರ್ವ ವಿಭೂಷಣಕ್ಕೆ ಮೊದಲೈ ಪುತ್ರೋತ್ಸವಂ ಸೂತ್ಸವಂ | ಕೆಳೆಯೇ ಸರ್ವರೊಳುತ್ತಮಂ ಹರಹರಾ ಶ್ರೀಚೆನ್ನ ಸೋಮೇಶ್ವರಾ|೮||

Komentáře • 22

  • @s.b.hiremathhiremath7960

    🙏

  • @manojgowdakamsa7456
    @manojgowdakamsa7456 Před 2 lety +2

    Sir china da enondu mukha yee patana explain madi sir

  • @pavidollycreations387
    @pavidollycreations387 Před 3 lety +1

    ತುಂಬಾ ಅರ್ಥ ಗರ್ಭಿತವಾಗಿದೆ sir wonderful sir

  • @bhagyammam3348
    @bhagyammam3348 Před 2 lety

    Tq sir

  • @prabhudevac2057
    @prabhudevac2057 Před 3 lety +1

    ತುಂಬಾ ಅರ್ಥ ಗರ್ಭಿತವಾಗಿದೆ ಸರ್

  • @pavidollycreations387
    @pavidollycreations387 Před 3 lety

    Im ur big fan sir i love ur voice sir we are very lucky sir neev mado paata andhre nang thumbaane ista sir

  • @RaghavendraRayalapad
    @RaghavendraRayalapad Před 3 lety

    ಗುರುಗಳೇ ನಮಸ್ಕಾರ. ಹೃದ್ಯ ನಿರೂಪಣೆ. ಸೊಗಸಾಗಿ ಸರಳವಾಗಿ ಉತ್ತಮ ಪದ್ಯಗಳನ್ನು ಕೊಟ್ಟು ಉಪಕೃತರಾದಿರಿ. ಪ್ರೀತಿಪೂರ್ವಕ ಧನ್ಯವಾದಗಳು.🎊😊🙏

    • @Hasavigannada
      @Hasavigannada  Před 3 lety

      ತುಂಬಾ ಖುಷಿಯಾಯಿತು ನಿಮ್ಮ ಮೆಸೇಜ್ ನೋಡಿ, ಧನ್ಯವಾದಗಳು ರಾಘವೇಂದ್ರ

  • @ruchi5040
    @ruchi5040 Před 3 lety

    Osm sir...u r helping us a lot

  • @rachugombee2647
    @rachugombee2647 Před 3 lety

    Tq u so much sir its esay to understand sir tq u so much sir.....

  • @ushabkushaananth3906
    @ushabkushaananth3906 Před 2 lety

    Wish to hear some more🙏🙏

  • @mruthyunjayah9237
    @mruthyunjayah9237 Před 3 lety

    ಮಧುರ ಅಭಿವ್ಯಕ್ತಿ..

    • @Hasavigannada
      @Hasavigannada  Před 3 lety

      ತುಂಬಾ ಧನ್ಯವಾದಗಳು ಮೃತ್ಯುಂಜಯ

  • @vinayg.v.naveen773
    @vinayg.v.naveen773 Před 3 lety

    Super sir

  • @keerthibanari9731
    @keerthibanari9731 Před 3 lety

    👏👏👏👏

  • @chanakyan715
    @chanakyan715 Před 3 lety

    Thumba chennagi ide sir

  • @ruchi5040
    @ruchi5040 Před 3 lety

    Sir permeya bittu nirmalamathiyagu poem explain madi sir..
    Itz my request

  • @shwethak946
    @shwethak946 Před 3 lety

    Super voice sir