ರಾಮನ್ ಸತ್ತ ಸುದ್ದಿ | ಕೆ. ಎಸ್. ನಿಸಾರ್ ಅಹಮದ್

Sdílet
Vložit
  • čas přidán 7. 09. 2024
  • ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ yt.orcsnet.com...
    ಕೆ. ಎಸ್. ನಿಸಾರ್ ಅಹಮದ್ ತಾವೇ ಓದಿರುವ ಅವರು ಐದು ಪ್ರಮುಖ ಕವಿತೆಗಳು ಇಲ್ಲಿವೆ . ಇದು ಕರ್ನಾಟಕ ಸಾಹಿತ್ಯ ಅಕಾಡೆಮಿಯ 'ಸ್ವಂತ ಕವಿತೆಯ ಓದು' ಯೋಜನೆಯಲ್ಲಿ ಪ್ರಕಟವಾಯಿತು. ಅಗಲಿದ ಹಿರಿಯರಿಗೆ ಗೌರವಪೂರ್ವಕ ನಮನಗಳು.
    ರಾಮನ್ ಸತ್ತ ಸುದ್ದಿ ( ಸಂಕಲನ : ನಾನೆಂಬ ಪರಕೀಯ )
    ನಮ್ಮ ಸುತ್ತಲಿನ ಲೌಕಿಕ ಜಗತ್ತು ಅತ್ಯಂತ ಜಡವಾಗಿದೆ. ಸೂಕ್ಷ್ಮತೆಯ ಗ್ರಹಿಕೆಗಳ ಚೈತನ್ಯವನ್ನು ಕಳೆದುಕೊಂಡ ಈ ಜಡ ಜಗತ್ತಿಗೆ ತನ್ನ ಸುತ್ತ ಏನು ನಡೆಯುತ್ತಿದೆ ಎಂಬ ಪ್ರಜ್ಞೆ ಇಲ್ಲ. ಅದರಲ್ಲೂ ಭಾರತದ ಸಾಮಾಜಿಕ ಪರಿಸ್ಥಿತಿ ಹೀನಾಯವಾಗಿ ಜಡಗೊಂಡಿರುವುದನ್ನು ರಾಮನ್ ಸತ್ತ ಸುದ್ದಿ ಕವಿತೆಯಲ್ಲಿ ಕವಿ ನಿಸಾರ್ ಅಹಮದ್ ಪ್ರತಿಪಾದಿಸುತ್ತಾರೆ. ಸಾಮಾನ್ಯ ಜನ ತಮ್ಮ ಸುತ್ತ ನಡೆಯುವ ಯಾವ ವಿದ್ಯಮಾನಗಳ ಬಗ್ಗೆಯೂ ಅಷ್ಟಾಗಿ ತಲೆಕೆಡಿಸಿಕೊಳ್ಳಲಾರರು ಎಂಬುದಕ್ಕೆ ಈ ಕವಿತೆಯಲ್ಲಿ ಬರುವ ಹನುಮ ಸಾಕ್ಷಿಯಾಗುತ್ತಾನೆ. ಹನುಮ ಭಾರತದ ಅನಕ್ಷರಸ್ತ, ಶ್ರಮಿಕ ವರ್ಗಕ್ಕೆ ಸೇರಿದ ಶ್ರೀಸಾಮಾನ್ಯ ವ್ಯಕ್ತಿಯ ಪ್ರತಿನಿಧಿಯಾಗಿದ್ದಾನೆ. ಕವಿತೆಯ ನಿರೂಪಕನಿಗೆ ರಾಮನ್ ಸತ್ತ ಸುದ್ದಿ ಒಂದು ಆಘಾತಕಾರಿ ಸಂಗತಿ. ಹಳ್ಳಿಯ ಹಾಡುಗಳ ಅಶಾಸ್ತ್ರೀಯ ಗೀತದ ಮಟ್ಟುಗಳಲ್ಲಿ ಕಳೆದುಹೋದ ಹಾಗೂ ತನ್ನದೇ ರೀತಿಯ ದೈನಂದಿನ ಜೀವನದ ಕಟ್ಟುಪಾಡುಗಳಲ್ಲಿ ಮುಳುಗಿಹೋದ ಹನುಮನ ಅಶಿಕ್ಷಿತ ಅರಿವಿಗೆ ನಿರೂಪಕನ ತಳಮಳ ಅರ್ಥವಾಗುವುದಿಲ್ಲ. ಅವನಿಗೆ ಬಾಳುವ ಪ್ರಶ್ನೆ ದೊಡ್ಡದು. ಗದ್ದೆ, ಧಣಿ, ಹೆಂಡರು ಮಕ್ಕಳು, ದೇವರ ಗ್ರಾಮ್ಯ ಕಲ್ಪನೆ, ಊರಿನ ಪುಡಾರಿ ಇವಿಷ್ಟೇ ಅವನ ಜಗತ್ತು. ಇಷ್ಟರಲ್ಲೇ ಹನುಮ ಅಲ್ಪತೃಪ್ತನಾಗಿದ್ದಾನೆ. ಅವನಿಗೆ ರಾಮನ್ ಸತ್ತರು ಅಷ್ಟೇ, ರಸೆಲ್ ಸತ್ತರು ಅಷ್ಟೇ. ತನ್ನದಲ್ಲದ ಹೊರಜಗತ್ತಿನ ಸಾವು ನೋವು ಸಂಕಟಗಳು ಅವನನ್ನು ಬಾಧಿಸಲಾರವು. ಆಧುನಿಕ ವಿದ್ಯಾಭ್ಯಾಸದ ಪ್ರಭಾವದಲ್ಲಿರುವ ಮನುಷ್ಯನಲ್ಲಿ ಮೂಡುವ ನಿಜವಾದ ಆತಂಕಗಳನ್ನು ಈ ಕವಿತೆ ನಿರೂಪಿಸುತ್ತದೆ. ಅವಿದ್ಯೆ ಅಜ್ಞಾನಗಳ ಪರಂಪರಾಗತ ಮೌಢ್ಯಗಳಲ್ಲಿ ಸಿಲುಕಿದ ಅಸಂಖ್ಯ ಜನರ ಸೀಮಿತ ನಿಲುವುಗಳನ್ನು, ಜೀವನ ಕ್ರಮವನ್ನು ಕವಿ ಇಲ್ಲಿ ಪರಾಮರ್ಶನೆಗೆ ಒಳಗು ಮಾಡಿದ್ದಾರೆ. ಲೋಕಜ್ಞಾನ ಪಡೆದುಕೊಂಡವನ ಕಾಳಜಿ ಹಾಗೂ ತಲ್ಲಣಗಳಿಗಿಂತ ಲೋಕಜ್ಞಾನ ಪಡೆಯದವನ ಕಾಳಜಿ ಹಾಗೂ ತಲ್ಲಣಗಳು ವಿಭಿನ್ನವಾಗಿರುತ್ತವೆ ಎಂಬುದು ಈ ಕವಿತೆಯ ಮುಖ್ಯವಾದ ಗ್ರಹಿಕೆಯಾಗಿದೆ.

Komentáře • 3