AGAJE NINNOGATANAKE ||ಅಗಜೆ ನಿನ್ನೋಗತನಕೆ ಜಗ ನಗುವುದೆ ||

Sdílet
Vložit
  • čas přidán 9. 09. 2023
  • ಅಗಜೆ ನಿನ್ನೊಗೆತನಕೆ ಜಗ ನಗುವುದೆ
    ನಗರಾಜ ಈ ಮನೆಯ ಹೊಗಸಿದನೆ ಅಕಟ ಅಕಟ |
    ಅಗಜೆ ನಿನ್ನೊಗೆತನಕೆ ಜಗ ನಗುವದೇ…..ಏ..
    ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡ
    ತೊಟ್ಟ ತೊಗಲುಡಿಗೆ ತಲೆಯೋಡು ಕೈಯ |
    ಸುಟ್ಟ ಸುಡುಗಾಡು ಮನೆ, ಅಖಿಲ ಭೂತೇಶ
    ಬಲು ಸಿಟ್ಟಿನವನಂಗ ಸಂಘವ ಬಯಸಬಹುದೆ ||ಅಗಜೆ||
    ಆರು ಮೊಗದವನೊಬ್ಬ ಆತ್ಮಜನು ಮೊಲೆಪಾಲು
    ಕಾರಿ ಕಡುಮುನಿದು ಕಂಡರೆ ಸೇರನು |
    ಊರಿಗುಪಕಾರಿ ಒಡಲರಕ ಗಜಮುಖದವನು
    ನಾರಿ ಮೇನಕೆ ಮಗಳ ಕಂಡು ಹಿಗ್ಗುವಳಯ್ಯ ||ಅಗಜೆ||
    ಶಿವಶಕ್ತಿ ನಿನ್ನಂತ ಸೌಭಾಗ್ಯ ವತಿ ಎಲ್ಲಾ
    ಭುವನದೊಳಗಾನೆಲ್ಲು ಕಾಣೆನಿನ್ನು |
    ಕವಿಜನಗಳೇನೆಂದು ಬಣ್ಣಿಸಿದರೋ ತಿಳಿಯೆ
    ಭವದೂರ ಶ್ರೀಧರವಿಠ್ಠಲರಾಯ ಬಲ್ಲ ||ಅಗಜೆ||
  • Hudba

Komentáře • 86