Video není dostupné.
Omlouváme se.

#ಯಕ್ಷಮಂದಾರ

Sdílet
Vložit
  • čas přidán 26. 03. 2021
  • #ಯಕ್ಷಮಂದಾರ
    ಇದು ಯಕ್ಷ ಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ..
    ಇಂದಿನ ನಮ್ಮ ಯಕ್ಷಸಾಧಕರು ಯಕ್ಷರಂಗದ ಬಡಗುತಿಟ್ಟಿನ ಸ್ತ್ರೀಭೂಮಿಕೆಯಲ್ಲಿ ಪ್ರಸಿದ್ದರಾದ ಮೇಗರವಳ್ಳಿ ಮೇಳದ ಯುವ ಸ್ತ್ರೀಪಾತ್ರಧಾರಿ ಸಂತೋಷ ಮೊಗವೀರ ಶಿರೂರು...
    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಕಳಿಹಿತ್ಲು ಶ್ರೀ ಬೆಳಿಯ ಮೊಗವೀರ ಮತ್ತು ರಾಧ ದಂಪತಿಗಳ ದ್ವಿತೀಯ ಪುತ್ರನಾಗಿ ದಿನಾಂಕ: 17.07.1987ರಲ್ಲಿ ಜನಿಸಿದರು..
    ಶಿರೂರು ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿವರೆಗಿನ ಶಿಕ್ಷಣವನ್ನು ಪಡೆದ ಇವರು ಯಕ್ಷಗಾನ ರಂಗದತ್ತ ಆಕರ್ಷಿತರಾಗಿ ರಾಘವೇಂದ್ರ ನಾಯ್ಕ ನಾಗರಕೊಡಿಗೆ ಇವರಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತು,ಕೋಟ ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದರು..ಅಲ್ಲಿ ಹಿರಿಯ ಸ್ತ್ರೀಪಾತ್ರದಾರಿಯಾಗಿದ್ದ ದಿವಾಕರ ಆವರ್ಶೆ ಮತ್ತು ಉಳ್ಳೂರು ಚಂದ್ರ ಪೂಜಾರಿಯವರ ಮಾರ್ಗದರ್ಶನದಲ್ಲಿ ಸ್ತ್ರೀವೇಷವನ್ನು ನಿರ್ವಹಿಸಿ,ಹೆಜ್ಜೆಗಾರಿಕೆ ಮತ್ತು ಮಾತುಗಾರಿಕೆಯ ಸಿದ್ದಿಯನ್ನು ಕರಗತ ಮಾಡಿಕೊಂಡರು..ನಂತರ ಹಿರಿಯಡ್ಕ ಮೇಳವನ್ನು ಸೇರಿದ ಇವರು ಬಾರ್ಕೂರು ಸುರೇಂದ್ರ ಗಾಣಿಗ ಮತ್ತು ಸಂತೋಷ ಬಾರ್ಕೂರು ಇವರ ಮಾರ್ಗದರ್ಶನದಲ್ಲಿ ಸ್ತ್ರೀವೇಷದ ಜೊತೆಗೆ ಪುಂಡುವೇಷಗಳನ್ನು ನಿರ್ವಹಿಸಿದರು..ಅಲ್ಲಿ ಸೇವೆಸಲ್ಲಿಸುತ್ತಿರುವ ಸಮಯದಲ್ಲಿ ವಂಡಾರು ಗೋವಿಂದ ಇವರಿಗೆ ಸ್ತ್ರೀ ಪಾತ್ರದಲ್ಲಿನ ಸಮರ್ಥ ನಿರ್ವಹಣೆಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ, ಹೆಜ್ಜೆಗಾರಿಕೆಯಲ್ಲಿ ಹಿಡಿತ ಸಾಧಿಸಲು ಸಹಕಾರ ನೀಡಿದರು..ನಂತರ ಗೋಳಿಗರಡಿ,ನೀಲಾವರ ಮತ್ತು ಹಾಲಾಡಿ ಮೇಳದಲ್ಲಿ ಸಲ್ಲಿಸಿರುವ ಇವರು ಪ್ರಸ್ತುತ ಮೇಗರವಳ್ಳಿ ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದಾರೆ..ನೀಲಾವರ ಮೇಳದಲ್ಲಿರುವ ಸಮಯದಲ್ಲಿ ಹಿರಿಯ ಸ್ತ್ರೀಪಾತ್ರದಾರಿ ಬೆಳ0ಜೆ ಸುಂದರ ನಾಯ್ಕರು ಇವರ ಹೆಜ್ಜೆಗಾರಿಕೆ ಮತ್ತು ವೇಷಗಾರಿಕೆಯಲ್ಲಿನ ಲೋಪದೋಷಗಳನ್ನು ತಿದ್ದಿತೀಡಿ ಪ್ರಬುದ್ಧ ಸ್ತ್ರೀಪಾತ್ರದಾರಿಯಾಗಿ ರೂಪಿಸುವಲ್ಲಿ ಸಂಪೂರ್ಣವಾದ ಸಹಕಾರವನ್ನು ನೀಡಿದ್ದಾರೆ..
    ರಾಜರುದ್ರಕೋಪದ ಸತ್ಯಶೀಲೆ ಮತ್ತು ಅಭಿಮನ್ಯು ಕಾಳಗದ ಸುಭದ್ರೆಯ ಪಾತ್ರದಲ್ಲಿ ತನ್ನ ಕಾರುಣ್ಯಪೂರ್ಣ ಬಾವಾಭಿನಯದಿಂದ ಪ್ರಸಿದ್ದರಾಗಿರುವ ಇವರು, ಕಸೆ ವೇಷಗಳಾದ ಶಶಿಪ್ರಭಾ ಪರಿಣಯದ ಭ್ರಮರಕುಂತಲೆ, ಸಂಪೂರ್ಣ ನಾಗಶ್ರೀಯ ನಾಗಶ್ರೀ,ಕಂಸ ದಿಗ್ವಿಜಯದ ಅಸ್ತಿ, ಮಾಯಪುರಿಯ ಮದನಾಕ್ಷಿ,ತಾರಾವಳಿ, ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ,ದ್ರೌಪತಿ ಪ್ರತಾಪದ ದ್ರೌಪತಿ ಮೊದಲಾದ ಪಾತ್ರಗಳಿಗೆ ತನ್ನ ವೀರಾವೇಶದಿಂದ ಚುರುಕು ಮೂಡಿಸಬಲ್ಲರು..ಹಾಲಾಡಿ ಕ್ಷೇತ್ರ ಮಹಾತ್ಮೆಯ ವಾರಾಹಿ,ಚಿತ್ರಾಕ್ಷಿ ಕಲ್ಯಾಣದ ಚಿತ್ರಾಕ್ಷಿ,ಬ್ರಹ್ಮಕಪಾಲದ ಶಾರದೆ,ಮಾರುತಿ ಪ್ರತಾಪದ ಸತ್ಯಭಾಮೆ,ಚೆಲುವೆ ಚಿತ್ರಾವತಿಯ ಮದನಾಂಗಿ,ಚಕ್ರಚಂಡಿಕೆಯ ವತ್ಸಲೇ,ದೇವಿಮಹಾತ್ಮೆಯ ಮಾಲಿನಿ ಮುಂತಾದ ಶೃಂಗಾರಭರಿತ ಪಾತ್ರಗಳನ್ನು ಅಭಿನಯಿಸುವ ಇವರು,ನಳದಮಯಂತಿಯ ಚೇದ್ಯರಾಣಿ,ಭೂಕೈಲಾಸದ ಕೈಕಸೆ ಮತ್ತು ಹಾಲಾಡಿ ಕ್ಷೇತ್ರ ಮಹಾತ್ಮೆಯ ಮರಳುಚಿಕ್ಕು ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ...
    ತನ್ನ ವೃತ್ತಿಬದುಕಿನಲ್ಲಿ ಹಡಿನಬಾಳ ಶ್ರೀಪಾದ ಹೆಗಡೆ,ತೀರ್ಥಹಳ್ಳಿ ಗೋಪಾಲ ಆಚಾರ್ಯ, ಕುಮಟಾ ಗಣಪತಿ ನಾಯ್ಕ,ಜನಾರ್ದನ ಗುಡಿಗಾರ,ಕೊಳಲಿ ಕೃಷ್ಣ ಶೆಟ್ಟಿ,ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ,ನಿಲ್ಕೋಡು ಶಂಕರ ಹೆಗಡೆ,ಸುಂದರ ನಾಯ್ಕ,ಉಳ್ಳೂರು ಶಂಕರ ನಾಯ್ಕ,ಜಡ್ಕಲ್ ಗೋಪಾಲ, ಶ್ರೀಕಂಠ ಭಟ್ ಕಿಗ್ಗ,ಸೆಳ್ಕೊಡು ರವಿ,ಗಣೇಶ ಬಳೆಗಾರ,ಶ್ರೀಧರ ಕತಗಾಲ,ಶ್ರೀದರ ಹಾರ್ಸಿಕಟ್ಟೆ,ಯಡಮೊಗೆ ಸಂತೋಷ ಶೆಟ್ಟಿ,ಜನಾರ್ದನ ಆಚಾರ್ಯ, ವಿಶ್ವನಾಥ ತೊಂಬಟ್ಟು, ಉದಯ ಕಡಬಾಳ,ಹೆನ್ನಾಬೈಲು ಸಂಜೀವ ಶೆಟ್ಟಿ ಮೊದಲಾದ ಕಲಾವಿದರೊಂದಿಗೆ ತಿರುಗಾಟವನ್ನು ನಡೆಸಿದ್ದಾರೆ..
    ಕರಾವಳಿ,ಮಲೆನಾಡು,ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಬಾಗದಲ್ಲಿ ತಿರುಗಾಟ ನಡೆಸಿರುವ ಇವರು ಯಕ್ಷರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕೋಟ ಸುವರ್ಣ ಯಕ್ಷಬಳಗದಿಂದ ಸನ್ಮಾನ,ಕಾರವಾರ ದತ್ತಾತ್ರೇಯ ದೇವಸ್ಥಾನದಲ್ಲಿ ಸನ್ಮಾನ,ಮತ್ತು ಶಿರೂರಿನಲ್ಲಿ ಹಾಲಾಡಿ ಮೇಳದ ರಂಗವೇದಿಕೆಯಲ್ಲಿ ದೀಪಕ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಸನ್ಮಾನ ಸೇರಿದಂತೆ ಹಲವು ಪುರಸ್ಕಾರಗಳು ದೊರೆತಿವೆ..
    ದಿನಾಂಕ:28.04.2016 ರಂದು ಶ್ರೀಮತಿ ನಾಗರತ್ನರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಇವರು,ಅದ್ವಿಕಾ ಎಂಬ ಮುದ್ದು ಮಗಳನ್ನು ಪಡೆದಿದ್ದಾರೆ..
    ಅತ್ಯಂತ ಸರಳ ಮತ್ತು ಸೌಜನ್ಯದ ಗುಣವನ್ನು ಹೊಂದಿರುವ ಇವರಿಗೆ ಶ್ರೀ ದುರ್ಗಾಪರಮೇಶ್ವರಿಯು ಆಯುರಾರೋಗ್ಯ, ಸುಖ ಸಂಪತ್ತನ್ನು ಅನುಗ್ರಹಿಸಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ
    ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.
    ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ
    He studied in Shirur Undergraduate College up to 2nd PUC and was attracted to Yakshagana Rangadatta and studied yakshagana footprint skillin nagerkody and entered the stage at Kota Amritswari Mela. Under the guidance of the elder lyricist, Divakar Avarshe and Ullur Chandra Priest, he mastered the technique of footwork and speech. Later, he joined the Hiriyadka Mela and under the guidance of Barkur Surendra Ganiga and Santosh Barkur, he performed the dress essays along with the female costume. While serving there, Vandaru Govinda gave him the necessary advice for the effective management of the female role and helped him to master the footsteps. He has since been present at Goligaradi, Neelavara and Haladi Mela serving at megaravalli mela. During the Nilavar mela, elder feminist Belje Sundara Nayak has given full cooperation in making the role of a mature woman correcting the shortcomings in his footsteps and dressing.
    Hadinabala Sripada Hegde, Tirthahalli Gopalacharya, in his career. He is known for his compassionate role in the role of Lord Krishna, Krishna Rajaruda, And abhimanyu, who is known for his compassionate roles, sahasaprabha parnayaya bhramarakuntala, purnima nagasree, kansa digvijaya asti, mayapuri madanakshi, taravali, meenakshi of mayapuri, dropathi pratap aka. He has played erotic roles like Mahathma Varahi, Chitrakshi Kalyana, Brahmakapala Sharda, Maruti Pratap's Satyabhame, Cheluvathi Madanangi, Chakrachandika Vatsale, Devi Mahatma Malini, Naladamayanti's Chedyarani, Bhukailasa Kaikase and Haladi Kshetra Mahatma's Sandchicku.
    Hadinabala Sripada Hegde, Tirthahalli Gopalacharya, in his career. He has also been accompanied by artists like Srikanth Nageswara Rao, Selkodu Ravi, Ganesh Bangala, Sridhara Kathgala, Sridhara Harsikate, Yadamoge Santosh Shetty, Srinatha Acharya, Vishwanath Tombattu, Udaya Kadabala, Hennabailu Sanjeeva Shetty

Komentáře • 2

  • @gbalegarsnbalegar2913
    @gbalegarsnbalegar2913 Před 3 lety +1

    ಆತ್ಮೀಯತೆಯ ವ್ಯಕ್ತಿತ್ವ ನಿಗರ್ವಿ ಅಧ್ಯಯನ ಶೀಲ ಸೌಮ್ಯ ಜೀವಿ ಕಲಾವಿದ ಸಂತೋಷ ಮೊಗವೀರ ಶಿರೂರ್ ಇವರ ಬಗ್ಗೆ ಉತ್ತಮ ಮಾಹಿತಿ ಸಂತೋಷ ಶೆಟ್ಟಿ ಹಾಲಾಡಿ ಹಾಗೂ ಅತ್ಯುತ್ತಮ ದ್ವನಿ ಸಂಕಲನ ನೀಡಿದ ಅಮೃತ್ ಶೆಟ್ಟಿ ಅವರಿಗೆ ಧನ್ಯವಾದಗಳು