ನಿನ್ನ ನೋಡಿ ಧನ್ಯನಾದೆನೋ | Ninna nodi dhanyanaadeno with lyrics | Purandara dasaru

Sdílet
Vložit
  • čas přidán 22. 07. 2023
  • #bhajane #dasarapadagalu #purandaradasaru #srinivas
    ನಿನ್ನ ನೋಡಿ ಧನ್ಯನಾದೆನೋ| ಹೇ ಶ್ರೀನಿವಾಸ|
    ನಿನ್ನ ನೋಡಿ ಧನ್ಯನಾದೆನೋ||
    ಪಕ್ಷಿವಾಹನ ಲಕ್ಷ್ಮೀರಮಣ| ಲಕ್ಷ್ಯವಿಟ್ಟು ನೋಡೋ ಪಾಂಡವ||
    ಪಕ್ಷ ಸರ್ವದೈತ್ಯಶಿಕ್ಷ| ರಕ್ಷಿಸೆನ್ನ ಕಮಲಾಕ್ಷ||
    ದೇಶ ದೇಶ ತಿರುಗಿ ನಾನು| ಆಶಾಬದ್ಧನಾದೆ ಸ್ವಾಮಿ||
    ದಾಸನು ನಾನಲ್ಲವೇ ಜಗ| ದೀಶ ಶ್ರೀಶ ಶ್ರೀನಿವಾಸ||
    ಕಂತುಜನಕ ಕೇಳೋ ಎನ್ನ| ಅಂತರಂಗದಾಸೆಯನ್ನು ||
    ಅಂತರವಿಲ್ಲದೆ ಪಾಲಿಸು ಶ್ರೀ| ಕಾಂತ ಪುರಂದರವಿಠ್ಠಲ||

Komentáře •