ಮರೆಯಬೇಡವೋ ಹರಿಯ | mareyabedavo hariya with lyrics | Hari | Sripadarajaru

Sdílet
Vložit
  • čas přidán 7. 09. 2024
  • #bhajane #dasarapadagalu #hari #sripadarajaru
    ಮರೆಯಬೇಡವೋ ಹರಿಯ
    ಮರೆಯಬೇಡವೋ
    ಮರೆಯಬೇಡ ಹರಿಯನಾಮ
    ಮರೆತು ನೀನು ನಡೆಯಬೇಡ
    ದುರುಳಯಮನ ಪುರದಬಾಧೆ
    ಬರುವುದೆಂದು ಅರಿತು ಅರಿತು
    ದುರ್ಮನುಜರ ಸಂಗದಿ
    ಸುಕರ್ಮ ರಹಿತನಾದರೆ ಯಮನು
    ಕರ್ಮನಿಷ್ಠೆಯಿಂದ ನಿನ್ನ
    ಚರ್ಮ ಸುಲಿಸುವನೋ ಮನುಜ
    ಗಾಳಿಗಿಕ್ಕಿದ ದೀಪದಂತೆ
    ನಾಳೆ ನಾಡಿದ್ದು ಎನಲಿಬೇಡ
    ಕಾಲಕಾಲಕೀಗ ನಾಮ
    ನಾಲಿಗಿಂದ ನೆನೆಯೊ ಕಂಡ್ಯ
    ಹಗಲು ಇರುಳು ಹಾಳು ಹರಟೆ
    ಬಗೆ ಬಗೆ ಉಲ್ಲಾಸತನದಿ
    ಸುಗುಣಿಯರೊಡನೆ ಸುರತ ಸುಖದಿ
    ನಗುತ ಕಾಲ ಕಳೆಯಬೇಡ
    ಅ೦ಗಜನ ಜನಕಮರಡಿ|
    ರಂಗವಿಠಲರಾಯ ನಾಮ
    ಮಂಗಳ ಸುಸ್ಮರಣೆಯಿಂದ ಅಂತ|
    ರಂಗದಿನೆನೆಯೋಕಂಡ್ಯ

Komentáře •