ಪ್ರಧಾನಿ ಕಾರ್ಯಾಲಯಕ್ಕೆ Modi ಪ್ರವೇಶ,20 ಸಾವಿರ ಕೋಟಿ ರೂ ಮೊತ್ತದ ರೈತರ ನಿಧಿ ಕಡತಕ್ಕೆ ಸಹಿ| EconomicTimesKannada

Sdílet
Vložit
  • čas přidán 7. 09. 2024
  • ಸತತ ಮೂರನೇ ಅವಧಿಗೆ ಪ್ರಧಾನಿಯಾಗಿರುವ ಮೋದಿ, ದಿಲ್ಲಿಯ ಸೌತ್ ಬ್ಲಾಕ್‌ನಲ್ಲಿರುವ ಕಚೇರಿಗೆ ತೆರಳಿ, ರೈತರ ಕಲ್ಯಾಣ ಯೋಜನೆಯಾದ 'ಪಿಎಂ ಕಿಸಾನ್ ನಿಧಿ'ಗೆ ಸಂಬಂಧಿಸಿದ ಕಡತಕ್ಕೆ ಮೊದಲ ಸಹಿ ಹಾಕಿದರು. ಪಿಎಂ ಕಿಸಾನ್ ನಿಧಿ ಅಡಿ ರೈತರಿಗೆ ಆರ್ಥಿಕ ನೆರವು ನೀಡುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ 17ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದ ಫೈಲ್‌ಗೆ ಸಹಿ ಹಾಕಿದರು. ಇದು ಸುಮಾರು 20 ಸಾವಿರ ಕೋಟಿ ರೂ ಮೊತ್ತವನ್ನು ಒಳಗೊಂಡಿದ್ದು, 9.3 ಕೋಟಿ ರೈತರಿಗೆ ನೆರವಾಗಲಿದೆ. ''ರೈತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಅಧಿಕಾರ ವಹಿಸಿಕೊಂಡ ಬಳಿಕ ರೈತರ ಕಲ್ಯಾಣಕ್ಕೆ ಸಂಬಂಧಿಸಿದ ಮೊದಲ ಕಡತಕ್ಕೆ ಸಹಿ ಹಾಕಿದ್ದೇನೆ. ಮುಂಬರುವ ದಿನಗಳಲ್ಲಿ ನಾವು ರೈತರಿಗಾಗಿ ಹಾಗೂ ಕೃಷಿ ವಲಯಕ್ಕಾಗಿ ಇನ್ನಷ್ಟು ಕೆಲಸ ಮಾಡುವುದನ್ನು ಬಯಸಿದ್ದೇವೆ" ಎಂದು ಕಡತಕ್ಕೆ ಸಹಿ ಹಾಕಿದ ಬಳಿಕ ಪ್ರಧಾನಿ ಮೋದಿ ಹೇಳಿದರು.
    Pm Modi 3rd Term Assumed Office On Monday Signed His First File Pm Kisan Nidhi 20000 Crore Rs To Farmers
    #narendramodi #pmkisanyojana #modi3
    Our Website : kannada.econom...
    Facebook: / etkannada
    Twitter: / etkannada

Komentáře •