Union Budget 2024 | GST ವ್ಯಾಪ್ತಿಗೆ ಬರುತ್ತಾ ಪೆಟ್ರೋಲ್‌ - ಡೀಸೆಲ್‌? ಹೋಟೆಲ್‌ ಉದ್ಯಮದ ನಿರೀಕ್ಷೆಗಳೇನು?

Sdílet
Vložit
  • čas přidán 7. 09. 2024
  • ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಮಂಡನೆಗೆ ದಿನಗಣನೆ ಶುರುವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇದೇ ಜುಲೈ 23ರಂದು ಬಜೆಟ್‌ ಅನ್ನು ಮಂಡಿಸಲಿದ್ದು, 2024 -25ನೇ ಸಾಲಿನ ಪೂರ್ಣ ಬಜೆಟ್‌ ಮೇಲೆ ನಿರೀಕ್ಷೆಗಳ ಮಹಾಪೂರ ಸೃಷ್ಟಿಯಾಗಿದೆ. ಅದರಲ್ಲೂ ಕೇಂದ್ರ ಬಜೆಟ್‌ ಮೇಲೆ ಹೋಟೆಲ್‌ ಮಾಲೀಕರು ಹಾಗೂ ಉದ್ಯಮಿಗಳ ನಿರೀಕ್ಷೆ ಹೆಚ್ಚಿದೆ. ಈ ಬಗ್ಗೆ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್‌ ಹಾಗೂ ಎಫ್‌ಕೆಸಿಸಿಐನ ಹಿರಿಯ ಉಪಾಧ್ಯಕ್ಷ ಬಾಲಕೃಷ್ಣ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
    ಹೋಟೆಲ್‌ ಉದ್ಯಮದ ನಿರೀಕ್ಷೆಗಳ ಬಗ್ಗೆ ಪಿಸಿ ರಾವ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಏಕಗವಾಕ್ಷಿ ಯೋಜನೆಯನ್ನು ಜಾರಿಗೆ ತಂದು ಉದ್ಯಮವನ್ನು ಸರಳೀಕರಣ ಮಾಡಬೇಕು. ಜೊತೆಗೆ ಎಫ್‌ಎಸ್‌ಎಸ್‌ಎಐ ಪ್ರಮಾಣ ಪತ್ರವನ್ನು ಲೈಫ್‌ ಟೈಮ್‌ಗೆ ನೀಡುವಂತಾಗಬೇಕು. ಕಟ್ಟಟದ ಬಾಡಿಗೆ, ಗ್ಯಾಸ್‌ ಸಿಲಿಂಡರ್‌ ಮೇಲೆ ಜಿಎಸ್‌ಟಿಯನ್ನು ಇಳಿಸಬೇಕಿದೆ. ಪೆಟ್ರೋಲ್‌ - ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕಿದೆ. ಪೆಟ್ರೋಲ್‌ - ಡೀಸೆಲ್‌ ಬೆಲೆ ಏರಿಕೆಯಾದ್ರೆ ಎಲ್ಲ ಬೆಲೆ ಏರಿಕೆಯಾಗುತ್ತದೆ. ಅದು ಹೋಟೆಲ್‌ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಪೆಟ್ರೋಲ್‌ - ಡೀಸೆಲ್‌ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಹೇಳಿದರು.
    Union Budget 2024 Petrol Diesel Can Come Under Gst What Is The Expectations Of Hospitality And Msme Industry
    #narendramodi #neermalasitharaman #unionbudget2024
    Our Website : kannada.econom...
    Facebook: / etkannada
    Twitter: / etkannada
    A destination to know all that is happening in the economic world in your favorite language Kannada. Business, Finance, India and World Economy news in Kannada.

Komentáře • 1