ನಿನ್ಹೊರೆತು ಪೊರೆವವರ ನಾನರಿಯೆ (Ninhoretu Porevavara Naanariye
Vložit
- čas přidán 7. 06. 2023
- ನಿನ್ಹೊರೆತು ಪೊರೆವವರ ನಾನರಿಯೆ (Ninhoretu Porevavara Naanariye)
ನಿನ್ಹೊರೆತು ಪೊರೆವವರ ನಾನರಿಯೆ ಹರಿಯೇ
ಆದಿಯು ಮೊದಲು ನಿನ್ನ ಪಾದವ ನಂಬಿದೆ
ಭೇದವೆಣಿಸದೆ ಮೋದದಾಯಕ |
ಆದರದಿಂದಲಿ ಕಾಯೋ ಸೋದರಮಾವನ ವೈರಿ
ಮೇದಿನಿಪತಿಯೇ ನಿನ್ನಾರಾಧನೆ ಮಾಡಿಸೋ ಹರಿಯೇ ||
ದಾನವಾಂತಕ ನೀನೇ ಗತಿಯೆಂದು
ಸ್ವಾನುರಾಗದಿಂ ಧ್ಯಾನ ಮಾಡುವೆ |
ಮಾನ ಅಭಿಮಾನ ನಿನ್ನದು ವೇಣುಗೋಪಾಲ ಕೃಷ್ಣ
ಭಾನುಕೋಟಿತೇಜ ಎನ್ನ ದೀನನಾಗಿ ಮಾಡೋ ಹರಿಯೇ ||
ಪಂಕಜಾಕ್ಷ ಮುಕುಂದ ಮಾಧವ
ಕಿಂಕರಾಮರ ವಂದ್ಯ ಶ್ರೀಹರಿ |
ಸಂಕಟಗಳನು ನೀ ಬಿಂಕದಿಂ ಪರಿಪಾಲಿಪ
ಕಂಕಣಧರಿಸಿದ ಶ್ರೀವೆಂಕಟವಿಠ್ಠಲ ಹರಿಯೇ || - Hudba
Super