ಭಕುತಜನ ಮುಂದೆ | ವಿಜಯ ವಿಠ್ಠಲ | Bhakuta Jana munde | Vijaya Vithala | Devaranama | ದೇವರನಾಮ | ಭಜನೆ

Sdílet
Vložit
  • čas přidán 7. 09. 2024
  • dasarahadugalu...
    ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    ಸಾಹಿತ್ಯ : ಶ್ರೀ ವಿಜಯ ದಾಸರು
    Kruti: Sri Vijaya Dasaru
    ಗಾಯಕರು: ಶ್ರೀಮತಿ ಗಾಯತ್ರೀ, ಶ್ರೀಮತಿ ರಮಾದೇವಿ ಮತ್ತು ಶ್ರೀಮತಿ ಅನುಪಮ
    Singers: Smt.Gayathri, Smt. Ramadevi and Smt. Anupama
    ಭಕುತಜನ ಮುಂದೆ, ನೀನವರ ಹಿಂದೆ ||ಪ||
    ಯುಕುತಿ ಕೈಗೊಳ್ಳದೊ ಗಯ ಗದಾಧರನೆ ||ಅಪ||
    ಕಟ್ಟೆರಡು ಬಿಗಿದು ನದಿ ಸೂಸಿ ಹರಿಯುತ್ತಿರೆ,
    ಕಟ್ಟಳೆಯಲ್ಲಿ ಹರಿಗೋಲು ಹಾಕಿ ||
    ನೆಟ್ಟನಾಚೆ ಈಚೆಗೆ ಪೋಗಿ ಬರುವಾಗ
    ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ? ||೧||
    ಕಾಳೆ ಹೆಗ್ಗಾಳೆ ದುಂದುಭಿ ಭೇರಿ ತಮ್ಮಟೆ ನಿ
    ಸ್ಸಾಳಗಾನ ವಾದ್ಯ ಘೋಷಣಂಗಳು ||
    ಸಾಲಾಗಿ ಬಳಿಪಿಡಿದು ಸಂಭ್ರಮದಿ ಬರುವಾಗ
    ಆಳು ಮುಂದಲ್ಲದೆ ಅರಸು ತಾ ಮುಂದೆ? ||೨||
    ಉತ್ಸವದಿ ವಾಹನವು ಬೀದಿಯಲ್ಲಿ ಮೆರೆಯುತಿದೆ
    ಸತ್‌ಸಂಗಕ್ಕೆ ಹರಿಯದಾಸರೆಲ್ಲ ||
    ವತ್ಸಲ ಸಿರಿ ವಿಜಯ ವಿಠ್ಠಲಾ ವೆಂಕಟಾದ್ರೀಶ
    ವತ್ಸ ಮುಂದಲ್ಲದೆ ಧೇನು ತಾ ಮುಂದೆ? ||೩||
    bhakutajana muMde, nInavara hiMde ||pa||
    yukuti kaigoLLado gaya gadAdharane ||apa||
    kaTTeraDu bigidu nadi sUsi hariyuttire,
    kaTTaLeyalli harigOlu hAki ||
    neTTanAce Icege pOgi baruvAga
    huTTu muMdallade harigOlu muMde? ||1||
    kALe heggALe duMduBi BEri tammaTe ni
    ssALagAna vAdya GOShaNaMgaLu ||
    sAlAgi baLipiDidu saMBramadi baruvAga
    ALu muMdallade arasu tA muMde? ||2||
    utsavadi vAhanavu bIdiyalli mereyutide
    sat^^saMgakke hariyadAsarella ||
    vatsala siri vijaya viThThalA veMkaTAdrISa
    vatsa muMdallade dhEnu tA muMde? ||3||

Komentáře • 16