ಸೂಪರ್ ನೇಪಿಯರಗಿಂತಲು ಸೂಪರ್ ಆಗಿದೆ ಈ King-31 ಮೇವು

Sdílet
Vložit
  • čas přidán 11. 09. 2024
  • KING-31 - ಬಹುವಾರ್ಷಿಕ ಮೇವಿನ ಜೋಳ ಬೆಳೆಸಿ ಬರದ ಬಿಕರತೆಯನ್ನು ನಿಭಾಯಿಸಿ.
    ಮಳೆ ಆಧಾರಿತ ಪ್ರದೇಶಗಳಲ್ಲಿ, ಮಳೆ ಕುಂಠಿತಗೊಂಡ ಸಂದರ್ಭದಲ್ಲಿ ಮೇವಿನ ಅಭಾವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಬರ ಪರಿಸ್ಥಿತಿಯಲ್ಲಿ ಈ ಕ್ಷೇತ್ರಗಳಲ್ಲಿ ಮೇವಿನ ತೀವ್ರ ಅಭಾವ ದಿಂದ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಗೆ ಹಿನ್ನಡೆ ಉಂಟಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಬಹುವಾರ್ಷಿಕ ಮೇವಿನ ಜೋಳದ ಕೃಷಿಯಿಂದ ಈ ಪರಿಸ್ಥಿತಿಯನ್ನು ಬಹಳ ಮಟ್ಟಿಗೆ ವಿಭಾಗಿಸಬಹುದು. ಹೆಸರೆ ಸೂಚಿಸುವಂತೆ ಇದು ಒಂದು ಬಹುವಾರ್ಷಿಕ ಮೇವಿನ ಬೆಳೆಯಾಗಿದ್ದು ಒಮ್ಮೆ ಬಿತ್ತಿದ ಬೆಳೆ ಕನಿಷ್ಠ ಮೂರು ವರ್ಷಗಳ ವರೆಗೆ ಮೇವನ್ನು ಪೂರೈಸಲಾಗುತ್ತದೆ. ಈ ಮೇವನ್ನು ಹಸು, ಎಮ್ಮೆ, ಆಡು, ಕುರಿ, ಮೋಲ ಮುಂತಾದ ಪ್ರಾಣಿ ಗಳಿಗೆ ನಿತ್ಯ ಆಹಾರವಾಗಿ ಕೊಡಬಹುದು.
    ಹೆಚ್ಚಿನ ಮಾಹಿತಿಯುಳ್ಳ ವಿಡಿಯೋ ನೋಡಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ
    • ಸೂಪರ್ ನೇಪಿಯರಗಿಂತಲು ಸೂಪ...
    ತಳಿಗಳು : King-31
    ಬಿತ್ತನೆ ಕಾಲಮಾನ:
    #ಮಳೆ ಆಶ್ರಿತ ಜಮೀನಿನಲ್ಲಿ ಜೂನ್ ನಿಂದ ಆಗಸ್ಟ್ ವರೆಗೆ ಬಿತ್ತಬಹುದು .
    #ನೀರಾವರಿ ವ್ಯವಸ್ಥೆ ಇದ್ದಲ್ಲಿ ವರ್ಷವಿಡೀ ಬಿತ್ತನೆ ಮಾಡಬಹುದು
    ಬೀಜ : 5kg/ಎಕರೆ
    ಸಾಲುಗಳ ಅಂತರ : 45 cm
    ಕಟಾವು : ಬಿತ್ತಿದ 75 ದಿನಗಳ ನಂತರ ಮೊದಲ ನಂತರದಲ್ಲಿ 40 ದಿವಸಗಳಿಗೊಮ್ಮೆ ಕಟಾವು ಮಾಡಬೆಕು.
    ಇಳುವರಿ : ಎಕರೆಗೆ ವಾರ್ಷಿಕ 80-100 ಟನ್ ಹಸಿರು ಮೇವನ್ನು ನೀರಿಕ್ಷಿಸಬಹುದು.
    ಪೋಷಕಾಂಶಗಳು
    ಕಚ್ಚಾ ಸಸಾರಜನಕ - 8%
    ಈಥರ್ ಹೀರುವಿಕೆ - 2.6%
    ಕಚ್ಚಾ ನಾರು - 24%
    ಬೂದಿ - 10.8%
    ಸಾರಜನಕ ಮುಕ್ತ
    ಹೀರುವಿಕೆ (Protein) - 54%
    ಒಣ ಪದಾರ್ಥ -25.5%
    King-31 ತಳಿಯ ವಿಶೇಷತೆಗಳು :
    ಕಾಂಡ ತುಂಬಾ ತೆಳುವಾಗಿದ್ದು ಎಲೆಗಳು ಮೃದುವಾಗಿರುತ್ತದೆ ಎಲೆಗಳ ಮೇಲೆ ಯಾವುದೇ ರೀತಿಯ ಮುಳ್ಳುಗಳು ಇರುವುದಿಲ್ಲ .
    #ಈ ತಳಿಯ ಮೇವನ್ನು ಕೇವಲ ಹಸಿ ಮೇವಾಗಿ ಅಲ್ಲದೆ ಒಣ ಮೇವಾಗಿ ಅಥವಾ ಸೈಲೇಜ್ ಆಗಿಯೂ ಕೂಡ ಬಳಸಬಹುದು.
    ಬೀಜಕ್ಕಾಗಿ ಸಂಪರ್ಕಿಸಿ
    ಸಂತೋಷ ಪಾಗದ, M.Sc. ಕೃಷಿ
    ಕೃಷಿಕ ಅಗ್ರೊ ಫಾರ್ಮ ಡೆವಲಪರ್ಸ
    ಪೋ-ಕೊತಬಾಳ, ತಾ-ರೋಣ ಜಿ- ಗದಗ
    ಮೋ- 9741108500 9481448990

Komentáře • 19