ನಿನ್ನ ಬಿಂಬದ ನೆರಳಲಿ | ಶ್ರೀ ಕಾಶಿನಾಥ್ ಪತ್ತಾರ | ಶ್ರೀ ಗಣೇಶ್ ಬಿಳೇಕಲ್ |

Sdílet
Vložit
  • čas přidán 28. 08. 2024
  • ನಿನ್ನ ಬಿಂಬದ ನೆರಳಲಿ
    ಸಾಹಿತ್ಯ :- ಗಣೇಶ್ ಬಿಳೇಕಲ್
    ರಾಗ ಸಂಯೋಜನೆ ಮತ್ತು ಗಾಯನ :- ಶ್ರೀ ಕಾಶಿನಾಥ್ ಪತ್ತರ್
    ,,,ನಿನ್ನ ಬಿಂಬದ ನೆರಳಲಿ,,,
    ಭಾವದಲೆಗಳು ಅಂತರಾಳದಿ
    ನಿನ್ನ ಚಿತ್ರವ ಬರೆದಿವೆ //
    ಪ್ರೀತಿ ಹಸಿವು ಹಸಿರ ಕಾಣದೆ
    ಮೌನದೆಡೆಗೆ ಸಾಗಿದೆ //ಪ//
    ಬಿಂಬದೊಂದಿಗೆ ಬಂಧ ಬೆಸೆಯುವ
    ಹುಚ್ಚು ಕೋಡಿ ಮನಸಿದು//
    ಮೌನದಲ್ಲಿಯೇ ಮಾತು ಹೆಣೆದಿದೆ
    ಮುಗ್ದ ಪ್ರೀತಿಯ ಕನಸದು //೧//
    ತಿಂಗಳಾಯಿತು ಕಂಗಳೊರತೆಗೆ
    ಕೊಂಚ ಬಿಡುವು ಸಿಗದೆಯೆ//
    ತುಕ್ಕು ಹಿಡಿದಿಹ ಹಣೆಲಿ ಮಾಸಿದೆ
    ನೀನು ಇರಿಸಿದ ತಿಲಕವೆ//೨//
    ತೇಲಿ ಬರುತಿಹ ಗಾಳಿ ಒಲವಿಗೆ
    ಸೊಬಗ ಸೆರಗು ಸರಿದಿದೆ //
    ಎಲ್ಲೆ ಮೀರಿದೆ ತೃಷೆಯ ತವಕವು
    ನಿನ್ನ ಬರುವಿಕೆ ಕಾದಿದೆ//೩//
    ಹಣ್ಣು ಮಾಗಿದೆ ಹೆಣ್ಣಿನೊಲವಲಿ
    ಹೊಳೆವ ಹುಣ್ಣಿಮೆ ಬೆಳಕಲಿ//
    ಬಾನ ತೋರಣ ಬಾಗಿ ನಮಿಸಿದೆ
    ನೀನು ಬರುವ ದಿಶೆಯಲಿ //೪//

Komentáře • 1

  • @hegde98
    @hegde98 Před 3 lety

    Very very nice 👌👌👌👍👍👍💐💐💐💐