| DENNANA DENNANA | Tulu folk dance | By Sneha Bhat |

Sdílet
Vložit
  • čas přidán 11. 09. 2024
  • ನಮ್ಮದು ತುಳುನಾಡು ...ಜಾನಪದ ಕಲೆಗಳ ಬೀಡು.ಇಂತಹ ಜಾನಪದ ಕುಣಿತಗಳೇ ಜಾನಪದ ಕಲೆಗಳ ಮೂಲ.
    ಮಾನವರು ಆರಂಭದಲ್ಲಿ ಕಾಡುಮೇಡುಗಳಲ್ಲಿ,ಗುಹೆಗಳಲ್ಲಿ ವಾಸಿಸುತ್ತಿದ್ದರಂತೆ.ಹೆದರಿಕೆ,ದುಃಖ, ಸಂತೋಷಗಳೆಲ್ಲವೂ ಹಾವಭಾವವಗಳ ರೂಪದಲ್ಲಿ,ಕುಣಿತದ ರೂಪದಲ್ಲಿ ವ್ಯಕ್ತ ಪಡಿಸುತ್ತಿದ್ದರು.ಹೀಗೆ ಹುಟ್ಟಿಕೊಂಡ ಜಾನಪದ ಕುಣಿತಗಳು ಮುಂದಕ್ಕೆ ಜನರ ಸಾಮಾಜಿಕ, ಧಾರ್ಮಿಕ ಆಚರಣೆಗಳಲ್ಲಿಯೂ ಸೇರಿಕೊಂಡವು.
    ಸಾಮಾನ್ಯವಾಗಿ ಇಂತಹ ಜಾನಪದ ಕುಣಿತಗಳು ರೈತಾಪಿ ಜನರಲ್ಲೆ ಹೆಚ್ಚು.ಹೊಲದಲ್ಲಿ ದುಡಿಯುವಾಗ,ಬಿಡುವಿನ ವೇಳೆಯಲ್ಲಿ ಇಂತಹ ಕುಣಿತಗಳು ಮನಸ್ಸಿಗೆ ಮುದ ನೀಡುವುದಲ್ಲದೆ,ಆಯಾಸವನ್ನೂ ತಣಿಸುತ್ತದೆ.
    ಗ್ರಾಮೀಣ ಪರಿಸರದ ಜನರ ಉಸಿರಾಗಿರುವ ಇಂತಹ ವಿವಿಧ ಕಲೆಗಳು ತುಳುನಾಡಿನ ಸಂಸ್ಕೃತಿಯ ಶ್ರೀಮಂತಿಕೆಯ ಪ್ರತೀಕವಾಗಿದೆ.
    ಇಂತಹ ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದ ನಾನು ಒಂದು ಸುಂದರ ತುಳು ಜಾನಪದ ಗೀತೆಗೆ ಅಭಿನಯಿಸಿದ್ದೇನೆ..ನೋಡಿ ..ಪ್ರೋತ್ಸಾಹಿಸಿ..🙏🙏
    Choreographed and Performed by Sneha Bhat, desciple of Vid. Yogishwari Jayaprakash.
    Videography and editing by Aradhya Photo Studio, Ninthikallu.

Komentáře • 205