#ಭಾವಗೀತೆ

Sdílet
Vložit
  • čas přidán 6. 09. 2024
  • 🌹ಭಾವಗೀತೆ🌹
    🔺ಗೋಚರ-ಅಗೋಚರ🔻
    ಭಾನು ಕೊಟ್ಟರುಂಟು ಧರೆಗೆ
    ನದಿಯ ಹರಿವು ಕಡಲಿಗೆ
    ಕೊಡುವ ಪಡೆವ ನೇಹದೊಡನೆ
    ಜೀವ ಬದುಕು ಮಡಿಲಿಗೆ
    ಹುಲ್ಲು ಕಡ್ಡಿ ನಾರುಗಳನು
    ತಂದು ನೇಯ್ದು ಗೀಜಗ
    ಕಸವೆ ರಸವು ಆಗುವಲ್ಲಿ
    ಸೃಷ್ಟಿ ಪ್ರತಿಮೆ ಸೋಜಿಗ
    ದೂರದಲ್ಲಿ ಶಶಿಯು ಮಿನುಗೆ
    ಇರುಳು ಬೆಳಕ ಕಾಣ್ವುದು
    ಎಲ್ಲೊ ರವಿಯು ಎದ್ದು ಬರಲು
    ನೆರಳು ಹಿಂದೆ ಬರುವುದು
    ಮೇರೆ ಮೀರಿ ಹಾರಿ ಹದ್ದು
    ಅಲ್ಲೆ ವಾಸ ಮಾಳ್ಪುದೆ
    ಧರೆಗೆ ಉರುಳಿ ಬಿದ್ದರದನು
    ಹುಳುವು ತಿಂದು ಬದುಕದೆ
    ಒಂದಕೊಂದು ನಂಟು ಇಹುದು
    ಕೆಲವು ಮಾತ್ರ ಗೋಚರ
    ನೆಲವು ಬೇರೆ ನೆಲೆಯು ಬೇರೆ
    ಹಲವು ಬಾಹ್ಯ ಅಂತರ
    __ ರೋಹಿಣಿ. ಹೆಗಡೆ. ಶಿರಸಿ.
    ರಾಗಸಂಯೋಜನೆ ಮತ್ತು ಗಾಯನ - ಸ್ಮಿತಾ.ಹೆಗಡೆ.ಕುಂಟೇಮನೆ.

Komentáře • 10

  • @Anweshane
    @Anweshane Před rokem +1

    ಸಾಹಿತ್ಯ ಮತ್ತು ಗಾಯನ ಎರಡೂ ಅದ್ಭುತ🎉🎉

  • @umadevihhebbar4559
    @umadevihhebbar4559 Před rokem +1

    ಸಾಹಿತ್ಯ, ಗಾಯನ ಮತ್ತು ಸಂಯೋಜನೆ... ಅದ್ಭುತ👌👌👌

  • @chetanahegde3878
    @chetanahegde3878 Před rokem +1

    ❤ ಅದ್ಭುತ ....ಸಾಹಿತ್ಯ ಹಾಡಿದ್ದು ಎಲ್ಲವೂ ಅತ್ಯದ್ಭತ....

  • @bharatihegde2666
    @bharatihegde2666 Před rokem +1

    ಸಾಹಿತ್ಯ...ಗಾಯನ ಸೂಪರ್

  • @sandeshdg242
    @sandeshdg242 Před rokem +1

    ದೃಶ್ಯ ಸಂಯೋಜನೆ 👌

  • @arunahegde843
    @arunahegde843 Před rokem +1

    ರಚನೆ.&ಗಾಯನ👌👌👍

  • @sufiyagulagundi3948
    @sufiyagulagundi3948 Před rokem +1

    Superb.......

  • @haadugoodu5183
    @haadugoodu5183 Před rokem +1

    Super

  • @renukabalehosur5721
    @renukabalehosur5721 Před rokem +1

    👌👌👌

  • @roopahegde5625
    @roopahegde5625 Před rokem +1

    ರಚನೆ & ಗಾಯನ ಎರಡು ಮಸ್ತ್