ಕೆಂಪು ಗಿಣಿ (ಕಥೆ) - ವಸುಧೇಂದ್ರ॥ Kempu Gini - Vasudhendra॥ಕನ್ನಡ ಶ್ರಾವಣ ೧॥

Sdílet
Vložit
  • čas přidán 7. 09. 2024
  • ಕೆಂಪು ಗಿಣಿ - ವಸುಧೇಂದ್ರ
    ಆಕರ ಕೃತಿ: ಹಂಪಿ ಎಕ್ಸ್ ಪ್ರೆಸ್
    ಪಾತ್ರ ಪರಿಚಯ:-
    * ನಿರೂಪಕ- ತಂದೆ-ತಾಯಿ-ಅಕ್ಕ
    * ಈರಪ್ಪ- ನರಸಕ್ಕ- ಕುಮಾರಸ್ವಾಮಿ
    * ಬಂಡ್ರಿ ಮಾಸ್ತರ್- ಗೋಪಣ್ಣ - ಕಾಸಿಂಸಾಬ- ಮಂಜುನಾಥ
    * ಬಾಲ್ಯ - ಯೌವ್ವನದ ಅನುಭವಗಳು
    ಕಲ್ಪನೆ - ಕ್ರೌರ್ಯ- ವರ್ತಮಾನ
    * ಸಂಡೂರು (ಬಳ್ಳಾರಿ ಜಿಲ್ಲೆ) - ಬೆಂಗಳೂರು
    ಕಥೆಯ ಆಶಯ:-
    ಬಾಲ್ಯದಲ್ಲಿ ಹೊಲವನ್ನೇ ನೋಡದ ಜಾಣಹುಡುಗನೊಬ್ಬ ಬರೆಯುವ ಪ್ರಬಂಧದ ಕಾಲ್ಪನಿಕಲೋಕವು ಓದುಗರಿಗೆ ನಗೆ ಹುಟ್ಟಿಸುತ್ತದೆ. ಪರಿಣಾಮವಾಗಿ ತಾಯಿ ಹೊಲವನ್ನು ತೋರಿಸಲು ಮಗನನ್ನು ಹೊಲಕ್ಕೆ ಕಳಿಸುತ್ತಾಳೆ. ಅಪ್ಪನೊಂದಿಗೆ ಆದರೆ ಮಗನಂತೆಯೇ ತನ್ನ ಹೊಲವನ್ನು ಎಂದೋ ಗೇಣಿಗೆ ನೀಡಿ ಹೊಲದ ಇರವನ್ನೇ ಮರೆತ ಅಪ್ಪ ಹೊಲ ಹುಡುಕಲು ಹೊರಟು "ನಮ್ಮ ಹೊಲ ಎಲ್ಲಿ ಬರುತ್ತದೆ?” ಎಂದು ಪ್ರಶ್ನೆ ಕೇಳುವುದೂ ಸಹ ಅಷ್ಟೇ ಹಾಸ್ಯಾಸ್ಪದವೆನಿಸುತ್ತದೆ. ಕೊನೆಗೆ ಗೇಣಿದಾರನ ಮೂಲದಿಂದಲೇ (ಈರಪ್ಪನ ಹೊಲವೆಲ್ಲಿ ತನ್ನ ಹೊಲವನ್ನ ಕಾಣುವಂತಾಗುತ್ತದೆ.
    ತನ್ನ ಪ್ರಬಂಧದ ಕಾಲ್ಪನಿಕ ಬರವಣಿಗೆಯಿಂದ ಬೈಸಿಕೊಂಡ ಮಗನು ಮತ್ತೆ ಮನೆಯ ಗೇಣಿದಾರ ಈರಪ್ಪನ ಕಾಲ್ಪನಿಕ ಕಥೆಯೊಳಗಿನ ಏಳುಹೆಡೆಯ ಸರ್ಪದ ಕಥನಕ್ಕೆ ಮರುಳಾಗುತ್ತಾನೆ. ಹಾವು ತಮ್ಮ ಹೊಲದ ಸುತ್ತೆಲ್ಲಾ ನಿಧಿ ಕಾಯುತ್ತಾ ಓಡಾಡುತ್ತದೆ ಎಂಬ ಆ ಕಲ್ಪನೆಯೇ ಮುಂದೊಂದು ದಿನ ನಿಜದ ಬೆಳಕಿಗೆ ರೂಪಕವಾಗುವುದು ಕಥೆಯ ವೈಶಿಷ್ಟ್ಯವಾಗಿದೆ.
    ಅಜ್ಜನ ಕಾಲದ ಹಳ್ಳಿಯ ಒಲವು ಅಪ್ಪನ ಕಾಲಕ್ಕೆ ಮೊಮ್ಮಗನ ಕಾಲಕ್ಕೆ ಕರಗುತ್ತಾ ಹೋಗಿ ನೆಲ ನೆನಪು ಮಾತ್ರವಾಗುವ ದುರಂತ ಸ್ಥಿತಿಯನ್ನ ಈ ಕಥೆಯು ಹಿಡಿದಿಟ್ಟಿದೆ. ಭೂಮಿ ತತ್ಕಾಲದ ಬದುಕಿಗಲ್ಲ ಆದು ಪರಂಪರೆಯ ಅನ್ನವಾಗಿರಬೇಕು ಎಂಬ ಹಿರೀಕರ ನಂಬುಗೆಯನ್ನ ಮುರಿವ ಮಗ ಮತ್ತು ಮೊಮ್ಮಗ ತಮ್ಮ ತತ್ಕಾಲದ ಬದುಕಿಗಾಗಿ ಭೂಮಿ ಮಾರುತ್ತ ಕಾಲಾಂತರದಲ್ಲಿ ಕಳೆದುಹೋದ ಭೂಮಿಯ ಮೌಲ್ಯ ಅರಿತು ದುಗುಡಗೊಳ್ಳುವ ಸ್ಥಿತಿಯ ವ್ಯಂಗ್ಯವನ್ನ ಕಥೆಯು ಅನಾವರಣಗೊಳಿಸುತ್ತದೆ.
    ಯಾವ ಬಂಡಾಯದ ಘೋಷಣೆಯ ಹಂಗಿಲ್ಲದೆಯೇ ಮಾಧ್ವಮನೆಯ ಮಧ್ಯಮವರ್ಗದ ಹುಡುಗನೊಬ್ಬನ ಶಿಕ್ಷಣವು ಮುಟ್ಟಿಸುವ ಹಂತವನ್ನ ಬಡ ಗೇಣಿದಾರನ ಮಗನ ಉದ್ಯೋಗದೊಂದಿಗೆ ತಾಳೆ ಹಾಕಿ ಒಡಲ ತಲ್ಲಣವನ್ನ ಹೊರಹಾಕಿಸುವ ಈ ಕಥನವು ನಿಸರ್ಗ ಸಹಜ ಹಸಿರು ಗಿಣಿಗಳು ಕೆಂಪಾಗುವ ಬಣ್ಣದೊಂದಿಗೇ ಉಸಿರುಗಟ್ಟಿಸುವ ಹೊಸ ಧಣಿಯ ಕಾಲದ ಸ್ವರೂಪವನ್ನ ಬಯಲು ಮಾಡುತ್ತದೆ.
    ಸಹಜತೆಯನ್ನ ಒಪ್ಪದೇ ಸ್ವಾರ್ಥವನ್ನೇ ಮೆರೆವ ಬಗೆಬಗೆಯ ಧಣಿಗಳ ಲಾಭದ ಬೆನ್ನು ಕಾಣಿಸುತ್ತಾ ಹೋಗುವ ಈ ಕಥೆಯು ಹಾವಿನ ಮತ್ತು ಗಿಳಿಯ ರೂಪ ಮತ್ತು ಬಣ್ಣಗಳ ಬದಲಾವಣೆಗಳಿಂದಲೇ ಬದುಕಿನ ಬವಣೆ ತೋರುವುದು ಕಥೆಯ ಪ್ರಧಾನ ಆಶಯವಾಗಿದೆ..

Komentáře • 4