ಇನ್ನು ದಯ ಬಾರದೇ || Innu Daya Baarade Bhajan by Balachandra Prabhu

Sdílet
Vložit
  • čas přidán 22. 09. 2023
  • ಇನ್ನು ದಯ ಬಾರದೇ ದಾಸನ ಮೇಲೆ |
    ಪನ್ನಗಶಯನ ಪಾಲ್ಗಡಲೊಡೆಯನೆ ಕೃಷ್ಣ ||ಪ||
    ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ
    ನಾನಾ ಯೋನಿಗಳಲ್ಲಿ ನಲಿದು ಹುಟ್ಟಿ
    ನಾನು ನನ್ನದು ಎಂಬ ನರಕದೊಳಗೆ ಬಿದ್ದು
    ನೀನೇ ಗತಿಯೆಂದು ನಂಬಿದ ದಾಸನ ಮೇಲೆ ||೧||
    ಕಾಮಾದಿ ಷಡ್ವರ್ಗ ಗಾಢಾಂಧಕಾರದಿ
    ಪಾಮರನಾಗಿಹ ಪಾತಕಿಯು
    ಮಾಮನೋಹರನೇ ಚಿತ್ತಜ ಜನಕನೇ
    ನಾಮವೇ ಗತಿಯೆಂದು ನಂಬಿದ ದಾಸನ ಮೇಲೆ || ೨ ||
    ಮಾನಸಾ ವಾಚಾ ಕಾಯದಿ ಮಾಳ್ಪ ಕರ್ಮವು |
    ದಾನವಾಂತಕ ನಿನ್ನ ಅಧೀನವಲ್ತೇ |
    ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ |
    ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ ||೩||
    innu daya bAradE dAsana mEle |
    pannagaSayana paalgaDaloDeyane kRuShNa ||pa||
    nAnA dESagaLalli nAnA kAlagaLalli
    nAnA yOnigaLalli nalidu huTTi
    nAnu nannadu eMba narakadoLage biddu
    nInE gatiyeMdu naMbida dAsana mEle ||1||
    kaamaadi ShaDvarga gaaDhaaMdhakaaradi
    paamaranaagiha paatakiyu
    maamanOharanE cittaja janakanE
    naamavE gatiyeMdu naMbida daasana mEle || 2 ||
    maanasaa vaacaa kaayadi maaLpa karmavu |
    dAnavAMtaka ninna adhInavaltE |
    Enu mADidarEnu prANa ninnadu svAmi |
    SrInAtha puraMdara viThalana dAsana mEle ||3||
  • Hudba

Komentáře • 4

  • @rameshbhat5050
    @rameshbhat5050 Před 8 měsíci +1

    Beautiful rendering, as always.

  • @manohararai4540
    @manohararai4540 Před 9 měsíci +1

    🙏🙏🙏

  • @Shallbecalm
    @Shallbecalm Před 8 měsíci +1

    what a divine rendition, you brought tears of devotion in me, such talent 🙏

  • @prajpurohith1129
    @prajpurohith1129 Před 8 měsíci

    🙏🙏👌👌👍🏼👍🏼👏👏.