Paradeshi Neenu Swadeshi Naanu | ಪರದೇಶಿ ನೀನು ಸ್ವದೇಶಿ ನಾನು

Sdílet
Vložit
  • čas přidán 30. 12. 2023
  • ಪರದೇಶಿ ನೀನು ಸ್ವದೇಶಿ ನಾನು ॥ಪ॥
    ಪರಮ ಭಾಗವತರನು ಹೋಗಿ ಕೇಳೋಣ ॥ಅ.ಪ॥
    ಎನಗೆ ಜನಕನು ನೀನು ನಿನಗಾವ ಜನಕನೊ
    ಜನನಿ ಇಂದಿರೆದೇವಿ ನಿನಗಾವಳೋ
    ವನಜಪೀಠನು ಭ್ರಾತ ನಿನಗಾವ ಭ್ರಾತನೋ
    ಇನ ಸೋಮ ಮಾತುಳರು ನಿನಗಾವ ಮಾತುಳರೊ ॥೧॥
    ಸುರನದೀ ಅಗ್ರಜಳು ನಿನಗೆ ಅಗ್ರಜಳಾರು
    ಶರನಿಧಿ ಭಾವ ನಿನಗಾರು ಭಾವನೋ
    ಸ್ಮರನು ಕಿರಿಸಹಭವನು ನಿನಗೆ ಸಹಭವನಾರೊ
    ಸುರರು ಬಂಧುಗಳೆನಗೆ ನಿನಗಾರು ಬಾಂಧವರೊ ॥೨॥
    ವರ ಇಳೆಯು ಸಹಮಾತೆ ನಿನಗೆ ಸಹಮಾತೆ ಯಾರೊ
    ಮರುತ ದೇವರು ಗುರು ನಿನಗಾರು ಗುರುವೊ
    ಸಿರಿಯರಸ ವಿಜಯವಿಠ್ಠಲರೇಯನೆ ನಿನ್ನ
    ಚರಣಸೇವಕ ನಾನು ನೀನ್ಯಾರ ಸೇವಕನೊ ॥೩॥
    paradeshi ninu svadeshi nanu ..pa..
    parama bhagavataranu hogi kelona ..a.pa..
    enage janakanu ninu ninagava janakano
    janani imdiredevi ninagavalo
    vanajapithanu bhrata ninagava bhratano
    ina soma matularu ninagava matularo ..1..
    suranadi agrajalu ninage agrajalaru
    sharanidhi bhava ninagaru bhavano
    smaranu kirisahabhavanu ninage sahabhavanaro
    suraru bamdhugalenage ninagaru bamdhavaro ..2..
    vara ileyu sahamate ninage sahamate yaro
    maruta devaru guru ninagaru guruvo
    siriyarasa vijayaviththalareyane ninna
    charanasevaka nanu ninyara sevakano ..3..
    .
    .
    Spotify:
    open.spotify.com/artist/3jNaY...
    Prime music:
    music.amazon.in/artists/B09V2...
    Apple music:
    / daasoham
  • Hudba

Komentáře • 39