Snake Bite First Aid Treatment in Kannada ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆ ಮಾಡುವುದು ಹೇಗೆ ?

Sdílet
Vložit
  • čas přidán 9. 07. 2022
  • ಹಾವು ಕಚ್ಚಿದರೆ ತಕ್ಷಣಕ್ಕೆ ಏನ್ ಮಾಡಬೇಕು? ಪ್ರಥಮ ಚಿಕಿತ್ಸೆ ಏನು?
    ಹಾವುಗಳನ್ನು ನೋಡಿದರೆ ಭಯ ಪಡದೇ ಇರುವಂತಹವರು ತುಂಬಾ ಕಡಿಮೆ. ಹಾವುಗಳ ಲೋಕವನ್ನು ತಿಳಿದುಕೊಂಡಿರುವವರಿಗೆ ಇದರಿಂದ ಭಯವಾಗದೆ ಇದ್ದರೂ ಕೆಲವೊಂದು ಸಲ ಹಾವು ಕಡಿತದಿಂದಾಗಿ ತುಂಬಾ ನೋವು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
    ಇದರಿಂದ ಕಡಿದಿರುವಂತಹ ಹಾವು ವಿಷಕಾರಿಯೇ ಅಥವಾ ನಿರ್ವಿಷವಾಗಿರುವುದೇ ಎಂದು ತಿಳಿಯುವುದು ಅತೀ ಅಗತ್ಯ. ಇದನ್ನು ತಿಳಿದುಕೊಂಡರೆ ಆಗ ಹಾವು ಕಡಿತದಿಂದಾಗಿ ಉಂಟಾಗುವಂತಹ ಪ್ರಾಣಹಾನಿಯನ್ನು ಒಂದು ಹಂತದಲ್ಲಿ ತಪ್ಪಿಸಬಹುದಾಗಿದೆ.
    ಹಾವು ಕಡಿತವಾಗಿರುವಂತಹ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ಇದರೊಂದಿಗೆ ಆಸ್ಪತ್ರೆಗೆ ಕೊಂಡೊಯ್ಯುವ ಮೊದಲು ಕೆಲವೊಂದು ಪ್ರಥಮ ಚಿಕಿತ್ಸೆ ಕೂಡ ಮಾಡಬೇಕು.
    * ಕಡಿತಕ್ಕೊಳಗಾಗಿರುವ ವ್ಯಕ್ತಿಯ ಚಟುವಟಿಕೆ ನಿಯಂತ್ರಿಸಿ. ಆತ ಅಥವಾ ಆಕೆ ತುಂಬಾ ಶಾಂತವಾಗಿರಲು ಹೇಳಿ ಮತ್ತು ಇದರ ಬಗ್ಗೆ ಭೀತಿ ಪಡಬಾರದು. ವ್ಯಕ್ತಿಯು ಭಯಭೀತಗೊಂಡರೆ ಆಗ ಹೃದಯಬಡಿತವು ಹೆಚ್ಚಾಗುವುದು ಮತ್ತು ವಿಷವು ಬೇಗನೆ ದೇಹದೆಲ್ಲೆಡೆ ಬೇಗನೆ ಪಸರಿಸುವುದು.
    * ಕಡಿತಕ್ಕೊಳಗಾಗಿರುವ ಜಾಗವು ಬೇಗನೆ ಊದಿಕೊಳ್ಳುವುದು. ಇದರಿಂದ ಉಂಗುರ, ಬ್ರಾಸ್ಲೆಟ್ ಇತ್ಯಾದಿಗಳಿದ್ದರೆ ತೆಗೆಯಿರಿ.
    * ಕಡಿತದ ಜಾಗ ಅಥವಾ ಗಾಯವನ್ನು ಮುಚ್ಚಬೇಡಿ. ನಂಜುನಿರೋಧಕ ಬಳಸಿ ಇದನ್ನು ಸ್ವಚ್ಛಗೊಳಿಸಿ.
    * ದುಗ್ದನಾಳವು ವಿಷ ಪಸರಿಸುವುದನ್ನು ನೀವು ನಿಲ್ಲಿಸಬೇಕು. ಈ ಭಾಗಕ್ಕೆ ಗಟ್ಟಿಯಾಗಿ ಬ್ಯಾಂಡೇಜ್ ಕಟ್ಟಿ, ಪ್ರದೇಶವನ್ನು ನಿಶ್ಚಲವಾಗಿಸಿ. ಕೈ ಅಥವಾ ಕಾಲಿನ ಭಾಗಕ್ಕೆ ಕಡಿದಿದ್ದರೆ ಆಗ ಸ್ಪ್ಲಿಂಟ್ ಬಳಸಿಕೊಂಡು ಈ ಭಾಗ ನಿಶ್ಚಲವಾಗಿಸಿ. ಕಡಿತದ ಭಾಗವನ್ನು(ಕೈಯಾಗಿದ್ದರೆ) ಆಗ ಹೃದಯದ ಮಟ್ಟದಲ್ಲಿಡಿ. ಇದರಿಂದ ವಿಷವು ಬೇರೆ ಭಾಗಕ್ಕೆ ಹರಡುವುದು ತಪ್ಪುವುದು.
    * ಸ್ಪ್ಲಿಂಟ್ ನೊಂದಿಗೆ ನೀವು ಸಂಕೋಚನ ಬ್ಯಾಂಡೇಜ್ ನಿಂದ ಸಂಪೂರ್ಣ ಭಾಗವನ್ನು ಸುತ್ತುವರಿಯಿರಿ. ಇದನ್ನು ನೀವು ತುಂಬಾ ಬಿಗಿಯಾಗಿ ಕಟ್ಟಿಕೊಳ್ಳಿ. ಕೈಯ ಭಾಗದಲ್ಲಿ ಕಡಿತವಾಗಿದ್ದರೆ ಆಗ ನೀವು ಬ್ಯಾಂಡೇಜ್ ನ್ನು ಕಂಕುಳಿನ ತನಕ ಬಿಗಿಯಾಗಿ ಕಟ್ಟಿಕೊಳ್ಳಿ. ಕಾಲಿನ ಭಾಗಕ್ಕೆ ಕಡಿತವಾಗಿದ್ದರೆ ಆಗ ತೊಡೆಸಂಧಿನ ತನಕ ಕಟ್ಟಿಕೊಳ್ಳಿ.
    * ಕಡಿತಕ್ಕೊಳಗಾಗಿರುವ ವ್ಯಕ್ತಿ ಚಯಾಪಚಯವನ್ನು ತಗ್ಗಿಸಬೇಕು. ಇದರಿಂದ ಯಾವುದೇ ಆಹಾರ ಅಥವಾ ಪಾನೀಯ ನೀಡಬಾರದು.
    * ಸಾಧ್ಯವಾದರೆ ಕಡಿತಗೊಳಗಾದ ಐದು ನಿಮಿಷದೊಳಗಡೆ ನೀವು ಹೀರಿಕೊಳ್ಳುವ ಯಂತ್ರ ಬಳಸಿ ವಿಷ ಹೊರತೆಗೆಯಿರಿ.
    ಹಾವು ಕಚ್ಚಿದ ಸಂದರ್ಭದಲ್ಲಿ ಮೊದಲು ಮಾಡುವ ಕೆಲಸ ಹಾವು ಕಚ್ಚಿದ ಸಂದರ್ಭದಲ್ಲಿ ಕಚ್ಚಿದ ಜಾಗಕ್ಕೆ ಯಾವುದಾದರೂ ಚಾಕುವಿಂದ ಸ್ವಲ್ಪ ಗಾಯವನ್ನು ದೊಡ್ಡದು ಮಾಡಿ ವಿಷವನ್ನು ಹೊಂದಿರುವ ರಕ್ತವನ್ನು ಹೊರಹಾಕಬೇಕು. ಇದರ ಬಳಿಕ ಪೊಟಾಶಿಯಂ ಪಾರಾಗ್ನೆಟ್ ಹುಡಿಯನ್ನು ಹಾಕಿಕೊಳ್ಳಿ. ಹಿಂದಿನ ಕಾಲದಲ್ಲಿ ಹಾವು ಕಚ್ಚಿದಾಗ ಗಾಯಕ್ಕೆ ಬಾಯಿ ಹಾಕಿ ವಿಷವನ್ನು ಹೀರಿ ತೆಗೆಯಲಾಗುತ್ತಾ ಇತ್ತು. ಆದರೆ ವಿಷ ಹೀರುವವರಿಗೆ ಇದು ಅಪಾಯಕಾರಿ. ಬೆಟ್ಟ ಪ್ರದೇಶದಲ್ಲಿರುವ ಕೆಲವು ತಜ್ಞರು ಈಗಲೂ ಇದೇ ತಂತ್ರವನ್ನು ಅನುಸರಿಸುತ್ತಾರೆ.
    5-8 ಇಂಚು ಮೇಲಕ್ಕೆ ಹಾಗೂ ಕೆಳಕ್ಕೆ ಬಟ್ಟೆಯಿಂದ ಬಲವಾಗಿ ಕಟ್ಟಿ ಹಾವು ಕಡಿದ ಜಾಗದಿಂದ ವಿಷವನ್ನು ತೆಗೆದ ಬಳಿಕ ಕಡಿದ ಜಾಗಕ್ಕಿಂತ 5-8 ಇಂಚು ಮೇಲಕ್ಕೆ ಹಾಗೂ ಕೆಳಕ್ಕೆ ಬಟ್ಟೆ ಅಥವಾ ಹಗ್ಗದಿಂದ ದೇಹದ ಭಾಗವನ್ನು ಬಲವಾಗಿ ಕಟ್ಟಿ. ಇದರಿಂದ ವಿಷವು ದೇಹಕ್ಕೆ ಹರಡುವುದು ತಪ್ಪುತ್ತದೆ.
    Read more at: kannada.boldsky.com/health/we...
    Read more at: kannada.boldsky.com/health/we...
    ರೈತ ಮಾಹಿತಿ Raitha Mahithi
    Snake Bite First Aid Treatment in Kannada ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆ ಮಾಡುವುದು ಹೇಗೆ ?
    first aid in kannada,how to treat snake bite | ಹಾವಿನ ಕಡಿತಕ್ಕೆ ಚಿಕಿತ್ಸೆ,ಪ್ರಥಮ ಚಿಕಿತ್ಸೆ,snake bite first aid in kannada,first aid for snake bite in kannada | ayurveda tips in kannada | ಹಾವು ಕಡಿತಕ್ಕೆ ಪ್ರಥಮ ಚಿಕೆತ್ಸೆ,first aid for snakebite in kannada,first aid kit in kannada
    ಬೆಳೆ ಮಾಹಿತಿ, ವ್ಯವಹಾರ ಮಾಹಿತಿ, ಕಾಗದ ಪತ್ರಗಳು, ಕಚೇರಿ ಕೆಲಸಗಳು, ತಾಂತ್ರಿಕ ಸಹಾಯ

Komentáře • 6