Video není dostupné.
Omlouváme se.

Nagashree Kalinga Navada ಸಂಪೂರ್ಣ ನಾಗಶ್ರೀ ( part 1 ) ಕಾಳಿಂಗ ನಾವಡ || 1979 || Yakshagana

Sdílet
Vložit
  • čas přidán 4. 12. 2021
  • #ಕಾಳಿಂಗ_ನಾವಡ
    #kalinga_navada
    1979 ಅಲ್ಲಿ ಕುಂದಾಪುರ ಕುಂದೇಶ್ವರ ಜಾತ್ರೆಯಲ್ಲಿ ಪ್ರದರ್ಶನಗೊಂಡ "ಸಂಪೂರ್ಣ ನಾಗಶ್ರೀ" ಪ್ರಸಂಗದ ಧ್ವನಿಸುರುಳಿ.
    ಅಮರಗಂಧರ್ವ ಕಾಳಿಂಗನಾವಡರ ಅಮರ ಕಾವ್ಯವೇ ; ನಾಗಶ್ರೀ.
    ನಾವಡರ ಅದ್ಭುತ ಕಥಾಶಕ್ತಿ, ಅಸಾಧಾರಣ ಕವಿತಾಪ್ರಭೆ, ಅತ್ಯುಚ್ಚ ಮಟ್ಟದ ರಂಗತಂತ್ರದ ಈ ಕಲಾಕೃತಿಯಲ್ಲಿ ಅವರ ಅನುಪಮ ಕಂಚಿನ ಕಂಠಸಿರಿಯ ಮಾಧುರ್ಯದ ಮೆರುಗು ಯಕ್ಷಲೋಕದಲ್ಲಿ ನಾಗಶ್ರೀಯನ್ನು ಸಾರ್ವಕಾಲೀಕ ಶ್ರೇಷ್ಟ ಆಖ್ಯಾನವಾಗಿಸಿತು.
    ನಾಗಶ್ರೀ ಎಂದಾಕ್ಷಣ ಅಲ್ಲಿ ನಾವಡರದೇ ಪರಿಪೂರ್ಣ ಛಾಪು ಇಂದಿಗೂ ಜೀವಂತ. ಆ ಆಖ್ಯಾನದಲ್ಲಿ‌ ಎಲ್ಲಾ ಪದ್ಯಗಳೂ ಗೆದ್ದಿವೆ.ಪಾತ್ರಗಳೂ ಗೆದ್ದಿವೆ. ಪಾತ್ರಧಾರಿಗಳೂ ಗೆದ್ದಿದ್ದಾರೆ.
    ಗಲ್ಲಾಪೆಟ್ಟಿಗೆಯ ವರಲಕ್ಷ್ಮೀಯಾದ ನಾಗಶ್ರೀಯ ಮಾಯೆಗೆ ಒಳಗಾದ ಮಂದಿ ಲಕ್ಷೋಪಲಕ್ಷ.‌ನಾಗಶ್ರೀಯನ್ನು ಕಂಡವರು, ನಾಗಶ್ರೀಯಲ್ಲಿ ನಾವಡರ ಅದ್ಭುತ ಕಂಠದ ಭಾಗವತಿಕೆ ಕೇಳಿದವರು ಅಕ್ಷರಶ: ಯಕ್ಷಗಾನಕ್ಕೆ ಸಮರ್ಪಣೆಯಾದರು.
    ನಾವಡರು ಹೇಗೆ ಯಕ್ಷಗಾನದಲ್ಲಿ ' ವರಭಾಗವತ' ರಾದರೋ,‌ಅವರ ರಚನೆಯ ನಾಗಶ್ರೀಯೂ ಯಕ್ಷಲೋಕದ ವರಕೃತಿಯಾಯಿತು.
    ನಾಗಶ್ರೀ ಎಂಬ ಕಲಾಕುಸುಮ ಯಾವತ್ತೂ ಬಾಡುವುದಿಲ್ಲ..ಯಾಕೆಂದರೆ ಅದು ನಾವಡರೆಂಬ ದೇವಗಂಧರ್ವ ನಿರ್ಮಿತ ಕಲಾಕೃತಿ.
    ಭಾಗ 1 - • Nagashree Kalinga Nava...
    ಭಾಗ 2 - • Nagashree Kalinga Nava...
    ಭಾಗ 3 - • Nagashree Kalinga Nava...
    ಭಾಗ 4 - • Nagashree Kalinga Nava...
    ಭಾಗ 5 - • Nagashree Kalinga Nava...
    ಭಾಗ 6 - • Nagashree Kalinga Nava...
    ಭಾಗ 7 - • Nagashree Kalinga Nava...
    ಭಾಗ 8 - • Nagashree Kalinga Nava...
    ಭಾಗ 9 - • Nagashree Kalinga Nava...
    ಭಾಗ 10 - • Nagashree Kalinga Nava...

Komentáře • 16