354 ಅಷ್ಟಲಕ್ಷ್ಮಿ ರಂಗೋಲಿ/Ashta Lakshmi Rangoli

Sdílet
Vložit
  • čas přidán 1. 11. 2021
  • ಹರೇ ಶ್ರೀನಿವಾಸ,
    ಸಕಲ ಸಂಪತ್ತನ್ನು ಕೊಡುವ ಅಷ್ಟೈಶ್ವರ್ಯ ರಂಗೋಲಿ ಹಾಕುವ ವಿಧಾನವನ್ನು ತಿಳಿಸಲಾಗಿದೆ.
    ಸಂಕ್ಷಿಪ್ತ ಲಕ್ಷ್ಮೀಹೃದಯಸ್ತೋತ್ರಮ್
    ಶ್ರೀದೇವಿ ಪ್ರಥಮಂ ನಾಮ ದ್ವಿತೀಯಮಮೃತೋದ್ಭವಾ | ತೃತೀಯಂ ಕಮಲಾ ಪ್ರೋಕ್ತಾ ಚತುರ್ಥ೦ ಚಂದ್ರಲೋಚನಾ Il 1 |I
    ಸಂಪತ್ಪ್ರದಳಾದುದರಿಂದ 'ಶ್ರೀದೇವಿ' ಎನಿಸಿರುವಳು. ಅಮೃತಮಥನಕಾಲದಲ್ಲಿ ಪ್ರಾದುರ್ಭವಿಸಿದ ಕಾರಣ ಸಿರಿದೇವಿಗೆ 'ಅಮೃತೋದ್ಭವಾ' ಎಂಬುದು ಎರಡನೆಯ ಹೆಸರು. ಕಮಲದಲ್ಲಿ ಪ್ರಕಟಳಾದ ಕಾರಣ 'ಕಮಲಾ' ಎಂದು ಅವಳ ಮೂರನೆಯ ನಾಮಧೇಯ , ಚಂದ್ರನಂತೆ ತಾಪನೀಗಿಸುವ ಕಂಗಳಿರುವ ಕಾರಣ 'ಚಂದ್ರಲೋಚನಾ' ಎಂದು ಇವಳ ನಾಲ್ಕನೆಯ ನಾಮ.
    ಪಂಚಮಂ ವಿಷ್ಣುಪತ್ನಿ ಚ ಷಷ್ಠಂ ಶ್ರೀವೈಷ್ಣವೀ ತಥಾ | ಸಪ್ತಮಂ ತು ವರಾರೋಪಾ ಹೈಷ್ಟಮಂ ಹರಿವಲ್ಲಭಾ
    Il 2||
    ಪರದೇವತೆಯಾದ ವಿಷ್ಣುವಿನ ಪತ್ನಿಯಾದುದರಿಂದ 'ವಿಷ್ಣುಪತ್ನೀ' ಎಂಬುದು ಇವಳ ಐದನಯ ಹೆಸರು. ಇವಳು ಕೇವಲ ವಿಷ್ಣುವಿನ ಅಂತರಂಗ ಭಕ್ತಳಾದುದರಿಂದ 'ಶ್ರೀವೈಷ್ಣವೀ' ಎನಿಸಿದ್ದಾಳೆ. ಏಳನೆಯ ನಾಮಧೇಯವು ಉತೃಷ್ಟಳಾದ ಸ್ತ್ರೀದೇವತೆಯಾದುದರಿಂದ 'ವರಾರೋಹಾ' ಎನಿಸಿದ್ದಾಳೆ. ಇವಳಷ್ಟು ಹರಿಗೆ ಪ್ರಿಯಳಾದವಳು ಮತ್ತೊಬ್ಬಳಿಲ್ಲದ ಕಾರಣ 'ಹರಿವಲ್ಲಭಾ' ಎನಿಸಿದ್ದಾಳೆ. ಇದು ಇವಳ ಎಂಟನಯ ನಾಮಧೇಯ.
    ನವಮಂ ಶಾಙ್ಗಿರ್ಣೀ ಪ್ರೋಕ್ತಾ ದಶಮಂ ದೇವದೇವಿಕಾ | ಏಕಾದಶಂ ಮಹಾಲಕ್ಷ್ಮೀ: ದ್ವಾದಶಂ ಲೋಕಸುಂದರೀ
    I 3 |I
    ಶಾರ್ಙ್ಗಬಿಲ್ಲನ್ನು ಧರಿಸಿದ ಕಾರಣ ಇವಳು 'ಶಾಙ್ಗಿರ್ಣೀ' ಎನಿಸಿದ್ದಾಳೆ. ಕೇವಲ ನಾರಾಯಣನೊಂದಿಗೆ ಕ್ರೀಡಿಸುವ ಕಾರಣ 'ದೇವದೇವಿಕಾ' ಎನಿಸಿದ್ದಾಳೆ . ಅಪಾರ ಸಂಪತ್ತಿಯನ್ನು ಕರುಣಿಸುವ ಕಾರಣದಿಂದ ಇವಳನ್ನು 'ಮಹಾಲಕ್ಷ್ಮಿ ಎನ್ನುವರು. ಇದು ಇವಳ ಹನ್ನೊಂದನೆಯ ನಾಮಧೇಯವು. ಹದಿನಾಲ್ಕು ಲೋಕಗಳಲ್ಲಿ ಅದ್ವಿತೀಯ ಸುಂದರಿಯಾದ ಕಾರಣ 'ಲೋಕಸುಂದರೀ' ಎನಿಸಿದ್ದಾಳೆ.
    ಶ್ರೀ ಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರೀಲೋಕೇಶ್ವರೀ I
    ಮಾ ಕ್ಷೀರಾಬ್ದಿಸುತಾ ವಿರಿಂಚಜನನೀ ವಿದ್ಯಾ ಸರೋಜಾನನಾ |I
    ಸರ್ವಾಭೀಷ್ಟಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ I
    ಪ್ರಾತಃ ಶುದ್ದತರಾ ಪಠಂತ್ಯಭಿಮತಾನ್ ಸರ್ವಾನ್ ಲಭಂತೇ ಗುಣಾನ್ || 4 ||
    ಇದಲ್ಲದೆ ಶ್ರೀ-ಪದ್ಮಾ-ಕಮಲಾ-ಮುಕುಂದಮಹಿಷಿ(ಕೃಷ್ಣನ ಮಡದಿ)- ಲಕ್ಷ್ಮೀ
    ತ್ರಿಲೋಕೆಶ್ವರಿ-ಮಾ-ಕ್ಷೀರಾಬ್ದಿಸುತಾ (ಕ್ಷೀರಸಾಗರದಲ್ಲಿ ಪ್ರಕಟಗೊಂಡವಳು)
    ವಿರಂಚ ಜಪನಿ(ಚತುರ್ಮುಖ ಬ್ರಹ್ಮನ ತಾಯಿ)-ವಿದ್ಯಾ-ಸರೋಜಾನನಾ(ಕಮಲದಂತ ಮುಖವುಳ್ಳವಳು)-ಸರ್ವಾಭೀಷ್ಟಫಲಪ್ರದಾ(ಎಲ್ಲ ಇಷ್ಟಾರ್ಥವನ್ನು ಪೂರೈಸುವವಳು) ಎಂಬುದಾಗಿ ಲಕುಮೀ ದೇವಿಯ ಹನ್ನೆರಡು ನಾಮಗಳು ಪ್ರಸಿದ್ಧವಾಗಿದ್ದಾವೆ . ಯಾರು ಬೆಳಗುಜಾವದಲ್ಲಿ ಶುದ್ಧ ಮನಸ್ಸಿನಿಂದ ಈ ನಾಮಗಳನ್ನು ಪಠಿಸುವರೋ ಅವರು ಸಿರಿದೇವಿಯ ಕೃಪೆಯಿಂದ ಮಂಗಳಗುಣಗಳ ಅಭಿವ್ಯಕ್ತಿಯನ್ನು ಹೊಂದುವರು.
    ಶ್ರೀಲಕ್ಷ್ಮೀವೃದಯಂ ಚೈತನ್ನಾಮದ್ವಾದಶಯುಗ್ಮಕಮ್ | ತ್ರಿವಾರಂ ಪಠತೇ ಯಸ್ತು ಸರ್ವೈಶ್ವರ್ಯಮವಾಪ್ನುಯಾತ್ II 5 I I
    ಹನ್ನರಡು ನಾಮಗಳಿಂದ ಕೂಡಿದ ಲಕ್ಷ್ಮೀಹೃದಯವನ್ನು ಮೂರುಬಾರಿ ಪರಿಸುವವರು, ಎಲ್ಲ ಬಗೆಯ ಐಶ್ವರ್ಯವನ್ನು ಹೊಂದುವರು.
    || ಇತಿ ಸಂಕ್ಷಿಪ್ತ ಲಕ್ಷ್ಮೀಹೃದಯಸ್ತೋತ್ರಮ್ ||
    11 ಶ್ರೀ ಕೃಷ್ಣಾರ್ಪಣಮಸ್ತು ||
  • Zábava

Komentáře • 147

  • @damayanthik8072
    @damayanthik8072 Před 2 lety +12

    ಹರೇ ಶ್ರೀ ನಿವಾಸ ಸರಳವಾಗಿ ರಂಗೋಲಿ ಹಾಕುವುದನ್ನು ತೋರಿಸಿಕೊಟ್ಟಿದ್ದಾರೆ ಆ ತಾಯಿ ಯವರಿಗೆ ನನ್ನ ಅನಂತ ನಮನಗಳು

  • @geetamutalik6917
    @geetamutalik6917 Před 9 měsíci +1

    Hare shrinivasa🙏🙏

  • @RadhaRatnamala-mi3sl
    @RadhaRatnamala-mi3sl Před 11 měsíci +2

    Thank you so much Mam.
    This reminded me of my grandmother.
    I learned a very valuable lesson today.
    Because of your unselfish efforts we are learning dharma and sampradaya.
    God bless you 🙏

  • @nalinisjoshi3399
    @nalinisjoshi3399 Před 2 lety +2

    ತುಂಬಾ ಚೆನ್ನಾಗಿ ರಂಗೋಲಿ ಹಾಕಿ,ನಮಗೆ ಸುಲಭವಾಗಿ ಹಾಕುವ ವಿಧಾನ ಕಲಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.ಇಂಥ ಮಹಾನ ವ್ಯಕ್ತಿಯನ್ನು ಪರಿಚಯಿಸಿದ ನಿಮಗೂ ಧನ್ಯವಾದಗಳು

  • @shanthavenkatrao4904
    @shanthavenkatrao4904 Před 2 lety +4

    Super sulabhavagi astalakshmi rangole hakabahudu hare srinivasa 👍🙏🙏🙏🙏🙏🙏🙏🙏🙏🙏🙏

  • @pramodagc851
    @pramodagc851 Před 2 lety +2

    ಅಷ್ಟಲಕ್ಷ್ಮಿ ರಂಗೋಲಿಯನ್ನು ಹಾಕುವುದು ಹೇಗೆ ಎಂಬುದನ್ನು ಸವಿವರವಾಗಿ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ತೋರಿಸಿದ ಅಮ್ಮನವರಿಗೆ ಮತ್ತು ರಮಾದೇವಿ ಅವರಿಗೂ 🤝🙏🙏👌👌👌 ಇಂಥ ಸಂಸ್ಕಾರಗಳ ಮಾಹಿತಿಗಳು ತಿಳಿಸಿಕೊಟ್ಟಿದ್ದಕ್ಕೆ ಹೃದಯಪೂರ್ವಕ ನಮಸ್ಕಾರಗಳು. 💐💐💐🙏🙏🙏

  • @meenakshimeenakshi2126
    @meenakshimeenakshi2126 Před rokem +1

    Veri.Nice.mam🙏🙏🙏🌼

  • @zenomplayz7056
    @zenomplayz7056 Před rokem +1

    Thx u so much mam, hare srinivasa

  • @doddaachchammadoddaachcham7664

    ತುಂಬಾ ಚೆನ್ನಾಗಿ ಇರೊ ರಂಗೊಲಿ ಹಾಕಿ ತೊರಿಸಿದ್ದಾರೆ.ತುಂಬಾ ಧನ್ಯವಾದಗಳು ಮೆಡಂ 🙏🙏 ಪರಿಚಯಿಸಿದ್ದಕ್ಕೆ.

  • @radhapaanghanti1751
    @radhapaanghanti1751 Před 28 dny

    ಖಂಡಿತವಾಗಿಯೂ ಸ್ವಾಗತಿಸುತ್ತೇವೆ,

  • @archanapatil3592
    @archanapatil3592 Před 2 lety +1

    Amma ji aapne बहोत अच्छा information di....🙏🙏👌👌

  • @sujatahawaligi2458
    @sujatahawaligi2458 Před rokem +1

    🙏💐Amma tq

  • @sudham139
    @sudham139 Před 2 lety +2

    ರಮಾದೇವಿ ಅಮ್ಮ ನೀವು ಹೇಳುವ ಪ್ರತಿಯೊಂದು ದಾರಿದೀಪ ನಮ್ಮಗೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ. ಎಲ್ಲರಿಗೂ ಮಾರ್ಗದರ್ಶಕರಂತೆ ದಾರಿ ತೋರಿಸುತ್ತಿರುವೀರಿ. ನಿಮ್ಮ ಸಹಾಯ ಎಂದಿಗೂ ಮರೆಯುವುದಿಲ್ಲ ಮೇಡಂ🙏

  • @jyothikulkarni4174
    @jyothikulkarni4174 Před 2 lety +5

    ನಿಮ್ಮನ್ನು ನೋಡೋದೆ ಒಂದು ಖುಷಿ..😍😍

  • @coolkid509
    @coolkid509 Před 2 lety +1

    🙏🙏🙏🙏Amma Hare shreenivasa tumba tumba chanagide amma nanu Shree lakshmi hrudaya haktini amma... iga amma avru torsiddu tumba tumba Santosh agate amma yeshtu samdhan agate noddrene henta olle Ole vishya helkodtira nivu nimge tumba namskargalu ashirvad madi amma🙏

  • @rohinivellala4396
    @rohinivellala4396 Před 2 lety +1

    ತುಂಬಾ ಚೆನ್ನಾಗಿದೆ....ಧಾನ್ಯವಾದಗಳು...,
    🙏🙏🙏🙏🙏🙏🙏🙏🙏🙏🙏🙏

  • @nagalakshminp8385
    @nagalakshminp8385 Před 2 lety +1

    🙏🏻🙏🏻🙏🏻👌 Hare srinivasa 🙏🏻🙏🏻

  • @lakshmis579
    @lakshmis579 Před rokem +1

    Very nice v expect more and more videos from you like this

  • @vijayendranr1054
    @vijayendranr1054 Před 2 lety +2

    Thumba Chennagi idhe. Thumba thanks Amma

  • @geethajayachandra721
    @geethajayachandra721 Před 2 lety

    🙏 ಹರೇ ಕೃಷ್ಣ ಅಮ್ಮ ನಿಮಗೆ ತುಂಬಾ ಧನ್ಯವಾದಗಳು 🙏🌺🙏

  • @varuniandvivek3315
    @varuniandvivek3315 Před 2 lety +1

    Thank you amma super information 🙏🙏🙏🙏

  • @shanthaladevi8446
    @shanthaladevi8446 Před 2 lety +1

    Thank You So Very Much Madam 💐💐💐💐💐🙏🙏🙏🙏🙏

  • @varunia5763
    @varunia5763 Před 2 lety +1

    Tq very much Madam very nice video🙏💐

  • @savitasaraf7925
    @savitasaraf7925 Před 2 lety +1

    Thanks for sharing this video

  • @jayanthibadarinath7932

    ತುಂಬಾ ಚೆನ್ನಾಗಿದೆ , ಸುಲಭವಾಗಿ ಹೇಳಿ ಕೊಟ್ಟಿದ್ದಾರೆ 🙏🙏

  • @s.m.kuppi.9349
    @s.m.kuppi.9349 Před 2 lety +2

    ಹರೇ ಶ್ರೀನಿವಾಸ.🙏🙏🙏🙏🙏🙏

  • @geetakulkarni8928
    @geetakulkarni8928 Před 2 lety +1

    Supar rangoli and sloka🙏🙏

  • @gururajsc5456
    @gururajsc5456 Před 2 lety +1

    Tumba chanagi heli kottidakke dhanyawadagalu...🙏

  • @user-zb2fb4ir9m
    @user-zb2fb4ir9m Před 2 měsíci +1

    ❤❤

  • @omkarmurtyomkar366
    @omkarmurtyomkar366 Před 2 lety +2

    Namaste Amma nice

  • @bhagyasareekuchucreation9741

    ಬಹಳ ಸುಂದರವಾಗಿದೆ ಅಮ್ಮ ಸುಲಭದ ರೀತಿಯಲ್ಲಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ🙏🙏🙏🙏🌹🌹💐💐

  • @premapandurangi2161
    @premapandurangi2161 Před 2 lety

    Thank you she is talented rangoli is very beautiful will try

  • @geethavenkat9526
    @geethavenkat9526 Před 2 lety +7

    Hare Srinivasa, thank you very much Madam, you are not only doing Good service but bringing out others talent/ skills.
    You are simply superb

  • @nagamani5036
    @nagamani5036 Před 2 lety

    ಹರೇ ಶ್ರೀನಿವಾಸ ಅಮ್ಮ💐

  • @gayathrikrishnaswamy938
    @gayathrikrishnaswamy938 Před 2 lety +3

    ನಮಸ್ಕಾರ ಅಮ್ಮ
    ನನಗೇ ಬಹಳ ದಿನಧ ಆಸೆ ಇತ್ತು ಈ ಅಷ್ಟಲಕ್ಷ್ಮಿ ರಂಗೋಲಿ ಕಲಿಯಲ್ಲೂ..... ಇವತ್ತು ನಿಮ್ಮ ಮುಖೇನೇ ಕಲಿಯಲು ಅವಕಾಶ ಆಯಿತು. ರಂಗೋಲಿ ಜ್ಯೋತೆಗೇ ಸಂಕ್ಷಿಪ್ತ ಲಕ್ಷ್ಮೀ ಹೃದಯ ಸ್ತೋತ್ರ ಕೂಡ ತಿಳಿಸಿಧಕ್ಕೆ ನಿಮಗೇ ಮತೊಮ್ಮೆ ಮೊಗಧೂಮ್ಮೆ ಧನ್ಯವಾದಗಳು 🙏🙏
    ವಿನಯಪೂರ್ವಕ ದೊಂಧೀಗೆ
    ಗಾಯತ್ರಿಕೃಷ್ಣಸ್ವಾಮಿ

  • @namishradhakrishnaseva2941

    Namasthe amma hare krishna 🙏🏻💗

  • @nagarathnan2594
    @nagarathnan2594 Před 2 lety +1

    Superb 👌👌🙏🙏

  • @chandrikaanand2513
    @chandrikaanand2513 Před 2 lety +5

    Super🙏🙏🙏🙏

  • @smppsm3459
    @smppsm3459 Před 2 lety

    ನಾನು ಮೂರನೇ ತರಗತಿ ಇದ್ದಾಗ,ನನ್ನ ಗೆಳತಿಯಿಂದ ಕಲಿತು,ಶಾಲಾ ಸ್ಪರ್ಧೆಯಲ್ಲಿ ಇದನ್ನು ಹಾಕಿ ಪ್ರಥಮ ಬಹುಮಾನ ಪಡೆದಿದ್ದೆ.ನನ್ನಿಂದ ನಮ್ಮ ಶಾಲೆಯ ಶಿಕ್ಷಕರು ಹೇಳಿಸಿಕೊಂಡಿದ್ದರು.ಆ ಸಂದರ್ಭ ನನಗೆ ಹೆಮ್ಮೆ ತಂದಿದೆ.

  • @ARUNKUMAR-pt3oc
    @ARUNKUMAR-pt3oc Před 2 lety +1

    Hare srinivasa amma

  • @prabhakarnarayanareddy9592

    Very nice, hope our culture and traditions will remain forever

  • @vijayatr3677
    @vijayatr3677 Před 2 lety

    ನಿರೂಪಣೆ ಚೆನ್ನಾಗಿ ಮಾಡಿದ್ದೀರಿ ಹಾಗೆ ಅಷ್ಟಲಕ್ಷ್ಮಿ ರಂಗೋಲಿಯನ್ನು ನಮಗೆ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @anithanarayan3314
    @anithanarayan3314 Před rokem +1

    God bless you Amma

  • @sumangalabharadwaj2464

    🙏ಹರೇ ಶ್ರೀನಿವಾಸ 🙏

  • @hemalathatr6006
    @hemalathatr6006 Před 2 lety

    Very easy method tq for sharing sister namaskara amma bless all of us Happy Deepavali 🙏🙏🙏🙏🙏🙏🙏🙏🙏🙏🙏🙏

  • @thanoojathanooja2437
    @thanoojathanooja2437 Před 2 lety +1

    Om sri matre namaha

  • @indirabhat3974
    @indirabhat3974 Před 2 lety +1

    Suuuper amma.

  • @kurudilavanya1494
    @kurudilavanya1494 Před 2 lety

    Chanagide Amma 🙏

  • @karthibilla8543
    @karthibilla8543 Před 2 lety +1

    Superr

  • @chandrakalakala9931
    @chandrakalakala9931 Před 2 lety +1

    ಧನ್ಯವಾದಗಳು 🙏🙏

  • @ushagudi3601
    @ushagudi3601 Před 2 lety +1

    ಹರೆಶೀನೀವಾಸ 🙏 🙏 🙏 🙏 🙏

  • @appurao964
    @appurao964 Před 2 lety

    Very nice Amma ; me Telugu but could fully understand what you said . Om Srimatre Namahah.🙏

    • @ramadevirajalakshmi2939
      @ramadevirajalakshmi2939  Před 2 lety

      ಯಾರಾದರೂ ಇವರಿಗೆ ತೆಲುಗು ಭಾಷೆಯಲ್ಲಿ ಉತ್ತರ ಕೊಡುತ್ತೀರ ದಯವಿಟ್ಟು

    • @shobareddy6425
      @shobareddy6425 Před 2 lety

      Me too Telugu eee muggu inti baita door mundu veyavachandi

  • @revathinagaraja5967
    @revathinagaraja5967 Před 2 lety +1

    Thanks for rangoli

  • @kravmaga2468
    @kravmaga2468 Před 2 lety

    very nice madam

  • @sriramani1304
    @sriramani1304 Před 2 lety +1

    Haresrinivasa 👍👍👍🙏🙏🙏🙏🙏

  • @seshukumari1442
    @seshukumari1442 Před 2 lety +2

    Nice..

  • @savithriravindra889
    @savithriravindra889 Před 2 lety

    Jevasarthkaayth. Nimma. Nodi. Thumba. Veshya. Thlidhidder. Helluthra. Thanku. So. Much. Mam

  • @sunithanarayanswami3421
    @sunithanarayanswami3421 Před 2 lety +1

    Thank you mam

  • @indiraramkishore3483
    @indiraramkishore3483 Před 2 lety +2

    🙏🙏🙏

  • @nigamaramana2829
    @nigamaramana2829 Před 2 lety +2

    🙏🙏🙏🙏🙏🌹

  • @vijaeendraraorao3375
    @vijaeendraraorao3375 Před 2 lety +1

    Tq 👌👍🙏

  • @rsvgirish5154
    @rsvgirish5154 Před 2 lety

    Super Rangoli

  • @bpatil992
    @bpatil992 Před 2 lety +1

    🙏🙏🙏🙏🙏🙏🙏🙏🙏🙏🙏🙏🙏🙏

  • @h.anageshababu5872
    @h.anageshababu5872 Před 2 lety

    ನಮಸ್ಕಾರಮ್ಮ, ತುಂಬಾ ಚೆನ್ನಾಗಿ ತೋರಿಸಿ, ಸ್ತೋತ್ರ ಸಹ ಕೇಳಿಸಿದಿರಿ 🙏🏻

  • @sudhamadhavi621
    @sudhamadhavi621 Před 2 lety

    🙏🏼🙏🏼🙏🏼

  • @umah7617
    @umah7617 Před 2 lety +1

    🙏🙏🙏🙏🙏

  • @sucharitharao2313
    @sucharitharao2313 Před 2 lety +1

    🙏

  • @ramadeviramu3340
    @ramadeviramu3340 Před 2 lety

    🙏🌺🙏

  • @coolkid509
    @coolkid509 Před 2 lety +1

    🙏🙏🙏Hare shreenivasa Amma nanu ishtu Dina lakshmi hrudaya haktide ivattu mangalvara Nam kuldevru Tulza ambhabhavani diwas nanu Ashta Lakshmi Rangoli haki Aarti madde amma tumba santosha aytu dhanyavada amma first day swalp tap aytu aa parmtmnige kshme keltini sari madkondu hakkde mansige samdhan kodatte amma

  • @revathipv3433
    @revathipv3433 Před 2 lety +2

    🙏👌👍🌹🌹

  • @jyotsna.rao23
    @jyotsna.rao23 Před 2 lety

    🙏🙏🙏🙏

  • @susheelaananthamurthy5837

    Nice rongoli. Please show some rongoli to put in front of the god

  • @jayalakshmigshenoy4509

    Thulsi pooje hengasaru madbahuda

  • @umamaheswari6730
    @umamaheswari6730 Před 2 lety

    Amma Nameskaram

  • @shrutikulkarni369
    @shrutikulkarni369 Před 2 lety +1

    Naavu ee rangolege RAMANA TOTTILU anta karitivi

  • @mayanarayan5723
    @mayanarayan5723 Před 2 lety

    Rama nama rangoli devara manellai akuvudu ellutira

  • @arunsagarr8699
    @arunsagarr8699 Před 2 lety +3

    Amma Namaskara
    Dayavittu ondhu korike
    Namage dashami ekadashi mathu dhwadhasi ya acharane yannu purthi Yagi heli kodi.
    Dhashami acharane hege opathina bagge mathu dhwadhasi parayane hegge dhwadhasi ya opathina bagge thilisi kodi en thin bahudhu en thin bardhu
    Dayavittu thilisi kodi Amma
    ಜೈ ಶ್ರೀ ರಾಮ
    ಜೈ ಶ್ರೀ ಕೃಷ್ಣ
    ಹರೇ ಶ್ರೀನಿವಾಸ

    • @ramadevirajalakshmi2939
      @ramadevirajalakshmi2939  Před 2 lety

      ಖಂಡಿತವಾಗಲೂ ನಿಮಗೋಸ್ಕರ ವಾಗಿ ಹೇಳಿಕೊಡುತ್ತೇನೆ

  • @anitham1381
    @anitham1381 Před 2 lety

    Amma astalakshmi rangoli horagade angadalli hakabahuda

    • @ramadevirajalakshmi2939
      @ramadevirajalakshmi2939  Před 2 lety

      ಯಾರು ತೊಳಿ ಬಾರದು ಅಂಥ ಜಾಗದಲ್ಲಿ ಹಾಕಬೇಕು

  • @gowrishreeshree5938
    @gowrishreeshree5938 Před 2 lety +1

    Madam nim native heli pls ma🙏🙏🙏🙏

  • @rajashreegururaj4077
    @rajashreegururaj4077 Před 2 lety

    Namaskara Ramadevi akkanige
    Ondashtu odapu galannu krupe maadi
    Tilsi kodi🙏

    • @ramadevirajalakshmi2939
      @ramadevirajalakshmi2939  Před 2 lety

      ಅರ್ಥವಾಗಲಿಲ್ಲ ಸರಿಯಾಗಿ ಹೇಳಿ

    • @rajashreegururaj4077
      @rajashreegururaj4077 Před 2 lety

      @@ramadevirajalakshmi2939 nanna magalige ogatugalu bekagive..
      Tamma sheeghra pratikriyege dhanyavaadagalu

  • @bhagyakulkarni778
    @bhagyakulkarni778 Před 2 lety

    Amma,nivu tirupatiyalli 1 vaar seve maadiddar bagge helidri mattu aachaar no. Koduttene antaanu helidri namagu tirupatiya shrinivasana seve 1 vaar mado aase ide dayavittu no. Kodi mattu nivu aachaaryarige tilisi please.

    • @ramadevirajalakshmi2939
      @ramadevirajalakshmi2939  Před 2 lety

      ಸಾಧನೆಯ ಸಾಧಕಿ ವಿಡಿಯೋದಲ್ಲಿ ಫೋನ್ ನಂಬರ್ ಕೊಟ್ಟಿದ್ದೇವೆ ಅವರಿಗೆ ಫೋನ್ ಮಾಡಿ ಕೇಳಿ

  • @aparnamutga1104
    @aparnamutga1104 Před 2 lety +1

    Thumba channageede

  • @sunithanarayanswami3421

    Rangoli powder gy rise powder mix madbauda

  • @coolkid509
    @coolkid509 Před 2 lety

    Hare shreenivasa amma navu tulsi vivahakke hakida mangalsutra mattu bale gallanu hage idbeka athva yenu anusandhan madi tagibeku helkodi ammw

    • @ramadevirajalakshmi2939
      @ramadevirajalakshmi2939  Před 2 lety

      ಬಳೆಗಳನ್ನು ತುಳಸಿ ಗಿಡದಲ್ಲಿಯೇ ಇರಲಿ ನಿಮ್ಮ ತುಳಸಿ ಗಿಡದ ಕುಂಡ ಹೊರಗಡೆ ಇದ್ದರೆ ತಾಳಿಯನ್ನು ಭಾನುವಾರ ತೆಗೆದುಬಿಡಿ ನಿಮ್ಮ ಮನೆಯ ಒಳಗಡೆ ಕಾಂಪೌಂಡ್ ಅಲ್ಲಿ ತುಳಸಿ ಗಿಡ ಇದ್ದರೆ ತಾಳಿ ಇರಲಿ ಬಿಡಿ ಆದರೆ ಅದು ನಿಮ್ಮ ನಿಮ್ಮ ಅನುಕೂಲ ತಾಳಿ ಜಾಸ್ತಿ ಇದ್ದರೆ ತುಳಸಿ ಗಿಡ ದಲ್ಲಿ ಅಂದರೆ ತುಳಸಿ ಗಿಡಕ್ಕೆ ಕಟ್ಟಿ ಇಲ್ಲ ಅಂದರೆ ಭಾನುವಾರ ತೆಗೆದುಬಿಡಿ ಸ್ನಾನ ಮಾಡಿ ತುಳಸಿ ಪೂಜೆ ಮಾಡಿ ತುಳಸಿ ದೇವಿ ತಪ್ಪಾಗಿದ್ದರೆ ಕ್ಷಮಿಸು ಅಂತ ಕೇಳಿ ತಾಳಿಯನ್ನು ತೆಗೆದಿಟ್ಟು ನೀವು ಬೇರೆ ದಿಕ್ಕ ಉಪಯೋಗಿಸಬಹುದು

    • @coolkid509
      @coolkid509 Před 2 lety

      @@ramadevirajalakshmi2939 hare shreenivasa amma nange gotgalil ninne tuppad deepa hacchi tulsi gida pot horgade idtini ant tali tagdu itte olgade ittre tulsi badu hogate ant IGA yen madli amma... Daivittu tilsi please

    • @coolkid509
      @coolkid509 Před 2 lety

      Nale shukravara matte haki arishin kumkum yersal heli amma

  • @shivakumar-qt3qd
    @shivakumar-qt3qd Před 2 lety +1

    Mam ivathu gold purchase madbahuda

  • @jayashreer753
    @jayashreer753 Před rokem

    Many call this akshaya pathre rangoli

  • @omkarmurtyomkar366
    @omkarmurtyomkar366 Před 2 lety

    Amma Nima betie agabeku

  • @adhika11
    @adhika11 Před 2 lety

    Namaskara hiriyarige hagu tamagu. Navarathriyalli ondu chikka devi mantra hakidri adarinda nerehoreyavarinda tondare baralla anta ithu a mantradalli . Madam pl pl a sloka nanage beku dayamadi adannu haki nimage nanu chiraruni agiruthini.

    • @ramadevirajalakshmi2939
      @ramadevirajalakshmi2939  Před 2 lety

      ನನಗೆ ವಿಡಿಯೋ ನಂಬರ್ ಹೇಳಿ ನನ್ನ ವಾಟ್ಸಪ್ ಗೆ ನಿಮ್ಮ ಹೆಸರು ಹಾಕಿ ನನಗೆ ಮೆಸೇಜ್ ಮಾಡಿ ನಾನು ಅಸ್ತೋತ್ರ ಕಳಿಸುತ್ತೇನೆ

    • @adhika11
      @adhika11 Před 2 lety

      Respected madam that sloka was during navarathri. I think there was no number.pl send madi madam

  • @mohithdarshan3951
    @mohithdarshan3951 Před 2 lety

    Ammapleasepropertydivedmantra

  • @rujulakondapalli
    @rujulakondapalli Před 2 lety

    Where to draw in temple of house? or in front of house?

  • @sumaseetharam4556
    @sumaseetharam4556 Před 2 lety +1

    🌺🌺🙏🙏

  • @srinivasrao7083
    @srinivasrao7083 Před rokem

    Kindly share contact no. Of Ramadevi rajalakshmi. Very urgent

  • @nandinibalagadde9763
    @nandinibalagadde9763 Před 2 lety +1

    Amma kannada astu gottilla naanu chennai nalliiddini thankstorsidakke

    • @ramadevirajalakshmi2939
      @ramadevirajalakshmi2939  Před 2 lety

      ತುಳಸಿಗೆ ಎಷ್ಟು ಹೊತ್ತು ದೀಪ ಹಚ್ಚಬೇಕು ಅನ್ನೋ ವಿಡಿಯೋದಲ್ಲಿ ನಿಮಗೆ ಹೇಳುತ್ತಾರೆ ಅವರ ನಂಬರ್ ವಿಡಿಯೋದಲ್ಲಿ ಕೊಟ್ಟಿದ್ದೇನೆ ನೋಡಿ

    • @ramadevirajalakshmi2939
      @ramadevirajalakshmi2939  Před 2 lety

      ತಮಿಳಿನಲ್ಲಿ ಹೇಳುತ್ತಾರೆ ವಿಜಯಲಕ್ಷ್ಮಿ ರವಿ ಅವರ ನಂಬರ್ ಕೊಟ್ಟಿದ್ದೇನೆ ವಿಡಿಯೋವನ್ನು ನೋಡಿ

  • @shamanachar.v6383
    @shamanachar.v6383 Před 2 lety +2

    Please lyrics amma 🙏🙏

    • @ramadevirajalakshmi2939
      @ramadevirajalakshmi2939  Před 2 lety +1

      ಡಿಸ್ಕ್ರಿಪ್ಶನ್ ಬಾಕ್ಸರ್ ಹಾಕಿದ್ದೇನೆ ನೋಡಿ

    • @shamanachar.v6383
      @shamanachar.v6383 Před 2 lety

      @@ramadevirajalakshmi2939 thanks 🙏

  • @sanjanagirish09
    @sanjanagirish09 Před 2 lety +1

    Nivu Nam dharwad bhashana matadva..innu chand annastada

  • @omkarmurtyomkar366
    @omkarmurtyomkar366 Před 2 lety +1

    Kannada dallie barebavada

  • @Tirumala_Live_updates
    @Tirumala_Live_updates Před 2 lety

    Pooje ಕಲಶದ ಕಾಯಿ ಚಿಗುರು ಬಂದಿದೆ ಏನು ಮಾಡಬೇಕು ಅಮ್ಮ ಹೇಳಿ

    • @ramadevirajalakshmi2939
      @ramadevirajalakshmi2939  Před 2 lety

      ನಿಮ್ಮ ಮನೆಯಲ್ಲಿ ಜಾಗವಿದ್ದರೆ ಮಣ್ಣಿನಲ್ಲಿ ಹಾಕಿ ತೆಂಗಿನ ಮರ ಬೆಳೆಯುತ್ತದೆ ಒಳ್ಳೆಯದು

    • @Tirumala_Live_updates
      @Tirumala_Live_updates Před 2 lety

      @@ramadevirajalakshmi2939 tq amma

    • @savithriravindra889
      @savithriravindra889 Před 2 lety

      @@ramadevirajalakshmi2939nima. Phone. Number. Kalluhsi. Personal. Mathadabeku. Mm. Please

  • @nagarantharamesh5438
    @nagarantharamesh5438 Před 2 lety +1

    🙏🙏🙏

  • @sudhaanandmathad5327
    @sudhaanandmathad5327 Před 2 lety

    🙏🙏