Jinagaana Sudha 1 | ಜಿನಗಾನ ಸುಧಾ 1 | JayashreeDJain | BegurVirendra | 45JainSongs | LockDownTime

Sdílet
Vložit
  • čas přidán 26. 11. 2020
  • These 45 songs are written by Sri Begur Virendra Kumar, Hassan, Songs are sung and music composed by Jinagaana Visharade Smt. Jayashree D Jain, Horanadu. During Covid19 Lockdown time 2020. Now we are releasing those song which are wriitten by greate poets during lock down time 2020,
    #JinagaanaSudha #JayashreeDJain #BegurVirendraKumar #45JainSongs #CovidLockdown2020
    ಭಾರತೀಯ ಜೈನ ಪರಂಪರೆಯು ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಈಗಲೂ ನೀಡುತ್ತಿದೆ.ಜೈನ ಸಾಹಿತ್ಯವು ಸಾಹಿತ್ಯ ಕ್ಷೇತ್ರದಲ್ಲಿ ಉನ್ನತೋನ್ನತ ಸ್ಥಾನ ಪಡೆದಿದೆ. ಹಾಗಯೇ ಜೈನ ಸಂಗೀತ ಪರಂಪರೆಯಲ್ಲಿ ಜೈನ ಭಜನ ಸಂಗೀತ ಪ್ರಾಚೀನ ಕಾಲದಿಂದಲೂ ಮಹತ್ವದ ಸ್ಥಾನ ಪಡೆದಿದೆ.ಜೈನ ಆರಾಧನೆ ,ಪಂಚ ಕಲ್ಯಾಣ ಪೂಜೆಗಳು ಸಂಗೀತದಲ್ಲೇ ನೆಡಯುತ್ತದೆ.ಜೈನ ಪೂಜಾ ಪದ್ದತಿಯಲ್ಲಿ ಸಂಗೀತ ಮತ್ತು ಪೂಜೆ ಒಂದಕ್ಕೊಂದು ಪೂರಕವಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಕೋವಿಡ್-೧೯ರ ಕಾರಣದಿಂದ
    ಹಲವು ಆರಾಧನೆ, ಪಂಚಕಲ್ಯಾಣ ಪೂಜೆ ನೇರವಾಗಿ ಮಾಡಲು ಸಾಧ್ಯ ವಾಗದ ಕಾರಣದಿಂದ ಜಿನನ ಆರಾಧನೆಗಳು ಅಂತರ್ಜಾಲದ ಪ್ರಭಾವವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ಜಿನನ ಆರಾಧಿಸುವ ಒಂದು ಕಲ್ಪನೆ ಮೂಡಿಬಂದು ಹಲವಾರು ಜೈನ ಸಾಹಿತಿಗಳು ಲಾಕ್ ಡೌನ್ ಸಂಧರ್ಭದಲ್ಲಿ ಬರೆದ ಜೈನ ಸಾಹಿತ್ಯಗಳಿಗೆ ಜೀವ ತುಂಬುವ ಕೆಲಸವನ್ನು ಮಾಡಿದವರು ಹೊರನಾಡಿನ ದೇವರಮನೆ ಕುಟುಂಬದ ಸೌಭಾಗ್ಯ ದೇವತೆ, ಜಿನಗಾನ ವಿಶಾರದೆ ಶ್ರೀಮತಿ ಜಯಶ್ರೀ ಧರಣೇಂದ್ರ ಜೈನ್. ಇವರು ತಮ್ಮ ಪತಿಯವರಾದ ಧರ್ಮಾನುರಾಗಿ ಶ್ರೀ ಧರಣೇಂದ್ರ ಜೈನ್ ಅವರ ಸಹಕಾರವನ್ನು ಬಳಸಿಕೊಂಡು ತಮ್ಮ ಮಕ್ಕಳಾದ ಶ್ರೀಧೀರಜ್ ಜೈನ್ ಮತ್ತು ಶ್ರೀ ಧನುಷ್ ಜೈನ್ ರವರಲ್ಲಿದ್ದ ಅಪೂರ್ವ ಪ್ರತಿಭೆಯನ್ನು ಬಳಸಿಕೊಂಡು ಆಗತಾನೆ ಬೆಳಕಿಗೆ ಬರುತ್ತಿದ್ದ ಜೈನ ಸಾಹಿತಿಗಳ ಸಾಹಿತ್ಯ ಗಳನ್ನು ಬಳಸಿಕೊಂಡು ಲಾಕ್ ಡೌನ್ ಸಂಧರ್ಭದಲ್ಲಿ ಸುಮಾರು ಮೂರುನೂರಕ್ಕೂ ಹೆಚ್ಚು ಜಿನ ಭಕ್ತಿಗೀತೆಗಳನ್ನು ಹಾಡಿ ರಾಗ ಸಂಯೋಜನೆ ಮಾಡಿ ಜಿನಗಾನ ಸುಧಾ ವ್ಯಾಟ್ಸ್ ಆ್ಯಪ್ ಬಳಗದ ಮೂಲಕ ಫೇಸ್‌ಬುಕ್‌ ಮೂಲಕ ಜೈನಸಮಾಜಕ್ಕೆ ಪರಿಚಯಿಸಿದ್ದಾರೆ.ಈಗ ಮತ್ತೊಮ್ಮೆ ಜೈನಸಮಾಜದ ಎಲ್ಲಾ ಜೈನಮಠಗಳ ಸಮಸ್ತ ಭಟ್ಟಾರಕರ ಆಶೀರ್ವಾದ ದೊಂದಿಗೆ, ಜೈನ ಸಾಹಿತಿಗಳಾದ ಶ್ರೀ ವೀರೇಂದ್ರ ಬೇಗೂರು ಹಾಸನ.ಇವರು ರಚಿಸಿದ ಈ ಜಿನಭಕ್ತಿಗೀತೆ ಗುಚ್ಛದ ೪೫ ಹಾಡುಗಳ ಜಿನಭಕ್ತಿ ಗುಚ್ಚ ವನ್ನು ಕನ್ನಡ ನಾಡಿನ ಜನತೆಯ ಮುಂದೆ ಯೂಟ್ಯೂಬ್ ಮೂಲಕ ಬಿಡುಗಡೆ ಮಾಡುತ್ತಿದ್ದು ಕನ್ನಡ ನಾಡಿನ ಎಲ್ಲ ಜನತೆಯ ಸಹಕಾರ ವಿಶೇಷವಾಗಿ ಜೈನ ಸಮಾಜದ ಶ್ರಾವಕರು ಸಂತೋಷ ದಿಂದ ಸ್ವೀಕರಿಸಿ ಆಶೀರ್ವದಿಸಿ. ಯೂಟ್ಯೂಬ್ ಚಾನಲ್ ನ ಸದಸ್ಯರಾಗಿ.ಪ್ರೋತ್ಸಾಹ ನೀಡಬೇಕೆಂದು ವಿನಂತಿ.
    - ಶ್ರೀಯುತ ಬೇಗೂರ್ ವೀರೇಂದ್ರ ಕುಮಾರ್, ಹಾಸನ.
  • Hudba

Komentáře • 34