Mannina Maga Santhosh : ಬಾಳೆಯಲ್ಲಿ ವರ್ಷಕ್ಕೆ 20 ಲಕ್ಷ ರೂ. ಬಂಪರ್​ ಬೆಳೆ ಬೆಳೆದ ರೈತ ಸಂತೋಷ | Power TV News

Sdílet
Vložit
  • čas přidán 10. 09. 2024
  • Mannina Maga Santhosh : ಬಾಳೆಯಲ್ಲಿ ವರ್ಷಕ್ಕೆ 20 ಲಕ್ಷ ರೂ. ಬಂಪರ್​ ಬೆಳೆ ಬೆಳೆದ ರೈತ ಸಂತೋಷ | Power TV News
    #manninamaga #santhosh #chitradurga
    ಸಂತೋಷ
    ಚಿಕ್ಕಪ್ಪನಹಳ್ಳಿ, ಚಿತ್ರದುರ್ಗ ಜಿಲ್ಲೆ.
    8095756475
    ಮಣ್ಣಿನ ಮಗ ಕಾರ್ಯಕ್ರಮದ ಸಾರಾಂಶ
    ಕೃಷಿ ನಮ್ಮ ರಾಜ್ಯದ ಆರ್ಥಿಕತೆಯ ಆಧಾರ ಸ್ತಂಭ. ಕರ್ನಾಟಕ ರಾಜ್ಯದಲ್ಲಿ ಶೇಕಡಾ 60ರಷ್ಟು ಜನ ಗ್ರಾಮಗಳಲ್ಲಿ ವಾಸಿಸುತ್ತಿದ್ದು, ಅವರೆಲ್ಲರೂ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಗ್ರಾಮೀಣ ಜನರ ಆದಾಯದ ಮೂಲ ಕೂಡ ಕೃಷಿಯೇ ಆಗಿದೆ. ಆದರೆ, ಕೃಷಿಯ ಬಗ್ಗೆ ಅರಿವಿನ ಕೊರತೆ ಹಾಗೂ ಸೂಕ್ತ ಮಾರ್ಗದರ್ಶನವಿಲ್ಲದೆ ಬಹುತೇಕ ಕೃಷಿಕರು ನಷ್ಟ ಅನುಭವಿಸುತ್ತಾರೆ. ಅಂತಹ ರೈತರಿಗೆ ಕೃಷಿಯ ಜ್ಞಾನ ಮತ್ತು ಮಾರ್ಗದರ್ಶನ, ವ್ಯವಸಾಯದ ಆಳ ಅಗಲಗಳನ್ನ ಪರಿಚಯಿಸುವ ದೃಷ್ಟಿಯಿಂದ ಪವರ್ ಟಿವಿಯು ಮಣ್ಣಿನ ಮಗ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಕೃಷಿ ಸಾಧಕರು, ಪ್ರಯೋಗ ಶೀಲ ರೈತರು, ಆಧುನಿಕ ಮತ್ತು ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡವರನ್ನು ಸಂದರ್ಶಿಸಿ ಅವರ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತೆ. ಯಶಸ್ವಿ ರೈತರು ತಮ್ಮ ಜಮೀನಿನಲ್ಲಿ ಹೇಗೆ ಕೃಷಿ ಮಾಡುತ್ತಿದ್ದಾರೆ, ಅವರು ಅನುಸರಿಸುತ್ತಿರೋ ಪದ್ಧತಿ ಮತ್ತು ಅವರ ಅನುಭವಗಳನ್ನು ಪ್ರಸಾರ ಮಾಡಲಾಗುತ್ತೆ. ಈ ಕಾರ್ಯಕ್ರಮ ರಾಜ್ಯದ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಆಗಿರಲಿದೆ. ಜೊತೆಗೆ ಹೊಸದಾಗಿ ಕೃಷಿ ಆರಂಭಿಸುವವರಿಗೆ, ಕೃಷಿ ಆಸಕ್ತರಿಗೆ ಮತ್ತು ಪ್ರಯೋಗಶೀಲ ರೈತರಿಗೆ ಸಾಕಷ್ಟು ಪ್ರಯೋಜನಕಾರಿ ಆಗಲಿದೆ. ಪವರ್ ಟಿವಿಯ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹೊಸ ತಂತ್ರಜ್ಞಾನ, ಕೃಷಿ ಉಪಕರಣಗಳು, ಸರ್ಕಾರಿ ಯೋಜನೆಗಳು ಮತ್ತು ಅವುಗಳನ್ನು ಪಡೆಯುವ ಮಾರ್ಗದ ಬಗ್ಗೆಯೂ ವಿವರವಾದ ಮಾಹಿತಿ ನೀಡಲಾಗುವುದು. ಸಾವಯವ ಕೃಷಿ, ಆಧುನಿಕ ಕೃಷಿ, ತೋಟಗಾರಿಕೆ, ಅರಣ್ಯಕೃಷಿ ಹೀಗೆ ಎಲ್ಲಾ ಬಗೆಯ ಕೃಷಿ ಪದ್ಧತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಲಾಗುವುದು.
    ಈ ಕಾರ್ಯಕ್ರಮದ ಹೆಸರೇ ತಿಳಿಸುವಂತೆ ಇದು ರೈತರಿಂದ ರೈತರಿಗಾಗಿ, ರೈತರಿಗೋಸ್ಕರ ಇರುವ ಕಾರ್ಯಕ್ರಮವಾಗಿದೆ. ಬದುಕಿನ ಸರ್ವಕ್ಕೂ ಮೂಲವಾಗಿರುವ ಕೃಷಿಯು ಅದನ್ನು ನಂಬಿದ ರೈತರ ಬದುಕಿಗೂ ಆಧಾರವಾಗಬೇಕು ಎಂಬುದೇ ಪವರ್ ಟಿವಿ ಆಶಯವಾಗಿದೆ.

Komentáře • 22