Video není dostupné.
Omlouváme se.

Bhishma Vijaya live full Yakshagana, part-1.ಬಹರೈನ್ ನಲ್ಲಿ ನಡೆದ ಭೀಷ್ಮ ವಿಜಯ ಲೈವ್ ಸಂಪೂರ್ಣ ಯಕ್ಷಗಾನ. ಭಾಗ-1

Sdílet
Vložit
  • čas přidán 15. 07. 2018
  • ಗಾನಗಂಧರ್ವ- ಆವೃತ್ತಿ.
    ದಿನಾಂಕ: 04-11-1988 ಸಂಜೆ 5.30 ಕ್ಕೆ ಬಹರೈನ್ ನಲ್ಲಿ ಬಹರೈನ್ " ಕನ್ನಡ ಸಂಘ" ದವರು ಏರ್ಪಡಿಸಿರುವ ಯಕ್ಷಗಾನ ಪ್ರದರ್ಶನದ ವೀಡಿಯೋ ಇದಾಗಿದೆ.
    Hilton ಹೋಟೇಲಿನಲ್ಲಿ ನಡೆದ ಈ ಯಕ್ಷಗಾನ ಪ್ರದರ್ಶನ.
    ಈ ವೀಡಿಯೊವನ್ನು ಸೀತಾರಾಮ್ ಶೆಟ್ಟಿ ( ಎಮ್.ಎಮ್.ಹೆಗ್ಡೆಯವರ ಅಳಿಯ) ಯವರು VCR ಕ್ಯಾಸೇಟ್ ನ್ನು ಸುದರ್ಶನ ಜೋಯಿಸರು ಸಂಪಾದಿಸುವಲ್ಲಿ ಯಶಸ್ವಿಯಾದರು. ಇದನ್ನು ದಿನೇಶ ಉಪ್ಪೂರ್ ಬಳಿ ಕೊಟ್ಟು VCR ಕ್ಯಾಸೆಟ್ ನ್ನು ಉಡುಪಿಯಲ್ಲಿ ಸಿ.ಡಿ.ಗೆ.ಪರಿವರ್ತನೆಗೊಳಿಸಿದರು. ಅದನ್ನು ಕಾಪಿಟ್ಟು ಉಪ್ಪೂರ್, ಜೋಯಿಸರು ಕಾಳಿಂಗ ನಾವುಡರ ಹಾಡನ್ನು ಯುಟ್ಯೂಬ್ ಮೂಲಕ ಸಂಗ್ರಹಿಸುತ್ತೀರುವ ನನಗೆ ಇತ್ತಿಚೆಗೆ ನೀಡಿದರು. ಅದನ್ನು HD ಗುಣಮಟ್ಟವನ್ನು ಹೊಂದುವಂತೆ ಎಡಿಟ್ ಮಾಡಿ ಇಲ್ಲಿ ಅಪ್ಲೋಡ್ ಮಾಡಲಾಗಿದೆ.
    ನಾವುಡರ ಅಮುಲ್ಯ ಸಂಗ್ರಹವನ್ನು ಒದಗಿಸಿರುವ ಉಪ್ಪೂರ್ ಮತ್ತು ಜೋಯಿಸರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
    ಒಟ್ಟು ನಾಲ್ಕು ಗಂಟೆಗೂ ಹೆಚ್ಚು ಇರುವ ಈ ವೀಡಿಯೋವನ್ನು ಯಕ್ಷಭಿಮಾನಿಗಳಿಗೆ ನೋಡಲು ನೆರವಾಗಲೆಂದು 12ಭಾಗಗಳಾಗಿ ವಿಂಗಡಿಸಲಾಗಿದೆ.
    ವೀಡೀಯೊವನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಬಹುದು. ಮೆಚ್ಚುಗೆ ಯಾದರೆ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಲು ಮರೆಯದಿರಿ.
    ಕಾಳಿಂಗ ನಾವುಡರ ಹೆಚ್ಚಿನ ವೀಡಿಯೋ ಗಳಿಗೆ ನಮ್ಮ ಯುಟ್ಯೂಬ್ ಚಾನಲನ್ನು ಸಬ್ ಸ್ಕ್ರೈಬ್ ಮಾಡಿ.
    ಗಣೇಶ ಕಾಮತ್ ಉಳ್ಳೂರ್
    ಭಾಗವತರು: ಜಿ.ಅರ್.ಕಾಳಿಂಗ ನಾವುಡ.
    ಮದ್ದಳೆ: ಕೃಷ್ಣಸ್ವಾಮಿ ಜೋಯಿಸರು.
    ಚಂಡೆ: ಶಾಂತರಾಮ ಆಚಾರ್.
    ಹಾರ್ಮೋನಿಯಂ: ಕುಂಬಳೆ ಸದಾಶಿವ ಶೆಟ್ಟಿ.
    ಮುಮ್ಮೇಳ.
    ಭೀಷ್ಮ: ಗುಂಡ್ಮಿ ಕರುಣಾಕರ.
    ಅಂಬೆ: ಮಂಟಪ ಮತ್ತು ಕೊಳ್ಯೂರು.
    ಪರಶುರಾಮ: ಎಮ್.ಎಲ್.ಸಾಮಗ.
    ಉಳಿದ ಪಾತ್ರಗಳನ್ನು ವೀಡಿಯೊದಲ್ಲಿ ವೀಕ್ಷೀಸಿ.
    ಇಂತಿ ನಿಮ್ಮವ.
    ಗಣೇಶ ಕಾಮತ್ ಉಳ್ಳೂರ್.

Komentáře • 11

  • @sampathkamalashile1194
    @sampathkamalashile1194 Před 3 lety +1

    💐💐💐

  • @imnoone4575
    @imnoone4575 Před 6 lety +1

    super

  • @sadashivanpoojary3430
    @sadashivanpoojary3430 Před 6 lety +1

    Sir Bhisma Vijaya 2ne bhaga dayavittu haaki.

    • @Ulloorlive
      @Ulloorlive  Před 6 lety

      2-3 ನೇ ಭಾಗ ಈಗಾಗಲೇ ಹಾಕಿ ಆಗಿದೆ ಸರ್. ನೀವು subscribe ಮಾಡಿ ಪಕ್ಕದಲ್ಲಿ ಕಾಣಿಸುವ ಬೆಲ್ ಬಟನ್ ಕ್ಲಿಕ್ ಮಾಡಿ ಸರ್.ನಿಮಗೆ ನಾವು ಅಪ್ಲೋಡ್ ಮಾಡುವ ಪ್ರತಿಯೊಂದು ವೀಡಿಯೋ notification ರೂಪದಲ್ಲಿ ಬರುತ್ತದೆ.
      ಧನ್ಯವಾದಗಳು

  • @ganeshkshetty3941
    @ganeshkshetty3941 Před 6 lety +4

    ಯಕ್ಷಗಾನದಲ್ಲಿ ಇಂತಹ ಭಾಗವತ ಇನ್ನು ಹುಟ್ಟಿ ಬರಲು ಸಾಧ್ಯವಿಲ್ಲ

    • @Ulloorlive
      @Ulloorlive  Před 6 lety

      ನಿಜ ಸರ್

    • @sudhanvakt
      @sudhanvakt Před 4 lety +2

      ಕಾಳಿಂಗ ನಾವಡರ creativity ಯನ್ನು ನಾವಿಲ್ಲಿ ಮೆಚ್ಚಲೇಬೇಕು.ಅಂಬುರುಹ ದಳನೇತ್ರೆ ಪದ್ಯವನ್ನು ಮಧ್ಯಮಾವತಿ ರಾಗದಲ್ಲಿ ಹಾಡಿದ್ದಾರೆ.ಮಾಮೂಲಿಯಾಗಿ ಈ ಪದ್ಯವನ್ನು ಹೆಚ್ಚಿನ ಭಾಗವತರು ಬೇರೆ ರಾಗದಲ್ಲಿ ಹಾಡುತ್ತಾರೆ..

    • @sudhanvakt
      @sudhanvakt Před 3 lety +1

      ಹಾಡುವಾಗ ಸ್ವಲ್ಪವೂ ಮುಖವಿಕಾರ ಇಲ್ಲ!

    • @Ulloorlive
      @Ulloorlive  Před 3 lety

      ನಿಜ