ಕಾಳಿಂಗ ನಾವಡ ಲೈಫ್ ಸ್ಟೋರಿ / ನಾವಡರ ಕುರಿತು ಸುಬ್ರಹ್ಮಣ್ಯ ಧಾರೇಶ್ವರರ ಮನದಾಳದ ಮಾತು. ಸಂಚಿಕೆ-1

Sdílet
Vložit
  • čas přidán 10. 09. 2024
  • ಕಾಳಿಂಗ ನಾವಡರು ಸಾರ್ವಕಾಲಿಕ ಕಲೋಪಾಸನೆಯ ಗಾನ ತಪಸ್ವಿ. ಕಲಾಭಿಮಾನಿಗಳ ಮನೋಮಂದಿರದಲ್ಲಿ ಯಕ್ಷಗಾನ ಕಲೆ ಉಳಿಯುವವರೆಗೂ ಉಳಿಯುವ ಅಮರ ಚೇತನ.
    ಮೊನ್ನೆಮೊನ್ನೆಯಷ್ಟೇ ಅವರ ಪುಣ್ಯತಿಥಿ(27-05-1990)ಬಂದು ಹೋಯಿತು. ಜನ್ಮದಿನ (ಜೂನ್ 6) ಆಚರಿಸಿಕೊಳ್ಳುವ ಹತ್ತು ‌ದಿನದ ಮೊದಲೇ ಅವರು ಕಲಾಮಾತೆಯ ಮಡಿಲು ಸೇರಿದರು.
    ಅವರಿಲ್ಲ‌ ಎಂಬ ಸಂಕಟ ಈಗಲೂ ಯಕ್ಷ ಜಗತ್ತಿನ ಹೃದಯ- ಹೃದಯ ಗಳಲ್ಲಿ ತುಂಬಿಯೇ ಇದೆ. ನೆನಪು ಹಸಿಯಾದಂತೆಲ್ಲಾ ಕೊರಳ ಸೆರೆಯುಬ್ಬಿ ಭಾವುಕರಾಗುತ್ತೇವೆ.
    ಕಾಳಿಂಗ ‌ನಾವಡರು ಕಣ್ಣಿಗೆ ಕಾಣದ ಚೈತನ್ಯ ವಾಗಿದ್ದರೂ ಅವರ ಮಧುರ ‌ಪದ್ಯಗಳ ಕೇಳ್ಮೆಯ ರಂಗ ಗುಂಗಿನ ರಸಯಾನದಲ್ಲಿ ತನ್ಮಯರಾಗುತ್ತೇವೆ. ವಿರಳ ವಿಡಿಯೋ ಚಿತ್ರಣಗಳಲ್ಲಿ ಅವರನ್ನು ಕಂಡು ಪುಳಕಿತರಾಗುತ್ತೇವೆ.
    ಅಂತಹ ಮಹಾನ್ ಗಾನ ಗಂಧರ್ವನ ಮಧುರ ಸ್ಮ್ರತಿಗೆ ನಿಮ್ಮದೇ ಅಭಿಮಾನದ ಉಳ್ಳೂರ್ ಲೈವ್ ಈ ಹಿಂದೆ ದಾಖಲಿಸಿದ ಅವರ ವಿಡಿಯೋ- ಆಡಿಯೋಗಳ ಬಗ್ಗೆ ಹೇಳಬೇಕಿಲ್ಲ.
    ಈ ಬಾರಿಯ ನಾವಡರ ಸವಿ ನೆನಪಿಗಾಗಿ ಯಕ್ಷ ಪಿಕ- ಶಕಪುರುಷ (ಅಮರ ಗಂಧರ್ವ ಅಜರಾಮರ)ದ ಮೂಲಕ ಮತ್ತೆ ನಾವಡರನ್ನು ನಿಮ್ಮ ಕಣ್ಮುಂದೆ ನೆನಹುಗಳ ಮೆರವಣಿಗೆಯಲ್ಲಿ ಕರೆದುತರುವ ಪ್ರಯತ್ನಕ್ಕೆ ಮುಂದಾಗಿದ್ದೇನೆ. ಈ ಹಿಂದೆ ಪ್ರಸಾರವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾವಡರ ಜೀವನ ಚರಿತ್ರೆ ಬಗ್ಗೆ ಹೇಳಿರುವ ಎಲ್ಲಾ ಕಲಾವಿದ ವೀಡಿಯೋಗಳನ್ನು ಪ್ರತ್ಯೇಕವಾಗಿ ಹಂಚಲು ಮನ ಮಾಡಿದ್ದೇನೆ.
    ಈ ಸಾಮಾಜಿಕ ಜಾಲತಾಣದ ಕಾರ್ಯಕ್ರಮ ನಾವಡರ ಮಧುರ ಸ್ಮೃತಿ ರೂಪಕವಾಗಿ ನಿಮ್ಮನ್ನು ಆವರಿಸಿದರೆ ನಾನು ಧನ್ಯ.
    ಮನ- ಮನದಲ್ಲಿ ಉಳಿದ ನಾವಡರ ಕಲಾವ್ಯಕ್ತಿತ್ವ ಭಿನ್ನ- ಭಿನ್ನ ನೆಲೆಯಲ್ಲಿ ಭವಿಷ್ಯಕ್ಕೆ ದಾಖಲೀಕರಣಗೊಳ್ಳುವಂತಾಗಬೇಕೆಂಬ ಸದಾಶಯದಿಂದ ಈ ಕಾರ್ಯಕ್ರಮ ರೂಪುಗೊಂಡಿದೆ.
    ಇಲ್ಲಿ ಒಡನಾಟದ‌ ಒಲುಮೆಯಿದೆ, ಅಭಿಮಾನದ ಆರಾಧನೆಯಿದೆ..ಎಂದಷ್ಟೇ ಈಗ ಹೇಳುವೆ; ಇದನ್ನೆಲ್ಲಾ ಕಾಣಬೇಕಾದವರು ನೀವು.
    ಇಂದು ಮೊದಲ ಭಾಗವಾಗಿ ಕರಾವಳಿ ಗಾನಕೋಗಿಲೆ ರಂಗ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರರು ನಾವಡರು ನಡೆದು ಬಂದ ದಾರಿ ಮತ್ತು ಅವರ ಒಡನಾಟದ ಒಂದಷ್ಟು ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರ ಭಾಗ ಈ ವೀಡಿಯೊದಲ್ಲಿ ವೀಕ್ಷಿಸಿ.
    ✍️ ಗಣೇಶ್ ಕಾಮತ್ ಉಳ್ಳೂರ್
    ಯಕ್ಷಗಾನ ಕಲೆ, ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನೀವು ನಮ್ಮ ಚಾನಲ್ subscribe ಮಾಡುವ ಮೂಲಕ ಪ್ರೋತ್ಸಾಹಿಸಿ.
    ನಮ್ಮ ಫೇಸ್‌ಬುಕ್‌ ಪೇಜ್ ಈಗಾಗಲೇ 16 ಸಾವಿರ followers ಹೊಂದಿದೆ. ನೀವು ಚಂದದಾರಾಗಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪ್ರೋತ್ಸಾಹಿಸಿ.
    www.facebook.c...
    #ulloorlive #ulloorlivetoday
    #yakshaganavideo​ #yakshagana​ #tulunadu​ #udupi​ #mangalore​ #tulunada​ #tulunadu​ #nammakudla​ #kudla​ #daivaradhane​ #kola​ #yakshaganartist​ #nammaudupi​ #isiri​ #yaksha​ #yakshaganamgelge​ #yakshaganaphotography​ #nammatulunad​ #karnataka​ #koragajja​ #gaggara​ #kale​ #kambala​ #of​ #photography​ #yakshaganalove​ #daiva​ #instagram​ #beautyoftulunad​ #karkala​ #mangalorediaries​ #yakshaganalive​ #yakshaganalivetoday​

Komentáře • 4