ತುಳುನಾಡಿನಲ್ಲಿ ಪವಾಡ ನಡೆಯುತ್ತಿರುವ ದೇವಿಯ ಕ್ಷೇತ್ರ|ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ|ನಮ್ಮೂರ ಕ್ಷೇತ್ರ ದರ್ಶನ

Sdílet
Vložit
  • čas přidán 26. 08. 2024
  • #kanthara
    #arikodi
    #srichamundeshwarikshetraarikodi
    #belal#viralvideo#viralsongs#kantharamoviesongs#kantharamovietrailer#kantharamoviebgm#arikodi#chamundeshwarikshetra#belal#manglore#udupi#kasaragodu#koragajja#devotinolsong#arikodicreation#arikodisrichamundeshwarikshetra#kahalenews#arikodichamundeshwaritemple#korgajjadevotinolsong#arikodidevotinolsong#kola#tulunadakola#nema#tulunad#daiva#kola#kanthara#rishabshetty#
    ತುಳುನಾಡು ದೈವ ದೇವರ ನಾಡು... ತುಳುನಾಡಿನಲ್ಲಿ ದೈವ ದೇವರ ಮೇಲೆ ನಂಬಿಕೆ ಜಾಸ್ತಿ... ಈಗಲೂ ತುಳುನಾಡಿನಾದ್ಯಾಂತ ದೈವ ದೇವರುಗಳ ಕಾರ್ಣಿಕ ‌ನಡೆಯುತ್ತಿದೆ....ಅಂತಹ ಕ್ಷೇತ್ರಗಳಲ್ಲಿ ಈಗಲೂ ದೇವಿಯ ಪವಾಡ ಪ್ರತಿ ದಿನ ನಡೆಯುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ"ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ"ಕ್ಷೇತ್ರ......ನಂಬಿ ಬಂದ ಭಕ್ತರ ಪಾಲಿನ ಕರುಣಾಮಯಿ...ಕಣ್ಣೀರು ಹಾಕಿ ತಾಯಿ ನನ್ನ ಕಷ್ಟಗಳನ್ನು ಪರಿಹರಿಸು ಎಂದು ಭಕ್ತಿಯಿಂದ ಬೇಡಿಕೊಂಡರೆ ದೇವಿ ಯಾವ ರೂಪದಲ್ಲಿ ಬಂದು ನಮ್ಮ ಕಷ್ಟಗಳನ್ನು ಪರಿಹರಿಸುತ್ತಾಳೆ ಎಂದು ನಮಗೆ‌ ತಿಳಿಯದು... ಸುಮಾರು 800ವರ್ಷಗಳ ಇತಿಹಾಸ ಇರುವ ಈ ಕ್ಷೇತ್ರದಲ್ಲಿ ತಾಯಿ ಒಂದೇ ಬುಡದಲ್ಲಿ 9 ಬಗೆಯ ಹಾಲು ಕೊಡುವ ಮರವಿರುವ "ನವವೃಕ್ಷದ"ಕೆಳಗಡೆ ದೇವಿ ನೆಲೆ ನಿಂತಿದ್ದಾಳೆ..ಇಲ್ಲಿನ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು..ಈ ಕ್ಷೇತ್ರದ ವೈಭವವನ್ನು ಒಮ್ಮೆ ಕಣ್ಣ್ ತುಂಬಿಸಿಕೊಂಡರೆ ಸಾಕು..ಏನೋ ಮನಸ್ಸಿಗೆ ನೆಮ್ಮದಿ ಖುಷಿ.... ಒಮ್ಮೆ ಈ ಕ್ಷೇತ್ರಕ್ಕೆ ಹೋದರೆ ಮತ್ತೊಮ್ಮೆ ತಾಯಿಯನ್ನು ನೋಡಬೇಕು ಆ ತಾಯಿಯ ಕ್ಷೇತ್ರ ಕ್ಕೆ ಮತ್ತೊಮ್ಮೆ ಹೋಗಬೇಕು ಅನಿಸುತ್ತದೆ...ಈ ಕ್ಷೇತ್ರದ ಇತಿಹಾಸವನ್ನು ಈ ಕ್ಷೇತ್ರದ ಧರ್ಮದರ್ಶಿಗಳ ಮಾತಿನಲ್ಲಿ ಕೇಳುವಾಗ ರೋಮಾಂಚನವಾಗುತ್ತದೆ.‌‌.ಕ್ಷೇತ್ರದ ಇತಿಹಾಸ ಧರ್ಮದರ್ಶಿಗಳ‌ ಮಾತಿನಲ್ಲಿ ಕೇಳುವುದೇ ಚಂದ.. ಶ್ರೀ ದೇವಿ ಯು ಕಾಡಿನ ಮಧ್ಯದಲ್ಲಿ ನಿಂತು ನೆಲೆಯಾದ ಕ್ಷೇತ್ರ....800ವರ್ಷಗಳ ಹಿಂದೆ ಬಲ್ಲಾಳ ಅರಸರ ಆಳ್ವಿಕೆಯಲ್ಲಿ ನಂಬಿಕೊಂಡು ಬಂದ ತಾಯಿಯನ್ನು ರಾಜರ ವಂಶ ನಶಿಸಿ ಹೋದ ನಂತರ ಪಾಲು ಬಿದ್ದಿದ್ದ ದೇವಿಯ ಕ್ಷೇತ್ರ ಈಗ ಪಾಪದ ಒಂದು ಕುಟುಂಬ ನಂಬಿ ಕೊಂಡು ಬರುತ್ತಿದೆ...ಚಿಕ್ಕದಾದ ಕಲ್ಲು ತಾಯಿಯನ್ನು ನಂಬಿದ ಕುಟುಂಬ..ನಂತರ ತಾಯಿಯು ಮಳೆಯಲ್ಲಿ ಒದ್ದೆಯಾಗಬಾರದು ಎಂದು ಗುಡಿ ಕಟ್ಟಿದರು...ನಂತರ ದಾನಿಗಳ‌ ಕೂಡಿವಿಕೆಯಲ್ಲಿ ತಾಯಿಗೆ ಒಂದು ದೇವಸ್ಥಾನವನ್ನು ಕಟ್ಟಿಸಿದರು...ಈಗ ಈ ಕ್ಷೇತ್ರಕ್ಕೆ ಸಹಸ್ರಾರು ಭಕ್ತರು‌ ಬರುತ್ತಿದ್ದಾರೆ...
    ಏನು ಈ ಕ್ಷೇತ್ರದ ವಿಶೇಷತೆ?
    *ತಾಯಿಯು ಈ ಕ್ಷೇತ್ರದ ಧರ್ಮದರ್ಶಿಗಳ ನುಡಿಯ ಮೂಲಕ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾಳೆ
    *ವೈದ್ಯರು ಕೊನೆಯ ಹೊತ್ತಲ್ಲಿ ಕೈ ಬಿಟ್ಟಂತಹ ಎಷ್ಟೋ ಜೀವಗಳನ್ನು ತಾಯಿ ಬದುಕುಳಿಸಿ ಪವಾಡ ಮೆರೆದಿದ್ದಾರೆ..
    * ಮೈಮೇಲೆ ಪ್ರೇತ ಬರುವಂತಹ ಎಷ್ಷೋ ಜೀವಗಳನ್ನು ತಾಯಿ ಉಳಿಸಿದ್ದಾಳೆ....
    *ಎಷ್ಟೋ ಮಾತು ಬಾರದ ಭಕ್ತರಿಗೆ ಮಾತು ಕೊಟ್ಟಿದ್ದಾಳೆ...
    *ಮದುವೆ ಭಾಗ್ಯ ಇಲ್ಲದ ಹೆಣ್ಮಕ್ಕಳಿಗೆ ಕಂಕಣ‌ಭಾಗ್ಯ ಕೊಟ್ಟಿದ್ದಾಳೆ....
    *ಮಕ್ಕಳು ಇಲ್ಲದ ದಂಪತಿಗಳಿಗೆ‌ ನಮ್ಮ ಜೀವನದಲ್ಲಿ ನಮಗೆ‌ ಇನ್ನೂ ಯಾರು ಆಧಾರ ನಮಗೆ ಒಂದು ಜೀವವನ್ನು ಕರುಣಿಸಮ್ಮ ಎಂದು ಬೇಡಿಕೊಂಡಾಗ ತಾಯಿಯ ತೀರ್ಥ ವೇ ನಿಮಗೆ ಮುದ್ದು ಎಂದು ತಾಯಿ ಅಭಯದ ನುಡಿಯಲ್ಲಿ ಹೇಳಿ ಪ್ರಸಾದ ಕೊಡುತ್ತಾರೆ...
    *ಉದ್ಯೋಗ ಇಲ್ಲದವರು ಅಮ್ಮ ನನ್ನ ಜೀವನ ಸಾಗಿಸಲು ನನಗೆ ಒಂದು ಉದ್ಯೋಗ ಕೊಡಮ್ಮ ಎಂದು ತಾಯಿಯ ಎದುರು ಬೇಡಿಕೊಂಡ ಭಕ್ತರು ಇಂದು ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ...
    ತಾಯಿಯ ಕಾರಣಿಕ ಹೇಳಲು ಹೋದರೆ...ಹೇಳಲು ಸಾಧ್ಯವಿಲ್ಲ ಅಂತಹ ಎಷ್ಟೋ ಕಷ್ಟಗಳನ್ನು ತಾಯಿ ಪರಿಹರಿಸಿದ್ದಾಳೆ...ಈ ಕ್ಷೇತ್ರದಲ್ಲಿ ತಾಯಿಯ ಮಹಾಪೂಜೆ ನೋಡುವುದೇ ಒಂದು ವಿಶೇಷತೆ....ಈ ಕ್ಷೇತ್ರಕ್ಕೆ ಭಕ್ತರು ಬೇರೆ ಬೇರೆ ಜಿಲ್ಲೆಗಳಿಂದ, ರಾಜ್ಯ,ದೇಶ, ವಿದೇಶಗಳಿಂದ ಬರುತ್ತಿದ್ದಾರೆ.ಸಿನಿಮಾ ನಟರು... ರಾಜಕೀಯ ವ್ಯಕ್ತಿಗಳು..ದೊಡ್ಡ ದೊಡ್ಡ ಉದ್ಯಮಿಗಳು ಈ ಕ್ಷೇತ್ರಕ್ಕೆ ತಾಯಿಯನ್ನು ನೋಡಲು ಬರುತ್ತಿದ್ದಾರೆ.... ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಹೆಸರು ಮಾಡುತ್ತಿರುವ "ಕಾಂತಾರ" ಸಿನಿಮಾದ ನಿರ್ದೇಶಕ ಖ್ಯಾತ ನಟ ರಿಷಬ್ ಶೆಟ್ಟಿಯವರು ಕಾಂತಾರ ಚಿತ್ರ ತೆರೆಗೆ ಬರುವ ಮುಂಚೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು ನಮ್ಮ ಚಲನಚಿತ್ರ ಯಶಸ್ವಿಯಾಗಲಿ ಎಂದು ಕೇಳಿಕೊಂಡಾಗ ತಾಯಿಯು ನಿಮ್ಮ ಚಲನಚಿತ್ರ ವಿಶ್ವದಾದ್ಯಂತ ಪ್ರಸಿದ್ಧಿ ಹೊಂದುತ್ತದೆ ಎಲ್ಲಾ ಚಿತ್ರರಂಗವು ನಿಮ್ಮ ಕಡೆ ನೋಡುವ ಹಾಗೆ ಈ ಚಲನಚಿತ್ರ ಮಾಡುತ್ತದೆ ಎಂದು ಅಭಯದ ಮಾತು ಕೊಟ್ಟರು..‌. ಅಂತಹ ಎಷ್ಟೋ ನಿದರ್ಶನಗಳು ಈ ಕ್ಷೇತ್ರದಲ್ಲಿ ನಡೆದಿದೆ...
    ವಿಳಾಸ
    ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ
    ಬೆಳಾಲು ಗ್ರಾಮ ಬೆಳ್ತಂಗಡಿ ತಾಲೂಕು ದ.ಕ
    ಮೊ: 9591171730
    #arikodi#chamundeshwarikshetra#belal#manglore#udupi#kasaragodu#koragajja#devotinolsong#arikodicreation#arikodisrichamundeshwarikshetra#kahalenews#arikodichamundeshwaritemple#korgajjadevotinolsong#arikodidevotinolsong

Komentáře • 66