Hari Sarvottama Chaupadi ॥ Lyrics pinned in comments

Sdílet
Vložit
  • čas přidán 27. 04. 2024
  • Written by Sri Guru Madhwapati Vithala Dasaru.
    Composed and sung by Venugopal Khatavkar.
    shri gurumadhvapativithala dasarya virachita harisarvottama choupadi
    varada madhvacharya gururayageragi | hariye paradaiva sthiranendu talebagi || dvirada vadanana bhajisi vighnagala nigi | orevani chaupadiya keli chennagi ll1ll
    hari sharanaradavarigella manamechchu | harushadim savivarige idu belladachchu | parama pada bayasuvarigiduve balu hechchu | duritavembadavige uriva kadgichchu || 2 ||
    advaita kattalege kalpantabhanu | sadvaishshnavarigella sura kamadhenu || madhvamata sagarake chandramane tanu | vidvamsarinda keli savinudiya jenu ll3ll
    dridhavagi panchabhedava tiliyabeku | adavagi shrihariya kathe kelabeku || biduvagi bhaktarali kudutirabeku l
    tadavagi shadvairigala jayisabeku |l4ll
    eka na dvayavemba shruti nodabeku | kaku shastrada baleya harigadiyabeku || vyakulagalellavanidadabeku | shrikanta sharanendu kondadabekull5ll
    taratamyanusaradi surara nodu | niru halentemba samshayava dudu | toruva prapanchakke hogade horagadu | marutana matadalli sthira manava madu || 6 ||
    harihoratu pratyaksha paradaivavilla | sthiravendu gurumukhya prana ta balla gururayanendu bhavisaloliyaballa | paramajnyanigalavara sadhanavidellall7ll
    sakala vratagalalli ekadashiya madu | nikhila surarodeya hariyendu kondadu sakala samrajyavatana kaiyya bedu | sukhatirtha guruvarana gunagana madu ll8ll
    kandakandantha daivana bhajisabeda | hindushastragalali manasidalu beda || kandu ni kadu karmana madabedal kandavara hendarali manasidalu beda ll9ll
    anyadevara prasadava muttabeda | anyatha chinteyali manavidalu beda || anyamargakke ni kalura beda | anna dasheyalli papava galisabeda || 10 ||
    nira melanagulleyanti sharira | baribarige sattu huttuva vichara || miri nadeyuvanalva nija muktiyura| kruravalli matu aritavara sara ||11||
    hariya nindisuva durvadigala duru | aritu shadvairi gala krayavarasi maru | haridasarenna bandhugalendu saru | hariya nene nenedu mokshada harmyaveru || 12 |l
    hariya shrimudre dvadashanamavittu | hari kathagniyali dushkarmagala suttu . harinama ratnamalegalane tottul hariya samrajyadalli sthiramaneya kattu || 13 ||
    tanna tanaritu kondavane sujnyani | hennu honnugala toredatane mauni || anyaranakisade mannisuvane danil purnaprajnyara nambidavane vijnyani || 14 ||
    narajanmagale pranigalige baleyenta | aritavane muktiyembanganeya kanta || ariyadiruvanthavane iha parake bhranta | parama rishivachanavidu veda siddhanta || 15 ||
    vidyavantanu ahankara bidabeku l shuddha jnyanige viveka virabeku || vriddhanadaru hariya hambalirabeku | iddaga danadharmava madabeku || 16 ||
    haridhyana bittenu madalu nirartha l hari namave ihaparangalige sarthall harisevegalasya malpavane dhurta | haridveshavesaguvane khalakulake karta|| 17||
    hariyane nambi kettavararu marule | hariyolume illadavana badukenu tirule .. haridayadi sabheyagelidalu drupada tarale | hariya maretare manake hattuvade marule || 18 ||
    kumbhini pataki kiratakana tanu | bembidade valmiki muniyenisida [da]nu || ambarishana vratava kedisaduluhidanu | nambu nambinnadarimbu kodutihanu || 19 ||
    hariyadhikanenda prahlada tagedda | haridayadi a bhima magadhana odda || haridayadi sadvibhishana jivisidda | hari bhaktaringenu bhayavilla siddha || 20 ||
    ....
    ..
    .
    harahara! manavu karagade ninage keli | harimahimeento kannirorate tali || areghaligeyadaru hariyendu peli | irabarade harushasharadhiyolu bali || 61 ||
    paramatma jiva tanaikyaventembe | baride ni paparashiya kattikombe || sthirabuddhiyinda paradevateya nambe | tharavalla kedadirantake duhkha umbe || 62 ||
    kaliyugadolagada bhaktarane kandu | tiliyadesagida papagalane kalakondu || tuluvu brahmanagolida gurumatavagondu | balavantanagu sadgatisukhavanundu || 63 ||
    harinama sudhe saviyaballavane balla | aritavage gudamadhugaladakke samavalla|| ariyadajnyani enendaru kolla | aritavane jnyanasandukada kalla ll 64 ll
    harikathamrita rasayanaviduve bannil beragagi kelvarige savidorvadenni|| gurubhakti panchakajjayagala tinni | surapatiya sukhanidake samavallavenni ll65ll
    narajanmavemba phanigidu garudamantra. parama purushottamana serepidiva mantra ll ariyadajnyanigalanuddharipa mantra | hari dasaremagolidu karunisiha mantra || 66 ||
    baredodi heli keluvarigananda| dorakuvadu sakala sampadagaladarinda|| paramayurarogyavittu olavinda| poreva gurumadhvapativithala kripeyinda || 67 ||
    .. shri madhvesharpanamastu ll
    .. shri krishnarpanamastu ll
    .
    .
    Spotify:
    open.spotify.com/artist/3jNaY...
    Prime music:
    music.amazon.in/artists/B09V2...
    Apple music:
    / daasoham
  • Hudba

Komentáře • 45

  • @daasoham
    @daasoham  Před měsícem +9

    Lyrics 1 of 3:
    ಶ್ರೀ ಗುರುಮಧ್ವಪತಿವಿಠಲ ದಾಸಾರ್ಯ ವಿರಚಿತ ಹರಿಸರ್ವೋತ್ತಮ ಚೌಪದಿ ಪ್ರಾರಂಭವು
    ವರದ ಮಧ್ವಾಚಾರ್ಯ ಗುರುರಾಯಗೆರಗಿ | ಹರಿಯೇ ಪರದೈವ ಸ್ಥಿರನೆಂದು ತಲೆಬಾಗಿ || ದ್ವಿರದ ವದನನ ಭಜಿಸಿ ವಿಘ್ನಗಳ ನೀಗಿ | ಒರೆವನೀ ಚೌಪದಿಯ ಕೇಳಿ ಚೆನ್ನಾಗಿ ll1ll
    ಹರಿ ಶರಣರಾದವರಿಗೆಲ್ಲ ಮನಮೆಚ್ಚು | ಹರುಷದಿಂ ಸವಿವರಿಗೆ ಇದು ಬೆಲ್ಲದಚ್ಚು | ಪರಮ ಪದ ಬಯಸುವರಿಗಿದುವೆ ಬಲು ಹೆಚ್ಚು | ದುರಿತವೆಂಬಡವಿಗೆ ಉರಿವ ಕಾಡ್ಗಿಚ್ಚು || 2 ||
    ಅದ್ವೈತ ಕತ್ತಲೆಗೆ ಕಲ್ಪಾಂತಭಾನು | ಸದ್ವೈಷ್ಷ್ಣವರಿಗೆಲ್ಲ ಸುರ ಕಾಮಧೇನು || ಮಧ್ವಮತ ಸಾಗರಕೆ ಚಂದ್ರಮನೆ ತಾನು | ವಿದ್ವಾಂಸರಿಂದ ಕೇಳಿ ಸವಿನುಡಿಯ ಜೇನು ll3ll
    ದೃಢವಾಗಿ ಪಂಚಭೇದವ ತಿಳಿಯಬೇಕು | ಅಡವಾಗಿ ಶ್ರೀಹರಿಯ ಕಥೆ ಕೇಳಬೇಕು || ಬಿಡುವಾಗಿ ಭಕ್ತರಲಿ ಕೂಡುತಿರಬೇಕು l
    ತಡವಾಗಿ ಷಡ್ವೈರಿಗಳ ಜಯಿಸಬೇಕು |l4ll
    ಏಕ ನ ದ್ವಯವೆಂಬ ಶ್ರುತಿ ನೋಡಬೇಕು | ಕಾಕು ಶಾಸ್ತ್ರದ ಬಲೆಯ ಹರಿಗಡಿಯಬೇಕು || ವ್ಯಾಕುಲಗಳೆಲ್ಲವನೀಡಾಡಬೇಕು | ಶ್ರೀಕಾಂತ ಶರಣೆಂದು ಕೊಂಡಾಡಬೇಕುll5ll
    ತಾರತಮ್ಯಾನುಸಾರದಿ ಸುರರ ನೋಡು | ನೀರು ಹಾಲೆಂತೆಂಬ ಸಂಶಯವ ದೂಡು | ತೋರುವ ಪ್ರಪಂಚಕ್ಕೆ ಹೋಗದೇ ಹೊರಗಾಡು | ಮಾರುತನ ಮತದಲ್ಲಿ ಸ್ಥಿರ ಮನವ ಮಾಡು || 6 ||
    ಹರಿಹೊರತು ಪ್ರತ್ಯಕ್ಷ ಪರದೈವವಿಲ್ಲ | ಸ್ಥಿರವೆಂದು ಗುರುಮುಖ್ಯ ಪ್ರಾಣ ತಾ ಬಲ್ಲ ಗುರುರಾಯನೆಂದು ಭಾವಿಸಲೊಲಿಯಬಲ್ಲ | ಪರಮಜ್ಞಾನಿಗಳವರ ಸಾಧನವಿದೆಲ್ಲಾll7ll
    ಸಕಲ ವ್ರತಗಳಲ್ಲಿ ಏಕಾದಶಿಯ ಮಾಡು | ನಿಖಿಳ ಸುರರೊಡೆಯ ಹರಿಯೆಂದು ಕೊಂಡಾಡು ಸಕಲ ಸಾಮ್ರಾಜ್ಯವಾತನ ಕೈಯ್ಯ ಬೇಡು | ಸುಖತೀರ್ಥ ಗುರುವರನ ಗುಣಗಾನ ಮಾಡು ll8ll
    ಕಂಡಕಂಡಂಥ ದೈವನ ಭಜಿಸಬೇಡ | ಹಿಂಡುಶಾಸ್ತ್ರಗಳಲಿ ಮನಸಿಡಲು ಬೇಡಾ || ಕಂಡು ನೀ ಕಾಡು ಕರ್ಮನ ಮಾಡಬೇಡl ಕಂಡವರ ಹೆಂಡರಲಿ ಮನಸಿಡಲು ಬೇಡ ll9ll
    ಅನ್ಯದೇವರ ಪ್ರಸಾದವ ಮುಟ್ಟಬೇಡ | ಅನ್ಯಥಾ ಚಿಂತೆಯಲಿ ಮನವಿಡಲು ಬೇಡ || ಅನ್ಯಮಾರ್ಗಕ್ಕೆ ನೀ ಕಾಲೂರ ಬೇಡ | ಅನ್ನ ದಾಶೆಯಲ್ಲಿ ಪಾಪವ ಗಳಿಸಬೇಡ || 10 ||
    ನೀರ ಮೇಲಣಗುಳ್ಳೆಯಂತೀ ಶರೀರ | ಬಾರಿಬಾರಿಗೆ ಸತ್ತು ಹುಟ್ಟುವ ವಿಚಾರ || ಮೀರಿ ನಡೆಯುವನಾಳ್ವ ನಿಜ ಮುಕ್ತಿಯೂರ| ಕ್ರೂರವಲ್ಲೀ ಮಾತು ಅರಿತವರ ಸಾರಾ ||11||
    ಹರಿಯ ನಿಂದಿಸುವ ದುರ್ವಾದಿಗಳ ದೂರು | ಅರಿತು ಷಡ್ವೈರಿ ಗಳ ಕ್ರಯವರಸಿ ಮಾರು | ಹರಿದಾಸರೆನ್ನ ಬಂಧುಗಳೆಂದು ಸಾರು | ಹರಿಯ ನೆನೆ ನೆನೆದು ಮೋಕ್ಷದ ಹರ್ಮ್ಯವೇರು || 12 |l
    ಹರಿಯ ಶ್ರೀಮುದ್ರೆ ದ್ವಾದಶನಾಮವಿಟ್ಟು | ಹರಿ ಕಥಾಗ್ನಿಯಲಿ ದುಷ್ಕರ್ಮಗಳ ಸುಟ್ಟು । ಹರಿನಾಮ ರತ್ನಮಾಲೆಗಳನೆ ತೊಟ್ಟುl ಹರಿಯ ಸಾಮ್ರಾಜ್ಯದಲ್ಲಿ ಸ್ಥಿರಮನೆಯ ಕಟ್ಟು || 13 ||
    ತನ್ನ ತಾನರಿತು ಕೊಂಡವನೆ ಸುಜ್ಞಾನಿ | ಹೆಣ್ಣು ಹೊನ್ನುಗಳ ತೊರೆದಾತನೇ ಮೌನಿ || ಅನ್ಯರಣಕಿಸದೆ ಮನ್ನಿಸುವನೇ ದಾನಿl ಪೂರ್ಣಪ್ರಜ್ಞರ ನಂಬಿದವನೇ ವಿಜ್ಞಾನಿ || 14 ||
    ನರಜನ್ಮಗಳೇ ಪ್ರಾಣಿಗಳಿಗೆ ಬಲೆಯೆಂತ | ಅರಿತವನೇ ಮುಕ್ತಿಯೆಂಬಂಗನೆಯ ಕಾಂತ || ಅರಿಯದಿರುವಂಥವನೇ ಇಹ ಪರಕೆ ಭ್ರಾಂತ | ಪರಮ ಋಷಿವಚನವಿದು ವೇದ ಸಿದ್ಧಾಂತ || 15 ||
    ವಿದ್ಯಾವಂತನು ಅಹಂಕಾರ ಬಿಡಬೇಕು l ಶುದ್ಧ ಜ್ಞಾನಿಗೆ ವಿವೇಕ ವಿರಬೇಕು || ವೃದ್ಧನಾದರೂ ಹರಿಯ ಹಂಬಲಿರಬೇಕು | ಇದ್ದಾಗ ದಾನಧರ್ಮವ ಮಾಡಬೇಕು || 16 ||
    ಹರಿಧ್ಯಾನ ಬಿಟ್ಟೇನು ಮಾಡಲು ನಿರರ್ಥ l ಹರಿ ನಾಮವೇ ಇಹಪರಂಗಳಿಗೆ ಸಾರ್ಥll ಹರಿಸೇವೆಗಾಲಸ್ಯ ಮಾಳ್ಪವನೆ ಧೂರ್ತ | ಹರಿದ್ವೇಷವೆಸಗುವನೆ ಖಳಕುಲಕೆ ಕರ್ತ|| 17||
    ಹರಿಯನೆ ನಂಬಿ ಕೆಟ್ಟವರಾರು ಮರುಳೇ | ಹರಿಯೊಲುಮೆ ಇಲ್ಲದವನ ಬದುಕೇನು ತಿರುಳೇ ॥ ಹರಿದಯದಿ ಸಭೆಯಗೆಲಿದಳು ದ್ರುಪದ ತರಳೇ | ಹರಿಯ ಮರೆತರೆ ಮನಕೆ ಹತ್ತುವದೆ ಮರುಳೇ || 18 ||
    ಕುಂಭಿಣಿ ಪಾತಕಿ ಕಿರಾತಕನ ತಾನು | ಬೆಂಬಿಡದೆ ವಾಲ್ಮೀಕಿ ಮುನಿಯೆನಿಸಿದ [ದಾ]ನು || ಅಂಬರೀಷನ ವ್ರತವ ಕೆಡಿಸದುಳುಹಿದನು | ನಂಬು ನಂಬಿನ್ನಾದರಿಂಬು ಕೊಡುತಿಹನು || 19 ||
    ಹರಿಯಧಿಕನೆಂದ ಪ್ರಹ್ಲಾದ ತಾಗೆದ್ದ | ಹರಿದಯದಿ ಆ ಭೀಮ ಮಾಗಧನ ಒದ್ದ || ಹರಿದಯದಿ ಸದ್ವಿಭೀಷಣ ಜೀವಿಸಿದ್ದ | ಹರಿ ಭಕ್ತರಿಂಗೇನು ಭಯವಿಲ್ಲ ಸಿದ್ಧ || 20 ||

    • @daasoham
      @daasoham  Před měsícem +2

      Lyrics 2 of 3:
      ಅಕ್ರೂರ ಜಲದಿ ನಿಜರೂಪವನು ಕಂಡ | ಅಕ್ರಿಯ ಅಜಮಿಳನು ತಾ ಮೋಕ್ಷಗೊಂಡ || ಶಕ್ರಸುತ ರಥದ ಕುದುರೆಯ ಹೊಡೆಸಿಕೊಂಡ | ವಿಕ್ರಮದಿ ಬಲಿ ಬಾಗಿಲಲಿ ನಿಲ್ಲಿಸಿಕೊಂಡ || 21 ||
      ಈ ಪರಿಯಲೊಲಿದು ಹರಿ ಭಕ್ತರನು ಪೊರೆವ | ತಾಪಸೋತ್ತಮರೊಡನೆ ಚರಿಸುತಲಿ ಮೆರೆವ।। ಆ ಪರಂಜ್ಯೋತಿ ಸ್ವರೂಪ ತಾ ಪೊಳೆವ | ಈ ಪೊಡವಿ ಜನರೆಲ್ಲ ನಂಬೆ ಸುಖವೀವ || 22 ||
      ಭಕ್ತರೇ ತನ್ನಿಂದ ಬಲವಂತರೆನಿಸಿ | ಭಕ್ತ ವಸುದೇವಗಾತ್ಮಜನಾಗಿ ಜನಿಸಿ || ಭಕ್ತರಾಗಿಹ ಪಾಂಡುಸುತರ ಅನುಸರಿಸಿ | ವ್ಯಕ್ತವಾಗದೆ ಸಲಹುವನ ಪದ ಸ್ಮರಿಸಿ
      || 23 ||
      ಶಿವನ ಬೆನ್ನಟ್ಟಿ ಬಹ ದಾನವನ ಸುಟ್ಟ | ಧ್ರುವಗೊಲಿದು ಛಲದಿ
      ಉಂಬಳಿಯನೆ ಕೊಟ್ಟ ll ದಿವಿಜ ಪದವಿಯನಾಳ್ವ ಖಳರ ಮುರಿದಿಟ್ಟ | ಭವದೂರನೀತ ಸರ್ವೋತ್ತಮನು ತುಷ್ಠ
      || 24 ||
      ಶುಕ ಪರಾಶರ ಶೌನಕರ ಸಲಹಿದವನು | ಪ್ರಕಟ ಕಂಸಾದಿ ದಾನ ವರ ಗೆಲಿದವನು || ಅಕುಟಿಲಾತ್ಮಕರ ಹೃದಯದಲ್ಲಿ ಬೆಳಗುವನು | ಸಕಲ ಜಗದಲ್ಲಿ ಪರಿಪೂರ್ಣನಾಗಿಹನು
      || 25 ||
      ಗಣನೆಯಿಲ್ಲದ ಭಕ್ತಜನರ ಕಾಯುವನು | ಎಣಿಕೆಯಿಲ್ಲದ ರಕ್ಕಸರ ಮಡುಹುವನು || ಅಣು ಮಹತ್ತಿನೊಳೆಲ್ಲ ತಾನೆ ಆಗಿಹನು | ಗುಣ ಗಣಾನಂತ ಪರಿಪೂರ್ಣನೆನಿಸುವನು
      || 26 ||
      ಈ ಮಹಾತ್ಮನ ಬಿಡದೆ ಕೊಂಡಾಡು ನೋಡು | ಕಾಮ-ಕ್ರೋಧಾದಿ ವಿಷಯಗಳನೀಡಾಡು || ರಾಮ ಮಂತ್ರವ ಭಜಿಸಿ ಸಜ್ಜನರ ಕೂಡುl ಅಮೇಲೆ ಹರಿಯೊಡನೆ ಮುಕ್ತಿಯನು ಬೇಡು || 27 ||
      ಅಚ್ಯುತಾನಂತ ಗೋವಿಂದನೆಂತೆಂಬ | ಹೆಚ್ಚಿನ ನಾಮ ಪಾಪಾಂಧ ರವಿಬಿಂಬ || ಉಚ್ಚರಿಸಲರಿಯದನ ದುಃಖಗಳನುಂಬ | ನಿಚ್ಚ ನೆನೆವನು ಹರಿಯ ಪ್ರತ್ಯಕ್ಷ ಕಾಂಬ || 28 ||
      ಕೇಶವ ಮುಕುಂದ ಮಾಧವನೆಂದು ಸ್ಮರಿಸು | ಕ್ಲೇಶವೆಂಬಡವಿಗೆ ಬೆಂಕಿಯನ್ನಿರಿಸು || ವಾಸುದೇವನೆಂಬ ದೀಪವನ್ನುರಿಸುl ಮೀಸಲ ಜ್ಞಾನ ಕತ್ತಲೆಯ ಪರಿಹರಿಸು || 29 ||
      ನರಸಿಂಹನೆಂಬ ವಜ್ರಾಯುಧವ ಕೊಂಡು | ಇರಿದರೆ ವೈರಿಪರ್ವತ ವೆಲ್ಲ ತುಂಡು || ಸ್ಮರಿಸಲಂಜಿಕೊಂಬ ಮಾನವನೆ ಭಂಡು | ಹರಿ ನಾನು ದುರ್ಜನಕೆ ಚಕಮಕಿಯ ಗುಂಡು || 30 ||
      ಮುರವೈರಿಯೆಂಬ ಖಡ್ಗವನೆ ಜಡಿಜಡಿದು | ದುರಿತ ರಿಪು ಬಲದ ಬಹುತಲೆಯ ಕಡಿಕಡಿದು || ಬರಿ ಮೋಹಶಾಸ್ತ್ರ ಬಲೆಯಿಂದ ಸಿಡಿಸಿಡಿದು | ತೆರಳು ಮೋಕ್ಷಕೆ ಮಧ್ವಮತವ ಹಿಡಿಹಿಡಿದು ||31ll
      ಹರಿನಾಮದಿಂದ ಯಮನವರ ಹೆಬ್ಬಟ್ಟು | ಹರಿನಾಮದಿಂದ ದುರಿತ ಗಳ ಹುಡಿಗುಟ್ಟು || ಹರಿನಾಮಸ್ಮರಣೆಯಲಿ ಬಹುಪುಣ್ಯಕಟ್ಟುl ಹರಿದಾಸರೊಡನೆ ಸದ್ಗತಿ ಪಥವ ಮೆಟ್ಟು || 32 ||
      ಹರಿಮರೆತರನ್ಯರಲಿ ಕೈವಲ್ಯ ಸಿಕ್ಕ | ಲರಿದನ್ಯರಾ ಭಾಗ್ಯದಿಂ ಕಡೆಗೆ ದುಃಖ || ಅರಿತು ನೋಡಸುರನಾದವಗೆ ಹರಿ ಸಿಕ್ಕ | ಬರಿದೆ ಕೆಡುವನು ಕೇಳು ಜಗಕವನೆ ಮೂರ್ಖ || 33 ||
      ಕುರುರಾಯ ಪಾಂಡವರ ಕೆಡಿಸಬೇಕೆಂದ | ದುರಿತಾತ್ಮ ತಾನೇ ಗತಿಯಿಲ್ಲದಲೆ ನಿಂದ | ಸಿರಿಯರಸನಂಘ್ರಿಸೇವಕರಿಗೆ ಬಂದ | ಕರೆ- ಕರೆಗಳೆಲ್ಲ ಬಯಲಪ್ಪುದೇ ಚಂದಾ || 34 ||
      ಇಷ್ಟು ಸಾಕ್ಷಿಯ ನೋಡಿ ಸಂಶಯವ ಕೀಳು | ಘಟ್ಯಾಗಿ ಗರುಡಗಮನನ ನಂಬಿ ಬಾಳು || ವಿಠ್ಠಲನೆ ವಿಶ್ವಮಯನಹುದೆಂದು ಪೇಳು l ದೃಷ್ಟಾಂತವಾಗಿಯೇ ಮೋಕ್ಷಪದವಾಳು || 35 ||
      ಸುತ್ತಿಕೊಂಡಿರುವ ಸಂಸಾರ ಕಡೆಗಿರಿಸು | ನಿತ್ಯ ದಶನೂರು ಹರಿನಾಮಗಳ ಸ್ಮರಿಸು || ಚಿತ್ರದಲಿ ಚಿನ್ಮಯನ ನೆಲೆಗೊಳಿಸಿ ಭಜಿಸುl ಉತ್ತಮರ ಸಂಗದಲಿ ದುರ್ಗುಣವ ತ್ಯಜಿಸು || 36 ||
      ತೀರ್ಥಯಾತ್ರೆಯ ಮಾಡಿ ಬಳಲುತಿರಲೇಕೆ | ನಿತ್ಯ ಸ್ನಾನಾದಿ ಡಾಂಭಿಕ ಕರ್ಮವೇಕೆ || ಚಿತ್ತ ದೃಢವಿಲ್ಲದಲೆ ಜಪತಪಗಳೇಕೆ | ಹೊತ್ತು ಕಳೆಯದೆ ಹರಿಯ ಭಜಿಸುತಿರು ಜೋಕೆ || 37 ||
      ಕಣ್ಣು ಕೈಕಾಲು ನಾಲಿಗೆಗಳುಂಟಾಗಿ | ಮಣ್ಣು ಮುಕ್ಕುವರೆ ವಿಷಯಕ್ಕೆ ಮರುಳಾಗಿ || ಹೆಣ್ಣು ಹೊನ್ನುಗಳಿಗೆ ಪುಣ್ಯಗಳ ನೀಗಿ | ಉಣ್ಣ (ದೇ) ರೇ ಹರಿಕಥಾಮೃತವ ಚೆನ್ನಾಗಿ || 38 ||
      ನೋಡು ನಿನ್ನೊಳು ತಿಳಿದು ಜಾಣತನದಿಂದ | ದೂಡು ದುರ್ವಿಷಯ ಗಳ ವೈರತ್ವದಿಂದ | ಮಾಡು ಮಾಧವನಲ್ಲಿ ಪ್ರೀತಿ ಭಕ್ತಿಯಿಂದ | ಕೂಡು ನೀ ಸಧ್ಗತಿಯ ಸುಕೃತ ಫಲದಿಂದ || 39 ll
      ವಾಯು ತೊಲಗದಾ ಮುನ್ನ ಹರಿಸ್ತುತಿಯ ಮಾಡು| ಆಯುರಾರೋಗ್ಯವಾತನ ಕೈಯ್ಯ ಬೇಡು || ಮಾಯೆಗೊಳಗಾದವಗೆ ಇಹುದು ಬಹುಕೇಡು | ಈ ಯೋಚನೆಗಳಿಲ್ಲದವ ಕುರಿಗೆ ಜೋಡು ll40ll

    • @daasoham
      @daasoham  Před měsícem +4

      Lyrics 3 of 3:
      ತನ್ನ ತಾ ಮರೆತು ದುಷ್ಕರ್ಮಗಳನಾಂತು | ಅನ್ಯರಿಂದಲಿ ಕೆಟ್ಟೆನೆಂಬುವಗೆ ಭ್ರಾಂತು || ಮುನ್ನ ಮಾಡಿದ ಕರ್ಮ ಫಲವೆನ್ನದೆಂತುl ಎನ್ನುವಾತನೆ ನಮ್ಮ ಹರಿದಾಸಗೊಂತು || 41 ||
      ನುಡಿವುದೆಲ್ಲವು ಹರಿಯ ಕೀರ್ತನೆಗಳೆನ್ನಿ l ನಡೆವುದೆಲ್ಲವು ರಂಗಯಾತ್ರೆ ಮಖವೆನ್ನಿ | ಕೊಡುವ ಧರ್ಮವು ಹರಿಗೆ ಹಿತವಾಗಲೆನ್ನಿl ತೊಡುವಲಂಕಾರ ಅಚ್ಯುತನ ರಥಕೆನ್ನಿ || 42 ||
      ಇಷ್ಟಕ್ಕೆ ಮನವೆಂಬ ಕಪಿ ಒಡಂಬಡದೆ | ಭ್ರಷ್ಟತ್ವವನು ಮಾಡಲದಕಿಂಬುಗೊಡದೆ || ಕಷ್ಟಸರ್ವೆಂದ್ರಿಯಂಗಳಿಗೆ ಮೈಗೊಡದೆ | ಘಟ್ಯಾಗಿ ಕೃಷ್ಣಪೂಜೆಯ ಮಾಡು ಬಿಡದೆ || 43 ||
      ರಾಧರಂಗನ ಮೇಲೆ ಮನಸಿಟ್ಟು ಸ್ಥಿರದಿ | ಸಾಧಿಸು ಮುಕುಂದನೊಳು ಸ್ನೇಹವನು ಭರದಿ || ತೇದು ಹೋಗುವುದು ದುರಿತಗಳೆಲ್ಲ ತ್ವರದಿ | ಶ್ರೀಧರನನುಗ್ರಹಿಸಿ ಪೊರೆವನಿಹಪರದಿ ॥ 44 ॥
      ಮೃತ್ಯುಭಯವನ್ನು ಗೆಲಬೇಕೆಂಬ ಮನದಿ | ನಿತ್ಯಾತ್ಮಕನ ನೆನೆದು ನಮಿಸಲನುದಿನದಿ || ಬತ್ತಿ ಹೋಗುವದರಿದೆ ಭವವೆಂಬ ವನಧಿ | ಸತ್ಯವೀನುಡಿಯೆಂದು ನಂಬುತಿರು ಘನದಿ ||45||
      ಹರಿಯವೋಲಿನ್ನಾರು ಸುಗುಣಾಡ್ಯರುಂಟು | ಹರಿಯ ಭೃಗುಮುನಿ ಬಂದು ಒದೆಯಲದು ಪಂಟು || ಹರಿಭಕ್ತರಿಗೆಲ್ಲ ದಿವಿಜ ಪ್ರಕರನೆಂಟು | ಹರಿ ತನ್ನ ದಾಸರೊಳು ಮುನಿಯ ನಿಘಂಟು ॥ 46 ll
      ತಮನ ಸಂಹರಿಸಿ ವೇದವ ಬ್ರಹ್ಮಗಿತ್ತ | ಸುಮನಸರಿಗಾಗಿ ಮಂದರ ಗಿರಿಯ ಪೊತ್ತ || ಕ್ಷಮೆಯ ಸೋಕಿದ ಹಿರಣ್ಯನ ಬೇರಕಿತ್ತl ಅಮಿತ ಕೋಪದಲಿ ನರಹರಿಯಾಗಿ ನಿಂತ || 47 ||
      ಬಲಿಧೃಢವ ನೋಡಲವನಿಯ ಬೇಡಿಕೊಂಡ | ಛಲದಿಂದ ಕ್ಷತ್ರಿಯರನಾಹುತಿಯಗೊಂಡ || ಶಿಲೆಯಾದಹಲ್ಯೆಯನು ಸಲಹಿದ ಉದ್ದಂಡ | ಒಲಿದು ವಿದುರನ ಮನೆಯ ಕುಡಿತೆ ಪಾಲುಂಡ ॥ 48 ॥
      ಶಿವನ ಸಖನಾಗಿ ಬತ್ತಲೆ ನಿಂತುಕೊಂಡ | ನವನೂತನದಿ ವ್ರತವ ಕೆಡಿಸಿದ ಪ್ರಚಂಡ||
      ಅವನಿಭಾರನಿಳುಹಿ ಸಜ್ಜನರ ಕಂಡ | ಜವನ ಭಯವೆಂಬ ಕತ್ತಲೆಗೆ ಮಾರ್ತಾಂಡ || 49 ||
      ಇಂತನಂತವತಾರಗಳ ಧರಿಸಿ ಮೆರೆವ | ಅಂತರಂಗದ ಭಕ್ತರೊಳು ಕುಣಿಯುತಿರುವ | ಮಂತ್ರಮೂರುತಿ ಅಂತರಾತ್ಮನಾಗಿರುವ| ಎಂತು ಬಣ್ಣಿಸಲಿ ಈ ಸೌಭಾಗ್ಯಕರವ || 50 ||
      ಎಂಭತ್ತು ನಾಲ್ಕು ಲಕ್ಷಾಂತರ ಪ್ರಾಣಿಗಳ | ಗೊಂಬೆಗಳ ಮಾಡಿ ಕುಣಿಸುವನ ಮಹಿಮೆಗಳಾ ।। ಹಂಬಲಿಸಿ ಹರ್ಷಿಸುವ ಭಾಗವತರುಗಳ | ಸಂಭ್ರಮವ ಕಂಡು ಧ್ಯಾನಿಸು ತತ್ಪದಗಳಾ || 51 ||
      ಕಣ್ಣಾರೆ ಹುಟ್ಟಿ ಸಾವರ ಕಾಣುತಿದ್ದಿ || ಇನ್ನಾದರೂ ಬಾರದೆ ನಿನಗೆ ಬುದ್ಧಿ | ಘನ್ನ ಘಾತಕರ ದುಸ್ಸಂಗವನು ಹೊದ್ದಿ | ಕುನ್ನಿಯಂದದಿ ನರಕಯಾತನೆಗೆ ಬಿದ್ದಿ || 52 ||
      ಚಿನುಮಯನ ನಾಮದಮೃತವನೆ ಉಂಡುಂಡು | ಜನನ ಮರಣಗಳ ವರ್ಜಿಸಿಕೊಂಡು ಕೊಂಡು | ಅನುಪಮ ಶ್ರೀಹರಿಯ ಮೂರ್ತಿ ಕಂಡ್ಕಂಡು | ನೆನೆದು ಸುಖಪಡುವಾತ ತಾ ಗಂಡುಗಂಡು ll53ll
      ಕಂಸಾರಿಗೆರಗದಾ ಶಿರವಿನ್ನು ಸುಡಲಿ | ಸಂಸಾರನೆಚ್ಚು ವಾತಗೆ ಕಡೆಗೆ ಕೊಡಲಿ | ಹಂಸಮೂರುತಿಯ ಸಿರಿನಾಮಗಳ ಕೇಳಿ | ಸಂಶಯವ ಬಿಟ್ಟು ಸದ್ಗತಿ ಗಳಿಸಿಕೊಳ್ಳಿ || 54 ||
      ಜ್ಞಾನಿಯೆಂಬಾನೆಗಂಕುಶವು ಸತ್ಸಂಗ | ಏನೆಂಬೆ ಹರಿನಾಮ ಪಾವನ ಪ್ರಸಂಗ || ತಾನು ತನ್ನೊಳಗರಿಯದವನೆ ಕೋಡಂಗ | ಜ್ಞಾನ ದೃಷ್ಟಿಲಿ ನೋಳ್ಳನವನೆ ಉತ್ತುಂಗ || 55 ll
      ನರಸಿಂಗನೊಲುಮೆಯಿಂದಘಗಳನ್ನು ಸುಟ್ಟು | ಬೆರಸಿದಾ ದೈತ್ಯಭಾವಂಗಳನೆ ಬಿಟ್ಟು || ಹರಿಯೇ ಸರ್ವೆಶನೆಂಬಂಥ ಛಲತೊಟ್ಟುl ಹರುಷಿಯಾಗುವ ಪ್ರಾಣಿ ಹರಿದಾಸರೊಟ್ಟು || 56 ||
      ಹರಿದ್ಹುಚ್ಚರಾಗಿ ಕೊಂಡಾಡಿ ಕುಣಿದಾಡಿ| ಹರಿತಾನೆಯೆಂಬುವ ಹವಣ ನೀಡಾಡಿ || ಹರಿಬಲದಿ ಸರುವ ದೋಷಗಳ ಹತಮಾಡಿl ಹರಿಮತವೆ ಗುರುಮಧ್ವಮತವೆಂದು ಪಾಡಿ || 57 ||
      ಹರಿಶರಣರಿಗೆ ಕಂಡಕಂಡಲ್ಲಿ ನಮಿಸು | ಬರುವ ಮುಂಗೋಪಗಳ ನಿನ್ನೊಳಗೆ ಕ್ಷಮಿ[ಯಿ]ಸು || ಗರುವತನ ಬಿಟ್ಟು ವಿಜ್ಞಾನವನೆ ಗಳಿಸು | ಗುರುಭಕ್ತಿಯಿಂದ ವೈಕುಂಠಕ್ಕೆ ಗಮಿಸು || 58 ||
      ಗುರುಹಿರಿಯರೊಡನೆ ಬಿರುನುಡಿಯನಾಡದಿರು | ಧರಣಿಸುರರೊಳಗೆ ಕಡುಹಗೆಯ ಮಾಡದಿರು || ಕರೆದು ಕೊಡದಿರ್ಪ ಲೋಭಿಗಳ ಕಾಡದಿರು | ಬೆರೆತು ಸಂಸಾರಸಾಗರದೊಳಾಡದಿರು || 59 ||
      ಹರಿಯು ತಾನೆಲ್ಲಿಹನು ಎಂಬ ಮನಬೇಡ| ಮರೆದೊಮ್ಮೆ ನೆನೆಯಲು ಒದಗುವನು ಗಾಢ || ಕರಿರಾಜ ಮೊರೆಯಿಡಲು ರಕ್ಷಿಸಿದ ನೋಡಾ | ಸರಸಿಗಾವೈಕುಂಠ ನೆರೆಮನೆಯೆ ಮೂಢ ll 60 ||
      ಹರಹರಾ! ಮನವು ಕರಗದೆ ನಿನಗೆ ಕೇಳಿ | ಹರಿಮಹಿಮೆಎಂತೋ ಕಣ್ಣೀರೊರತೆ ತಾಳಿ || ಅರೆಘಳಿಗೆಯಾದರೂ ಹರಿಯೆಂದು ಪೇಳಿ | ಇರಬಾರದೇ ಹರುಷಶರಧಿಯೊಳು ಬಾಳಿ || 61 ||
      ಪರಮಾತ್ಮ ಜೀವ ತಾನೈಕ್ಯವೆಂತೆಂಬೆ | ಬರಿದೆ ನೀ ಪಾಪರಾಶಿಯ ಕಟ್ಟಿಕೊಂಬೆ || ಸ್ಥಿರಬುದ್ಧಿಯಿಂದ ಪರದೇವತೆಯ ನಂಬೆ | ಥರವಲ್ಲ ಕೆಡದಿರಂತಕೆ ದುಃಖ ಉಂಬೆ || 62 ||
      ಕಲಿಯುಗದೊಳಗಾದ ಭಕ್ತರನೆ ಕಂಡು | ತಿಳಿಯದೆಸಗಿದ ಪಾಪಗಳನೆ ಕಳಕೊಂಡು || ತುಳುವು ಬ್ರಾಹ್ಮಣಗೊಲಿದ ಗುರುಮತವಗೊಂಡು | ಬಲವಂತನಾಗು ಸದ್ಗತಿಸುಖವನುಂಡು || 63 ||
      ಹರಿನಾಮ ಸುಧೆ ಸವಿಯಬಲ್ಲವನೆ ಬಲ್ಲ | ಅರಿತವಗೆ ಗುಡಮಧುಗಳದಕ್ಕೆ ಸಮವಲ್ಲ|| ಅರಿಯದಜ್ಞಾನಿ ಏನೆಂದರು ಕೊಳ್ಳ | ಅರಿತವನೆ ಜ್ಞಾನಸಂದೂಕದ ಕಳ್ಳ ll 64 ll
      ಹರಿಕಥಾಮೃತ ರಸಾಯನವಿದುವೆ ಬನ್ನಿl ಬೆರಗಾಗಿ ಕೇಳ್ವರಿಗೆ ಸವಿದೋರ್ವದೆನ್ನಿ|| ಗುರುಭಕ್ತಿ ಪಂಚಕಜ್ಜಾಯಗಳ ತಿನ್ನಿ | ಸುರಪತಿಯ ಸುಖನಿದಕೆ ಸಮವಲ್ಲವೆನ್ನಿ ll65ll
      ನರಜನ್ಮವೆಂಬ ಫಣಿಗಿದು ಗರುಡಮಂತ್ರ। ಪರಮ ಪುರುಷೋತ್ತಮನ ಸೆರೆಪಿಡಿವ ಮಂತ್ರ ll ಅರಿಯದಜ್ಞಾನಿಗಳನುದ್ಧರಿಪ ಮಂತ್ರ | ಹರಿ ದಾಸರೆಮಗೊಲಿದು ಕರುಣಿಸಿಹ ಮಂತ್ರ || 66 ||
      ಬರೆದೋದಿ ಹೇಳಿ ಕೇಳುವರಿಗಾನಂದ| ದೊರಕುವದು ಸಕಲ ಸಂಪದಗಳದರಿಂದ|| ಪರಮಾಯುರಾರೋಗ್ಯವಿತ್ತು ಒಲವಿಂದ| ಪೊರೆವ ಗುರುಮಧ್ವಪತಿವಿಠಲ ಕೃಪೆಯಿಂದ || 67 ||
      ॥ ಶ್ರೀಮಧ್ವೇಶಾರ್ಪಣಮಸ್ತು ll
      ॥ ಶ್ರೀಕೃಷ್ಣಾರ್ಪಣಮಸ್ತು ll

    • @vinupamidi8702
      @vinupamidi8702 Před měsícem +3

      ನೀವು ಹೇಳಿದ್ದು ಕೇಳಿ ಮನಸಿಗೆ ಖುಷಿ ಆಯಿತು. TQ

    • @prabhavathikm5903
      @prabhavathikm5903 Před 27 dny

      ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏🙏🙏🙏🙏

  • @saiprem6497
    @saiprem6497 Před dnem

    Hara Ramramram hara Ramramram

  • @shantharao9581
    @shantharao9581 Před měsícem +2

    First time heard no words to thank you

  • @satishpujari767
    @satishpujari767 Před měsícem +2

    ಹರಿ ಸರ್ವೋತ್ತಮ ವಾಯು ಜೀವೋತ್ತಮ್

  • @anjanaramesh6209
    @anjanaramesh6209 Před měsícem +2

    Very nicely sung with nice back ground music. Awesome.

  • @girijakukadolli3338
    @girijakukadolli3338 Před měsícem +1

    Gurugale navvo hadalu nimma hadina mulakave kannadadali hadina salugalannu barayeri. 🙏🙏🙏🙏🙏

  • @hanumanthraddy7827
    @hanumanthraddy7827 Před měsícem +2

    ಓಂ ನಮೋ ನಾರಾಯಣಾಯ ❤️🌹🙏🏻

  • @jyotsna.rao23
    @jyotsna.rao23 Před měsícem +1

    Hari sarvottama vayu jeevottama🙏🏻🙏🏻🙏🏻🙏🏻

  • @alkakulkarni5511
    @alkakulkarni5511 Před 12 dny

    Anant SS Namaskargalu

  • @JayanthS33
    @JayanthS33 Před měsícem

    Nimma kanthadalli mahalakshmi astakavannu kelabayasutteve aacharyare. Dayamadi

  • @kollegalmole2858
    @kollegalmole2858 Před měsícem +1

    ಓಂ ನಮೋ ಭಗವತೇ ವಾಸುದೇವಯ

  • @prathibhavenkoba3588
    @prathibhavenkoba3588 Před měsícem +2

    Thanks for uploading this I have asked for it some days back once again thanks for considering my wish

  • @gopalakrishna3300
    @gopalakrishna3300 Před měsícem +2

    Acharyarige koti koti vandenegalu🙏🙏🙏🙏🙏🙏

  • @chandrasathyamurthy968
    @chandrasathyamurthy968 Před měsícem +1

    ಧನ್ಯವಾದಗಳು ,ತುಂಬಾ ಚೆನ್ನಾಗಿದೆ🙏🏼🙏🏼🙏🏼🙏🏼🙏🏼

  • @JK-sv6wq
    @JK-sv6wq Před měsícem +1

    ಬಹಳ ಸುಂದರವಾಗಿ ಹಾಡೀದ್ದೀರಿ

  • @hashbrown055
    @hashbrown055 Před 8 dny

    Thx you so very much for this choupadi, my grandfather used to tell this and my dad was hunting for this beautiful narration of Choupadi and you made our day. My heart full thx you ❤️ He had missed most lines and now he's so happy to sing along the full version.

  • @vaniramesh8781
    @vaniramesh8781 Před měsícem

    ಹರೇ ರಾಮ ಹರೇ ಕೃಷ್ಣ ತುಂಬಾ ಚೆನ್ನಾಗಿದೆ ಧನ್ಯವಾದಗಳು. ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು

  • @girijakukadolli3338
    @girijakukadolli3338 Před měsícem

    Gurugale nimma hadu manisege Tunba esta Aaitu.adare nivu Hadid hadu bareduddu pritead hadinali bidi gurugale. 🙏🙏🙏🙏🙏🌹🌹

  • @roopakatti5421
    @roopakatti5421 Před měsícem

    🙏🙏🙏🙏

  • @ashakulkarni8336
    @ashakulkarni8336 Před měsícem

    Bahal ,bahal ,arth poorn haagoo kelta kelta iddhange manassinalli bhakti ukki harita ide .aredavarantu devansh sambhootaru ,adare idannu bhakti rasavannu tumbi hadid nige annek dhanywadgalu .paramatman krupe nimm mele sada sarwakaalwoo irali endu aashirwad madateeni .

  • @joshnaa7639
    @joshnaa7639 Před měsícem

    Hare sreenivasa 🙏🙏🙏🙏

  • @srimannaarayana
    @srimannaarayana Před měsícem

    Please upload the english lyrics from 21 to 60.it will be useful for people who cant read kannada.thank you.

  • @roopakatti5421
    @roopakatti5421 Před měsícem

    Tumba channagide 🙏thanks

  • @brinda6891
    @brinda6891 Před měsícem

    👌👏🙏
    Very divine

  • @user-sr2ou6gd3k
    @user-sr2ou6gd3k Před měsícem +1

    🙏🙏🙏🙏👏👏👏👏

  • @girijakukadolli3338
    @girijakukadolli3338 Před měsícem

    Gurugale nivu Hadid hadalli 21rind 60.Ra varege print hadu ella ri.dayavitu 40.payaradu printa haki.Gurugale🙏🏻🙏🏻🙏🏻🙏🏻🙏🏻

  • @hashbrown055
    @hashbrown055 Před 8 dny

    Can you plz have kannada words on the screen to learn plz. Thx you, Awaiting for your reply need to learn this

  • @ashaniranjan7670
    @ashaniranjan7670 Před měsícem

    🙏🏻🙏🏻🙏🏻🙏🏻🙏🏻

  • @saralakulkarni6159
    @saralakulkarni6159 Před měsícem

    🙏🏻🙏🏻🙏🏻

  • @UNKNOWN_FACTS.130
    @UNKNOWN_FACTS.130 Před měsícem

    🙏🙏

  • @bkvaishnavi-xv8ql
    @bkvaishnavi-xv8ql Před měsícem

    🙏🙏🙏🙏🙏

  • @user-cc1bj1gm4x
    @user-cc1bj1gm4x Před měsícem

    🙏🏼🙏🏼🙏🏼

  • @chandrasathyamurthy968
    @chandrasathyamurthy968 Před měsícem

    👌🏼👌🏼👌🏼👌🏼👌🏼🙏🏼🙏🏼🙏🏼🙏🏼🙏🏼

  • @Latha67
    @Latha67 Před měsícem

    🙏🏻🙏🏻🙏🏻🙏🏻🌷🌼🌷🌷

  • @ashagururaj7266
    @ashagururaj7266 Před měsícem

    Please upload lyrics for this in kannada 😊

  • @user-bi1zc9gw5p
    @user-bi1zc9gw5p Před měsícem +1

    ಕನ್ನಡ ಲಿಪಿಯಲ್ಲಿ ಸಾಹಿತ್ಯ ಹಾಕಿ

  • @vchalapathy2047
    @vchalapathy2047 Před měsícem

    🙏🙏🙏🙏

  • @user-uw7cj1nd4y
    @user-uw7cj1nd4y Před měsícem

    🙏🙏🙏🙏🙏