Video není dostupné.
Omlouváme se.

Yakshagana - ಕಣ್ಣಿಮನೆಯವರ ನೆನಪಿಗಾಗಿ - Kannimane as Sudhanva - Srashtigarjuna - Vidwan

Sdílet
Vložit
  • čas přidán 17. 02. 2019
  • ಕಣ್ಣಿಮನೆಯವರ ನೆನಪಿಗಾಗಿ
    ನಮ್ಮ ದೌರ್ಭಾಗ್ಯವೋ , ಅಥವಾ ವಿಧಿಯ ಪುಂಡಾಟವೋ.....ದೇವರನ್ನೇ ದೂರುವುದಲ್ಲದೆ ಇನ್ನೇನು ಮಾಡುವುದು.....ಮನಃಪೂರ್ವಕವಾಗಿ ತನ್ನೆಲ್ಲಾ ಶಕ್ತಿಯಿಂದ ಜನರ ಕಣ್ಣನ್ನು ತಂಪಾಗಿಸುತ್ತಿರುವ ಯಕ್ಷಮಯೂರ ನೋಡನೋಡುತ್ತಿರುವಂತೆ ಕಣ್ಮರೆಯಾಗಿದ್ದು .... ಏನೆನ್ನುವುದು ... ನನಗೆ ಕಣ್ಣಿಯ ಕಣ್ಮನ ಸೆಳೆಯುವ ಯಕ್ಷರಾಧನೆಯ ಸೊಬಗನ್ನು ಕಸಿದುಕೊಂಡ ದೇವ ದುರ್ಬಲ ಘಾತಕನೋ....?
    ಕಣ್ಣಿಗೆ ಮುದವ ನೀಡಿ ಮನದ ಕಣ್ಣಲ್ಲಿ ಅತೀಹತ್ತಿರದಿಂದ ನೋಡಿ ಕಣ್ಣಿಗೆ ತಂಪನ್ನು ಈಯುತಿರುವಾಗಲೇ ಕಣ್ಣಿಂದ ಕಣ್ಣೆದುರಿಗೆ ಕಣ್ಮರೆಯಾದರೂ ಮನದ ಕಣ್ಣೆದುರಿಗೆ ಕ್ಷಣವೂ ಕಾಣುವ ಕಣ್ಮಣಿ ಕಣ್ಣಿಯಣ್ಣ ನಿನ್ನ ನೆನಪು ಆತ್ಮೀಯತೆ ಮಾತು ಇನ್ನೂ ಕಣ್ಣೆದುರಲ್ಲೆ ಕುಣಿಯುತಿದೆ.....ಕಂಣ್ಣಂಚು ಆರ್ದ್ರತೆಯಿಂದಲೇ ಕೂಡಿದೆ ಹೊರತು ಬರಿದಾಗಿಲ್ಲ............
    ಕಣ್ಣಿಗೆ ಕಾಣದೇ ವರುಷವಾಯ್ತು , ಆದರೂ ನನ್ನ ಕಣ್ಣೆದುರಿಗೆ ದಿನವೂ ಬಂದು ಹೋಗುವ ದೃಶ್ಯ ಈ ಕಣ್ಣಿಂದ ಹೇಗೆ ಮರೆಯಲಿ...
    ಕಣ್ಣಿಗೆ ಕಾಣದಿದ್ದರೂ ಮನದ ಕಣ್ಣಿಗೆ ಕಾಣುವ ನಿನ್ನ ಇನ್ಯಾವ ಕಣ್ಣಿಂದ ಮರೆಯಲಿ..ಆ ಮರೆವು ಬಾರದೇ ನನ್ನ ಕಣ್ಣಿಗೆ ಸದಾ ಕಾಣಲಿ..
    ಮನಸ್ಸಿನ ಕಣ್ಣಿಗೆ ಆತ್ಮೀಯತೆಯ ಕಂಡ..ಪಡೆದುಕೊಂಡ...ಈ ನನ್ನ ಮನದ ಕಣ್ಣಿಗೆ ಮುದ ನೀಡಿದ ಮಾತಾಡಿದ ಆ ಕ್ಷಣ.. ಕಣ್ಣಿಗೆ,ಮನದ ಕಣ್ಣಿಗೆ..ಸಿಕ್ಕಿದ ಆನಂದ... ಕಣ್ಣಿಂದ ಮರೆಯಲುಂಟೇ..
    ನಿನ್ನ ನೆನಪು ನನ್ನ ಕಣ್ಣಿಗೆ ದಿನವೂ ಕಾಣಲಿ...
    3 ವರ್ಷಗಳು ಕೇವಲ 3 ದಿನಗಳಂತೆ ಭಾಸವಾಗುವ ಹಾಗೆ ನನಗೆ ಅನ್ನಿಸುವುದು ಕಾರಣ ಇಷ್ಟೇ....ಯಕ್ಷಗಾನವನ್ನು ಅತಿಯಾಗಿ ಪ್ರೀತಿಸಿದ್ದು....ಅಲ್ಲಿ ನಿಜವಾದ ಯಕ್ಷಾರಾಧಕನನ್ನ ಯಕ್ಷರಂಗದಲ್ಲಿ ಹಾಗೂ ವೈಯಕ್ತಿಕವಾಗಿ ಆತ್ಮೀಯನಾಗಿ ನೋಡಿದ್ದು.....
    ಹೌದು.....ಯಕ್ಷಗಾನಕ್ಕೆ ಚಿಟ್ಟಾಣಿಯವರ ನಂತರ ಒಂದು ಹೊಸದಾದ ತನ್ನದೇ ಶೈಲಿಯನ್ನು ಯಕ್ಷದಿಗ್ಗಜರ ನಡುವೆಯೇ ತೋರಿಸಿ ಸೈ ಎನಿಸಿಕೊಂಡ ಹಾಗೂ ಯಕ್ಷಗಾನದ ಪ್ರೇಕ್ಷಕರಿಗೆ ನಿರಾಸೆ ಮೂಡಿಸದೆ , ಯಕ್ಷಮಾತೆಯನ್ನು ಬಲವಾಗಿ ಅಪ್ಪಿದ , ಯಕ್ಷಗಾನಕ್ಕೆ ಹಾಗೂ ಜನರಿಗೆ ಯಳ್ಳಷ್ಟೂ ಮೋಸ ಮಾಡದ ನನ್ನ ಮನದ , ಯಕ್ಷ ಕಣ್ಮಣಿ ಕಣ್ಣಿಮನೆ ಕಣ್ಮರೆಯಾಗಿದ್ದು ಪ್ರತೀದಿನ ನಿಜವಾದ ಯಕ್ಷಗಾನ ಪ್ರೆಮಿಗಳಿಗೆ ಕಾಡುವ ಅತ್ಯಂತ ದುಃಖಕರ ಸಂಗತಿ ಹಾಗೂ ಭರಿಸಲಾಗದ ನಷ್ಟವೇ ಸರಿ... ಅದನ್ನು ಎಲ್ಲರೂ ಈ ಮೂರು ವರ್ಷಗಳಲ್ಲಿ ಕಂಡಿದ್ದು ಹೌದು....
    ಪ್ರತೀ ಮೇಳದಲ್ಲಿ ಕಣ್ಣಿಯ ಕುಣಿತ ಅನುಕರಣೆ ಮಾಡುವ ಕಲಾವಿದರಿದ್ದಾರೆ ....ಆದರೆ ಕಣ್ಣಿ ಯ ಹಾಗೆ ಯಕ್ಷಗಾನಕ್ಕೆ ಜೀವನವನ್ನು ಮೀಸಲಿಟ್ಟವರ ನಾ ಕಾಣೆ.....
    ತಮ್ಮಲ್ಲಿ ಶಕ್ತಿ ಯುಕ್ತಿ ಇಲ್ಲದ ಕೆಲವರು ಕಣ್ಣಿಯ ಹೆಸರು ಹೇಳಿ ಜೀವನೋಪಾಯ ಮಾಡುವವರೇ ಬಹಳವಾಗಿದ್ದಾರೆ ಬಿಟ್ಟರೆ ಕಣ್ಣಿಯ ಹಾಗೆ ನಿಜವಾಗಿ ಯಕ್ಷಆರಾಧಕರು ಎಲ್ಲಿ ?ಇದು ಬೇಸರದ ಸಂಗತಿ...
    ಯಕ್ಷಗಾನ ಅನ್ನುವ ಶಬ್ದ ನೆನಪಾದರೆ ಆಗ ನನಗೆ ನೆನಪಾಗುವುದು ಮೊದಲಾಗಿ ಕಣ್ಣಿಯಣ್ಣ.... ನಿಜವಾಗಿ ಹೇಳಬಯುಸುತ್ತೆನೆ....ಕಣ್ಣಿಯ ನೆನಪಾಗದೆ ಮಲಗಿದ ಒಂದು ದಿನವೂ ಇಲ್ಲ ....ಯಕ್ಷಗಾನದಲ್ಲಿ ನಿಜವಾಗಿ ದೇವರನ್ನೇ ಕಾಣುವಂತಹ ಭಾವಪೂರ್ಣ ಕೃಷ್ಣ ಬಹುಶಃ ಕಣ್ಣಿಯನ್ನು ಬಿಟ್ಟು ಬೇರಾರಲ್ಲೂ ನೋಡಲು ಅಸಾಧ್ಯ....
    ಪಾತ್ರತ್ವ ದ ಉದ್ದಗಲ ಆಳವ ಅರಿತು ಮೂಲತತ್ವದೊಂದಿಗೆ ಯಕ್ಷಗಾನ ಸೊಬಗ ಉಣಿಸಿದ ಕಣ್ಮಣಿ ಕಣ್ಣಿ.....
    (ಬಹಳ ವಿಸ್ತೃತವಾಗಿ ನಾಗರಾಜ ಮತ್ತಿಗಾರ್ ರವರ ಸಂಪಾದಕತ್ವದ ಕೋಲ್ಮಿಂಚು ಪುಸ್ತಕದಲ್ಲಿ ವಿವರಿಸಿದ್ದೇನೆ)
    ಒಂದಂತೂ ಹೇಳಬಲ್ಲೆ ಯಕ್ಷಗಾನ ನಿಜವಾಗಿಯೂ ಸೊರಗಿದೆ....ಅದಕ್ಕೆ ಒಂದಷ್ಟು ಭಾಗ ಕಾರಣ ಕಣ್ಮನದಲ್ಲಿ ಕಣ್ಣಿ ಇದ್ದರೂ ರಂಗದಲ್ಲಿ ಇಲ್ಲವಾದದ್ದು ಮುಖ್ಯ ಕಾರಣ ಹೌದು ...
    ಯಕ್ಷ ಮಾತೆಯ ಕಂದನಾದ ಕಣ್ಣಿಯ ಕುಣಿತವ ನೋಡಬಯಸಿದ ದೇವ ಯಕ್ಷಾಭಿಮಾನಿಗಳ ಕಣ್ಣಿನ ತಂಪಿಗೆ ಕಾರಣನಾದ ನನ್ನ ಕೊಲ್ಮಿಂಚು ಕಣ್ಣಿಯಣ್ಣನ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಹೃದಯಾಂತರಾಳದಿಂದ ಬೇಡಿಕೊಳ್ಳುತ್ತೇನೆ.....
    ಕಣ್ಣಿಯಣ್ಣನನ್ನ ದೇವ ಕರೆಸಿಕೊಂಡ ಈ ದಿನ ನಿಮಗೆ ಶುಭಯಕ್ಷಮುಂಜಾವು ಎನ್ನುವುದನ್ನು ಬೇಸರದಲ್ಲಿಯೇ ಹೇಳುವ ಸ್ಥಿತಿಯಲ್ಲಿ....
    ಹೇ ಕಣ್ಣಿಯಣ್ಣ ನಿನಗೊಂದು ಯಕ್ಷನಮನ
    ಹಾಗೆಯೇ.... ನಿಮ್ಮಗೆಲ್ಲರಿಗಾಗಿ
    ಕಣ್ಣಿಮನೆಗೊಂದು ಯಕ್ಷನಮನ ದ ಕಾರ್ಯಕ್ರಮದ ಮಂಗಳಪದ್ಯ..ಭಾವನಾತ್ಮಕವಾಗಿ ಹಾಡಿದ ಜನ್ಸಾಲೆಯವರ ಸಹಿತ ಅಂದು ಆ ಪದ್ಯಕ್ಕೆ ಹಲವಾರು ಜನರು ಕಣ್ಣೀರನ್ನು ಸುರಿಸಿದ್ದಂತೂ ಸತ್ಯ...
    ಹಾಗೆಯೇ ಕೆಲ ದೃಶ್ಯ ತುಣುಕುಗಳು ನಿಮಗಾಗಿ ನನ್ನ ಸಂತೋಷಕ್ಕಾಗಿಯೂ ಹಂಚಿರುವೆ...ನೋಡಿ ನೆನಪನ್ನು ಸವಿಯಿರಿ
    ನೆನಪಿನಲ್ಲೇ ಉಳಿಯುವ ಕಣ್ಣಿ ಅಣ್ಣ...ಯಕ್ಷಗಾನಕ್ಕೆ ತನ್ನದೇ ಹೊಸತನ ಕೊಟ್ಟ....ಮುಂದಿನ ತಲೆಮಾರು ಅವರನ್ನೇ ಅನುಸರಿಸುವಂತೆ ಮಾಡಿದ ಕಣ್ಣಿಮನೆ...ನಿಮಗೆ ಯಕ್ಷಮಾತೆ ಚಿರಶಾಂತಿಯ ನೀಡಲಿ..
    ♣ MANJU TOLGAR♣
    ಕೃಪೆ - Whatsapp Yakshagana Group
    Vidwan Ganapati Bhat - Bhagavataru

Komentáře • 24

  • @amoghhegde5556
    @amoghhegde5556 Před 5 lety +14

    ಲಯಬ್ರಹ್ಮ ಕಣ್ಣಿಮನೆ,,,,ನಮ್ಮೆಲ್ಲರ ಕಣ್ಮಣಿ 😍😍😍👌👌

  • @deepakk7049
    @deepakk7049 Před 4 lety +2

    Kannnimane Ganapathi Hegde will be an everlasting memory, which will haunt us through out our lives. What an artist ? We surely lost him..no words to say..

  • @gopaludupa3568
    @gopaludupa3568 Před rokem

    Exceptionally good talent in yakshagana field. Hats off to him 🎉❤🎉

  • @PradeepKumar-if8dh
    @PradeepKumar-if8dh Před 5 lety +4

    ಮತ್ತೊಮ್ಮೆ ಹುಟ್ಟಿಬನ್ನಿ ಕಣ್ಣಿಮನೆ.

  • @narendrnayak3629
    @narendrnayak3629 Před 3 měsíci

    Super❤

  • @santoshsanthu4444
    @santoshsanthu4444 Před 5 lety +1

    ಸೂಪರ್ ಕಣ್ಣಿಮನೆ

  • @neveenpanwar5953
    @neveenpanwar5953 Před 5 lety +3

    SUPER HERO

  • @raghavendrahegde123
    @raghavendrahegde123 Před 4 lety +1

    Who'll manage,krishna, abhimanyu,sudanva, babruvhan, darmangada so nicely on stage other than kanni, no idea, see"harushavaytu ninna vachanvu"-darmangada.

  • @krishnashankar7893
    @krishnashankar7893 Před 4 lety

    Wt a performance...😱👌😘 Miss you sooo much sir...😔

  • @ashoknairyashokkn8054

    ene aagali benki benki

  • @naveennaik9738
    @naveennaik9738 Před 4 lety

    Really miss u.sir...nimmanta kalavidaru yaru illa mundenu baroku sadya illa

  • @janardhannaik3627
    @janardhannaik3627 Před 5 lety +1

    Great kannimane miss u so much

  • @jayaramshetty6325
    @jayaramshetty6325 Před 4 lety +1

    Adbutha Natya

  • @aloysiusdsouza5417
    @aloysiusdsouza5417 Před 4 lety +1

    Seeing this I am reminded of Siriyara Manju Naik and Keremane Mahabala Hegade who made the character of Sudhanva memorable one. Keechaka Basmaasura style of dancing has entered to each and every character of Mahabharata and Ramayana. God alone can help.

  • @medhahebbar2840
    @medhahebbar2840 Před 5 lety +2

    nice ,super .........

  • @vasudevacharya3440
    @vasudevacharya3440 Před 5 lety +3

    Hrunmana kke muda koduva manojna kunita mattu abhinaya.Kannimane nivondu prayogasheela kalavida.

  • @balakeishnashitty6448
    @balakeishnashitty6448 Před 3 lety

    Super

  • @rajgowda3484
    @rajgowda3484 Před 4 lety

    Nimgee nivee saati kanni mane ganpathi yavare nimma kunitha nodalu bahu andha chandha brahamandha

  • @arunholla5444
    @arunholla5444 Před 5 lety +1

    J

  • @raguupadhya2317
    @raguupadhya2317 Před 5 lety +2

    Nayana manohara kunitha

  • @poojaredinesha851
    @poojaredinesha851 Před 5 lety +2

    Super

  • @shubhodayapoojari4177
    @shubhodayapoojari4177 Před 4 lety

    Super